ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ; ಮೋಟಾರ್ ಸೈಕಲ್‌ಗೆ ಕಾರೊಂದು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೋಟಾರ್ ಸೈಕಲ್ ಸವಾರರಿಬ್ಬರೂ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಪಟ್ಟಣದ ಬಸವನಬಾಗೇವಾಡಿ ರಸ್ತೆಯಲ್ಲಿ ಜರುಗಿದೆ.
ಪಟ್ಟಣದ ಬಸವನಬಾಗೇವಾಡಿ ರಸ್ತೆಯಲ್ಲಿನ ಸಾಲಕ್ಕಿಯವರ ಜಮೀನಿನ ಹತ್ತಿರ ಶುಕ್ರವಾರ ಸಂಜೆ ಈ ಘಟನೆ ಜರುಗಿದೆ.
ಘಟನೆಯಲ್ಲಿ ಪಟ್ಟಣದ ಆರೀಪ್ ವಡ್ಡೋಡಗಿ(೩೫) ಹಾಗೂ ಮೈಬೂಬ್‌ಸಾಬ್ ಕರ್ಜಗಿ(೬೫) ಇವರು ಮೃತಪಟ್ಟಿದ್ದಾರೆ. ಇವರು ಮೋಟಾರ್ ಸೈಕಲ್(ಕೆಎ೨೮ ಇಕ್ಯೂ ೯೩೯೯) ಮೇಲೆ ಮುದ್ದೇಬಿಹಾಳ ಪಟ್ಟಣದಿಂದ ಹೂವಿನಹಿಪ್ಪರಗಿ ಮಾರ್ಗವಾಗಿ ದೇವರಹಿಪ್ಪರಗಿಗೆ ಬರುತ್ತಿದ್ದ ಸಂದರ್ಭದಲ್ಲಿ ಇವರಿಗೆ ದೇವರಹಿಪ್ಪರಗಿ ಕಡೆಯಿಂದ ಬಸವನ ಬಾಗೇವಾಡಿ ಕಡೆಗೆ ತೆರಳುತ್ತಿದ್ದ ಕಾರು ವೇಗವಾಗಿ ಬಂದು ನೇರವಾಗಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
ಅಪಘಾತದ ನಂತರ ಕಾರು ಚಾಲಕನು ನಿಲ್ಲಿಸದೇ ಹೋಗಿದ್ದು, ದೂರು ದಾಖಲಿಸಲಾಗಿದೆ. ಘಟನೆಯ ಸ್ಥಳಕ್ಕೆ ದೇವರಹಿಪ್ಪರಗಿ ಪಿಎಸ್‌ಐ ಬಿ.ಎ.ತಿಪರಡ್ಡಿ ಹಾಗೂ ಪೊಲೀಸ್‌ರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

