Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಇಂಡಿ: ಗೋಳಸಾರ ಮಠಕ್ಕೆ ಧನಕ್ಕಿಂತಲೂ ಧರ್ಮ ಮತ್ತು ದೇಶಾಭಿಮಾನ ಬೆಳೆಸುವ ಕಾರ್ಯ ಮುಖ್ಯವಾಗಿದೆ. ಸಾಮಾಜಿಕ, ಶೈಕ್ಷಣಿಕ ಸಾಂಸ್ಕೃತಿಕ ಕಾರ್ಯ ಮಾಡುವ ಮೂಲಕ ಗೋಳಸಾರ ಮಠದ ಕಾರ್ಯ ಶ್ಲಾಘನೀಯ ಎಂದು ಶ್ರೀ ಶ್ರೀ ಶ್ರೀ ೧೦೦೮ ಜಗದ್ಗುರು ಡಾ|| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.ತಾಲೂಕಿನ ಗೋಳಸಾರದ ಪೂಜ್ಯ ಪುಂಡಲಿಂಗ ಶಿವಯೋಗಿಗಳ ಮಠದಲ್ಲಿ ನಡೆದ ಸಾಮೂಹಿಕ ವಿವಾಹ, ಧರ್ಮಸಭೆ ಮತ್ತು ಸದ್ಗುರು ಚಿನ್ಮಯ ಮೂರ್ತಿ ತ್ರಿಮೂರ್ತಿ ಶ್ರೀಗಳ ೩೧ ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಗೋಳಸಾರ ಮಠ ಸ್ವ ಧರ್ಮ ನಿಷ್ಠೆಯಾಗಿ, ಪರ ಧರ್ಮದ ಸಹಿಷ್ಠುತೆಯಾಗಿ ಪ್ರೀತಿಯಿಂದ ಧರ್ಮ ಮಾರ್ಗದಲ್ಲಿ ಧೇಶಾಭಿಮಾನ ಬೆಳೆಸುವ ಸಂಸ್ಕೃತಿ ಉಳಿಸುವ ಬೆಳೆಸುವ ಕಾರ್ಯ ಮಾಡುತ್ತಿದೆ ಎಂದರು.ಗೋಳಸಾರ ಮಠ ಪಂಚ ಪೀಠಗಳ ಅಥವಾ ಯಾವದೇ ಪರಂಪರೆಯ ಶಾಖಾ ಮಠ ಅಲ್ಲ. ಶ್ರೀಶೈಲ ಪೀಠದ ಶಾಖಾ ಮಠವೂ ಅಲ್ಲ, ಆದರೆ ಎಲ್ಲ ಪರಂಪರೆಯನ್ನು ಪ್ರೀತಿಸುವ ಶ್ರೀಶೈಲ ಪೀಠದ ಖಾಸಾ ಮಠವಾಗಿದೆ ಎಂದು ಪ್ರಶಂಸಿದರು.ಇಂದು ಸಾಮೂಹಿಕ ವಿವಾಹದಲ್ಲಿ ೩೫ ಜೋಡಿಗಳು…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮತಕ್ಷೇತ್ರದ ಜನತೆಯ ಬಹುದಿನಗಳ ಬೇಡಿಕೆಯಾಗಿರುವ ತಾಲೂಕಿನ ಹಿಕ್ಕಣಗುತ್ತಿ ಗ್ರಾಮದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅನುಕೂಲಕ್ಕಾಗಿ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯನ್ನು ನಿರ್ಮಿಸಲು ರೂ..೫೭ ಕೋಟಿ ಅನುದಾನವನ್ನು ಮತ್ತು ಸಿಂದಗಿ ಪಟ್ಟಣದಲ್ಲಿ ಮೌಲಾನಾ ಅಜಾದ್ ಮಾದರಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ರೂ.