Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಪಕ್ಷಕ್ಕಾಗಿ ತ್ಯಾಗ ಮಾಡಿಕೊಂಡೇ ಬಂದಿದ್ದೇನೆ, ಮುಂದೆಯೂ ಮಾಡುತ್ತೇನೆ | ಪಕ್ಷವನ್ನು ಉಳಿಸುವುದು, ನನ್ನ ಕರ್ತವ್ಯ | ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟನೆ ಬೆಳಗಾವಿ: ಪಕ್ಷದ ಒಳಜಗಳ ಅಥವಾ ಯಾರೊಂದಿಗೂ ನನಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಹೇಳಿದ್ದಾರೆ.ಕಾಂಗ್ರೆಸ್‌ನಲ್ಲಿ ಒಳಜಗಳದ ಕುರಿತು ವರದಿಗಾರರಿಗೆ ಪ್ರತಿಕ್ರಿಯಿಸಿದ ಡಿಕೆಶಿ, ಪಕ್ಷವನ್ನು ಉಳಿಸುವುದು, ಸರ್ಕಾರವನ್ನು ಭದ್ರವಾಗಿಡುವುದೇ ನನ್ನ ಕರ್ತವ್ಯ. ಇದರ ಹೊರತಾಗಿ ನನಗೆ ಬೇರೆ ಯಾವುದೇ ಕರ್ತವ್ಯಗಳಿಲ್ಲ. ನನಗೆ ಯಾರ ಜೊತೆಯೂ ಭಿನ್ನಾಭಿಪ್ರಾಯವಿಲ್ಲ ಎಂದರು.“ನಾನು ಆರಂಭದಿಂದಲೂ ಪಕ್ಷಕ್ಕಾಗಿ ಹಲವು ಸಂದರ್ಭಗಳಲ್ಲಿ ತ್ಯಾಗಗಳನ್ನು ಮಾಡಿದ್ದೇನೆ. ದಿ. ಎನ್. ಧರಂ ಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ತ್ಯಾಗ ಮಾಡಿದ್ದೇನೆ ಎಂದರು.“ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯ ಸಮಯದಲ್ಲಿಯೂ ಸಹ, ನಾನು ಹಿಂದೆ ಸರಿದು ತ್ಯಾಗ ಮಾಡಿದ್ದೇನೆ. ನನಗೆ ಪಕ್ಷವೇ ಮುಖ್ಯ. ನಾನು ಪಕ್ಷದಿಂದ ಬೆಳೆದವನು. ವಿದ್ಯಾರ್ಥಿ ನಾಯಕನಾಗಿದ್ದ ನನ್ನನ್ನು ಗುರುತಿಸಿ ಪಕ್ಷ ಟಿಕೆಟ್ ನೀಡಿತ್ತು. ಮಾಧ್ಯಮದವರು ಯಾರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಸರಣಿಗಳ್ಳತನ ಮಾಡುತ್ತಿರುವ ಧರೋಡೆಕೋರರನ್ನು ಪತ್ತೆಹಚ್ಚಿ ಬಂಧಿಸಿ ಹೋರಾಡಿದ ಪೊಲೀಸ್ ತಂಡಕ್ಕೆ ನಾಗರಿಕರಿಂದ ಹೃದಯಸ್ಪರ್ಶಿ ಸನ್ಮಾನ ನಡೆಯಿತು.ರವಿವಾರ ವಿಜಯಪುರ ಗೋಲಗುಂಬಜ್ ಸರ್ಕಲ್ ಇನ್ಸ್ಪೆಕ್ಟರ್ ಕಾರ್ಯಾಲಯದಲ್ಲಿ ವಾರ್ಡ್ನಂ ೨೧ ಲಕ್ಷ್ಮಿ ನಗರ, ಗಣೇಶ, ವೆಂಕಟೇಶ್ ನಗರ ಹಿರಿಯರು, ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ, ಕವಿ ಸಾಹಿತಿ ಮಲ್ಲಿಕಾರ್ಜುನ ಭೃಂಗಿಮಠ ಇವರೊಂದಿಗೆ ನಾಗರಿಕ ಸನ್ಮಾನ ಸಮಾರಂಭ ಜರುಗಿತು.ಗೋಲಗುಂಬಜ್ ಠಾಣೆಯ ಪಿ.