Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರಲ್ಲಿ ಒಬ್ಬರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಧೈರ್ಯ, ದೇಶಭಕ್ತಿ ಮತ್ತು ನಾಯಕತ್ವಕ್ಕಾಗಿ ಸ್ಮರಣೀಯರು ಎಂದು ಕೂಡಗಿ ಎನ್ ಟಿ ಪಿಸಿಯ ಪ್ರಾಜೆಕ್ಟ್ ಮುಖ್ಯಸ್ಥ ಬಿದ್ಯಾನಂದ್ ಝಾ ಹೇಳಿದರು.ತಾಲೂಕಿನ ಕೂಡಗಿ ಎನ್ ಟಿಪಿಸಿ ಟೌನ್‌ಶಿಪ್ ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನದಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.ನೇತಾಜಿ ಅವರ ಪ್ರಸಿದ್ಧ ಘೋಷಣೆಯಾದ “ನನಗೆ ರಕ್ತ ಕೊಡಿ, ಮತ್ತು ನಾನು ನಿಮಗೆ ಸ್ವಾತಂತ್ರ್ಯವನ್ನು ಕೊಡುತ್ತೇನೆ” ಎಂದಿರುವುದು ತ್ಯಾಗ ಮತ್ತು ರಾಷ್ಟ್ರೀಯತೆಯ ಮನೋಭಾವವನ್ನು ಪ್ರತಿಧ್ವನಿಸುತ್ತದೆ. ಅವರ ಪ್ರಯತ್ನಗಳು ಮತ್ತು ದೃಷ್ಟಿಕೋನವು ನಿಸ್ವಾರ್ಥತೆ, ಏಕತೆ ಮತ್ತು ರಾಷ್ಟ್ರದ ಸೇವೆಯ ಆದರ್ಶಗಳ ಕಡೆಗೆ ತಲೆಮಾರುಗಳನ್ನು ಪ್ರೇರೇಪಿಸುತ್ತದೆ ಎಂದರು.ಈ ಸಂದರ್ಭದಲ್ಲಿ ಎನ್ ಟಿಪಿಸಿಯ ಕೆ.ಕೆ.ಹೋಟಾ, ಅಲೋಕೇಶ್ ಬ್ಯಾನರ್ಜಿ, ಯು.ಕೆ. ಜೈನ್, ಓ ಶ್ರೀನಿವಾಸ್, ಪೂಜಾ ಪಾಂಡೆ ಇತರ ಹಿರಿಯ ಅಧಿಕಾರಿಗಳು ಮತ್ತು ಉದ್ಯೋಗಿಗಳು ಗೌರವ ಸಲ್ಲಿಸಿದರು.
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ತಾಲೂಕಿನ ಮಟ್ಟಿಹಾಳ ಗ್ರಾಮದ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ನಾಗರದಿನ್ನಿ ಗ್ರಾಮದ ಹಣಮಂತಗೌಡ ಕುಬಕಡ್ಡಿ, ಉಪಾಧ್ಯಕ್ಷರಾಗಿ ಕುರುಬರದಿನ್ನಿ ಗ್ರಾಮದ ಮಾನಿಂಗಪ್ಪ ಬಿರಾದಾರ ಅವಿರೋಧವಾಗಿ ಆಯ್ಕೆಯಾದರು,11 ಜನರ ಸದಸ್ಯರ ಬಲದ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ನಾಗರದಿನ್ನಿಯ ಹಣಮಂತಗೌಡ ಕುಬಕಡ್ಡಿ, ಉಪಾಧ್ಯಕ್ಷ ಸ್ಥಾನಕ್ಕೆ ಕುರುಬರದಿನ್ನಿಯ ಮಾನಿಂಗಪ್ಪ ಬಿರಾದಾರ ನಾಮಪತ್ರ ಸಲ್ಲಿಸಿದರು. ಇವರ ವಿರುದ್ಧ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಪವನಕುಮಾರ ಮಣೂರ ಘೋಷಣೆ ಮಾಡಿದರು.