೫ಕೋಟಿ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಶೈಕ್ಷಣಿಕ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಹೊಸ ಆಯಾಮವನ್ನು ನೀಡಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ ಅವರು ಸಿಂದಗಿ ಮತಕ್ಷೇತ್ರ ಶಿಕ್ಷಣದಿಂದ ವಂಚಿತವಾಗಬಾರದು. ಆ ದಿಸೆಯಲ್ಲಿ ರಾಜ್ಯ ಸರ್ಕಾರ ಅಲ್ಪಸಂಖ್ಯಾಯತ ಕಲ್ಯಾಣ ಇಲಾಖೆಯ ಅಡಿಯಲ್ಲಿ ಎರಡು ನೂತನ ಕಟ್ಟಡ ಕಟ್ಟುವಲ್ಲಿ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತ-ದೃಷ್ಟಿಯಿಂದ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಲಾಗುವುದು. ರಾಜ್ಯ ಸರ್ಕಾರಕ್ಕೆ ಮತ್ತು ಸಂಬಂಧಿಸಿದ ಸಚಿವರಿಗೆ ಪತ್ರಿಕಾ ಪ್ರಕಟಣೆಯ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಇಂಡಿ: ಜಂತುಹುಳು ಮಾತ್ರೆ ನುಂಗಿದ ಕೆಲವೇ ಕ್ಷ ಣಗಳಲ್ಲಿ 6 ಮಕ್ಕಳು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ತಾಲೂಕಿನ ಹಿರೇಬೇವನೂರ ವಿಶ್ವ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಘಟನೆಯಲ್ಲಿ ಶಾಲೆಯ ಶರತ್ ಕೋರೆ, ವಿರಾಟ್ ಚಾಂದಕವಟೆ, ಯುವರಾಜ ಸ್ವಾಮಿ, ಪ್ರೀತಮ್ ವಳಸಂಗ್, ಸಂಕೇತ ಗೊಡ್ಯಾಳ ಎಂಬ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಮಧ್ಯಾಹ್ನದ ಊಟದ ನಂತರ ಶಾಲೆಯ 50 ಮಕ್ಕಳಿಗೆ ಜಂತುಹುಳು ಮಾತ್ರೆ ನೀಡಲಾಗಿದ್ದು, ಜಂತುಹುಳು ಮಾತ್ರೆ ನುಂಗಿದ ಒಟ್ಟು ಮಕ್ಕಳಲ್ಲಿ 5 ಮಕ್ಕಳು ಹೊಟ್ಟೆ ಹುರಿ ತಾಳಲಾರದೇ ಶಾಲೆಯಲ್ಲಿ ಒದ್ದಾಡುತ್ತಿದ್ದಾಗ ಗಾಬರಿಯಾದ ಶಾಲಾ ಶಿಕ್ಷಕರು ಕೂಡಲೆ ಪಟ್ಟಣದ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.ಆಸ್ಪತ್ರೆಗೆ ಬಂದ ಮಕ್ಕಳಿಗೆ ಕೂಡಲೇ ಚಿಕಿತ್ಸೆ ನೀಡಿದ ವೈದ್ಯಾಧಿಕಾರಿಗಳು ಮಾತ್ರೆ ಸೇವನೆಯಿಂದ ಏನೂ ಆಗುವುದಿಲ್ಲ ಕೆಲವು ಮಕ್ಕಳಿಗೆ ಹೀಗಾಗುತ್ತದೆ. ಇದರಿಂದ ಪೋಷಕರು ಗಾಬರಿಪಡುವುದು ಬೇಡ ಎಂದು ಸಮಾಧಾನ ಹೇಳಿದರು. ಯಾವುದೇ ತೊಂದರೆ ಯಾಗುವುದಿಲ್ಲ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಜ೧೮ ಶನಿವಾರದಂದು ಹಾಲುಮತ ಸಮುದಾಯದ ಕುಂದು ಕೊರತೆ ಆಲಿಸಲು ಹಾಗೂ ವೈಯಕ್ತಿಕ ವಿಚಾರ ತಮ್ಮೊಂದಿಗೆ ಹಂಚಿಕೂಳ್ಳಲು ಸಾಯಂಕಾಲ ೫ಘಂಟೆಗೆ ಪಟ್ಟಣದ ಚನ್ನಮ್ಮ ಸರ್ಕಲ್ ಹತ್ತಿರ ರವಿ ನಾಯ್ಕೋಡಿ ಅವರ ಮನೆ ಹತ್ತಿರ ನಿರ್ಮಿಸಲಾದ ಬಹಿರಂಗ ವೇದಿಕೆಗೆ ಆಗಮಿಸಲಿದ್ದಾರೆ.