Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಆತಂಕಕ್ಕೆ ಕೊನೆ ಹಾಡಿ ಈ ಕ್ಷಣ ಬದುಕಿ

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 08, 2026

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟಬುಕ್ ವಿತರಣೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ನಮ್ಮ ವೃತ್ತಿಸಮಾಜ ಸಂಘಟನೆ ಹೆಜ್ಜೆ ಗುರುತು ಮೂಡಿಸೋಣ :ಶಾಂತಯ್ಯ
(ರಾಜ್ಯ ) ಜಿಲ್ಲೆ

ನಮ್ಮ ವೃತ್ತಿಸಮಾಜ ಸಂಘಟನೆ ಹೆಜ್ಜೆ ಗುರುತು ಮೂಡಿಸೋಣ :ಶಾಂತಯ್ಯ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕಲಕೇರಿಯಲ್ಲಿ ಕಾಯಕ ನಿಧಿ ವಿವಿದೋದ್ದೇಶಗಳ ಸ್ವಸಹಾಯ ಸಂಘದಿಂದ ಟೈಲರ‍್ಸ್ ದಿನಾಚರಣೆ ಮತ್ತು ಹೊಸ ಕಾರ್ಡ ವಿತರಣೆ

ಉದಯರಶ್ಮಿ ದಿನಪತ್ರಿಕೆ

ಕಲಕೇರಿ: ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ವಲಯ ಸಮಿತಿ ಕಲಕೇರಿ ಇದರ ಅಡಿಯಲ್ಲಿ ಕಾಯಕ ನಿಧಿ ವಿವಿದೋದ್ದೇಶಗಳ ಸ್ವಸಹಾಯ ಸಂಘದ ವತಿಯಿಂದ ಗ್ರಾಮದ ಶ್ರೀ ಗುರು ಮರುಳಾರಾಧ್ಯ ಹಿರೇಮಠದಲ್ಲಿ ಟೈಲರ‍್ಸ್ ದಿನಾಚರಣೆ ಮತ್ತು ಹೊಸ ಕಾರ್ಡ ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಸಿ ಮಾತನಾಡಿದ ಸಂಘದ ಶಾಂತಯ್ಯ ವೀ. ಹಿರೇಮಠ ಅವರು, ವೃತ್ತಿ ಬದುಕಿನ ಭದ್ರತೆಯ ಕಳವಳದ ನಡುವೆಯೂ ಕೂಡಾ ನಾಳಿನ ನಮ್ಮ ಭವಿಷ್ಯದೆಡೆಗೆ ಈ ಹೃದಯ ಕಾತರಿಸುತ್ತಿದೆ, ಈ ಸಂಘಟನೆಯ ನಡುವಿನಿಂದ ಬಂದಾನೊಬ್ಬ ಕಲಾವಿದ, ಬರಿದಾದ ನಮ್ಮ ವೃತ್ತಿ ಬದುಕಿನ ಅಂಗಳದ ಮೇಲೆ ಭರವಸೆಯ ನವ ಚಿತ್ತಾರ ಬಿಡಿಸಿ ನಮ್ಮೆಲ್ಲರ ಬದುಕನ್ನು ಹಸನಗೊಳಿಸಿಯಾನು ಎಂಬ ಸಂತಸದಲಿ ಮತ್ತೆ ಈ ದಿನವನ್ನು ಪ್ರೀತಿಯಿಂದ ಸ್ವಾಗತಿಸೋಣ ಎಂದರು.
ನೋವಿರಲಿ ನಲಿವಿರಲಿ ಕಷ್ಟವಿರಲಿ ಸುಖವಿರಲಿ ಸಂಘಟನೆ ಎನ್ನುವ ತೇರನ್ನು ಜೊತೆಯಾಗಿ ಎಳೆಯೋಣ, ಇಂದೋ ನಾಳೆಯೋ ತೇರನೆಳೆದ ಪುಣ್ಯದ ಪ್ರಸಾದ ನಮಗೋ ನಮ್ಮ ನಂತರದ ಪೀಳಿಗೆಗೋ ದೊರೆತೇ ದೊರೆಯುತ್ತದೆ ಎಂಬ ನಂಬಿಕೆಯಲ್ಲಿ ಸಾಗಿ ಬರೋಣ, ಸಮಸ್ತ ವೃತ್ತಿ ಬಾಂಧವರ ಕಲ್ಯಾಣಕ್ಕಾಗಿ ದುಡಿಯೋಣ, ನಮ್ಮ ವೃತ್ತಿ ಸಮಾಜದಲ್ಲಿ ಸಂಘಟನೆಯ ಹೆಜ್ಜೆ ಗುರುತನ್ನು ಬಲವಾಗಿ ಮೂಡಿಸೋಣ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ ಗುರುಮರುಳಾರಾಧ್ಯ ಹಿರೇಮಠದ ಸಿದ್ಧರಾಮ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾದ ಗ್ರಾ.ಪಂ ಅಧ್ಯಕ್ಷರಾದ ರಾಜಅಹ್ಮದ ಸಿರಸಗಿ, ಗ್ರಾಪಂ ಸದಸ್ಯರಾದ ನಬಿಲಾಲ ನಾಯ್ಕೋಡಿ, ಸುಧಾಕರ ಅಡಕಿ ಮತ್ತು ಸುಜಾತಾ ಶ್ರೀ ಅವಟಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ದೇವಿಂದ್ರ ಬಡಿಗೇರ, ರಮೇಶ ಮೋಪಗಾರ, ಸಂಘದ ಮನೋಹರ ಪತ್ತಾರ, ಸಿದ್ದಣ್ಣ ಅಂಗಡಿ, ವಿಮಲಾ ಹಿರೇಮಠ, ಶಾಂತಮ್ಮ ಹಿರೇಮಠ, ಬಸಮ್ಮ ಚಳ್ಳಗಿ, ಶೋಭಾ ಗದ್ದಿಗಿಮಠ, ಪೂಜಾ ಬಡಿಗೇರ, ಜಗದೇವಿ ಗಣಾಚಾರಿ ಸೇರಿದಂತೆ ಇತರರು ಇದ್ದರು.
ಇದೇ ವೇಳೆ ಟೈಲರ‍್ಸ್ಗಳಿಗೆ ಹೊಸ ಕಾರ್ಡ್ ವಿತರಣೆ ಮಾಡಲಾಯಿತು ಮತ್ತು ಎಲ್ಲ ಟೈಲರ‍್ಸ್ಗಳ ಪರವಾಗಿ ಗ್ರಾಮದಲ್ಲಿ ಟೈಲರ‍್ಸ್ ಸಮುದಾಯ ಭವನ ನಿರ್ಮಾಣ ಮಾಡುವಂತೆ ಗ್ರಾಮ ಪಂಚಾಯತ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ನಂತರ ಸಾಯಂಕಾಲ ಗುರುಮರುಳಾರಾಧ್ಯರ ಹಿರೇಮಠದಲ್ಲಿ ನಡೆದ ಪುರಾಣ ಕಾರ್ಯಕ್ರಮದಲ್ಲಿ ಟೈರ‍್ಸ್ ಸಂಘದಿಂದ ಪ್ರಸಾದದ ವ್ಯವಸ್ಥೆ ಮಾಡಲಾಯಿತು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಆತಂಕಕ್ಕೆ ಕೊನೆ ಹಾಡಿ ಈ ಕ್ಷಣ ಬದುಕಿ