ಈ ವೇಳೆ ನಿರ್ದೇಶಕರಾಗಿ ಹಣಮಾಪೂರ ಗ್ರಾಮದ ಸಂಗಮೇಶ ಕುಬಕಡ್ಡಿ, ಹಣಮಂತ ಛಬ್ಬಿ, ಬಸವ್ವ ಹಡಪದ, ಬಾಗಾನಗರ ಗ್ರಾಮದ ಲಾಲಬಿ ದಡೆದ, ಉದಾಜಪ್ಪ ಪೂಜಾರಿ, ಮಟ್ಟಿಹಾಳ ಗ್ರಾಮದ ಮಲ್ಲಿಕಾರ್ಜುನ ಬಿರಾದಾರ, ಪರಸಪ್ಪ ಪೂಜಾರಿ, ನಾಗರದಿನ್ನಿ ಗ್ರಾಮದ ಪ್ರದೀಪ್ ಗೌಡ ಪಾಟೀಲ, ಕುರುಬರದಿನ್ನಿಯ ವಿಠ್ಠಲ ಮಾದರ ಎಲ್ಲ ಅವಿರೋಧವಾಗಿ ಆಯ್ಕೆಯಾದರು.ನೂತನವಾಗಿ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಹಣವನ್ನು ಯಾವುದೇ ಕಾರಣಕ್ಕೂ ಬ್ಯಾಂಕುಗಳಲ್ಲಿ ಇಟ್ಟುಕೊಳ್ಳಬಾರದು. ಬ್ಯಾಂಕುಗಳ ಒಳ ಹಾಗೂ ಹೊರ ಆವರಣಗಳಲ್ಲಿ ಬ್ಯಾಂಕ್ ವ್ಯವಹಾರ ಮಾಡಲು ಬಂದಿರದೇ ಇರುವ ವ್ಯಕ್ತಿಗಳು, ಸಂಶಯಾಸ್ಪದ ರೀತಿಯಲ್ಲಿ ಬ್ಯಾಂಕ್ ಸಿಬ್ಬಂದಿ ಅಥವಾ ಗ್ರಾಹಕರನ್ನು ಗಮನಿಸುತ್ತಿರುವಂತಹವರ ಮೇಲೆ ತೀವ್ರ ನಿಗಾವಹಿಸಬೇಕು ಎಂದು ಪಿಎಸ್ಐ ಎಂ.ಬಿ. ಬಿರಾದಾರ ಹೇಳಿದರು.ಪಟ್ಟಣ ವ್ಯಾಪ್ತಿಯಲ್ಲಿ ಬರುವ ವಿವಿಧ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ಅಧಿಕಾರಿಗಳ ಜೊತೆ ಪೊಲೀಸ ಠಾಣೆಯಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಎಟಿಎಂ ಗಳಿಗೆ ಹಣ ಹಾಕಲು ಹೋಗುವಂತಹ ವಾಹನಗಳೊಂದಿಗೆ ಆಯುಧಗಳನ್ನು ಹೊಂದಿರುವ ಭದ್ರತಾ ಸಿಬ್ಬಂಧಿಯವರು ಕಡ್ಡಾಯವಾಗಿ ಇರುವಂತೆ ಜೊತೆಗೆ ಇತರೇ ಎಲ್ಲ ರೀತಿಯ ಸುರಕ್ಷಾ ಕ್ರಮಗಳನ್ನು ಪಾಲನೆ ಮಾಡುವುದು. ಎಟಿಎಂ ಗಳಿಗೆ ಹಗಲು ರಾತ್ರಿ ಸೂಕ್ತ ರೀತಿಯಲ್ಲಿ ಭದ್ರತಾ ವ್ಯವಸ್ಥೆ, ಕಡ್ಡಾಯವಾಗಿ ಸೆಕ್ಯೂರಿಟಿ ಗಾರ್ಡ್, ಉತ್ತಮ ಸಿಸಿ ಟಿವಿ ಅಳವಡಿಕೆ ಇರುವಂತೆ ಕ್ರಮ ಕೈಗೊಳ್ಳುವುದು, ಎಟಿಎಂ ಗಳಿಗೆ ಹಣ ತುಂಬುವ ಸಿಬ್ಬಂದಿ, ವಾಹನ ಚಾಲಕ, ಆಯುಧ ಹೊಂದಿದ ಭದ್ರತಾ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ , ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ , ಕ್ರೈಸ್ ವಸತಿ ನಿಲಯಗಳಲ್ಲಿ ಹಾಸ್ಟೇಲ್ & ವಸತಿ ಶಾಲಾ ಹೊರಗುತ್ತಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ಅಹೋರಾತ್ರಿ ಧರಣಿಯನ್ನು ಕರ್ನಾಟಕ ರಾಜ್ಯ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದು, ಈ ಅಹೋರಾತ್ರಿ ಹೋರಾಟವು ೬ ನೇ ದಿನಕ್ಕೆ ಮುಂದುವರೆದಿದೆ.ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷರಾದ ಶ್ರೀನಾಥ ಪೂಜಾರಿ, ಪ್ರಗತಿಪರ ಚಿಂತಕರಾದ ಕರೆಪ್ಪ ಗುಡಿಮನಿ, ಪ್ರಭುಗೌಡ ಪಾಟೀಲ, ಅಕ್ಷಯ ಅಜಿಮನಿ, ಬಹುಜನ ಸಮಾಜ ಪಾರ್ಟಿಯ ರಾಜ್ಯ ಪದಾಧಿಕಾರಿಗಳು ಹಾಗೂ ಪಾರ್ಟಿ ಜಿಲ್ಲಾಧ್ಯಕ್ಷ ಕಲ್ಲಪ್ಪ ತೊರವಿ, ಅಣ್ಣಾರಾಯ ಇಳಗೇರ ಸಿಐಟಿಯು ಜಿಲ್ಲಾಧ್ಯಕ್ಷ, ಭೀಮರಾಯ ಪೂಜಾರಿ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಇನ್ನಿತರರು ಭೇಟಿ ನೀಡಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.ಸಂಘದ ಹುಲಗಪ್ಪ ಎಚ್. ಚಲವಾದಿ, ಜಿಲ್ಲಾಧ್ಯಕ್ಷರು, ಲಕ್ಷö್ಮಣ ಮಸಳಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ,ಯಮನಪ್ಪ ಬಜಂತ್ರಿ ಜಿಲ್ಲಾ…
೬ನೇ ದಿನಕ್ಕೆ ಕಾಲಿರಿಸಿದ ಹಾಸ್ಟೇಲ್ ನೌಕರರ ಅಹೋರಾತ್ರಿ ಧರಣಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ , ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ , ಕ್ರೈಸ್ ವಸತಿ ನಿಲಯಗಳಲ್ಲಿ ಹಾಸ್ಟೇಲ್ & ವಸತಿ ಶಾಲಾ ಹೊರಗುತ್ತಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ಅಹೋರಾತ್ರಿ ಧರಣಿಯನ್ನು ಕರ್ನಾಟಕ ರಾಜ್ಯ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದು, ಈ ಅಹೋರಾತ್ರಿ ಹೋರಾಟವು ೬ ನೇ ದಿನಕ್ಕೆ ಮುಂದುವರೆದಿದೆ.ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷರಾದ ಶ್ರೀನಾಥ ಪೂಜಾರಿ, ಪ್ರಗತಿಪರ ಚಿಂತಕರಾದ ಕರೆಪ್ಪ ಗುಡಿಮನಿ, ಪ್ರಭುಗೌಡ ಪಾಟೀಲ, ಅಕ್ಷಯ ಅಜಿಮನಿ, ಬಹುಜನ ಸಮಾಜ ಪಾರ್ಟಿಯ ರಾಜ್ಯ ಪದಾಧಿಕಾರಿಗಳು ಹಾಗೂ ಪಾರ್ಟಿ ಜಿಲ್ಲಾಧ್ಯಕ್ಷ ಕಲ್ಲಪ್ಪ ತೊರವಿ, ಅಣ್ಣಾರಾಯ ಇಳಗೇರ ಸಿಐಟಿಯು ಜಿಲ್ಲಾಧ್ಯಕ್ಷ, ಭೀಮರಾಯ ಪೂಜಾರಿ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಇನ್ನಿತರರು ಭೇಟಿ ನೀಡಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.ಸಂಘದ ಹುಲಗಪ್ಪ ಎಚ್. ಚಲವಾದಿ, ಜಿಲ್ಲಾಧ್ಯಕ್ಷರು,…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲ್ಲೂಕಿನ ಮಡಿಕೇಶ್ವರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸೋಮನಗೌಡ ಜಯಣ್ಣ ಕೋಳೂರ (ಪಡೇಕನೂರ) ಹಾಗೂ ಉಪಾಧ್ಯಕ್ಷರಾಗಿ ಮನೋಹರ ದೇವೇಂದ್ರಪ್ಪ ಬಡಿಗೇರ್ (ಮಡಿಕೇಶ್ವರ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಸಂದರ್ಭದಲ್ಲಿ ಪಿಕೆಪಿಎಸ್ ಸರ್ವ ಸದ್ಯಸ್ಯರು ಅಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ರೆಡ್ಡಿ ಬಾಯಿ ಚಪಲಕ್ಕೆ ಮಾತು | ಪಕ್ಷ ಒಡೆಯಲು ಯತ್ನ | ನನ್ನ ಹೆಸರಿನ ದುರುಪಯೋಗ | ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ಬೆಂಗಳೂರು: ನನಗೆ ಶ್ರೀರಾಮುಲು ಅವರು ಸಿಕ್ಕಿಲ್ಲ. ನನ್ನ ಬಳಿ ಅವರು ಮಾತನಾಡಿಲ್ಲ. ಪಕ್ಷಕ್ಕೆ ಬರುವಂತೆ ಅವರಿಗೆ ಯಾವುದೇ ಆಹ್ವಾನ ನೀಡಿಲ್ಲ. ಈ ವಿಚಾರದಲ್ಲಿ ನನ್ನ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದ ಬಳಿ ಮಾತನಾಡಿದ ಅವರು, ಆತ ಬಾಯಿ ಚಪಲಕ್ಕೆ ಮಾತನಾಡುತ್ತಿದ್ದಾನೆ. ಆತ ಆ ಪಕ್ಷದಲ್ಲಿಯೇ ಇರಲಿಲ್ಲ. ಈಗ ಆ ಪಕ್ಷಕ್ಕೆ ಕಾಲಿಟ್ಟು, ಆ ಮನೆಯನ್ನೇ ಒಡೆಯುವ ಪ್ರಯತ್ನ ಮಾಡುತ್ತಿದ್ದಾನೆ. ನಾನು ಆತನ ಹೆಸರು ಹೇಳಿ ಅವನನ್ನು ಏಕೆ ದೊಡ್ಡ ಮನುಷ್ಯನನ್ನಾಗಿ ಮಾಡಲಿ? ಆತ ನನ್ನ ಹೆಸರು ತೆಗೆದುಕೊಂಡರೆ ದೊಡ್ಡವನಾಗುತ್ತಾನೆಯೇ? ನಾನು ಸಂಪರ್ಕದಲ್ಲಿ ಇರುವುದನ್ನು ಆತ ನೋಡಿದ್ದಾನೆಯೇ? ಆತನೇ ಯಾರ ಜೊತೆ ಸಂಪರ್ಕದಲ್ಲಿ ಇದ್ದ ಎಂಬುದನ್ನು ಈಗ ಚರ್ಚೆ ಮಾಡುವುದು ಬೇಡ. ನಾನು ಯಾವುದನ್ನು ಬಹಿರಂಗಗೊಳಿಸಲು ಹೋಗುವುದಿಲ್ಲ ಎಂದು ಕಿಡಿಕಾರಿದರು.