ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ತಾಲೂಕಿನ ಮಸೂತಿ ಗ್ರಾಮದಲ್ಲಿ ಮಾ.೨೮ ರಿಂದ ಜರುಗಲಿರುವ ವೀರಭದ್ರೇಶ್ವರ ಮತ್ತು ಗ್ರಾಮದೇವತೆಯ ಜಾತ್ರಾ ಮಹೋತ್ಸವದ ನಿಮಿತ್ತವಾಗಿ ಭಾನುವಾರ ಪ್ರವಚನ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ವಿಜಯಪುರ ಜ್ಯಾನಯೋಗಾಶ್ರಮದ ಸಂಗಮೇಶ್ವರ ಮಹಾಸ್ವಾಮಿಗಳು ಸಂಗಮೇಶ್ವರ ಮಹಾಸ್ವಾಮಿಗಳು ಮಾ.೨೮ ರವರೆಗೆ ಆಧ್ಯಾತ್ಮಿಕ ಪ್ರವಚನ ಹೇಳಲಿದ್ದಾರೆ. ಸ್ಥಳೀಯ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಗದಗ ಜಿಲ್ಲೆ ನೀಲೂರಿನ ಶರಣಕುಮಾರ ಹೂಗಾರ ಸಂಗೀತ ಸೇವೆ, ಧಾರವಾಡದ ಪ್ರಕಾಶ ಹೂಗಾರ ತಬಲಾ ಸೇವೆ ಸಲ್ಲಿಸಲಿದ್ದಾರೆ.
ಈ ನಡುವೆ ಮಾ.೨೦ ರಂದು ಕುಂಚನೂರಿನ ಹರಿಪ್ರಿಯ ಗೋಶಾಲೆಯ ಸವಿತಾನಂದ ಮಹಾಸ್ವಾಮಿಗಳು ಸಾವಯವ ಕೃಷಿ ನೇತ್ರಾಮೃತ ಬಿಂದು ಮತ್ತು ಮೊಣಕಾಲು ನೋವಿನ ಬಗ್ಗೆ ಮಾರ್ಗದರ್ಶನ ಮಾಡಲಿದ್ದಾರೆ. ಜತೆಗೆ ಮಾ.೨೬ ರಂದು ತಾಳಿಕೋಟಿ ಖಾಸ್ಗತೇಶ್ವರ ವಿರಕ್ತಮಠದ ಸಿದ್ದಲಿಂಗ ದೇವರು, ಮಾ.೨೭ ರಂದು ಮಮದಾಪೂರ ವಿರಕ್ತಮಠದ ಅಭಿನವ ಮುರುಗೇಂದ್ರ ಮಹಾಸ್ವಾಮಿಗಳು, ಮಾ.೨೮ ರಂದು ಯರನಾಳ ಹಿರೇಮಠದ ಶಿವಪ್ರಸಾದ ದೇವರು ಪ್ರವಚನ ನೀಡಲಿದ್ದಾರೆ ಎಂದು ಜಾತ್ರಾ ಸಮಿತಿ ಸದಸ್ಯ ವಿಶ್ವನಾಥ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.