ಸಿಂದಗಿ ಹಾಗೂ ಅಲಮೇಲ ತಾಲೂಕಿನ ಹಾಲುಮತ ಸಮಾಜದ ಹಿರಿಯರು, ಯುವಕರು ಸಂಘಟನಾ ಪದಾಧಿಕಾರಿಗಳು ಪಕ್ಷಾತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕುರುಬ ಸಮಾಜದ ತಾಲೂಕ ಅಧ್ಯಕ್ಷ ನಿಂಗಣ್ಣ ಬಿರಾದಾರ, ಮಲ್ಲು ಸವಳಸಂಗ, ರವಿಕಾಂತ್ ನಾಯ್ಕೋಡಿ, ನಾಗಪ್ಪ ಶಿವೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ.ಜಾತಿ/ಪ.ಪಂಗಡದವರಿಗಾಗಿ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ೨೦೨೪-೨೫ನೇ ಸಾಲಿನ ವಿಶೇಷ ಘಟಕ ಯೋಜನೆ/ ಗಿರಿಜನ ಉಪ ಯೋಜನೆಯಡಿ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದ ಸಣ್ಣ ಮತ್ತು ಅತಿ ಸಣ್ಣ ಎಸ್.ಎಮ್.ಇ ಘಟಕ ಸ್ಥಾಪನೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಿದೆ.ವಿಜಯಪುರ ಜಿಲ್ಲೆಗೆ ವಿಶೇಷ ಯೋಜನೆಯಡಿ ಭೌತಿಕ-೦೫ ಹಾಗೂ ಗಿರಿಜನ ಉಪ ಯೋಜನೆಯಡಿ ಭೌತಿಕ-೩ ಗುರಿ ನಿಗದಿಪಡಿಸಲಾಗಿದೆ. ಆಸಕ್ತರು ಜ.೨೪ರ ಒಳಗಾಗಿ ಜಿಲ್ಲಾ ಪಂಚಾಯತ್ ಕೈಮಗ್ಗ ಮತ್ತು ಜವಳಿ ಇಲಾಖೆಗೆ ಅರ್ಜಿ ಸಲ್ಲಿಸಬಹುದು. ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ನೀಡಲಾಗುವುದು.ಹೆಚ್ಚಿನ ಮಾಹಿತಿಗಾಗಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಕಛೇರಿಗೆ ಭೇಟಿ ನೀಡಬಹುದು ಅಥವಾ ಮೊ.ಸಂ: ೯೯೦೨೫೬೧೪೪೧/ ೯೫೩೮೧೧೪೪೩೪ಗೆ ಸಂಪರ್ಕಿಸಬಹುದು ಎಂದು ಸಹಾಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತ ಚುನಾವಣಾ ಆಯೋಗವು ಚುನಾವಣೆ ಕುರಿತ “ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ” ಎಂಬ ಧ್ಯೇಯವಾಕ್ಯವನ್ನು ಜ.೨೫ರಂದು ತಮ್ಮ ತಮ್ಮ ಕಚೇರಿಯ ಪತ್ರ ವ್ಯವಹಾರಗಳಲ್ಲಿ ಬಳಕೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.