ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸುರಸಿಂಗಾರ(ರಿ) ವಿಜಯಪುರ ಇವರು ಫೆ.2 ರವಿವಾರ ರಂದು ನಗರದ ಕಂದಗಲ್ಲ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸಂಜೆ 6-30 ಗಂಟೆಗೆ ದಿ.ಭೋಜಣ್ಣ ಬೀಳಗಿ ಅವರ ಸ್ಮರಣಾರ್ಥ, ಧಾರವಾಡದ ಸುಪ್ರಸಿದ್ಧ ಹಿಂದುಸ್ಥಾನಿ ಗಾಯಕರಾದ ಪಂ. ಕೈವಲ್ಯ ಕುಮಾರ್ ಗುರವ್ ಅವರ ಶಾಸ್ತ್ರೀಯ ಗಾಯನವನ್ನು ಏರ್ಪಡಿಸಲಾಗಿದೆ. ಇವರಿಗೆ ತಬಲಾದಲ್ಲಿ ಪ್ರಸಿದ್ಧ ತಬಲಾ ವಾದಕರಾದ ಶ್ರೀ ಶ್ರೀಧರ ಮಾಂಡ್ರೆ ಮತ್ತು ಹಾರ್ಮೋನಿಯಂ ಸಾಥ್ ನಲ್ಲಿ ಸತೀಶ್ ಭಟ್ ಹೆಗ್ಗಾರ್ ರವರು ಸಹ ಕಲಾವಿದರಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮವು ಎಲ್ಲರಿಗೂ ಉಚಿತವಾಗಿದ್ದು ಸಂಗೀತ ಆಸಕ್ತಿಯುಳ್ಳುವರೆಲ್ಲರು ಆಗಮಿಸಬೇಕಾಗಿ ವಿನಂತಿ. ಸುರಸಿಂಗಾರ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಕಾರ್ಯದರ್ಶಿ ಸಂಗಣ್ಣ ಪಾಟೀಲ ಪ್ರಕಟಣೆಯಲ್ಲಿ ಕೋರಿದ್ದಾರೆ.