ಸಿ ಭೀಮಾಶಂಕರ ಮಖಣಾಪೂರ, ಗೋಲಗುಂಬಜ್ ಪಿಎಸ್‌ಐ ಎಮ್.ಡಿ. ಗೋರಿ, ಜಲನಗರ ಪಿಎಸ್‌ಐ ಡಿ.ಎಮ್. ಸಂಗಾಪೂರ, ಆದರ್ಶನಗರದ ಪಿಎಸ್‌ಐಗಳು ಆದಂತ ಶ್ರೀಮತಿ ಪ್ರೇಮಾ ಎಸ್. ಕುಚಬಾಳ, ಹಾಗೂ ಸೀತರಾಮ ಲಮಾಣಿ, ಎಪಿಎಮ್‌ಸಿ ಪಿಎಸ್‌ಐ ಆದಂತಹ ಶ್ರೀಮತಿ ಜ್ಯೋತಿ ಕೋತ್, ಸಿಪಿಐ ಆದಂತಹ ಮಲ್ಲಯ್ಯ ಮಠಪತಿ ಹಾಗೂ ಹೆಡ್‌ಕಾನ್‌ಸ್ಟೇಬಲ್ ಆದಂತಹ ರವಿ ಹಂಗರಗಿ ಇವರುಗಳಿಗೆ ಪೊಲೀಸ್ ಅಣ್ಣಾ ಅಂತಾ ಗೀತೆ ಹಾಡುವುದರೊಂದಿಗೆ ಸನ್ಮಾನ ಸಮಾರಂಭ ಜರುಗಿತು.ನಮ್ಮ ವಿಜಯಪುರ ಜಿಲ್ಲಾ ಪೊಲೀಸ್ ವರೀಷ್ಠಾಧೀಕಾರಿಗಳು ಹಾಗೂ ಹೆಚ್ಚುವರಿ ಪೊಲೀಸ್ ವರೀಷ್ಠಾಧಿಕಾರಿಗಳು, ಹಾಗೂ ಡಿವೈಎಸ್‌ಪಿ ಇವರ ಮಾರ್ಗದರ್ಶನದಂತೆ ದರೋಢೆಕೋರರನ್ನು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಹೊರವಲಯ ಮಹಾತ್ಮ ಗಾಂಧಿನಗರ, ಸ್ಟಾರ್‌ಚೌಕ್ ಹತ್ತಿರ ಇಟ್ಟಗೆಬಟ್ಟಿಯಲ್ಲಿ ಹೊಟ್ಟೆಪಾಡಿಗಾಗಿ ಕೆಲಸಕೆ ಬಂದ ಕಾರ್ಮಿಕರಾದ ಜಮಖಂಡಿ ತಾಲೂಕಿ ಚಿಕ್ಕಲಕಿ ಕ್ರಾಸ್‌ನ ಸದಾಶಿವ ಮಾದರ, ಉಮೇಶ ಮಾದರ, ಸದಾಶಿವ ಬಬಲಾದಿ ಇವರನ್ನು ಮರ‍್ನಾಲ್ಕು ದಿನ ಕೂಡಿ ಹಾಕಿ ಅಮಾನವೀಯವಾಗಿ ಥಳಿಸಿರುವುದು ಅತ್ಯಂತ ಹೀನ ಕೃತ್ಯವಾಗಿದ್ದು, ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ಇಟ್ಟಿಗೆ ಬಟ್ಟೆ ಮಾಲೀಕ ಹಾಗೂ ಗುಂಡಾ ವರ್ತನೆ ತೋರಿದ ಇತರರನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ನ್ಯಾಯವಾದಿ ದಾನೇಶ ಅವಟಿ ಒತ್ತಾಯಿಸಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂರು ಜನರಿಗೆ ಹಣ್ಣು ಹಂಪಲು ವಿತರಿಸಿ ಸಾಂತ್ವಾನ ಹೇಳಿ ಮಾತನಾಡಿದರು.ನಗರದಲ್ಲಿ ದಿನಂಪ್ರತಿ ಕಳ್ಳತನ, ದರೋಡನೆ, ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಗುಂಡಾ ಸಾಮ್ರಾಜ್ಯ ನೆಲೆಯೂರಿದಂತಾಗಿದೆ. ಕಾರಣ ನಾಗರೀಕರು ಭಯಭೀತರಾಗಿದ್ದಾರೆ. ಇಂಥಹ ದುಷ್ಕೃತ್ಯ ಎಸಗುವುದನ್ನು ಬಂಧಿಸಿ ಕೂಡಲೇ ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾರೆ.ನ್ಯಾಯವಾದಿ ಬಾಬು ಹಿಪ್ಪರಗಿ ಮಾತನಾಡಿ, ಇದೊಂದು ಅಮಾನವೀಯ ಕೃತ್ಯವಾಗಿದ್ದು, ಕಾನೂನಿನ ಸುವ್ಯವಸ್ಥೆ ಹದಗೆಟ್ಟಂತಾದಗಿದೆ. ಹತ್ತಾರು ಜನ…