ಗುರುವಾರ ಸಂಜೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜನವರಿ ೨೫ ರಂದು ನಡೆಯುವು ೧೫ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರ್ಕಾರಿ ಹಾಗೂ ಅಧೀನ ಕಚೇರಿಗಳಲ್ಲ್ಲಿ ಅಂದು ಬೆಳಿಗ್ಗೆ ೧೧ ಗಂಟೆಗೆ ಮತದಾರರ ಪ್ರತಿಜ್ಞಾ ವಿಧಿ ಭೋಧನೆ ಭೋದಿಸುವುದರ ಜೊತೆಗೆ ಛಾಯಾಚಿತ್ರ ತೆಗೆದು ಪ್ರಚಾರ ಪಡಿಸಬೇಕು. ಸಾಮಾಜಿಕ ಸೇವಾ ಸಂಸ್ಥೆಗಳು, ಯುವ ಸ್ವಯಂ ಸೇವಾ ಸಂಸ್ಥೆಗಳು, ಎನ್.ಎಸ್.ಎಸ್, ಎನ್.ಸಿ.ಸಿ ಸ್ಕೌಟ್ ಮತ್ತು ಗೈಡ್ಸ್. ನೆಹರು ಯುವಕ ಕೇಂದ್ರ ಸೇರಿದಂತೆ ರಾಷ್ಟ್ರೀಯ ಮತದಾರರ ದಿನಾಚರಣೆ ೨೦೨೫ ರ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದರು.ಕಾರ್ಯಕ್ರಮಗಳನ್ನು ಜಿಲ್ಲಾ ಪಂಚಾಯತ ಸಭಾಂಗಣದ ವೇದಿಕೆ ಆಯೋಜಿಸಬೇಕು, ವೇದಿಕ ಕಾರ್ಯಕ್ರಮ ಮುಂಚೆ ಜಾಥಾ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಲೋಕಸೇವಾ ಆಯೋಗ ವತಿಯಿಂದ ವಿವಿಧ ಇಲಾಖೆಗಳಲ್ಲಿನ ಗ್ರೂಪ್ ಬಿ ವೃಂದದ ಹುದ್ದೆಗಳಿಗೆ ನಡೆಸಲಿರುವ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳು ವ್ಯವಸ್ಥಿತ ಹಾಗೂ ಅತ್ಯಂತ ಎಚ್ಚರಿಕೆ ಹಾಗೂ ಸೂಕ್ಷ್ಮವಾಗಿ ಪಾರದರ್ಶಕತೆಯಿಂದ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸಬಂಧಿಸಿದ್ದ ಅಧಿಕಾರಿಗಳಿಗೆ ಸೂಚಿಸಿದರು.ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ೨೦೨೩-೨೪ನೇ ಸಾಲಿನ ಗೆಜೆಟೆಡ್ ಪ್ರೊಬ್ರೇಷನರ್ ಗ್ರೂಪ್ ಬಿ ವೃಂದದ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜನವರಿ ೧೯ರ ರವಿವಾರ ನಡೆಯುವ ೨೧ ಕೇಂದ್ರಗಳಲ್ಲಿ ಒಟ್ಟು ೮೫೯೯ ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ಅಂದು ಬೆಳಿಗ್ಗೆ ೧೦ಗಂಟೆಯಿಂದ ೧೧.