Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಡಾ.ಪುನೀತ್ ರಾಜಕುಮಾರ ಅವರದ್ದು ಸಿನೇಮಾ ವೃತ್ತಿಯಾದರೆ ನಿರ್ಗತಿಕ ಮಕ್ಕಳ ಶಿಕ್ಷಣ , ರೋಗಿಗಳಿಗೆ ಔಷಧಿ ಉಪಚಾರ , ವೃದ್ಧಾಶ್ರಮ ಸ್ಥಾಪನೆ , ಗೋಶಾಲೆಗಳನ್ನು ತೆಗೆದು ಸಮಾಜಸೇವೆ ಮಾಡುವುದು ಪ್ರವೃತ್ತಿಯಾಗಿತ್ತು. ಅವರು ತಮ್ಮ ನೇತ್ರದಾನ ಮಾಡಿದರೆ ಅವರನ್ನು ಅನುಸರಿಸಿ ಅವರ ಸಾವಿರಾರು ಅನುಯಾಯಿಗಳು ೮೫ ಸಾವಿರಕ್ಕೂ ಹೆಚ್ಚು ನೇತ್ರದಾನ ಮಾಡಿದ್ದು ವೈಧ್ಯಕೀಯ ಇತಿ ಹಾಸದಲ್ಲಿ ದಾಖಲೆಯ ಸಂಗತಿ ಎ೦ದು ಸಾಹಿತಿ ಶಂಕರ ಬೈಚಬಾಳ ಹೇಳಿದರು.ಅವರು ವಿಜಯಪುರ ಪಟ್ಟಣದ ಶಾಸ್ತಿ ನಗರದಲ್ಲಿ ಮಾ.೧೭ರಂದು ಜೈ ಕರ್ನಾಟಕ ಸಂಘ ಮತ್ತು ನ್ಯೂ ಪ್ರೆಂಡ್ಸ ಮೇಲೋಡಿ ಆರ್ಕೆರ್ಸ್ಟ್ರಾ ಅಡಿಯಲ್ಲಿ ನಡೆದ ಪವರ್ ಸ್ಟಾರ್ ಪುನೀತ ರಾಜಕುಮಾರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಪುನೀತ್ ಅವರ ಸಾಮಾಜಿಕ ಜವಾಬ್ದಾರಿ ವಿಷಯ ಕುರಿತು ಉಪನ್ಯಾಸ ನೀಡಿದರು.ಸಮಾರಂಭದ ಅಧ್ಯಕ್ಷ ಸಂಗಮೇಶ ದಾಸ್ಯಾಳ ಮಾತನಾಡಿ, ಕನ್ನಡ ಉಳಿಸುವಲ್ಲಿ ಪುನೀತ ರಾಜಕುಮಾರ ನಮ್ಮ ಇಂದಿನ ಯುವಕರಿಗೆ ಮಾಧರಿಯಾಗಿದ್ದರು. ಎ೦ದು ಹೇಳಿದರು.ಜ್ಯೂನಿಯರ್ ಪುನಿತ್ ದೇವರಾಜ ಅವರು ಪುನೀತರು ಹಾಡಿದ ಹಾಡುಗಳ ರಸಮಂಜರಿ ಕಾರ್ಯಕ್ರಮವನ್ನು ಅವರ…

Read More

ಮೋರಟಗಿ ಹೊರ ಠಾಣೆಯಲ್ಲಿ ದಲಿತ ಕುಂದುಕೊರತೆ ಸಭೆ | ಡಿವೈಎಸ್ಪಿ ಮರ್ತಜಾ ಖಾದ್ರಿ ಸೂಚನೆ ಉದಯರಶ್ಮಿ ದಿನಪತ್ರಿಕೆ ಮೋರಟಗಿ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕೂಡಾ ಕಳ್ಳತನ ದರೋಡೆ ಪ್ರಕರಣಗಳು ಹೆಚ್ಚುತ್ತಿವೆ ದರೋಡೆಕೋರರನ್ನು ಬಂದಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ಕಳ್ಳರ ಹಾವಳಿ ತಪ್ಪಿಸಲು ಮುಂಜಾಗೃತವಾಗಿ ಮಠ ಮಂದಿರ, ದೇವಸ್ಥಾನ, ಹಾಗೂ ಅಂಗಡಿ-ಮುಂಗಟ್ಟುಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು ಎಂದು ಪ್ರೊಬೆಷನರಿ ಡಿ.ವಾಯ್. ಎಸ್. ಪಿ ಮರ್ತಜಾ ಖಾದ್ರಿ ಸೂಚಿಸಿದರು.ಗ್ರಾಮದ ಹೊರ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡ ದಲಿತ ಕುಂದುಕೊರತೆ ಸಭೆಯಲ್ಲಿ ಬಾಗವಹಿಸಿ ಅವರು ಮಾತನಾಡಿದರು.