ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಐತಿಹಾಸಿಕ ವಿಜಯಪುರ ನಗರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಹಲಿಗೆ ಹಬ್ಬ (ಹಲಿಗೆ ಸ್ಪರ್ಧೆ) ಯನ್ನು ಶ್ರೀ ರಾಮನವಮಿ ಉತ್ಸವ ಸಮಿತಿಯ ವತಿಯಿಂದ ಸಮಿತಿಯ ಅಧ್ಯಕ್ಷ ಉಮೇಶ ವಂದಾಲ ನೇತೃತ್ವದಲ್ಲಿ ಹಲ್ಲಿಗೆ ಬಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಮಾರ್ಚ ೧೦ ರಂದು ಹಲಿಗೆ ಹಬ್ಬ
ಸ್ಪರ್ಧಾಗಳು ಹೆಸರು ನೊಂದಾಯಿಸಿಕೊಳ್ಳಲು ಉಮೇಶ ವಂದಾಲ ಕರೆ ನೀಡಿದ್ದಾರೆ.
ಉತ್ತರ ಕರ್ನಾಟಕದ ಐತಿಹಾಸಿಕ ಹಬ್ಬಗಳಲ್ಲಿ ಒಂದಾದ ಹೋಳಿ ಹುಣ್ಣಿಮೆಯ ಸಂದರ್ಭದಲ್ಲಿ ಪ್ರತಿಯೊಂದು ಹಳ್ಳಿ ನಗರಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಪ್ರತಿ ಓಣಿಗಳಲ್ಲಿ ಹಲಿಗೆಯ ಬಾರಿಸುವ ಸಾಂಪ್ರದಾಯ ನಡೆದುಕೊಂಡು ಬಂದಿದ್ದು ಇತ್ತೀಚಿನ ದಿನಗಳಲ್ಲಿ ಈ ಸಂಪ್ರದಾಯವು ನಶಿಸಿ ಹೊರಟಿರುವುದು ವಿಪರ್ಯಾಸವೇ ಸರಿ. ಇಂದಿನ ಆಧುನಿಕತೆಯ ಭರಾಟೆಯಲ್ಲಿ ಯುವ ಪೀಳಿಗೆಗೆ ಹಬ್ಬಗಳ ಬಗೆಗಿನ ಪ್ರೀತಿ ಮತ್ತು ಉತ್ಸಾಹ ಕಡಿಮೆಯಾಗದಿರಲೆಂದು ಮತ್ತು ನಮ್ಮ ಸಂಸ್ಕೃತಿ ಹಬ್ಬಗಳು ಉಳಿಯಬೇಕೆಂಬ ಸದುದ್ದೇಶದಿಂದ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ದಿನಾಂಕ : ೧೦.೦೩.೨೦೨೫ರಂದು ಸಾಯಂಕಾಲ ನಾಲ್ಕು ಗಂಟೆಗೆ ನಗರದ ಶಿವಾಜಿ ವೃತ್ತದಲ್ಲಿ ಏರ್ಪಡಿಸಲಾಗಿದ್ದು ಎಲ್ಲಾ ಸಾರ್ವಜನಿಕರು ಹಾಗೂ ಹಲ್ಲಿಗೆಯ ಪ್ರಿಯರು ಈ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸುವುದರ ಮುಖಾಂತರ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಭಾಗವಹಿಸುವವರು ತಮ್ಮ ಹೆಸರನ್ನು ಮೊಬೈಲ್ ಸಂಖ್ಯೆ : ೮೦೯೫೪೭೪೩೫೨, ೮೧೪೭೦೬೮೭೨, ೯೩೪೧೨೪೧೩೭೧ ನೊಂದಾಯಿಸಿಕೊಳ್ಳಬಹುದು.
ಸ್ಪರ್ಧೆಯಲ್ಲಿ ತಂಡಕ್ಕೆ ಪ್ರಥಮ ಬಹುಮಾನ ರೂ. ೨೫,೦೦೦/-ದ್ವಿತೀಯ ಬಹುಮಾನ ೧೫,೦೦೦/- ತೃತೀಯ ಬಹುಮಾನ ರೂ. ೧೦,೦೦೦/- ವೈಯಕ್ತಿಕವಾಗಿ ಭಾಗವಹಿಸುವವರಿಗೆ ಪ್ರಥಮ ಬಹುಮಾನ ರೂ. ೧೧,೦೦೦/- ದ್ವಿತೀಯ ಸ್ಥಾನ ರೂ.೭೫೦೦/- ಹಾಗೂ ತೃತೀಯ ಸ್ಥಾನ ರೂ.೫೦೦೦/- ಬಹುಮಾನ ನೀಡಲಾಗುವದು. ಈ ಹಲಿಗೆ ಸ್ಪರ್ಧೆಯಲ್ಲಿ ವಿಜೇತರನ್ನು ನಿರ್ಣಾಯಕರು ಘೋಷಣೆ ಮಾಡಲಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹಲಿಗೆಯನ್ನು ತಾವೇ ತೆಗೆದುಕೊಂಡು ಬರಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಹಲಿಗೆ ಸ್ಪರ್ಧೇ ಆಯೋಜಕರಾದ ಹಾಗೂ ಸಮಿತಿ ಅಧ್ಯಕ್ಷರಾದ ಉಮೇಶ ಬ. ವಂದಾಲ ಹಾಗೂ ಶಿವಾನಂದ ಭುಯ್ಯಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

