ಉದಯರಶ್ಮಿ ದಿನಪತ್ರಿಕೆ
ಇಂಡಿ: ವಿಜಯಪುರ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲೂಕಿನ ಹಿರೇರೂಗಿ ಗ್ರಾಮಕ್ಕೆ ಆರೋಗ್ಯ ಅಧಿಕಾರಿ ಡಾ|| ಕೃಷ್ಣಕುಮಾರ ಜಾಧವ ಶುಕ್ರವಾರದಂದು ತಾಂಬಾ ಗ್ರಾಮದ ಡಾ|| ರೂಗಿ ಅವರ ಕ್ಲಿನಿಕ್ ಗೆ ಭೇಟಿ ನೀಡಿ ಕೆ.ಪಿ.ಎಂ.ಇ ನೊಂದಣಿ ಇಲ್ಲದ ಕಾರಣ ನೋಟಿಸ್ ನೀಡಲಾಯಿತು.
ಅಲ್ಲದೆ ಹಿರೇರೂಗಿ ಗ್ರಾಮದ ಡಾ|| ನದಾಪ್‌ರವರ ಕುರಿತು ಸಾರ್ವಜನಿಕರಿಗೆ ವಿಚಾರಿಸಿದಾಗ ಆ ಹೆಸರಿನ ನಕಲಿ ವೈದ್ಯರು ೨ ವರ್ಷದಿಂದ ಗ್ರಾಮದಲ್ಲಿ ಇರುವುದಿಲ್ಲ ಎಂದು ಸಾರ್ವಜನಿಕರು ತಿಳಿಸಿದರು. ತದನಂತರ ಹಿರೇರೂಗಿ ಗ್ರಾಮದ ಆರೋಗ್ಯ ಸಿಬ್ಬಂದಿಯವರನ್ನು ವಿಚಾರಿಸಲಾಗಿ ಅಂತಹ ಹೆಸರಿನ ವ್ಯಕ್ತಿ ಇರುವುದಿಲ್ಲ ಎಂದು ಮಾಹಿತಿ ನೀಡಿದರು. ಹಾಗೂ ಇತರೆ ಖಾಸಗಿ ಕ್ಲಿನಿಕ್ ಗಳಿಗೆ ಭೇಟಿ ನೀಡಿ ಕೆ.ಪಿ.ಎಂ.ಇ ಕುರಿತು ಮಾಹಿತಿಯನ್ನು ನೀಡಿಲಾಯಿತು.

