Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಇಂಡಿ: ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಜಗಲಿ ಕೇಂದ್ರ ಇಂಡಿ ವತಿಯಿಂದ ಭೀಮಾಂತರಂಗ ಪ್ರಕಾಶನದಡಿಯಲ್ಲಿ ಪ್ರಕಟಗೊಂಡ ಭೀಮಾಂತರಂಗ ಉಪನ್ಯಾಸ ಮಾಲಿಕೆ-೨ ಕೃತಿ ಲೋಕಾರ್ಪಣೆ ಮಾರ್ಚ್ ೮ ಕ್ಕೆ ಪಟ್ಟಣದ ಕರ್ನಾಟಕ ಬಿಎಡ್ ಕಾಲೇಜಿನಲ್ಲಿ ಬೆಳಿಗ್ಗೆ ೧೦.೩೦ ಕ್ಕೆ ಜರುಗಲಿದೆ.ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದು, ನಾಡಿನ ಹಿರಿಯ ಕಾದಂಬರಿಕಾರ ಅಥಣಿಯ ಡಾ. ಬಾಳಾಸಾಹೇಬ ಲೋಕಾಪುರ ಅವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಸ್ಥೆ ಇಂಡಿ ಅಧ್ಯಕ್ಷರಾದ ಬಸವರಾಜ ಕುಮಸಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಆಲಗೂರ, ಹಿರಿಯ ಸಾಹಿತಿ ಡಿ.ಎನ್.ಅಕ್ಕಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕೃತಿಯ ಸಂಪಾದಕ ಮಂಡಳಿ ರಾಘವೇಂದ್ರ.ಕುಲಕರ್ಣಿ, ಸಿ.ಎಂ.ಬಂಡಗರ, ಗೀತಯೋಗಿ, ವೈ.ಜಿ.ಬಿರಾದಾರ, ಸಂತೋಷ ಬಂಡೆ ಉಪಸ್ಥಿತರಿರುವರು.ಜಗಲಿ ಕೇಂದ್ರದ ಸದಸ್ಯರಾದ ಶ್ರೀಧರ ಹಿಪ್ಪರಗಿ, ಬಸವರಾಜ ಕಿರಣಗಿ, ವೀರಣ್ಣ ದಸ್ತರಡ್ಡಿ, ಬಿ.ಸಿ.ಭಗವಂತಗೌಡರ, ಎಸ್.ಕೆ.ಮಾವಿನಮರ, ಮಾಧ್ಯಮ ಸಲಹೆಗಾರರಾದ ಉಮೇಶ ಕೊಳೇಕರ, ಖಾಜು ಶಿಂಗೆಗೋಳ ಭಾಗವಹಿಸುವರು.ಈ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ತಾಲೂಕಿನ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನದಿಂದ ಮಕ್ಕಳಲ್ಲಿ ಹುದುಗಿರುವ ಪ್ರತಿಭೆ, ಸೃಜನಾತ್ಮಕತೆ, ವೈಜ್ಞಾನಿಕ ಮನೋಭಾವ, ಕೌಶಲ ಅಭಿವೃದ್ಧಿ ಹೊರಹೊಮ್ಮುತ್ತದೆ. ಅಲ್ಲದೇ ಇಂತಹ ವಿಜ್ಞಾನಕ್ಕೆ ಸಂಬಂಧಿಸಿದ ನೂತನ ಮಾದರಿಗಳನ್ನು ಮಕ್ಕಳು ಮಾಡುವುದರಿಂದ ವೈಜ್ಞಾನಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸುವಲ್ಲಿ ಯಾವುದೇ ಸಂದೇಹವಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್ ಆಲಗೂರ ಹೇಳಿದರು.