ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಕ್ಫ್ ಜಿಲ್ಲಾಧಿಕಾರಿಗಳು ನಮ್ಮ ಮನವಿಯನ್ನು ಸ್ವೀಕರಿಸಿ ಒಂದುವಾರ ಗತಿಸಿದರು ಹೋರಾಟಗಾರರಿಗೆ ಅಧಿಕಾರಿಗಳು ಹಿಂಬರಹ ನೀಡದೆ ಗೌಪ್ಯ ನಿಲುವು ಕಾಯ್ದುಕೊಂಡಿರುವುದು ಅನುಮಾನಕ್ಕೆ ದಾರಿಮಾಡಿಕೊಡುತ್ತಿದೆ ಎಂದು ಡಾ.ದಸ್ತಗೀರ ಮುಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ವಕ್ಫ್ ಆಸ್ತಿ ಸಂರಕ್ಷಣಾ ಸಮಿತಿ ಹಮ್ಮಿಕೊಂಡ ಖಬರಸ್ಥಾನ ಉಳಿಸಿ ಎಂಬ ಹೋರಾಟದಲ್ಲಿ ೧೬ನೆಯ ದಿನಕ್ಕೆ ಕಾಲಿಟ್ಟ ಹೋರಾಟಗಾರರು ರಂಜಾನ್ ಉಪವಾಸ ಮೂಲಕ ಧರಣಿ ಮುಂದುವರಿಸಿ ಸ್ಥಳದಲ್ಲಯೇ ಉಪವಾಸ ಬಿಟ್ಟು ಮಾತನಾಡಿದ ಅವರು, ಅಧಿಕಾರಿಗಳ ಗೌಪ್ಯ ನಿಲುವು ಹೋರಾಟಗಾರರಿಗೆ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಹಾಗಾಗಿ ಹೋರಾಟಗಾರರು ಬಿರು ಬಿಸಿಲಿನಲ್ಲಿ ರಂಜಾನ್ ಉಪವಾಸವನ್ನು ಮಾಡುತ್ತಾ ಧರಣಿಯ ಸ್ಥಳವನ್ನು ಇಪ್ತಿಯಾರ (ಉಪವಾಸ)ವನ್ನು ಬಿಟ್ಟು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.
ಈ ವೇಳೆ ರಜಾಕ್ ಸಿಂದಗಿಕರ, ತಾಲಿಬ್ ಗುಂದಗಿ, ಫಿರೋಜ್ ನಿಂಬರಗಿ, ಬಶೀರ್ ಕದಣಿ, ಲತೀಫ್ ತಾಂಬೊಲಿ, ಗೌಸ್ಯಾ ಬಮ್ಮನಜೋಗಿ, ಸಲೀಮ ಜುಮನಾಳ, ಮೈಬೂಬ. ವಾಲಿಕಾರ ಸೇರಿದಂತೆ ಕಾರ್ಯಕರ್ತರು ಇದ್ದರು.