೩೦ಗಂಟೆಯ ವರೆಗೆ ಸಾಮಾನ್ಯ ಪರೀಕ್ಷೆ ಹಾಗೂ ಜನವರಿ ೨೫ರ ಶನಿವಾರ ನಡೆಯುವ ೨೦ ಕೇಂದ್ರಗಳಲ್ಲಿ ಒಟ್ಟು ೮೦೧೧ ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದು ಮದ್ಯಾಹ್ನ ೩ ರಿಂದ ೫ಗಂಟೆ ವರೆಗೆ ನಿರ್ದಿಷ್ಟ ಪಡಿಸಿದ್ದ ಪರೀಕ್ಷೆ ಜರುಗಲಿದೆ. ಅಭ್ಯರ್ಥಿಗಳು ಪರೀಕ್ಷಾ ದಿನಗಳಂದು ಅಧಿವೇಶನದ ಪರೀಕ್ಷೆ ಪ್ರಾರಂಭವಾಗುವ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಬೀದಿ ದೀಪಗಳು ಸುಟ್ಟು ಹೋಗಿ ಹಲವು ದಿನಗಳು ಕಳೆದಿದ್ದರೂ, ಹೊಸ ದೀಪಗಳನ್ನು ಅಳವಡಿಸದ ಪಟ್ಟಣ ಪಂಚಾಯಿತಿ ಸಿಬ್ಬಂದಿಯ ಕಾರ್ಯವೈಖರಿ ಕುರಿತು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಪಟ್ಟಣದ ಇಂಡಿ ರಸ್ತೆಯ ವಾರ್ಡ ೧೧ ರಲ್ಲಿನ ಕಲ್ಮೇಶ್ವರ ನಗರದಲ್ಲಿ ಕಳೆದ ೧೫ ದಿನಗಳಿಂದ ವಿದ್ಯುತ್ ಬಲ್ಬ್ಗಳು ಸುಟ್ಟು ಹೋಗಿ ಇಡೀ ರಸ್ತೆಗಳು ಕತ್ತಲೆಯಿಂದ ಕೂಡಿವೆ. ಈ ಕುರಿತು ಸ್ಥಳೀಯ ಸಿಬ್ಬಂದಿ ಸಹಿತ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ವಿನಂತಿಸಲಾಗಿದೆ. ಅದಾಗ್ಯೂ ಇವರೆಗೆ ಯಾವುದೇ ಕ್ರಮ ವಹಿಸದ ಹಿನ್ನೆಲೆಯಲ್ಲಿ ಸಾರ್ವನಿಕರು ಕತ್ತಲೆ ಹಾಗೂ ಕಳ್ಳರ ಕುರಿತು ಭಯ ಪಡುವಂತಾಗಿದೆ. ಈ ಬಗ್ಗೆ ವಾರ್ಡಿನ ಪ್ರಭು ಕೋಟಿನ್, ರವಿ ಚಟ್ಟರಕಿ ತಮ್ಮ ಅಸಮಾಧಾನ ವ್ಯಕ್ತಪಡಿಸಿ, ಪಟ್ಟಣದ ಹೊರವಲಯದ ವಿದ್ಯುತ್ ಕಂಬಗಳಿಗೆ ದೀಪ ಅಳವಡಿಸುವುದು ಸುರಕ್ಷತೆಯ ದೃಷ್ಟಿಯಿಂದ ಅತೀ ಅಗತ್ಯವಾಗಿದೆ. ನಿನ್ನೆಯಷ್ಟೇ ವಿಜಯಪುರ ನಗರದಲ್ಲಿ ಕಳ್ಳರು ಮನೆಗೆ ನುಗ್ಗಿ ಹಲ್ಲೆ ಹಾಗೂ ದರೋಡೆ ಮಾಡಿದ ಘಟನೆ ಸಂಭವಿಸಿದೆ. ಈಗ ನಮ್ಮ ಮನೆಗಳು ಸಹ ಪಟ್ಟಣದ ಹೊರವಲಯದಲ್ಲಿವೆ. ಇಲ್ಲಿ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ವಾರಣಾಸಿಯಲ್ಲಿ ಜರುಗಿದ ರಾಷ್ಟ್ರಮಟ್ಟದ ಟೆನಿಸ್ ಪೆಡರೆಶನ್ ಕಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ವಿಜೇತರಾದ ಹೆಮ್ಮೆ ನನಗಿದೆ ಎಂದು ಪ್ರಶಾಂತ ರಾಠೋಡ ಹೇಳಿದರು.ತಾಲ್ಲೂಕಿನ ಹಿಟ್ನಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಗ್ರಾಮಸ್ಥರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಾಧನೆಗೆ ಸತತ ಪ್ರಯತ್ನ ಅತೀ ಅಗತ್ಯ ಎಂದು ತಮ್ಮ ಸಾಧನೆಯ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕದ ಮತ್ತೊಂದು ತಂಡವನ್ನು ಪ್ರತಿನಿಧಿಸಿ ವಿಜೇತರಾದ ಶಿವರಾಜ ರಾಠೋಡರನ್ನು ಸಹ ಸನ್ಮಾನಿಸಲಾಯಿತು.