ಉದಯರಶ್ಮಿ ದಿನಪತ್ರಿಕೆ
ಇಂಡಿ: ನೀರು ಕುಡಿಯಲು ಬಾವಿಗೆ ಇಳಿದಿದ್ದ ಬಾಲಕ ಕಾಲು ಜಾರಿ ನೀರು ಪಾಲು ಜೊತೆಗೆ ರಕ್ಷಣೆಗೆ ಇಳಿದ ಅಜ್ಜಿಯೂ ನೀರು ಪಾಲಾಗಿರುವ ಘಟನೆ ತಾಲ್ಲೂಕಿನ ಅಗಸನಾಳ ಗ್ರಾಮದಲ್ಲಿ ನಡೆದಿದೆ.
ಅಗಸನಾಳ ಗ್ರಾಮದ ತೋಟದ ವಸ್ತಿಯಲ್ಲಿ ಈ ಘಟನೆ ನಡೆದಿದೆ.
ಅಸಾದ್ ಮುಲ್ಲಾ (12) ಸಲೀಮಾ ಮುಲ್ಲಾ (55) ಮೃತ ಅಜ್ಜಿ ಹಾಗೂ ಮೊಮ್ಮಗ ಇಬ್ಬರ ಶವ ಹೊರ ತೆಗೆದ ಹೊರ್ತಿ ಪೊಲೀಸರು
ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಟ್ಟಿದೆ. ಇನ್ನೂ ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