ಈ ಹಿಂದೆ ಚುನಾವಣೆಗೆ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ರೈತ ದೇಶದ ಬೆನ್ನೆಲುಬು ಅಂತೆಯೇ ಮತದಾರ ಪ್ರಜಾಪ್ರಭುತ್ವದ ಬೆನ್ನೆಲುಬು ಎಂದು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರವಿ ಕಟ್ಟಿಮನಿ ಹೇಳಿದರು.ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮತದಾರ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮತದಾರ ತನ್ನ ಹಕ್ಕನ್ನು ಚಲಾಯಿಸಬೇಕು. ಯಾವುದೇ ಕಾರಣಕ್ಕೂ ಮತದಾನದಿಂದ ವಂಚಿತರಾಗಬಾರದು. ಎನ್ನುತ್ತ ಮತದಾನದ ಮಹತ್ವ, ಮತದಾನದ ಇತಿಹಾಸ, ಚುನಾವಣಾ ಆಯೋಗದ ಕಾರ್ಯ, ಮತದಾರರ ಜವಾಬ್ದಾರಿ ಕುರಿತು ಸವಿಸ್ತಾರವಾಗಿ ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಚಾರ್ಯ ಎಸ್.ಎಚ್.ಅಂಗಡಿ ಪ್ರಸ್ತಾವಿಕವಾಗಿ ಮಾತನಾಡಿದರು, ಉಪನ್ಯಾಸಕ ಎಸ್.ಕೆ.ಮಾಳಗೊಂಡ, ಎ.ಎ.ಗಂಗನಗೌಡರು, ಬಿ.ಎ.ಬಡಿಗೇರ್ ಸೇರಿದಂತೆ ಮತ್ತೀತರರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಇಂಡಿ: ರೈತರು ವೈಜ್ಞಾನಿಕವಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರೆ ಉತ್ತಮ ಲಾಭ ಕೊಂಡುಕೊಳ್ಳಬಹುದು , ಹೈನುಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರಕಾರ ನಾನಾ ಸವಲತ್ತು ವಿತರಣೆ ಮಾಡುತ್ತಿದ್ದು ಸೌಲಭ್ಯ ಪಡೆದುಕೊಳ್ಳಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಡಾ. ಪ್ರಸಾದ ಎಂ.ಜಿ ಹೇಳಿದರು.ಕೃಷಿ ವಿಜ್ಞಾನಕೇಂದ್ರದ ಸಬಾಭವನದಲ್ಲಿ ಆಯೋಜಿಸಿದ ಹೈನುಗಾರಿಕೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೇವಲ ಕೃಷಿಯನ್ನೇ ಅವಲಂಬಿಸಿದರೆ ರೈತರು ಹೆಚ್ಚು ಲಾಭ ಗಳಿಸಲು ಸಾಧ್ಯವಿಲ್ಲ, ಹೈನುಗಾರಿಕೆ ಪಶು ಸಾಕಣೆ, ಕುರಿ ಕೋಳಿ ಸಾಕಣೆ ಮಾಡುವ ಮೂಲಕ ತಮ್ಮ ಅರ್ಥಿಕ ಮಟ್ಟ ಹೆಚ್ಚಳ ಮಾಡಬೇಕು ಎಂದರು.