ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ಪಂಚಾಚಾರ್ಯ ಕಲ್ಯಾಣಮಂಟಪದ ಆವರಣದಲ್ಲಿ ಬೇಸಿಗೆಯ ನೀರಿನ ದಾಹ ನೀಗಿಸುವ ನಿಟ್ಟಿನಲ್ಲಿ ಕುಡಿಯುವ ನೀರಿನ ಅರವಟ್ಟಿಗಿಗೆ ಕಲ್ಯಾಣಮಂಟಪದ ಅಧ್ಯಕ್ಷ ಬಸಯ್ಯ ಮಲ್ಲಿಕಾರ್ಜುನಮಠ ಚಾಲನೆ ನೀಡಿದರು.
ಪಟ್ಟಣದ ಇಂಡಿ ರಸ್ತೆಯ ಪಂಚಾಚಾರ್ಯ ಕಲ್ಯಾಣ ಮಂಟಪದ ಆವರಣದಲ್ಲಿ ಶನಿವಾರ ಬೇಸಿಗೆಯ ಕಾರಣವಾಗಿ ಅರವಟ್ಟಿಗೆ ಆರಂಭಿಸಲಾಯಿತು.
ಈ ಸಂದರ್ಭದಲ್ಲಿ ಕಲ್ಯಾಣ ಮಂಟಪದ ಅಧ್ಯಕ್ಷ ಬಸಯ್ಯ ಮಲ್ಲಿಕಾರ್ಜುನಮಠ ಮಾತನಾಡಿ, ನಾನಾ ಕೆಲಸಗಳ ನಿಮಿತ್ತ ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಬರುವ ರೈತರು, ಸಾರ್ವಜನಿಕರಿಗೆ ಬೇಸಿಗೆಯಲ್ಲಿ ದಾಹ ಉಂಟಾಗದಿರಲೆಂದು ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಈ ರಸ್ತೆಯಲ್ಲಿ ಮುಖ್ಯವಾಗಿ ತಹಶೀಲ್ದಾರ ಕಾರ್ಯಲಯ, ಹೆಸ್ಕಾಂ ಕಚೇರಿ ಹಾಗೂ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಸಂಸ್ಥೆಗಳು ಇರುವುದರಿಂದ ಸಾರ್ವಜನಿಕರು ಅಡ್ಡಾಡುವುದು ಸಾಮಾನ್ಯ. ಅವರ ಕೆಲಸಗಳಿಗೆ ಸಹಕಾರಿಯಾಗಿರಲೆಂದೂ ಈ ವ್ಯವಸ್ಥೆ ಮಾಡಲಾಗುತ್ತಿದೆ. ಈ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದೂ ಕೋರಿದರು.
ಪಟ್ಟಣ ಪಂಚಾಯಿತಿ ಸದಸ್ಯ ಶಾಂತಯ್ಯ ಜಡಿಮಠ, ನಿವೃತ್ತಶಿಕ್ಷಕ ಶಾಂತಗೌಡ ಬಿರಾದಾರ (ಯರನಾಳ), ಉಮಾಕಾಂತ ಸೊನ್ನದ, ಭೀಮರಾಯ ಶಾಬಾದಿ(ತೆಗನೂರ), ಪ್ರಭು ರಾಚಯ್ಯಗೋಳಮಠ ಇದ್ದರು.