ತಾಲೂಕಿನ ಹಿರೇಬೇವನೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವಿಜ್ಞಾನ ಮತ್ತು ವಸ್ತು ಪ್ರದರ್ಶನದಿಂದ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಮಾತಿನಂತೆ ಮಕ್ಕಳಲ್ಲಿನ ನೈಜತೆ, ಕ್ರಿಯಾತ್ಮಕ ಚಟುವಟಿಕೆ, ಹಾಗೂ ಮಕ್ಕಳ ಸುಪ್ತವಾದ ಪ್ರತಿಭೆ ಅರಳುತ್ತದೆ ಅಲ್ಲದೆ ಸಹಜವಾಗಿ ವೀಕ್ಷಣೆ ಕಲೆ ಬೆಳೆಯುತ್ತದೆ ಎಂದರು.ವೇದಮೂರ್ತಿ ದಯಾನಂದ ಹಿರೇಮಠ ಆಶಿರ್ವಚನ ನೀಡಿದರು.ಕಾರ್ಯಕ್ರಮದಲ್ಲಿ ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷ ರಾಜಣ್ಣ ಪಾತಾಳೆ, ಹಿರೇಬೇನೂರದ ಗ್ರಾಮದ ಸಂಪನ್ಮೂಲ ವ್ಯಕ್ತಿಗಳಾದ ರಮೇಶ ಬಗಲುರ, ಬಿಆರ್‌ಸಿ ರಂಗರಾಜ್ ಕುಲಕರ್ಣಿ, ಅಶೋಕ್ ರಾಠೋಡ, ಎಚ್‌ಪಿಎಸ್ ಶಾಲೆಯ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಿಳಾ ಸಬಲೀಕರಣಕ್ಕೆ ಕೇವಲ ಪ್ರಮಾಣಪತ್ರವಷ್ಟೇ ಸಾಕಾಗದು, ವೈಜ್ಞಾನಿಕ ಜ್ಞಾನ ಮತ್ತು ತಂತ್ರಜ್ಞಾನ ಪ್ರಭಾವವೂ ಅವಶ್ಯಕ ಎಂದು ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ ಹೇಳಿದರು.ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಹಾಗೂ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗ ಹಾಗೂ ಕ್ರೀಡಾ ನಿರ್ದೇಶನಾಲಯ ಇವರ ಸಂಯುಕ್ತಾಶ್ರಯದಲ್ಲಿ ಮಹಿಳಾ ಸಾಂಸ್ಕೃತಿಕ ಹಬ್ಬದ-೨೦೨೫ ಪ್ರಯುಕ್ತ ಬುಧವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದರು.ಈ ಮ್ಯಾರಥಾನ್ ನಾಲ್ಕು ದಿಕ್ಕಿನಿಂದ ಆಯೋಜಿಸುವ ಉದ್ದೇಶವೆಂದರೆ ನಮ್ಮ ಮಹಿಳಾ ವಿಶ್ವವಿದ್ಯಾಲಯದ ಅಸ್ತಿತ್ವವನ್ನು ತಲುಪಿಸುವುದಾಗಿದೆ. ಮಹಿಳೆಯರ ಹಕ್ಕುಗಳಿಗೆ ಇನ್ನೂ ಮಹಿಳೆಯರೇ ಹೋರಾಡಬೇಕಾಗಿದೆ. ಎಷ್ಟೇ ಶಿಕ್ಷಣ ಪಡೆದರೂ ಮಹಿಳೆಯರ ಮೇಲೆ ದೌರ್ಜನ್ಯ ಕಡಿಮೆಯಾಗಿಲ್ಲ. ಮಹಿಳೆಯರು ವಿಶ್ವದ ಮುಂಚೂಣಿಯಲ್ಲಿ ತಲುಪಲು ಅವರಿಗೆ ಸಮಾನ ಅವಕಾಶಗಳನ್ನು ನೀಡಬೇಕಾಗಿದೆ ಎಂದರು.ಇದೇ ಸಂದರ್ಭದಲ್ಲಿ ಮಹಿಳಾ ವಿವಿಯ ಸಿಂಡಿಕೇಟ್ ಸದಸ್ಯೆ ಮಲ್ಲಮ್ಮಾ ಯಾಳವಾರ ಮ್ಯಾರಥಾನ್‌ನಲ್ಲಿ ಮಾತನಾಡಿ, ವಿಜಯಪುರದ ಎಲ್ಲಾ ನಾಗರಿಕರಿಗೆ ಮಹಿಳೆಯರ ಹಕ್ಕುಗಳು ಮತ್ತು ಅವರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಠಿತ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಇಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕಿ ತಬಸುಮ್ ಗುಳೇದಗುಡ್ಡ “ಎಐಎಂಎಲ್ ಅಪ್ರೋಚ್ ಫಾರ್ ಡಿಸಿಶನ್ಸ್ ಇನ್ ಐಓಟಿ ಬೇಸ್ಡ್ ಹೆಲ್ತ್ ಮಾನಿಟರಿಂಗ್ ಸಿಸ್ಟಮ್” ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಂಡಿಸಿದ ಮಹಾಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.ಡಾ.ನೂರೂಲ್ಲಾ ಷರೀಫ್ ಅವರ ಮಾರ್ಗದರ್ಶನ ಪಡೆದು ಪ್ರಬಂಧವನ್ನು ಮಂಡಿಸಿದ್ದಾರೆ. ತಬಸುಮ್ ಗುಳೇದಗುಡ್ಡ ಅವರು ಸಿಕ್ಯಾಬ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ಇಸಿಇ ವಿಭಾಗದ ಅಧ್ಯಾಪಕರಾಗಿ ಸದ್ಯ ಕಾರ್ಯನಿರ್ವಹಿಸುತ್ತಿದ್ದಾರೆ.ಎಸ್ಐಇಟಿ ಪ್ರಾಂಶುಪಾಲೆ ಡಾ. ಸಯ್ಯದ್ ಅಬ್ಬಾಸ್ ಅಲಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಎಸ್ ಎ ಖಾದ್ರಿ, ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್. ಎ. ಪುಣೇಕರ್ ನಿರ್ದೇಶಕರಾದ ಸಲಾವುದ್ದೀನ್ ಪುಣೇಕರ್, ಕಾರ್ಯದರ್ಶಿ ಎ. ಎಸ್. ಪಾಟೀಲ ಹಾಗೂ ಕಾಲೇಜು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ಶ್ರೀ ವಿಶ್ವೇಶ್ವರ ಬಾಲಭಾರತಿ ಅನುದಾನಿತ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುವರ್ಣ ಸಾರಂಗಮಠ ರವರಿಗೆ ಚೇತನ ಫೌಂಡೇಶನ್ ಧಾರವಾಡ, ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ ( ರಿ.) ಹಾಗೂ ಕರ್ನಾಟಕ ಸೋಷಿಯಲ್ ಕ್ಲಬ್ ಬೆಂಗಳೂರು ವತಿಯಿಂದ ಹಮ್ಮಿಕೊಂಡಿರುವ ಅಂತರಾಷ್ಟ್ರೀಯ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಅಂತರರಾಷ್ಟ್ರೀಯ ಸಾವಿತ್ರಿಬಾಯಿ ಫುಲೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ ಸಮಾರಂಭವು ರವಿವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಗಾಂಧಿ ಭವನದ ಬಾಪು ಸಭಾಂಗಣ ದಲ್ಲಿ ಜರುಗಲಿದೆ. ಪ್ರಶಸ್ತಿ ಪ್ರಧಾನವನ್ನು ಬಹುಭಾಷಾ ಚಲನಚಿತ್ರ ಹಿನ್ನೆಲೆ ಗಾಯಕಿ ಹಾಗೂ ಸಂಶೋಧಕಿ ಡಾ.ಪ್ರೀಯದರ್ಶಿನಿ ರವರು ಮಾಡಲಿದ್ದಾರೆ ಎಂದು ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ ತಿಳಿಸಿದ್ದಾರೆ.ಪ್ರಶಸ್ತಿಗೆ ಆಯ್ಕೆ ಆಗಿದಕ್ಕೆ ಸಂಸ್ಥೆಯ ಅಧ್ಯಕ್ಷರು ಎಸ್.ಆಯ್.ಜೋಗೂರ, ಕಾರ್ಯದರ್ಶಿಗಳು ಪ್ರಶಾಂತ ಬಡದಾಳ, ಕೋಶಾಧ್ಯಕ್ಷರು ಅರವಿಂದ ಕುಲಕರ್ಣಿ , ಆಡಳಿತ ಮಂಡಳಿಯ ಸದಸ್ಯರು, ಶಾಲಾ ಶಿಕ್ಷಕವೃಂದ ಹಾಗೂ ಶಿಕ್ಷಕ ಪಂಡಿತ ಅವಜಿ ಹರ್ಷ ವ್ಯಕ್ತ ಪಡಿಸಿದ್ದಾರೆ
