ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲೂಕಿನ ಕುಮಸಗಿ ಗ್ರಾಮದ ಕಲ್ಲಾಲಿಂಗೇಶ್ವರ ಜಾತ್ರಾ ಮಹೋತ್ಸವ ಇದೇ ದಿನಾಂಕ ಮಾರ್ಚ್ 5 ರಂದು ಜರುಗಲಿದೆ.
ಮಠದ ಪೀಠಾಧಿಪತಿ ಶಿವಾನಂದ ಶಿವಾಚಾರ್ಯರ ಸಂಕಲ್ಪದ ಮೇರೆಗೆ ವಿವಿಧ ಕಾರ್ಯಕ್ರಮಗಳು ಜರುಗುವುದು
ಜಾತ್ರಾ ಮಹೋತ್ಸವದ ನಿಮಿತ್ಯ ಬೆಳಿಗ್ಗೆ 5:00 ಕರ್ತೃ ಗದ್ದೆಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಸಹಸ್ರನಾಮಾವಳಿ, ಮಂಗಳಾರುತಿ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯುವುದು
ಸಾಯಂಕಾಲ ಕಳಸದ ಮೆರವಣಿಗೆ ಕುಂಭ ,ಕಳಸ, ಡೊಳ್ಳು ,ಬಾಜಿ, ಚಿಟ್ಟಹಲಗೆಮೇಳ, ಬ್ಯಾಂಜೋ,ಪಟಾಕಿ ಸುಡುವುದರೊಂದಿಗೆ ಪುರವಂತರ ಸೇವೆಯೊಂದಿಗೆ ಬಹಳ ಅದ್ದೂರಿಯಾಗಿ ರಥೋತ್ಸವ ಜರುಗುವುದು.
ಜಾತ್ರಾ ಮಹೋತ್ಸವದ ನಿಮಿತ್ಯ ಪುರಾಣಮಂಗಲ,ಧರ್ಮಸಭೆ, ಶ್ರೀಗಳ ತುಲಾಭಾರ, ಜಂಗಿ ಕುಸ್ತಿ, ಡೊಳ್ಳಿನ ಪದಗಳ ಸ್ಪರ್ಧೆ, ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ, ಸ್ವಾನಗಳ ಓಟದ ಸ್ಪರ್ಧೆ, ಸಂಗೀತ ರಸಮಂಜರಿ, ಸಾಮಾಜಿಕ ನಾಟಕಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಾತ್ರಾ ಕಮಿಟಿ ತಿಳಿಸಿದೆ.