ಉದಯರಶ್ಮಿ ದಿನಪತ್ರಿಕೆ ಹೊನವಾಡ: ಹೊನವಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಚುನಾವಣೆ ರವಿವಾರದಂದು ನಡೆಯಿತುಅದೇ ದಿನ ತಡ ರಾತ್ರಿ ಫಲಿತಾಂಶವೂ ಪ್ರಕಟಗೊಂಡಿದ್ದು, ಸಾಲಗಾರರ ಮತ ಕ್ಷೇತ್ರದಿಂದ 11 ಸ್ಥಾನ ಹಾಗೂ ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದ ಒಂದು ಸ್ಥಾನಕ್ಕೆ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆ ಜರುಗಿತು ಕಣದಲ್ಲಿ ಒಟ್ಟು 22 ಅಭ್ಯರ್ಥಿಗಳು ಸ್ಪರ್ಧಿಸಿದ್ದರುಆಯ್ಕೆಯಾದವರು:ಬ ವರ್ಗದ ಸಾಲಗಾರ ಚನ್ನಪ್ಪ ಕೋಟಿ 302ಮತಗಳು,ಅ ವರ್ಗ ದೇವೇಂದ್ರ ಪತ್ತಾರ 300,ಪರಿಶಿಷ್ಟ ಜಾತಿ,ಶ್ಯಾಮು ಬಡಳ್ಳಿ -310ಪರಿಶಿಷ್ಟ ಪಂಗಡಅಭ್ಯರ್ಥಿ ಶಂಕರ ತಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಹಿಳಾ ಕ್ಷೇತ್ರದಲ್ಲಿ -ಮಹಾನಂದಾ ಗೂಗವಾಡ – 294ಸರೋಜನಿ ಪಾಂಡೆಗಾಂವಿ – 287ಮತ ಪಡೆದು ಜಯಗಳಿಸಿದ್ದಾರೆ. ಸಾಮಾನ್ಯ ಕ್ಷೇತ್ರದಲ್ಲಿ ವಿಜೇತರಾದವರು ಆನಂದ ಕೋರಬು 284, ಪಾಂಡು ಶಿಂಧೆ 292, ಮಲ್ಲಪ್ಪ ಆಕಳೆ 300, ಮಹಾಂತೇಶ ಮಾಲಗಾರ 282, ಮೀರಾಸಾಬ ಗೌಂಡಿ 285 ಮತ ಪಡೆದುಕೊಂಡಿದ್ದಾರೆ, ಸಾಲಗಾರರಲ್ಲದ ಕ್ಷೇತ್ರದಲ್ಲಿ ಅಮಸಿದ್ದ ಪೂಜಾರಿ ಮತ್ತು ಅರವಿಂದ ಮಸಳಿಯವರಿಗೆ ಸಮಾನ ಮತಗಳನ್ನು ಪಡೆದುಕೊಂಡರು ಅಂತಿಮವಾಗಿ ಅಭ್ಯರ್ಥಿಗಳ ಒಪ್ಪಂದದ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಸಮೀಪದ ನಿವರಗಿ ಗ್ರಾಮದ ಶ್ರೀ ಸಂಗಮೇಶ್ವರ ಪ್ರೌಢಶಾಲೆಯ ಆದರ್ಶ ಮುಖ್ಯೋಪಾಧ್ಯಾಯ ರವಿಕುಮಾರ ನಾಯಕ.ಬಿ ಇವರಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ (ರಿ) ಬೆಂಗಳೂರು ಜಿಲ್ಲಾ ಘಟಕ ವಿಜಯಪುರ ಇವರು ಹಮ್ಮಿಕೊಂಡ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ಸ್ಮರಣಾರ್ಥವಾಗಿ ರಾಜ್ಯಮಟ್ಟದ ಮುಖ್ಯೋಪಾಧ್ಯಾಯರು ಪ್ರಶಸ್ತಿ ನೀಡಿ ಗೌರವಿಸಿರುವರು.