ಉದಯರಶ್ಮಿ ದಿನಪತ್ರಿಕೆ
ಇಂಡಿ: ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಜಗಲಿ ಕೇಂದ್ರ ಇಂಡಿ ವತಿಯಿಂದ ಭೀಮಾಂತರಂಗ ಪ್ರಕಾಶನದಡಿಯಲ್ಲಿ ಪ್ರಕಟಗೊಂಡ ಭೀಮಾಂತರಂಗ ಉಪನ್ಯಾಸ ಮಾಲಿಕೆ-೨ ಕೃತಿ ಲೋಕಾರ್ಪಣೆ ಮಾರ್ಚ್ ೮ ಕ್ಕೆ ಪಟ್ಟಣದ ಕರ್ನಾಟಕ ಬಿಎಡ್ ಕಾಲೇಜಿನಲ್ಲಿ ಬೆಳಿಗ್ಗೆ ೧೦.೩೦ ಕ್ಕೆ ಜರುಗಲಿದೆ.
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದು, ನಾಡಿನ ಹಿರಿಯ ಕಾದಂಬರಿಕಾರ ಅಥಣಿಯ ಡಾ. ಬಾಳಾಸಾಹೇಬ ಲೋಕಾಪುರ ಅವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಸ್ಥೆ ಇಂಡಿ ಅಧ್ಯಕ್ಷರಾದ ಬಸವರಾಜ ಕುಮಸಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಆಲಗೂರ, ಹಿರಿಯ ಸಾಹಿತಿ ಡಿ.ಎನ್.ಅಕ್ಕಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕೃತಿಯ ಸಂಪಾದಕ ಮಂಡಳಿ ರಾಘವೇಂದ್ರ.ಕುಲಕರ್ಣಿ, ಸಿ.ಎಂ.ಬಂಡಗರ, ಗೀತಯೋಗಿ, ವೈ.ಜಿ.ಬಿರಾದಾರ, ಸಂತೋಷ ಬಂಡೆ ಉಪಸ್ಥಿತರಿರುವರು.
ಜಗಲಿ ಕೇಂದ್ರದ ಸದಸ್ಯರಾದ ಶ್ರೀಧರ ಹಿಪ್ಪರಗಿ, ಬಸವರಾಜ ಕಿರಣಗಿ, ವೀರಣ್ಣ ದಸ್ತರಡ್ಡಿ, ಬಿ.ಸಿ.ಭಗವಂತಗೌಡರ, ಎಸ್.ಕೆ.ಮಾವಿನಮರ, ಮಾಧ್ಯಮ ಸಲಹೆಗಾರರಾದ ಉಮೇಶ ಕೊಳೇಕರ, ಖಾಜು ಶಿಂಗೆಗೋಳ ಭಾಗವಹಿಸುವರು.
ಈ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ತಾಲೂಕಿನ ಮತ್ತು ಜಿಲ್ಲೆಯ ಸಾಹಿತ್ಯಾಸಕ್ತರು, ಸಾಹಿತ್ಯಾಭಿಮಾನಿಗಳು, ಶಿಕ್ಷಕರು ಭಾಗವಹಿಸಬೇಕೆಂದು ಜಗಲಿ ಕೇಂದ್ರದ ವತಿಯಿಂದ ಕೋರಲಾಗಿದೆ.