ಡಾ.ಪ್ರೇಮಚಂದ್, ರೈತರಿಗೆ ವೈಜ್ಞಾನಿಕ ಹೈನುಗಾರಿಕೆಯ ಮಹತ್ವ ಆಧುನಿಕ ತಂತ್ರಜ್ಞಾನಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು.ಡಾ.ಬಾಲಾಜಿ ನಾಯಕ್, ಮತ್ತು ಡಾ.ವೀಣಾ ರೈತರಿಗೆ ಹೈನುಗಾರಿಕೆಯಲ್ಲಿನ ಹೊಸವಿಧಾನಗಳು, ಪಶುಗಳ ಆರೋಗ್ಯ ನಿರ್ವಹಣೆ, ಮೇವುನಿರ್ವಹಣೆ, ಮತ್ತು ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವ ತಂತ್ರಗಳ ಬಗ್ಗೆ ಅರಿವು ಮೂಡಿಸಿದರು. “ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭ ಪಡೆಯಬಹುದು. ಇದು ರೈತರ ಆರ್ಥಿಕಸ್ಥಿತಿಯನ್ನು ಸುಧಾರಿಸಲು ಸಹಾಯ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಉತ್ತರ ಕರ್ನಾಟಕದ ವಿಶೇಷ ರುಚಿಯಾದ ಜೋಳದ ಸಿತನಿ ತೆನೆ ಇಂಡಿ ಪಟ್ಟಣದಲ್ಲಿ ಕೃಷಿ ವಿಜ್ಞಾನ ಕೇಂದ್ರದ ರೈತ ಉತ್ಪಾದಕ ಸಂಸ್ಥೆ ಯಿಂದ ಮಾರಾಟ ಕೇಂದ್ರ ಶುರುವಾಗಿದೆ.ಜೋಳದ ತೆನೆ ತಮ್ಮ ಮನೆಗೆ ತೆಗೆದುಕೊಂಡು ಹೋಗಿ ತಮ್ಮ ಹೊಲದಲ್ಲಿಯೇ ಮನೆಯವರು ಮತ್ತು ಸ್ನೇಹಿತರ ಬಳಗ, ಬಂಧು ಬಾಂಧವರು ಸೇರಿ ತಿನ್ನಬಹುದು.ರೈತರು ಇತ್ತೀಚಿಗೆ ಕಬ್ಬು ತೊಗರಿ ಮತ್ತು ನಿಂಬೆ ಬೆಳೆಯುತ್ತಿದ್ದು ಜೋಳ ಬೆಳೆಯುವ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಆ ರೈತರಿಗೆ ಮತ್ತು ಇನ್ನಿತರಿಗೆ ಅನುಕೂಲ ವಾಗುತ್ತಿದೆ.ಮತ್ತು ಇದು ಅತೀ ಕಡಿಮೆ ದರದಲ್ಲಿ ಜೋಳದ ತೆನೆ ಮಾರಾಟ ಮಾಡುತ್ತಿದ್ದಾರೆ. ಮತ್ತು ಇದರಿಂದ ಜೋಳದ ಮೌಲ್ಯವರ್ಧನೆಯಾಗಿ ರೈತರಿಗೆ ಲಾಭ ತಂದು ಕೊಡುತ್ತಿದೆ. ಈಗಾಗಲೇ ಹಲವಾರು ಕಡೆ ಜೋಳದ ರೊಟ್ಟಿ ಮಾರಾಟ ಮಾಡುತ್ತಿದ್ದು ಸಿತನಿಯೂ ಚೆನ್ನಾಗಿ ಮಾರಾಟ ವಾಗುತ್ತಿದೆ.ಇತ್ತೀಚಿನ ದಿನಗಳಲ್ಲಿ ಜೋಳವನ್ನು ಮೌಲ್ಯವರ್ಧನ ಮಾಡಿ ಕಾಳುಗಳು ಹಸಿ ಇರುವಾಗ ಅವುಗಳನ್ನು ಸಿತನಿ ಮಾಡಿ ಮಾರಾಟ ಮಾಡಿ ಕೆಲವು ರೈತರು ಲಾಭ ಗಳಿಸುತ್ತಿದ್ದಾರೆ. ಇದು ಸ್ವಲ್ಪ ಕಷ್ಟದಾಯಕ…