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಪಟ್ಟಣದ ಐತಿಹಾಸಿಕ ಹಿರೇಮಠ ಸಂಸ್ಥಾನಕ್ಕೆ ಮಂಗಳವಾರ ಹಿರಿಯ ಸಂಶೋಧಕ ಸಾಹಿತಿ ಡಿ ಎನ್ ಅಕ್ಕಿ ಭೇಟಿ ನೀಡಿ ಮಾರ್ಚ್ 03 ರಂದು ಜರುಗಿದ ಶ್ರೀಗಳ ಹುಟ್ಟು ಹಬ್ಬ ಸುವರ್ಣ ಸಂಭ್ರಮಕ್ಕೆ ಸಾಕ್ಷಿಯಾಗಿದ್ದು, ಸದ್ಭಕ್ತರ ಸಂತೋಷ ನೂರ್ಮಡಿಯಾಗಿದೆ ಎಂದು ಶುಭಹಾರೈಸಿ, ಶ್ರೀಗಳ ಆಶೀರ್ವಾದ ಪಡೆದು ಪುನೀತರಾದರು.ಇದೇ ವೇಳೆ ಶ್ರೀಮಠದ ಪೀಠಾಧಿಪತಿ ಷ ಬ್ರ ಶ್ರೀ ಚನ್ನಬಸವ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಜರುಗುವ ಮಾಸಿಕ ಹುಣ್ಣಿಮೆಯ ಜನ ಕಲ್ಯಾಣ ಶಿವಾನುಭವ ಗೋಷ್ಠಿ ಮತ್ತು ಸಂಗೀತ ಕಾರ್ಯಕ್ರಮ ಜನಮನ ಸೆಳೆದಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಪ್ರಮುಖರಾದ ನಿಂಗನಗೌಡ ದೇಸಾಯಿ, ವೀರಣ್ಣ ಕಲಿಕೇರಿ, ರಾಜಶೇಖರ ಮೇತ್ರಿ, ಎಚ್ಚ್ ಎಮ್ ಮಕಂದಾರ, ಸಿದ್ದರಾಮ ಬಿರಾದಾರ, ಕಾಳಪ್ಪ ಬನ್ಸುಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಲೇಖನ – ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ನಾನಿಂದು ಇರುವ ಸ್ಥಿತಿಗೆ ಏನು ಕಾರಣ? ಎಂಬುದಕ್ಕೆ ಉತ್ತರ ಹುಡುಕಲು ಪ್ರಯತ್ನಿಸಿದರೆ ನನ್ನ ಬದುಕಿನಲ್ಲಿ ನಿನ್ನೆ ಮೊನ್ನೆ ಅಷ್ಟೇ ಅಲ್ಲ ಈ ಹಿಂದೆ ನಡೆದ ಘಟನೆಗಳು ಎನ್ನುವುದು ಮೊದಲ ಉತ್ತರವಾಗಿ ಸಿಗುತ್ತದೆ. ಜೀವನ ಹೀಗೆಯೇ ರೂಪುಗೊಳ್ಳುತ್ತದೆಯೋ ಇಲ್ಲವೋ ಅಂತ ಹೇಳುವುದು ಒಂದು ರೀತಿಯ ಕ್ಲೀಷೆ ಬದುಕಿನಲ್ಲಿ ಸಂಭವಿಸುವುದೆಲ್ಲ ಯಾವುದೇ ಕಾರಣದಿಂದ ಘಟಿಸಿರುತ್ತದೆ. ಈ ಮಾತನ್ನು ಪುಷ್ಟೀಕರಿಸುವಂತೆ ಅರಿಸ್ಟಾಟಲ್ ಹೀಗೆ ಹೇಳಿದ್ದಾನೆ. ‘ಗೊತ್ತು ಗುರಿಯಿಲ್ಲದೇ ಯಾವುದೇ ಘಟನೆ ನಡೆಯುವುದಿಲ್ಲ. ಏನೇ ನಡೆಯಲಿ ಕಾರಣ ಮತ್ತು ಪರಿಣಾಮ ಪ್ರಕ್ರಿಯೆಯಲ್ಲಿ ಒಂದಕ್ಕೊಂದು ಸಂಬಂಧ ಇದ್ದೇ ಇರುತ್ತದೆ. ನಮಗೆ ಕಾರಣಗಳು ತಿಳಿಯದಿದ್ದರೂ ಕೂಡ ಅದು ಅಸ್ತಿತ್ವದಲ್ಲಿ ಇದ್ದೇ ಇರುತ್ತದೆ.’ ಪರಿಣಾಮವನ್ನು ಬದಲಾಯಿಸಬೇಕೆಂದರೆ ಕಾರಣಗಳನ್ನು ಬದಲಾಯಿಸಬೇಕು.ಏನೂ ಇಲ್ಲಬದುಕನ್ನು ಬದಲಿಸಬೇಕೆಂದರೆ ಎಲ್ಲವೂ ನಮ್ಮ ನಿಯಂತ್ರಣದಲ್ಲಿಲ್ಲ ಅನ್ನೋದು ನಿರಾಶಾವಾದಿಗಳ ಅಂಬೋಣ. ಹೌದು, ನಾವು ಎಲ್ಲವನ್ನೂ ನಿಯಂತ್ರಿಸಲು ಸಾಧ್ಯವಿಲ್ಲ. ಹಲವಾರು ಸಂಗತಿಗಳು ನಮ್ಮ ನಿಯಂತ್ರಣದ ಮೇರೆ ಮೀರಿವೆ. ಆದರೆ ನಮ್ಮ ಕೈಯಲ್ಲಿರುವ…
ಜನರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ | ಕಾರ್ಖಾನೆ ಸ್ಥಾಪನೆಯ ಎಲ್ಲ ಸಿದ್ದತೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಜನರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಬಲ್ಡೋಟಾ ಸ್ಟೀಲ್ ಮತ್ತು ಪವರ್ ಲಿಮಿಟೆಡ್ (ಬಿಎಸ್‌ಪಿಎಲ್) ಕಾರ್ಖಾನೆ ಸ್ಥಾಪನೆಯ ಎಲ್ಲಾ ಸಿದ್ದತೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಲ್ ಅರಸಿದ್ದಿ ಅವರಿಗೆ ಮಂಗಳವಾರ (ಮಾ.4) ಸೂಚಿಸಿದ್ದಾರೆ.ಬಿಎಸ್‌ಪಿಎಲ್ ಕಂಪನಿಯು 1.50 ಕೋಟಿ ಟನ್ ಉತ್ಪಾದನಾ ಸಾಮರ್ಥ್ಯದ ಇಂಟಿಗ್ರೇಟೆಡ್ ಉಕ್ಕಿನ ಕಾರ್ಖಾನೆಯನ್ನು ಕೊಪ್ಪಳ ಜಿಲ್ಲಾ ಕೇಂದ್ರದ ಸಮೀಪದಲ್ಲಿಯೇ ಸ್ಥಾಪನೆ ಮಾಡಲು ಮುಂದಾಗಿರುವುದು ಜನರ ತೀವ್ರ ವಿರೋಧಕ್ಕೆ ಕಾರಣವಾಗಿದೆ.ಈ ಸಂಬಂಧ ಇತ್ತೀಚೆಗೆ ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಕರೆ ನೀಡಿದ್ದ ಜಿಲ್ಲಾ ಬಂದ್ ಯಶಸ್ವಿಯಾಗಿತ್ತು. ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮಿ, ರೈತರು, ಹೋರಾಟಗಾರರು ಮತ್ತು ಜನ ಸಾಮಾನ್ಯರು ಕಾರ್ಖಾನೆ ವಿರೋಧಿಸಿ…
ಆಲಮಟ್ಟಿಯಲ್ಲಿ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರ ಅಣುಕು ಶೃದ್ಧಾಂಜಲಿ ಪಿಂಡ ಪ್ರಧಾನ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಲಾಲ್‌ಬಹದ್ದೂರ್ ಶಾಸ್ತ್ರೀ ಜಲಾಶಯದಿಂದ ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಜುರಾಲಾ ಆಣೆಕಟ್ಟಿಗೆ ನೀರು ಹರಿಸಿದ್ದನ್ನು ಖಂಡಿಸಿ ವಿಜಯಪುರದಲ್ಲಿ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರ ಪ್ರತಿಕೃತಿ ಧಹಿಸಿ ಪ್ರತಿಭಟನೆ ನಡೆಸಲಾಗಿತ್ತು.