ಮೋರಟಗಿ ಹೊರಠಾಣೆಗೆ ೧೪ ಹಳ್ಳಿಗಳು ವಳಪಾಡುತ್ತವೆ ತಮ್ಮ ತಮ್ಮ ಗ್ರಾಮಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಮುಕ್ತವಾಗಿ ಪೊಲೀಸ್ ಠಾಣೆಗೆ ಬೀಟ್ ಪೋಲೀಸರಿಗೆ ಅಥವಾ ೧೧೨ ಗೆ ಕರೆಮಾಡಿ ತಿಳಸಬೇಕು ತಾವುಗಳು ಭಯಪಡುವ ಅವಶ್ಯವಿಲ್ಲ ತಾವು ತಿಳಿಸಿದ ವಿಷಯ ಇಲಾಖೆ ಗುಪ್ರವಾಗಿ ಇಡುಲಾಗುವುದು.ನಂತರ ಪಿಎಸ್ಐ ಆರಿಫ್ ಮುಷಾಪುರಿ ಮಾತನಾಡಿ ದಿನದಿಂದ ದಿನಕ್ಕೆ ರಾಷ್ಟ್ರೀಯ ಮೇಲೆ ಅಪಘಾತ ಪ್ರಕರಣಗಳು ಕೂಡಾ ಹೆಚ್ಚಾಗುತ್ತಿವೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಾರಾಯಣಪೂರ ಜಲಾಶಯದ ಕೃಷ್ಣಾ ನದಿಯಿಂದ ತೆಲಂಗಾಣಕ್ಕೆ ೧.೨ ಟಿಎಂಸಿ ನೀರು ಬಿಡುತ್ತೇವೆಂದು ಹೇಳಿ ಈಗ ೧೦ ಟಿಎಂಸಿ ನೀರು ಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಸಂಸದ ರಮೇಶ ಜಿಗಜಿಣಗಿ ಖಂಡಿಸಿದ್ದಾರೆ.ಈಗಿನ ಬಿರು ಬೇಸಿಗೆಯ ಸಂದರ್ಭದಲ್ಲಿ ವಿಜಯಪುರ ನಗರ ಸೇರಿದಂತೆ ಜಿಲ್ಲಾದ್ಯಂತ ಕುಡಿಯುವ ನೀರಿನ ಕೊರತೆಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ. ಕೆರೆಗಳಿಗೆ ನೀರು ತುಂಬಿಸಿ ಎಂದು ನಾವೇ ಹೇಳಿದರೆ ಬೇಸಿಗೆಯ ಸಂದರ್ಭವಿದೆ ಜಿಲ್ಲೆಯ ಜನತೆಗೆ ಕುಡಿಯುವ ನೀರಿಗೆ ತೊಂದರೆಯಾಗುತ್ತದೆ ಎಂದು ಹೇಳುತ್ತಿರುವ ರಾಜ್ಯ ಸರ್ಕಾರದ ಈಗ ನೆರೆಯ ತೆಲಂಗಾಣಕ್ಕೆ ೧೦ ಟಿಎಂಸಿ ನೀರು ಬಿಟ್ಟಿರುವ ಔಚಿತ್ಯ ಎನಿತ್ತು ಎಂದು ಎಂದಿದ್ದಾರೆ.ಈಗಲೇ ವಿಜಯಪುರ ನಗರಕ್ಕೆ ೪-೮ ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಮುಂದಿನ ೭೫ ದಿನಗಳ ಕಾಲ ಬೇಸಿಗೆ ಕಾಲವಾಗಿರುವದರಿಂದ ಜನರಿಗೆ ಉತ್ತರ ಏನು ಹೇಳುತ್ತಿರಿ. ಮುಂದಿನ ದಿನಗಳಲ್ಲಿ ಏನಾದರೂ ಕುಡಿಯುವ ನೀರಿನ ಸಮಸ್ಯೆಯಾದರೆ ರಾಜ್ಯ ಸರ್ಕಾರವೇ ಹೊಣೆಯಾಗುತ್ತದೆ ಎಂದು ಸಂಸದ ರಮೇಶ ಜಿಗಜಿಣಗಿ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಇಂದು ನಡೆದ ದ್ವೀತಿಯು ಪಿಯುಸಿ ವಾರ್ಷಿಕ ಪರೀಕ್ಷೆ-೧ರ ಜೀವಶಾಸ್ತ್ರ, ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ ಹಾಗೂ ಗಣಕ ವಿಜ್ಞಾನ ಪರೀಕ್ಷೆಗೆ ನೋಂದಾಯಿಸಿಕೊಂಡ ೨೯,೩೭೨ ವಿದ್ಯಾರ್ಥಿಗಳ ಪೈಕಿ ೨೭,೯೭೪ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ, ೧,೩೯೮ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ, ಇಂಡಿ, ಮುದ್ದೇಬಿಹಾಳ, ಸಿಂದಗಿ ಹಾಗೂ ವಿಜಯಪುರ ತಾಲೂಕಿನ ಒಟ್ಟು ೨೯ ಪರೀಕ್ಷಾ ಕೇಂದ್ರಗಳಲ್ಲಿ ಮಾರ್ಚ್ ೨೩ರಂದು ಆದರ್ಶ ವಿದ್ಯಾಲಯಗಳಲ್ಲಿ ೬ನೇ ತರಗತಿಯ ಪ್ರವೇಶ ಪರೀಕ್ಷೆಗಳು ಜರುಗಲಿದೆ. ಪರೀಕ್ಷಾ ಕೇಂದ್ರಗಳ ಸುತ್ತಲಿನ ೨೦೦ ಮೀ. ಪ್ರದೇಶ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾದಂಡಾಧಿಕಾರಿಗಳಾದ ಟಿ.ಭೂಬಾಲನ್ ಆದೇಶ ಹೊರಡಿಸಿದ್ದಾರೆ.ಬೆಳಿಗ್ಗೆ ೯ ರಿಂದ ಪರೀಕ್ಷೆ ಮುಕ್ತಾಯವಾಗುವರೆಗೆ ಝರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಸೆಂಟರ್‌ಗಳು, ಇಂಟರನೆಟ್, ಸೈಬರ್ ಕೆಫೆಗಳು ಹಾಗೂ ಕೋಚಿಂಗ್ ಕೇಂದ್ರಗಳು ತೆರೆಯದಂತೆ ಆದೇಶಿಸಿದ್ದಾರೆ.

Read More

ಪರೀಕ್ಷೆಗೆ ನಿಯೋಜಿತ ಅಧಿಕಾರಿ, ಸಿಬ್ಬಂದಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಾರ್ಚ್ ೨೧ ರಿಂದ ಆರಂಭವಾಗುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ -೧ ಪಾರದರ್ಶಕವಾಗಿ, ಸುಸೂತ್ರವಾಗಿ ಹಾಗೂ ಸಮರ್ಪಕವಾಗಿ ನಡೆಯುವ ನಿಟ್ಟಿನಲ್ಲಿ ಯಾವುದೇ ಲೋಪಕ್ಕೆ ಆಸ್ಪದ ನೀಡದೇ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಪರೀಕ್ಷೆಗೆ ನಿಯೋಜಿತ ಅಧಿಕಾರಿ, ಸಿಬ್ಬಂದಿಗಳಿಗೆ ಸೂಚನೆ ನೀಡಿದರು.ಮಂಗಳವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮದಿರದಲ್ಲಿ ನಡೆದ ೨೦೨೪-೨೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-೧ರ ಪೂರ್ವ ಸಿದ್ಧತೆ, ಅನುಸರಣೆೆ ಹಾಗೂ ಅನುಷ್ಠಾನದ ಕುರಿತು ಪುನಶ್ಚೇತನ-ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪರೀಕ್ಷೆಗೆ ನಿಯೋಜಿತ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಿರ್ವಹಿಸಿಬೇಕಾದ ಕರ್ತವ್ಯ ಹಾಗೂ ಜವಾಬ್ದಾರಿ ಕುರಿತು ಸೂಚನೆಗಳನ್ನು ನೀಡಿದರು. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಗಾಳಿ, ಬೆಳಕು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು.ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನೀಡಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪರೀಕ್ಷೆಯಲ್ಲಿ ವೆಬ್ ಕಾಸ್ಟಿಂಗ್ ಕಡ್ಡಾಯವಾಗಿದ್ದು ಇದಕ್ಕೆ ಪೂರಕವಾಗಿ…

