ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಹೊರತಾಗಿ ತಿಳುವಳಿಕೆ ಹೆಚ್ಚಿಸುವ ಪುಸ್ತಕ ಓದಲು ಪ್ರೇರಣೆ ನೀಡಬೇಕಿದೆ ಎಂದು ವಿಜಯಪುರ ಡಯಟ್ ಉಪನ್ಯಾಸಕ, ಲೇಖಕ ನಾರಾಯಣ ಬಾಬಾನಗರ ಹೇಳಿದರು.
ಇಂಡಿ ತಾಲ್ಲೂಕಿನ ನಿಂಬಾಳ ಕೆ. ಡಿ. ಗ್ರಾಮದ ಅವರಾದಿ ವಸ್ತಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಸ ಸಂವಹನ ಸಂಘಟನೆ ಆಯೋಜಿಸಿದ್ದ ಗ್ರಂಥಗಳ ವಿತರಣೆ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಮೋಬೈಲ್, ಟಿವಿ ಗಳ ಮಧ್ಯದಲ್ಲಿ ಪುಸ್ತಕ ಓದುವ ಸಂಸ್ಕೃತಿ ಬೆಳೆಸಬೇಕಿದೆ ಎಂದರು. ಸರಸ ಸಂವಹನ ಸಂಘಟನೆ ಯು ಕಳೆದ ಹಲವಾರು ವರ್ಷಗಳಿಂದ ಸರಕಾರಿ ಶಾಲೆಗಳಿಗೆ ಉಚಿತ ಪುಸ್ತಕ ವಿತರಣೆ ಮಾಡುವ ಕಾರ್ಯ ಮಾಡುತ್ತಿದೆ, ಶಾಲೆ ಕಾಲೇಜುಗಳಲ್ಲಿ ಉಪನ್ಯಾಸ, ಸಂವಾದ ಗಳ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುತ್ತಿದೆ ಎಂದರು.
ಶ್ರೀ ಗುರುದೇವ ತಪೋವನದ ಪೂಜ್ಯ ಶ್ರೀ ತೇಜೋಮಯಾನಂದ ಸ್ವಾಮಿಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತ, ಇಂದಿನ ಮಕ್ಕಳಲ್ಲಿ ವಿದ್ಯೆಯ ಜೊತೆಗೆ ಸಂಸ್ಕಾರ ನೀಡುವ ಕಾರ್ಯ ಶಾಲೆಗಳಲ್ಲಿ ಆಗಬೇಕಿದೆ, ಆಶ್ರಮದ ಹತ್ತಿರ ದಲ್ಲಿಯೇ ಇರುವ ಈ ಶಾಲೆಯ ಮಕ್ಕಳು ತುಂಬಾ ಶಿಸ್ತು, ಹಿರಿಯರ ಬಗ್ಗೆ ಗೌರವ ನೀಡುವ ಉತ್ತಮ ಸಂಸ್ಕಾರ ಹೊಂದಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ಎಸ್. ಡಿ. ಎಮ್. ಸಿ ಅಧ್ಯಕ್ಷ ಲಕ್ಷ್ಮಣ ಅವರಾದಿ ವಹಿಸಿದ್ದರು.
ಶಿಕ್ಷಕರಾದ ಗುರು ಬೋಸಗಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಗಂಗಾಧರ ಮೆಂಡೆಗಾರ, ಅನಿಲ ಅವರಾದಿ, ಮಲ್ಲಪ್ಪ ಬಸನಾಳ, ರಮೇಶ ವಾಲಿಕಾರ,ಮೀರಸಾಬ ದಳವಾಯಿ ಮೊದಲಾದವರು ಉಪಸ್ಥಿತರಿದ್ದರು.
ರಮೇಶ್ ವಾಂಡಕರ ವಂದಿಸಿದರು.