ಇದರ ಅಂಗವಾಗಿ ಅಣುಕು ಶೃದಾಂಜಲಿ ಪಿಂಡ ಪ್ರಧಾನ ಕಾರ್ಯಕ್ರಮವನ್ನು ಆಲಮಟ್ಟಿಯ ಕೃಷ್ಣಾ ನದಿ ತೀರದ ಹಿನ್ನೀರಿನಲ್ಲಿ ಶೃಧಾಂಜಲಿ ಹಾಗೂ ಪಿಂಡ ಪ್ರಧಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಪ್ರಾರಂಭದಲ್ಲಿ ಸಂಪ್ರದಾಯದಂತೆ ನೀರಲ್ಲಿ ಮುಳಗಿ ನಂತರ ಕ್ರೀಯಾ ಕರ್ಮಗಳನ್ನು ಮಾಡಿ ಬಾವಚಿತ್ರಕ್ಕೆ ದೀಪ ಬೆಳಗಿಸಿ ಅನ್ನದಿಂದ ತಯಾರಿಸಿದ ಪಿಂಡವನ್ನು ಇರಿಸಿ ಅದರ ಮೇಲೆ ಕರಿ ಎಳ್ಳು ಹಾಕಿ ದರ್ಬೆ ಇಟ್ಟು ಪಿಂಡ ಅರ್ಪಣೆ ಮಾಡಿ ಪೂಜೆ ಸಲ್ಲಿಸಿ ಪಿಂಡದೊಂದಿಗೆ ಅವರ ಭಾವ ಚಿತ್ರಗಳನ್ನು ಕೃಷ್ಣಾ ನದಿಯಲ್ಲಿ ತೇಲಿ ಬಿಡಲಾಯಿತು.ನಂತರ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ನದಿಯಲ್ಲಿಯೆ ಇಳಿದು ಪ್ರತಿಭಟನೆ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಈ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಕ್ಫ್ ಜಿಲ್ಲಾಧಿಕಾರಿಗಳು ನಮ್ಮ ಮನವಿಯನ್ನು ಸ್ವೀಕರಿಸಿ ಒಂದುವಾರ ಗತಿಸಿದರು ಹೋರಾಟಗಾರರಿಗೆ ಅಧಿಕಾರಿಗಳು ಹಿಂಬರಹ ನೀಡದೆ ಗೌಪ್ಯ ನಿಲುವು ಕಾಯ್ದುಕೊಂಡಿರುವುದು ಅನುಮಾನಕ್ಕೆ ದಾರಿಮಾಡಿಕೊಡುತ್ತಿದೆ ಎಂದು ಡಾ.ದಸ್ತಗೀರ ಮುಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪಟ್ಟಣದಲ್ಲಿ ವಕ್ಫ್ ಆಸ್ತಿ ಸಂರಕ್ಷಣಾ ಸಮಿತಿ ಹಮ್ಮಿಕೊಂಡ ಖಬರಸ್ಥಾನ ಉಳಿಸಿ ಎಂಬ ಹೋರಾಟದಲ್ಲಿ ೧೬ನೆಯ ದಿನಕ್ಕೆ ಕಾಲಿಟ್ಟ ಹೋರಾಟಗಾರರು ರಂಜಾನ್ ಉಪವಾಸ ಮೂಲಕ ಧರಣಿ ಮುಂದುವರಿಸಿ ಸ್ಥಳದಲ್ಲಯೇ ಉಪವಾಸ ಬಿಟ್ಟು ಮಾತನಾಡಿದ ಅವರು, ಅಧಿಕಾರಿಗಳ ಗೌಪ್ಯ ನಿಲುವು ಹೋರಾಟಗಾರರಿಗೆ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಹಾಗಾಗಿ ಹೋರಾಟಗಾರರು ಬಿರು ಬಿಸಿಲಿನಲ್ಲಿ ರಂಜಾನ್ ಉಪವಾಸವನ್ನು ಮಾಡುತ್ತಾ ಧರಣಿಯ ಸ್ಥಳವನ್ನು ಇಪ್ತಿಯಾರ (ಉಪವಾಸ)ವನ್ನು ಬಿಟ್ಟು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.ಈ ವೇಳೆ ರಜಾಕ್ ಸಿಂದಗಿಕರ, ತಾಲಿಬ್ ಗುಂದಗಿ, ಫಿರೋಜ್ ನಿಂಬರಗಿ, ಬಶೀರ್ ಕದಣಿ, ಲತೀಫ್ ತಾಂಬೊಲಿ, ಗೌಸ್ಯಾ ಬಮ್ಮನಜೋಗಿ, ಸಲೀಮ ಜುಮನಾಳ, ಮೈಬೂಬ. ವಾಲಿಕಾರ ಸೇರಿದಂತೆ ಕಾರ್ಯಕರ್ತರು ಇದ್ದರು.