Read More

ಲೇಖನಡಾ.ನಂದಿನಿ ಮುಚ್ಚಂಡಿಬಿ.ಎಲ್.ಡಿ.ಇ ಮೆಡಿಕಲ್ ಕಾಲೇಜ್ವಿಜಯಪುರ ಉದಯರಶ್ಮಿ ದಿನಪತ್ರಿಕೆ ವೃತ್ತಿಜೀವನದ ಮೇಲೆ ಕೇಂದ್ರೀಕೃತವಾಗಿರುವ ಈ ಸ್ಪರ್ಧಾತ್ಮಕ ಯುಗದಲ್ಲಿ, ಬದಲಾದ ಆಹಾರ ಪದ್ಧತಿಗಳು, ಒತ್ತಡದ ಜೀವನಶೈಲಿಯು ಹಾರ್ಮೋನುಗಳ ಅಸಮತೋಲನದಲ್ಲಿ ಬದಲಾವಣೆಗೆ ಕಾರಣವಾಗಿದ್ದು, ಇದು ಬಂಜೆತನದ ಸಂಭವವನ್ನು ಹೆಚ್ಚಿಸಿದೆ ಮತ್ತು ಅಮೂಲ್ಯವಾದ, ಆನಂದದಾಯಕ ಗರ್ಭಧಾರಣೆಯು ಹೊರೆಯಾಗಿದೆ.ಯಾವುದೇ ಮಹಿಳೆಯ ಜೀವನದಲ್ಲಿ ಗರ್ಭಧಾರಣೆಯು ಒಂದು ಪರಿವರ್ತನೆಯ ಪ್ರಯಾಣವಾಗಿದೆ. ಇದು ದೈಹಿಕ ಬದಲಾವಣೆಗಳನ್ನು ಮಾತ್ರವಲ್ಲದೆ ಭಾವನಾತ್ಮಕ ಅಂಶದಲ್ಲಿನ ಬದಲಾವಣೆಗಳನ್ನು ಸಹ ತರುತ್ತದೆ. ಈ ಪ್ರಕ್ರಿಯೆಯನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ, ಅದು ಮಗುವಿನ ಬೆಳವಣಿಗೆ ಮತ್ತು ತಾಯಿಯ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಗರ್ಭ ಸಂಸ್ಕಾರವು ಪ್ರಾಚೀನ ಭಾರತೀಯ ಶ್ರೀಮಂತ ಸಂಪ್ರದಾಯವಾಗಿದ್ದು, ಇದು ಗರ್ಭಿಣಿ ತಾಯಂದಿರ ಮಾನಸಿಕ ಮತ್ತು ಭಾವನಾತ್ಮಕ ಆಹಾರದ ಪರಾಕಾಷ್ಠೆಯಾಗಿದೆ. ಇದು ಗರ್ಭಿಣಿ ತಾಯಿಯ ಗರ್ಭಾವಸ್ಥೆಯಲ್ಲಿ ಸಕಾರಾತ್ಮಕ ಮತ್ತು ಸಂತೋಷದಾಯಕ ಮತ್ತು ಧಾರ್ಮಿಕ ಜೀವನಶೈಲಿಯ ಬಗ್ಗೆ, ಹುಟ್ಟಲಿರುವ ಮಗುವಿನ ದೈಹಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಗರ್ಭ ಸಂಸ್ಕಾರ ಎಂದರೆ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದ ತಾಯಿ ಮತ್ತು ಮಗುವಿನ ಆಸ್ಪತ್ರೆಯಲ್ಲಿ ಸೋಮವಾರ ಪುನೀತ ರಾಜಕುಮಾರವರ (ಅಪ್ಪು) ೫೦ನೇ ಜನ್ಮ ದಿನಾಚರಣೆಯ ಪ್ರಯುಕ್ತ ರಾಣಿ ಚೆನ್ನಮ್ಮ ಗಜಾನನ ಯುವಕ ಸಂಘದ ಬೆಂಕಿ ಬಾಯ್ಸ್ ವತಿಯಿಂದ ಗರ್ಭಿಣಿಯರಿಗೆ ಹಾಗೂ ಬಾನಂತಿಯರಿಗೆ ಹಣ್ಣು ಹಂಪಲು ವಿತರಿಸಲಾಯಿತು. ಬೆಂಕಿ ಬಾಯ್ಸ್ ಯುವಕರು ಹಣ್ಣು ಹಂಪಲು ವಿತರಿಸಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.