ಜಾಣ ವಿದ್ಯಾರ್ಥಿಗಳ ತಾಣ ಎಂದೇ ಹೆಸರಾದ ನಿವರಗಿ ಗ್ರಾಮದ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ೨೩ ವರ್ಷಗಳಿಂದ ವಿಜ್ಞಾನ ಶಿಕ್ಷಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವರು. ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಸರಳವಾಗಿ ಬೋಧನೆ ಮಾಡುವ ಪರಿಣಿತರು. ವಿದ್ಯಾರ್ಥಿಗಳಿಗೆ ತಮ್ಮದೇ ಶೈಲಿಯಲ್ಲಿ ವಿದ್ಯಾರ್ಜನೆ ಮಾಡಿಸಿ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿರುವರು. ನಮ್ಮ ವಿದ್ಯಾರ್ಥಿಗಳು ಎ.ಪಿ.ಜೆಅಬ್ದುಲ ಕಲಾಂರಂತೆ ವಿಜ್ಞಾನಿಗಳಾಗಬೇಕೆಂಬ ಹಿರಿಯಾಸೆ ನಮ್ಮದು. ಸರಳ ಸೌಮ್ಯ ಸ್ವಭಾವದ ಇವರು ಎಲ್ಲರಿಗೂ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ. ಸರಳ ಬೋಧನೆ ಮಾಡಿ ವಿದ್ಯಾರ್ಥಿಗಳ ಜ್ಞಾನ ವೃದ್ಧಿಸುವ ಚತುರರು. ಬೋಧನೆಯಲ್ಲಿ ಅಲಕ್ಷ ಮಾಡಬಾರದು. ವಿದ್ಯಾರ್ಥಿಗಳನ್ನು ಜಾಣ ಮಾಡುವ ಸಂಕಲ್ಪ ನಮ್ಮದಾಗಬೇಕೆಂದು ಹೇಳುವರು. ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು,…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಭಗವಂತ ನೀಡಿದ ಕಣ್ಣನ್ನು ಪ್ರತಿಯೊಬ್ಬರೂ ರಕ್ಷಣೆ ಮಾಡುವುದು ಕರ್ತವ್ಯ ಎಂದು ಶ್ರೀಮಠದ ಪೀಠಾಧಿಪತಿ ನಾಗರತ್ನ ರಾಜಯೋಗಿ ವೀರರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.ಸಿಂದಗಿ ಪಟ್ಟಣದ ಬಸ್‌ಡಿಪೋ ಹತ್ತಿರದಲ್ಲಿರುವ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ ಆವರಣದಲ್ಲಿ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ ೨೯ನೆಯ ಜಾತ್ರಾ ಮಹೋತ್ಸವ-ಧರ್ಮಸಭೆ ಕಾರ್ಯಕ್ರಮ ನಿಮಿತ್ಯ ಹಮ್ಮಿಕೊಂಡ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಕಾರ್ಯಕ್ರಮಕ್ಕೆ ಚಾಲನೆ ನಿಡಿ ಮಾತನಾಡಿದ ಅವರು, ಜನನದಿಂದಲೇ ದೃಷ್ಠಿಯನ್ನು ಕಳೆದುಕೊಂಡವರು ಪ್ರಪಂಚವನ್ನು ನೋಡುವ ಭಾಗ್ಯದಿಂದ ವಮಚಿತರಾಗಿದ್ದಾರೆ. ಆದರೆ ಬಹಳಷ್ಟು ಜನ ತಮ್ಮ ನಿರ್ಲಕ್ಷö್ಯ ತನದಿಂದ ಕಣ್ಣು ಕಳೆದುಕೊಂಡಿದ್ದಾರೆ. ಆದಕಾರಣ ದೃಷ್ಟಿ ಇದ್ದವರು ಕಣ್ಣಿನ ಸಂರಕ್ಷಣೆ ಮಾಡಿಕೊಳ್ಳುವುದು ಅತ್ಯವಶ್ಯಕ ಎಂದರು.