Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಜಾಗತೀಕರಣದ ಭರಾಟೆಯಲ್ಲಿ ಭಾರತವು ಪಾರಂಪರಿಕವಾಗಿ ಆಚರಣೆ ಮಾಡುತ್ತಾ ಬಂದಿರುವ ಹಬ್ಬಗಳು ನಶಿಸಿ ಹೋಗುತ್ತಿವೆ. ಆದರೆ ಹೋಳಿ ಹಬ್ಬ ಮಾತ್ರ ತನ್ನ ಗತ್ತು ಗೈರತ್ತು ಮುಂದುವರೆಸಿಕೊಂಡು ಹೊರಟಿದೆ. ಏಕೆಂದರೆ ಬಣ್ಣದ ಹಬ್ಬವನ್ನು ಹೆಚ್ಚಾಗಿ ಯುವ ಜನಾಂಗವೇ ಆಚರಣೆ ಮಾಡುವುದರಿಂದ ಇನ್ನು ಜೀವಂತವಾಗಿ ಉಳಿದಿದೆ. ಮೇಲಾಗಿ ಈ ಹಬ್ಬವನ್ನು ಜಾತಿ ಮತ ಪಂಥ ಮತ್ತು ಧರ್ಮ ಮೀರಿ ಎಲ್ಲರೂ ಆಚರಿಸುತ್ತಾರೆ ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಹೇಳಿದರು.ಈ ಮೊದಲೆಲ್ಲ ಬಣ್ಣದ ಹಬ್ಬದ ದಿನದಂದು ಸಿಂದಗಿ ಪಟ್ಟಣದ ವಿವಿಧ ಬಡವಾಣೆಗಳ ಯುವಕರು ಬಣ್ಣದಾಟದಲ್ಲಿ ಮಿಂದೇಳುತ್ತಿದ್ದರು, ಜೊತೆಗೆ ಗೆಳೆಯರೆಲ್ಲರೂ ಒಂದುಗೂಡಿ ಗಂಡ ಹೆಂಡತಿಯ ಸೋಗನ್ನು ಹಾಕಿ ಕೃತಕ ಶವ ಸಂಸ್ಕಾರದ ರೂಪಕವನ್ನು ಸೃಷ್ಟಿಸಿ, ಪಟ್ಟಣದ ತುಂಬೆಲ್ಲಾ ಶವದ ಮೆರವಣಿಗೆಯನ್ನು ಮಾಡುತ್ತಾ ಜನರನ್ನು ನಗೆಗಡಲಲ್ಲಿ ತೆಲಿಸುತ್ತಿದ್ದರು. ಹಿರಿಯರಾದವರು ಬಡಾವಣೆಗಳ ಅಥವಾ ಓಣಿಗಳ ಪ್ರಮುಖ ಜಾಗದಲ್ಲಿ ಕುಳಿತುಕೊಂಡು ಹೋಳಿ ಹಬ್ಬದ ವಿಶೇಷ ಹಾಡುಗಳನ್ನು ಹಾಡುತ್ತ ಜನರನ್ನು ರಂಜಿಸುತ್ತಿದ್ದರು. ಆದರೆ ಇಂತಹ ಆಚರಣೆಗಳು ಮೆರಯಾಗಿದ್ದು,…
ಉದಯರಶ್ಮಿ ದಿನಪತ್ರಿಕೆ ಇಂಡಿ: ವಿಜಯಪುರ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲೂಕಿನ ಹಿರೇರೂಗಿ ಗ್ರಾಮಕ್ಕೆ ಆರೋಗ್ಯ ಅಧಿಕಾರಿ ಡಾ|| ಕೃಷ್ಣಕುಮಾರ ಜಾಧವ ಶುಕ್ರವಾರದಂದು ತಾಂಬಾ ಗ್ರಾಮದ ಡಾ|| ರೂಗಿ ಅವರ ಕ್ಲಿನಿಕ್ ಗೆ ಭೇಟಿ ನೀಡಿ ಕೆ.ಪಿ.ಎಂ.ಇ ನೊಂದಣಿ ಇಲ್ಲದ ಕಾರಣ ನೋಟಿಸ್ ನೀಡಲಾಯಿತು.ಅಲ್ಲದೆ ಹಿರೇರೂಗಿ ಗ್ರಾಮದ ಡಾ|| ನದಾಪ್‌ರವರ ಕುರಿತು ಸಾರ್ವಜನಿಕರಿಗೆ ವಿಚಾರಿಸಿದಾಗ ಆ ಹೆಸರಿನ ನಕಲಿ ವೈದ್ಯರು ೨ ವರ್ಷದಿಂದ ಗ್ರಾಮದಲ್ಲಿ ಇರುವುದಿಲ್ಲ ಎಂದು ಸಾರ್ವಜನಿಕರು ತಿಳಿಸಿದರು. ತದನಂತರ ಹಿರೇರೂಗಿ ಗ್ರಾಮದ ಆರೋಗ್ಯ ಸಿಬ್ಬಂದಿಯವರನ್ನು ವಿಚಾರಿಸಲಾಗಿ ಅಂತಹ ಹೆಸರಿನ ವ್ಯಕ್ತಿ ಇರುವುದಿಲ್ಲ ಎಂದು ಮಾಹಿತಿ ನೀಡಿದರು. ಹಾಗೂ ಇತರೆ ಖಾಸಗಿ ಕ್ಲಿನಿಕ್ ಗಳಿಗೆ ಭೇಟಿ ನೀಡಿ ಕೆ.ಪಿ.ಎಂ.ಇ ಕುರಿತು ಮಾಹಿತಿಯನ್ನು ನೀಡಿಲಾಯಿತು.