ಅಧ್ಯಕ್ಷೆ ರತ್ನಾಬಾಯಿ ಮಾದರ, ಉಪಾಧ್ಯಕ್ಷ ಮಲ್ಲು ದೊಡಮನಿ, ಪಿಡಿಓ ವಿನೋದ ರಾಠೋಡ, ಸದಸ್ಯರುಗಳಾದ ಕಸ್ತೂರಿಬಾಯಿ ದೊಡಮನಿ, ಸಾಹೇಬಗೌಡ ಇಂಗಳಗಿ, ಲಾಳೇಸಾಹೇಬ ಚಟ್ಟರಕಿ, ಸೀತಾರಾಮ ರಾಠೋಡ, ಅನೀಲ ರಾಠೋಡ, ಗಡ್ಡೆಪ್ಪ ಹೊಸಮನಿ, ದಯಾನಂದ ನಾಯಿಕ, ಸಂಜೀವ ಹೊಸಮನಿ, ವೇಣು ರಾಠೋಡ, ಶರಣು ನಾಯ್ಕೋಡಿ, ಸಿಬ್ಬಂದಿ ಗೀತಾ ದೇಸಾಯಿ, ಗ್ರಂಥಾಲಯ ಮೇಲ್ವಿಚಾರಕ ರಮೇಶ ಕುಂಬಾರ ಇದ್ದರು.
ಸಿಂದಗಿಯಲ್ಲಿ ೨೦ಪುಸ್ತಕಗಳ ಲೋಕಾರ್ಪಣೆ | ರಾಜ್ಯಮಟ್ಟದ ಬೆರಗು ಪ್ರಶಸ್ತಿ ಪ್ರದಾನ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸರಕಾರ ಎಲ್ಲ ಭಾಗ್ಯಗಳನ್ನು ಕರುಣಿಸಿದೆ, ಆದರೆ ಪುಸ್ತಕ ಸಂಸ್ಕೃತಿ ಭಾಗ್ಯ ಕೊಡುವದನ್ನು ಮರೆತಿದೆ ಎಂದು ಬೆಂಗಳೂರು ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ವೆಂಕಟೇಶ ವಿಷಾಧ ವ್ಯಕ್ತಪಡಿಸಿದರು.ಅವರು ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆ ಹಾಗೂ ಸಿಂದಗಿಯ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪಿಯು ಕಾಲೇಜಿನಲ್ಲಿ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಸ್ಮರಣೆಗಾಗಿ ಹಮ್ಮಿಕೊಂಡಿದ್ದ ೨೦ ಪುಸ್ತಕಗಳ ಬಿಡುಗಡೆ ಮತ್ತು ಬೆರಗು ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.ಪ್ರಕಾಶಕರಿಗೆ ಕಳೆದ ನಾಲ್ಕು ವರ್ಷಗಳಿಂದ ಸರಕಾರ ಪುಸ್ತಕ ಖರೀದಿಯ ಭಾಗ್ಯ ನೀಡಿಲ್ಲ, ೨೦೨೧ರ ಪುಸ್ತಕ ಖರೀದಿಸಿ ಹಣವನ್ನು ಪಾವತಿಸಿಲ್ಲ, ಹೀಗಾದರೆ ಕನ್ನಡದ ಪುಸ್ತಕೊದ್ಯಮ ಮತ್ತು ಸಾಂಸ್ಕೃತಿಕ ಜಗತ್ತು ಅಳಿವಿನಂಚಿಗೆ ಬರಲಿದೆ ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ಅಶೋಕ ಮನಗೂಳಿ ಮಾತನಾಡಿ ಬೆರಗು ಸಂಸ್ಥೆ ಈ ಭಾಗದಲ್ಲಿ ಉತ್ತಮ ಕೆಲಸ ಮಾಡುತ್ತಿದೆ, ಪುಸ್ತಕ ಪ್ರಕಟಿಸುವ ಮೂಲಕ…