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 08, 2026

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟಬುಕ್ ವಿತರಣೆ

ಡಾ.ಹಳಕಟ್ಟಿಯವರಿಂದ ವಚನ ಸಾಹಿತ್ಯದ ಸಮಗ್ರ ದರ್ಶನ :ಡಾ.ಮದಭಾವಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಆತಂಕಕ್ಕೆ ಕೊನೆ ಹಾಡಿ ಈ ಕ್ಷಣ ಬದುಕಿ
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 08, 2026
    In ದಿನಪತ್ರಿಕೆ
  • ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟಬುಕ್ ವಿತರಣೆ
    In (ರಾಜ್ಯ ) ಜಿಲ್ಲೆ
  • ಡಾ.ಹಳಕಟ್ಟಿಯವರಿಂದ ವಚನ ಸಾಹಿತ್ಯದ ಸಮಗ್ರ ದರ್ಶನ :ಡಾ.ಮದಭಾವಿ
    In (ರಾಜ್ಯ ) ಜಿಲ್ಲೆ
  • ಜು.೧೦ ರಂದು ತರಬೇತಿ, ಇ-ಹರಾಜು
    In (ರಾಜ್ಯ ) ಜಿಲ್ಲೆ
  • ಎಸ್‌ಐಆರ್ ಕುರಿತು ವದಂತಿ ಹರಡಿದರೆ ಕಾನೂನು ಕ್ರಮ
    In (ರಾಜ್ಯ ) ಜಿಲ್ಲೆ
  • ಬರ: ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ
    In (ರಾಜ್ಯ ) ಜಿಲ್ಲೆ
  • ಮಳೆಗಾಗಿ ಗ್ರಾಮಸ್ಥರಿಂದ ಗುರ್ಜಿ ಪೂಜೆಗೆ ಮೊರೆ
    In (ರಾಜ್ಯ ) ಜಿಲ್ಲೆ
  • ಕೊಲ್ಹಾರ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ :ಕೊಪ್ಪಳ
    In (ರಾಜ್ಯ ) ಜಿಲ್ಲೆ
  • ಜೆಇಇಯಲ್ಲಿ ಸಾಧನೆಗೈದ ಇಂದಿರಾಬಾಯಿಗೆ ಸನ್ಮಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.