ಈ ವೇಳೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ವೈದ್ಯಾಧಿಕಾರಿ ಅರುಣಕುಮಾರ ಗಾಣಿಗೇರ, ರಾಣಿ ಚೆನ್ನಮ್ಮ ಗಜಾನನ ಯುವಕ ಸಂಘದ ಬೆಂಕಿ ಬಾಯ್ಸನ ಯುವಕರಾದ ರಾಜು ಮಂಕಣಿ, ಚಂದ್ರು ಇಂಡಿಕರ, ಸಿದ್ದು ಮೇತ್ರಿ, ಸಂದೀಪ ನೀಲವಾಣಿ, ವಿಶಾಲ ಕೊಟ್ಟಗಿ, ಅಕ್ಷಯ ಸಕ್ರಿ, ಲಿಂಗರಾಜ ಕುಳಗೇರಿ, ಸಂಗು ಮನ್ನಿಕೇರಿ, ಉಮೇಶ ಗಣಿ ಹಾಗೂ ಸೂಶ್ರುಕಿ ಎಸ್.ಬಿ. ಕರಾಂಡೆ, ರಾಜೇಶ ಅಪ್ಪಣ್ಣವರ ಸೇರಿದಂತೆ ಇತರರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ತಾಲೂಕಿನ ಮಸೂತಿ ಗ್ರಾಮದಲ್ಲಿ ಮಾ.೨೮ ರಿಂದ ಜರುಗಲಿರುವ ವೀರಭದ್ರೇಶ್ವರ ಮತ್ತು ಗ್ರಾಮದೇವತೆಯ ಜಾತ್ರಾ ಮಹೋತ್ಸವದ ನಿಮಿತ್ತವಾಗಿ ಭಾನುವಾರ ಪ್ರವಚನ ಕಾರ್ಯಕ್ರಮವನ್ನು ಆರಂಭಿಸಲಾಯಿತು.ವಿಜಯಪುರ ಜ್ಯಾನಯೋಗಾಶ್ರಮದ ಸಂಗಮೇಶ್ವರ ಮಹಾಸ್ವಾಮಿಗಳು ಸಂಗಮೇಶ್ವರ ಮಹಾಸ್ವಾಮಿಗಳು ಮಾ.೨೮ ರವರೆಗೆ ಆಧ್ಯಾತ್ಮಿಕ ಪ್ರವಚನ ಹೇಳಲಿದ್ದಾರೆ. ಸ್ಥಳೀಯ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಗದಗ ಜಿಲ್ಲೆ ನೀಲೂರಿನ ಶರಣಕುಮಾರ ಹೂಗಾರ ಸಂಗೀತ ಸೇವೆ, ಧಾರವಾಡದ ಪ್ರಕಾಶ ಹೂಗಾರ ತಬಲಾ ಸೇವೆ ಸಲ್ಲಿಸಲಿದ್ದಾರೆ.ಈ ನಡುವೆ ಮಾ.೨೦ ರಂದು ಕುಂಚನೂರಿನ ಹರಿಪ್ರಿಯ ಗೋಶಾಲೆಯ ಸವಿತಾನಂದ ಮಹಾಸ್ವಾಮಿಗಳು ಸಾವಯವ ಕೃಷಿ ನೇತ್ರಾಮೃತ ಬಿಂದು ಮತ್ತು ಮೊಣಕಾಲು ನೋವಿನ ಬಗ್ಗೆ ಮಾರ್ಗದರ್ಶನ ಮಾಡಲಿದ್ದಾರೆ. ಜತೆಗೆ ಮಾ.೨೬ ರಂದು ತಾಳಿಕೋಟಿ ಖಾಸ್ಗತೇಶ್ವರ ವಿರಕ್ತಮಠದ ಸಿದ್ದಲಿಂಗ ದೇವರು, ಮಾ.೨೭ ರಂದು ಮಮದಾಪೂರ ವಿರಕ್ತಮಠದ ಅಭಿನವ ಮುರುಗೇಂದ್ರ ಮಹಾಸ್ವಾಮಿಗಳು, ಮಾ.೨೮ ರಂದು ಯರನಾಳ ಹಿರೇಮಠದ ಶಿವಪ್ರಸಾದ ದೇವರು ಪ್ರವಚನ ನೀಡಲಿದ್ದಾರೆ ಎಂದು ಜಾತ್ರಾ ಸಮಿತಿ ಸದಸ್ಯ ವಿಶ್ವನಾಥ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಜಾಯವಾಡಗಿಯ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕಿ ಮಲ್ಲಮ್ಮ ಚೌಧರಿ ಅವರಿಗೆ ವೀರರಾಣಿ ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ ಲಭಿಸಿದೆ. ಇತ್ತೀಚೆಗೆ ಗದಗ ದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.

Read More