ಈ ವೇಳೆ ಕಾನಿಪ ಧ್ವನಿ ಸಂಘದ ಅದ್ಯಕ್ಷ ಪಂಡಿತ ಯಂಪೂರೆ, ಡಾ ಮಹಾಂತೇಶ ಹಿರೇಮಠ ಮಾತನಾಡಿ, ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರಭುಗೌಡ ಬಿರಾದಾರ ಅವರು ಬಡವರ ಸಾಮಾಜಿಕ ಸೇವೆಯಲ್ಲಿ ದೇವರನ್ನು ಕಾಣಲು ಹೊರಟಿದ್ದಾರೆ. ಅವರ ಕುಟುಂಬದಲ್ಲಿ ಸುಮಾರು ೮ಜನ ಕಣ್ಣಿನ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ರಾಜ್ಯದಲ್ಲಿ ಅನೇಕ ಮಠಮಾನ್ಯಗಳಿದ್ದು, ಧರ್ಮ ರಕ್ಷಣೆ, ಶಿಕ್ಷಣ, ಸಾಹಿತ್ಯ ಸೇರಿದಂತೆ ಜನರ ನೋವು-ನಲಿವುಗಳಿಗೆ ಸ್ಪಂದಿಸುವ ಕಾರ್ಯವನ್ನು ಮಾಡುತ್ತಾ ಬಂದಿರುತ್ತವೆ. ರಾಜ್ಯದ ಶ್ರೇಯೋಭಿವೃದ್ಧಿಯಲ್ಲಿ ಮಠಗಳ ಮಾತ್ರ ದೊಡ್ಡದು ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕವಿ ಡಾ.ಸಿದ್ದಪ್ಪ ಬಿದರಿ ಹೇಳಿದರು.ಸಿಂದಗಿ ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ ಸಾರಂಗಮಠದ ಆರ್.ಡಿ.ಪಾಟೀಲ ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಸಿ ಮಾತನಾಡಿದ ಅವರು, ದೇಶವು ಪ್ರಗತಿ ಸಾದಿಸಬೇಕಾದರೆ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಪ್ರಬಲವಾಗಿರಬೇಕು. ಸಾಮಾಜಿಕ ಪ್ರಗತಿಗೆ ಶತಮಾನಗಳಿಂದ ಮಠಮಾನ್ಯಗಳು ಶಿಕ್ಷಣಕ್ಕೆ ಒತ್ತು ಕೊಟ್ಟಿವೆ. ಶೈಕ್ಷಣಿಕ ಪ್ರಗತಿಯಲ್ಲಿ ಮಠಗಳ ಪಾತ್ರ ದೊಡ್ಡದಿದೆ ಎಂದರು.ಈ ವೇಳೆ ೨೦೨೩-೨೪ನೆಯ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ವಿವಿಧ ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾಥಿಗಳನ್ನು ಪಾರಿತೋಷಕ ನೀಡಿ ಗೌರವಿಸಲಾಯಿತು. ಮತ್ತು ಮಹಾವಿದ್ಯಾಲಯದಲ್ಲಿ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು ಇವರ ವತಿಯಿಂದ ಕೊಡಮಾಡುವ ರಾಜ್ಯ ಯುವ ಪ್ರಶಸ್ತಿಯನ್ನು ಪಟ್ಟಣದ ಮಾರುತಿ ನಗರದ ನಿವಾಸಿ, ಕನ್ನಡಪರ ಸಂಘಟನೆಗಳ ಹೋರಾಟಗಾರ ರಾಜುಗೌಡ ತುಂಬಗಿ ಭಾಜನರಾಗಿ ಸವಣೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು
ರೂ.457 ಕೋಟಿ ಬಿಡುಗಡೆಗೆ ಸಚಿವ ಎಂ.ಬಿ.ಪಾಟೀಲ ಸೂಚನೆ ಉದಯರಶ್ಮಿ ದಿನ ವಿಜಯಪುರ: ವಿಜಯಪುರ ಜಿಲ್ಲೆಯ ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯ ಕಾಮಗಾರಿ ಮುಗಿದು, ಕಾಲುವೆಗಳಲ್ಲಿ ನೀರು ಹರಿಯುತ್ತಿದೆ. ಆದರೂ ತಾಂತ್ರಿಕ ಕಾರಣಗಳಿಂದಾಗಿ 3,048 ಎಕರೆ ಭೂಸ್ವಾಧೀನ ಪ್ರಕ್ರಿಯೆ ಮುಗಿದಿಲ್ಲ. ಈ ಸಂಬಂಧ ಕೂಡಲೇ ಅಗತ್ಯ ಕ್ರಮವಹಿಸಿ, 457 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.ಭೂಸ್ವಾಧೀನ ಪ್ರಕ್ರಿಯೆ ನೆನಗುದಿಗೆ ಬಿದ್ದಿರುವ ಬಗ್ಗೆ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸಂಬಂದಪಟ್ಟ ಎಲ್ಲ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಭೂಸ್ವಾಧೀನಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಈ ಯೋಜನೆಯಿಂದ 52,700 ಎಕರೆಗೆ ನೀರಾವರಿ ಸೌಲಭ್ಯ ಸಿಗಲಿದೆ. ಇದರಲ್ಲಿ 37,200 ಎಕರೆ ಜಮೀನು ನಾನು ಪ್ರತಿನಿಧಿಸುವ ಬಬಲೇಶ್ವರ ಕ್ಷೇತ್ರದ ವ್ಯಾಪ್ತಿಯಲ್ಲೇ ಇದೆ. ಈಗಾಗಲೇ ವಿತರಣಾ ಕಾಲುವೆ, ಉಪಕಾಲುವೆ, ಹೊಲಗಾಲುವೆ ಕಾಮಗಾರಿಗಳೆಲ್ಲ ಮುಗಿದು ನೀರು ಹರಿಯುತ್ತಿದೆ. ಇದರ ಪ್ರಯೋಜನ ರೈತರಿಗೂ ಆಗುತ್ತಿದೆ ಎಂದು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಾರಿಗೆ ಇಲಾಖೆ ವತಿಯಿಂದ ರಾಷ್ಟ್ರೀಯ ಸುರಕ್ಷತಾ ಮಾಸಾಚರಣೆ-೨೦೨೫ರ ಅಂಗವಾಗಿ ಜ.೨೩ರ ಬೆಳಿಗ್ಗೆ ೧೦ಗಂಟೆಗೆ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಬೃಹತ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ವಿಜಯಪುರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
