ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಪಟ್ಟಣದ ಐತಿಹಾಸಿಕ ಹಿರೇಮಠ ಸಂಸ್ಥಾನಕ್ಕೆ ಮಂಗಳವಾರ ಹಿರಿಯ ಸಂಶೋಧಕ ಸಾಹಿತಿ ಡಿ ಎನ್ ಅಕ್ಕಿ ಭೇಟಿ ನೀಡಿ ಮಾರ್ಚ್ 03 ರಂದು ಜರುಗಿದ ಶ್ರೀಗಳ ಹುಟ್ಟು ಹಬ್ಬ ಸುವರ್ಣ ಸಂಭ್ರಮಕ್ಕೆ ಸಾಕ್ಷಿಯಾಗಿದ್ದು, ಸದ್ಭಕ್ತರ ಸಂತೋಷ ನೂರ್ಮಡಿಯಾಗಿದೆ ಎಂದು ಶುಭಹಾರೈಸಿ, ಶ್ರೀಗಳ ಆಶೀರ್ವಾದ ಪಡೆದು ಪುನೀತರಾದರು.
ಇದೇ ವೇಳೆ ಶ್ರೀಮಠದ ಪೀಠಾಧಿಪತಿ ಷ ಬ್ರ ಶ್ರೀ ಚನ್ನಬಸವ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಜರುಗುವ ಮಾಸಿಕ ಹುಣ್ಣಿಮೆಯ ಜನ ಕಲ್ಯಾಣ ಶಿವಾನುಭವ ಗೋಷ್ಠಿ ಮತ್ತು ಸಂಗೀತ ಕಾರ್ಯಕ್ರಮ ಜನಮನ ಸೆಳೆದಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಪ್ರಮುಖರಾದ ನಿಂಗನಗೌಡ ದೇಸಾಯಿ, ವೀರಣ್ಣ ಕಲಿಕೇರಿ, ರಾಜಶೇಖರ ಮೇತ್ರಿ, ಎಚ್ಚ್ ಎಮ್ ಮಕಂದಾರ, ಸಿದ್ದರಾಮ ಬಿರಾದಾರ, ಕಾಳಪ್ಪ ಬನ್ಸುಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