ಬೆಳಗಾವಿ ಪೋಲಿಸ್ ಮಹಾ ನಿರ್ದೇಶಕ ಚೇತನಸಿಂಗ್ ರಾಠೋರ್ ಖಡಕ್ ಸೂಚನೆ ಉದಯರಶ್ಮಿ ದಿನಪತ್ರಿಕೆ ಇಂಡಿ: ಸಮಾಜದಲ್ಲಿ ಅಶಾಂತಿ ಸೃಷಿಸುವ ಹಾಗೂ ಕಾನೂನು ಸುವ್ಯವಸ್ಥಿತ ಕೆಡಿಸುವ ಕಿಡಿಗೇಡಿಗಳಿಗೆ, ಪುಡಿ ರೌಡಿಗಳಿಗೆ ಎಡೆಮುರಿ ಕಟ್ಟಿ, ಅಕ್ರಮ ಚಟುವಟಿಕೆ, ಅಪರಾದ ತಡೆಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಉತ್ತರ ವಲಯ ಬೆಳಗಾವಿ ಪೋಲಿಸ್ ಮಹಾ ನಿರ್ದೇಶಕ ಚೇತನಸಿಂಗ್ ರಾಠೋರ್ (ಐಪಿಎಸ್) ಖಡಕ್ ಸೂಚನೆ ನೀಡಿದ್ದಾರೆ.ಇಂಡಿ ಪಟ್ಟಣದಲ್ಲಿರುವ ಗ್ರಾಮೀಣ ಪೋಲಿಸ್ ಠಾಣಾಗೆ ಬೇಟಿ ನೀಡಿದ ಅವರು, 2024- 25 ನೇ ಸಾಲಿನ ಅಪರಾಧ ಪ್ರಕರಣಗಳ ಬಗ್ಗೆ ಹಾಗೂ ಕಛೇರಿ ಪರಿವೀಕ್ಷಣೆ ಮಾಡಿ ಮಾತನಾಡಿದರು.ಈ ಭಾಗದಲ್ಲಿ ಅಶಾಂತಿ ಸೃಷ್ಟಿಸುವ ಮತ್ತು ಅಪರಾಧ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಅವುಗಳ ಬಗ್ಗೆ ನಿಗಾವಹಿಸಿ ಅಪರಾಧದಲ್ಲಿ ತೊಡಗಿಕೊಂಡವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಇನ್ನೂಸಣ್ಣಪುಟ್ಟ ಪುಡಿ ರೌಡಿಗಳು ಹುಡುಗಿಯರ ಚುಡಾಯಿಸುವುದು, ಸಣ್ಣ ಮಟ್ಟದಲ್ಲಿ ಗ್ರಾಮದಲ್ಲಿ ಹವಾ ಮೇಂಟೈನ್ ಮಾಡುವಂತವರು, ಸಾರ್ವಜನಿಕ ಪ್ರದೇಶದಲ್ಲಿ ಭಯ ಹುಟ್ಟಿಸುವವರು ವಿರುದ್ಧ ಹಾಗೂ ಅಕ್ರಮ ಚಟುವಟಿಕೆ, ಕಾನೂನು ಬಾಹಿರ ಕೃತ್ಯ…
ಉದಯರಶ್ಮಿ ದಿನಪತ್ರಿಕೆ ಇಂಡಿ: ನೀರು ಕುಡಿಯಲು ಬಾವಿಗೆ ಇಳಿದಿದ್ದ ಬಾಲಕ ಕಾಲು ಜಾರಿ ನೀರು ಪಾಲು ಜೊತೆಗೆ ರಕ್ಷಣೆಗೆ ಇಳಿದ ಅಜ್ಜಿಯೂ ನೀರು ಪಾಲಾಗಿರುವ ಘಟನೆ ತಾಲ್ಲೂಕಿನ ಅಗಸನಾಳ ಗ್ರಾಮದಲ್ಲಿ ನಡೆದಿದೆ.ಅಗಸನಾಳ ಗ್ರಾಮದ ತೋಟದ ವಸ್ತಿಯಲ್ಲಿ ಈ ಘಟನೆ ನಡೆದಿದೆ.