ಆಲಮಟ್ಟಿಯಲ್ಲಿ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರ ಅಣುಕು ಶೃದ್ಧಾಂಜಲಿ ಪಿಂಡ ಪ್ರಧಾನ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಲಾಲ್‌ಬಹದ್ದೂರ್ ಶಾಸ್ತ್ರೀ ಜಲಾಶಯದಿಂದ ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಜುರಾಲಾ ಆಣೆಕಟ್ಟಿಗೆ ನೀರು ಹರಿಸಿದ್ದನ್ನು ಖಂಡಿಸಿ ವಿಜಯಪುರದಲ್ಲಿ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರ ಪ್ರತಿಕೃತಿ ಧಹಿಸಿ ಪ್ರತಿಭಟನೆ ನಡೆಸಲಾಗಿತ್ತು.
ಇದರ ಅಂಗವಾಗಿ ಅಣುಕು ಶೃದಾಂಜಲಿ ಪಿಂಡ ಪ್ರಧಾನ ಕಾರ್ಯಕ್ರಮವನ್ನು ಆಲಮಟ್ಟಿಯ ಕೃಷ್ಣಾ ನದಿ ತೀರದ ಹಿನ್ನೀರಿನಲ್ಲಿ ಶೃಧಾಂಜಲಿ ಹಾಗೂ ಪಿಂಡ ಪ್ರಧಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಪ್ರಾರಂಭದಲ್ಲಿ ಸಂಪ್ರದಾಯದಂತೆ ನೀರಲ್ಲಿ ಮುಳಗಿ ನಂತರ ಕ್ರೀಯಾ ಕರ್ಮಗಳನ್ನು ಮಾಡಿ ಬಾವಚಿತ್ರಕ್ಕೆ ದೀಪ ಬೆಳಗಿಸಿ ಅನ್ನದಿಂದ ತಯಾರಿಸಿದ ಪಿಂಡವನ್ನು ಇರಿಸಿ ಅದರ ಮೇಲೆ ಕರಿ ಎಳ್ಳು ಹಾಕಿ ದರ್ಬೆ ಇಟ್ಟು ಪಿಂಡ ಅರ್ಪಣೆ ಮಾಡಿ ಪೂಜೆ ಸಲ್ಲಿಸಿ ಪಿಂಡದೊಂದಿಗೆ ಅವರ ಭಾವ ಚಿತ್ರಗಳನ್ನು ಕೃಷ್ಣಾ ನದಿಯಲ್ಲಿ ತೇಲಿ ಬಿಡಲಾಯಿತು.
ನಂತರ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ನದಿಯಲ್ಲಿಯೆ ಇಳಿದು ಪ್ರತಿಭಟನೆ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ ಅವಳಿ ಜಿಲ್ಲೆಯ ರೈತರ ಮೇಲೆ ಕಳ ಕಳಿ ಇಲ್ಲದ ರಾಜ್ಯ ಸರ್ಕಾರ ತೆಲಂಗಾಣ ರಾಜ್ಯಕ್ಕೆ ನಿರಂತರವಾಗಿ ನೀರು ಹರಿಸಿ ಆಲಮಟ್ಟಿ ಜಲಾಶಯದ ನೀರನ್ನು ಸಂಪೂರ್ಣ ಖಾಲಿ ಮಾಡಲು ಹೊರಟಿದೆ ತೆಲಂಗಾಣಕ್ಕೆ ಕೇವಲ ೧.೨೭ ಟಿ.ಎಮ್.ಸಿ ಮಾತ್ರ ನೀರು ಹರಿ ಬಿಟ್ಟಿದ್ಧೇವೆಂದು ಸುಳ್ಳು ಹೇಳಿ ದಿನಾಂಕ: ೧೭/೦೩/೨೦೨೫ ರಿಂದ ಇಲ್ಲಿಯವರೆಗೂ ೧೦ ಟಿ.ಎಮ್.ಸಿ ಗೂ ಮೇಲ್ಪಟ್ಟು ನೀರು ಹರಿಸಲಾಗಿದೆ ಎಂದು ಪತ್ರಿಕೆಯಲ್ಲಿ ವರದಿಯಾಗಿದೆ. ಸರ್ಕಾರದ ಈ ರೈತ ವಿರೋಧಿ ನೀತಿ ಅನುಸರಿಸಿ ಅವಳಿ ಜಿಲ್ಲೆಯ ರೈತರಿಗೆ ಘೋರಿ ಅಗೆಯಲು ಮುಂದಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಜಿಲ್ಲೆಯ ಜನ ಪ್ರತಿನಿಧಿಗಳು ಇದ್ದು ಸತ್ತಂತಿದ್ದಾರೆ ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ತೆಲಂಗಾಣಕ್ಕೆ ಹರಿಸುತ್ತಿರುವ ನೀರನ್ನು ತಕ್ಷಣದಿಂದಲೆ ಸ್ಥಗಿತಗೊಳಿಸಬೇಕು ಇಲ್ಲದಿದ್ದರೆ ಅವಳಿ ಜಿಲ್ಲೆಯ ರೈತರು ಸರ್ಕಾರದ ವಿರುದ್ಧ ಸೀಡಿದೆದ್ದು ಸರ್ಕಾರದ ವಿರುದ್ಧ ಕ್ರಾಂತಿ ಮಾಡಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಮುಖಂಡ ವಿಠ್ಠಲ ಬಿರಾದಾರ ತಾಲೂಕಾ ಉಪಾಧ್ಯಕ್ಷ ಹೊನಕೇರೆಪ್ಪ ತೆಲಗಿ ಈರಪ್ಪ ಹಂಚನಾಳ ಸೋಮು ಬಿರಾದಾರ ತಾಳಿಕೋಟಿ ತಾಲೂಕಾದ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ ರಾಮನಗೌಡ ಹಾದಿಮನಿ ಮಲ್ಲಪ್ಪ ಪಡಸಲಗಿ ಗಿರಿಮಲ್ಲಪ್ಪ ದೋಡಮನಿ ಪುತ್ರಪ್ಪ ಬೂದಗೋಳಿ ದಾವಲಸಾಬ ನದಾಫ ಹಣಮಂತ್ರಾಯ ಹಂದ್ರಾಳ ರಾಜೇಸಾಬ ವಾಲಿಕಾರ ಈರಣ್ಣ ದೇವರಗುಡಿ ಮೋತಿಲಾಲ್ ಲಮಾಣಿ ಶೆಟ್ಟೆಪ್ಪ ಲಮಾಣಿ ಸಿದ್ದನಗೌಡ ಕುಂಟೋಜಿ ಬಸನಗೌಡ ಪಾಟೀಲ ಚಂದ್ರಶೇಖರ ಪಾಟೀಲ ಹಣಮಂತ್ರಾಯ ಗುಣಕಿ ಇದ್ದರು.