ಅಸಾದ್ ಮುಲ್ಲಾ (12) ಸಲೀಮಾ ಮುಲ್ಲಾ (55) ಮೃತ ಅಜ್ಜಿ ಹಾಗೂ ಮೊಮ್ಮಗ ಇಬ್ಬರ ಶವ ಹೊರ ತೆಗೆದ ಹೊರ್ತಿ ಪೊಲೀಸರುಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಟ್ಟಿದೆ. ಇನ್ನೂ ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ರಾಷ್ಟ್ರೀಯ ಹೆದ್ದಾರಿ 218 ರ ರೋಣಿಹಾಳ ಕ್ರಾಸ್ ಸಮೀಪ ಪಾದಚಾರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ರೋಣಿಹಾಳ ಗ್ರಾಮದ ಮನೋಹರ ಕಟ್ಟಿಮನಿ ಯವರಿಗೆ ಗಂಭೀರವಾಗಿ ಗಾಯಗೊಂಡಿದ್ದು ಸ್ಥಳಕ್ಕೆ ದೌಡಾಯಿಸಿದ ಕೊಲ್ಹಾರ 108 ಅಂಬುಲೆನ್ಸ್ ಸಿಬ್ಬಂದಿ ಅಡವಯ್ಯಾ ಹಿರೇಮಠ ಸುಖದೇವ ಕಾಳೆ, ವಿಜಯಪುರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಪೊಲಿಟಿಕಲ್ ಆಕ್ಷನ್ ಕಮಿಟಿ (ಬಿ.ಪ್ಯಾಕ್) ವತಿಯಿಂದ ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ಇರುವವರಿಗಾಗಿ ಬಿ.ಪ್ಯಾಕ್ ನಾಗರಿಕ ನಾಯಕತ್ವ ತರಬೇತಿ (ಬಿ.ಕ್ಲಿಪ್) ಕಾರ್ಯಕ್ರಮದ 10ನೇ ಆವೃತ್ತಿಗೆ ಅರ್ಜಿ ಆಹ್ವಾನಿಸಿದೆ.ರಾಜಕೀಯ, ನಗರ ಆಡಳಿತ, ನೀತಿ ನಿರೂಪಣೆ, ನಾಯಕತ್ವ, ಚುನಾವಣಾ ಕಾರ್ಯತಂತ್ರ, ಮಾಧ್ಯಮ ನಿರ್ವಹಣೆ ಸೇರಿದಂತೆ ನಾಗರಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಬೇಕಾದ ಎಲ್ಲಾ ರೀತಿಯ ಅರ್ಹತೆಯನ್ನು ಈ ತರಬೇತಿಯಲ್ಲಿ ನೀಡಲಾಗುತ್ತದೆ.ಬಿ.ಕ್ಲಿಪ್ ಕಾರ್ಯಕ್ರಮದ ಮುಖ್ಯಸ್ಥ ರಾಘವೇಂದ್ರ ಪೂಜಾರಿ ಹೆಚ್.ಎಸ್ ಮಾತನಾಡಿ, ಬೆಂಗಳೂರಿನ ತಳಮಟ್ಟದಲ್ಲಿ ನಾಗರಿಕರ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುನ್ನಡೆಸುವ ಮತ್ತು ದಕ್ಷ ಆಡಳಿತದ ಮೂಲಕ ಸಮಾಜದಲ್ಲಿ ಬದಲಾವಣೆ ಸೃಷ್ಟಿಸುವ ನಾಯಕರನ್ನು ರೂಪಿಸುವುದೇ ಈ ತರಬೇತಿಯ ಮೂಲ ಉದ್ದೇಶ. ಕಳೆದ ಒಂಬತ್ತು ವರ್ಷಗಳಲ್ಲಿ, 400 ಕ್ಕೂ ಹೆಚ್ಚು ನಾಗರಿಕರಿಗೆ ತರಬೇತಿ ನೀಡಲಾಗಿದ್ದು, 10ನೇ ಆವೃತ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಏಪ್ರಿಲ್ 10ರವರೆಗೂ ಅರ್ಜಿ ಸಲ್ಲಿಸಲು ಮುಕ್ತವಾಗಿದೆ. ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿದ್ದು, ಈ ಚುನಾವಣೆಯಲ್ಲಿ ಸ್ಪರ್ಧಿಸುವವರು ಸಹ ಇಲ್ಲಿ ತರಬೇತಿ ಪಡೆದು, ಸೂಕ್ತ ರೀತಿಯಲ್ಲಿ ಆಡಳಿತ ನಡೆಸಲು…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ರಾಷ್ಟ್ರೀಯ ಹೆದ್ದಾರಿ 218 ರ ಯುಕೆಪಿ ಹತ್ತಿರ ಕೃಷ್ಣಾ ನದಿ ಸೇತುವೆ ಮೇಲೆ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಸೋಮಶೇಖರ ಅಶೋಕ ಮಾಲಗಿತ್ತಿ (30) ಮೃತ ಸವಾರ. ಬೀಳಗಿ ಕಡೆಯಿಂದ ಕೊಲ್ಹಾರ ಮೂಲಕ ಗಣಿ ಗ್ರಾಮಕ್ಕೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಏ.೬ ರವರೆಗೆ ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಕಾಲುವೆಗಳ ಜಾಲಕ್ಕೆ ನೀರು ಹರಿಸಲು ಬೆಂಗಳೂರಿನಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಜರುಗಿದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.ಮಾ.೧೪ ರಂದು ಆಲಮಟ್ಟಿ, ನಾರಾಯಣಪುರ ಜಲಾಶಯಗಳಲ್ಲಿ ಒಟ್ಟು ಬಳಕೆಗೆ ೩೫.೮೯೩ ಟಿಎಂಸಿ ನೀರಿದೆ. ಕಳೆದ ಸಾಲಿಗೆ ಹೋಲಿಸಿದಾಗ ಲಭ್ಯವಿರುವ ನೀರಿನ ಪ್ರಮಾಣ ೫.೭೧೧ ಟಿಎಂಸಿ ಹೆಚ್ಚಿಗಿದೆ. ೧೪/೩/೨೦೨೫ ರಿಂದ ೩೦/೬/೨೦೨೫ ರವರೆಗೆ ಅವಶ್ಯ ಬಳಕೆಗೆ ಬೇಕಾಗಿರುವ ನೀರು ೨೫.೭೦ ಟಿಎಂಸಿ.ರೈತರ ಒತ್ತಡದ ಹಿನ್ನಲೆಯಲ್ಲಿ ಮಾ.೧೪ ರಂದು ಐಸಿಸಿ ಮತ್ತೊಮ್ಮೆ ಸಭೆ ಸೇರಿ ರೈತರ ಬೇಡಿಕೆಗೆ ಸ್ಪಂದಿಸಿದೆ.೩೦/೬/೨೦೨೫ ರವರೆಗೆ ಅಗತ್ಯವಿರುವ ಕುಡಿಯುವ ನೀರು, ಕೆರೆ ತುಂಬುವುದು ಹಾಗೂ ಇತ್ಯಾದಿ ಬಳಕೆಗೆ ೨೫.೮೦ ಟಿಎಂಸಿ ಕಾಯ್ದಿರಿಸಿಕೊಂಡು ೧೫/೩/೨೦೨೫ ರಿಂದ ೨೨/೩/೨೦೨೫ ರವರೆಗೆ ೮ ದಿನಗಳಿಗೆ ಹಾಗೂ ಏ.೧ ರಿಂದ ಏ.೬ ರವರೆಗೆ ನಿತ್ಯ ಕಾಲುವೆಗೆ ೦.೮ ಟಿಎಂಸಿ ನೀರು ಹರಿಸಲು ಸಭೆ ತೀರ್ಮಾನಿಸಿದೆ. ೨೩/೩/೨೦೨೫ ರಿಂದ ೩೧/೩/೨೦೨೫ ರವರೆಗೆ ಕಾಲುವೆಗೆ ನೀರು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ವಿಜಯಪುರ ಮಿಲಿಟರಿ ಬಾಲಕರ ವಸತಿ ನಿಲಯದ ೨೦೨೫-೨೬ನೇ ಸಾಲಿನ ಪ್ರವೇಶಕ್ಕೆ ೬ನೇ ತರಗತಿ ಯಿಂದ ೧೦ನೇ ತರಗತಿ ಹಾಗೂ ಪಿಯುಸಿ ಮತ್ತು ಡಿಪ್ಲೋಮಾ ವ್ಯಾಸಾಂಗಕ್ಕಾಗಿ ಹಾಲಿ ಮತ್ತು ಮಾಜಿ ಸೈನಿಕರ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ.ಜಿಲ್ಲೆಯ ಆಸಕ್ತ ವಿದ್ಯಾರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಯೊಂದಿಗೆ ಮೇ ೧೫ರೊಳಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೩೫೨-೨೫೦೯೧೩ ಹಾಗೂ ೯೪೧೧೫೬೧೮೮೫ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ವಿಜಯಪುರದಲ್ಲಿ ವಿಶ್ವ ಗ್ರಾಹಕರ ದಿನ ಆಚರಣೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯಾವುದೇ ವಸ್ತು ಖರೀದಿಸುವಾಗ ಗ್ರಾಹಕರು ಮೋಸಗಳಿಗೆ ಒಳಗಾಗದೇ, ಜಾಹೀರಾತುಗಳಿಗೆ ಮರುಳಾಗದೇ ಗುಣಮಟ್ಟದ ಹಾಗೂ ನಿಗದಿತ ಬೆಲೆಯಲ್ಲಿ ವಸ್ತುವನ್ನು ಖರೀದಿಸುವ ಮೂಲಕ ಪ್ರತಿಯೊಬ್ಬರು ಜಾಗೃತರಾಗಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಹೇಳಿದರು.ಶನಿವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸುಸ್ಥಿರ ಜೀವನಶೈಲಿಗೆ ಒಂದು ಸರಳ ಪರಿವರ್ತನೆ ಎನ್ನುವ ಘೋಷವಾಕ್ಯದೊಂದಿಗೆ ಹಮ್ಮಿಕೊಂಡ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಹಕರ ಹಕ್ಕುಗಳ ಕಾಯ್ದೆ ಜ್ಯಾರಿಯಾದ ಕಾರಣ ಸಹಿತ ವಿವರಿಸಿ ಪ್ರತಿಯೊಂದು ಗ್ರಾಹಕರು ಮೋಸಕ್ಕೊಳಗಾಗದಂತೆ ಎಚ್ಚರಿಕೆಯನ್ನು ವಹಿಸಿ ವ್ಯವಹರಿಸಬೇಕು. ಅಲ್ಲದೇ ಯಾವುದೇ ವಸ್ತುಗಳನ್ನು ಖರೀದಿಸಿದರೆ ಗರಿಷ್ಟ ಚಿಲ್ಲರೆ ದರಕ್ಕಿಂತ ಹೆಚ್ಚಿಗೆ ಪಾವತಿ ಮಾಡಬಾರದು. ಗ್ರಾಹಕ ಎಚ್ಚೆತ್ತುಕೊಂಡು ಮೋಸ ಹೋಗದಂತೆ ಎಚ್ಚರಿಕೆಯನ್ನು ವಹಿಸಿ ವ್ಯವಹರಿಸಿದಲ್ಲಿ ಸುಸ್ಥಿರ ಜೀವನಶೈಲಿಗೆ ಸರಳ ಪರಿವರ್ತನೆಯಾದಂತೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜಯಪುರದ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್…
