ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಡಾ.ಪುನೀತ್ ರಾಜಕುಮಾರ ಅವರದ್ದು ಸಿನೇಮಾ ವೃತ್ತಿಯಾದರೆ ನಿರ್ಗತಿಕ ಮಕ್ಕಳ ಶಿಕ್ಷಣ , ರೋಗಿಗಳಿಗೆ ಔಷಧಿ ಉಪಚಾರ , ವೃದ್ಧಾಶ್ರಮ ಸ್ಥಾಪನೆ , ಗೋಶಾಲೆಗಳನ್ನು ತೆಗೆದು ಸಮಾಜಸೇವೆ ಮಾಡುವುದು ಪ್ರವೃತ್ತಿಯಾಗಿತ್ತು. ಅವರು ತಮ್ಮ ನೇತ್ರದಾನ ಮಾಡಿದರೆ ಅವರನ್ನು ಅನುಸರಿಸಿ ಅವರ ಸಾವಿರಾರು ಅನುಯಾಯಿಗಳು ೮೫ ಸಾವಿರಕ್ಕೂ ಹೆಚ್ಚು ನೇತ್ರದಾನ ಮಾಡಿದ್ದು ವೈಧ್ಯಕೀಯ ಇತಿ ಹಾಸದಲ್ಲಿ ದಾಖಲೆಯ ಸಂಗತಿ ಎ೦ದು ಸಾಹಿತಿ ಶಂಕರ ಬೈಚಬಾಳ ಹೇಳಿದರು.
ಅವರು ವಿಜಯಪುರ ಪಟ್ಟಣದ ಶಾಸ್ತಿ ನಗರದಲ್ಲಿ ಮಾ.೧೭ರಂದು ಜೈ ಕರ್ನಾಟಕ ಸಂಘ ಮತ್ತು ನ್ಯೂ ಪ್ರೆಂಡ್ಸ ಮೇಲೋಡಿ ಆರ್ಕೆರ್ಸ್ಟ್ರಾ ಅಡಿಯಲ್ಲಿ ನಡೆದ ಪವರ್ ಸ್ಟಾರ್ ಪುನೀತ ರಾಜಕುಮಾರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಪುನೀತ್ ಅವರ ಸಾಮಾಜಿಕ ಜವಾಬ್ದಾರಿ ವಿಷಯ ಕುರಿತು ಉಪನ್ಯಾಸ ನೀಡಿದರು.
ಸಮಾರಂಭದ ಅಧ್ಯಕ್ಷ ಸಂಗಮೇಶ ದಾಸ್ಯಾಳ ಮಾತನಾಡಿ, ಕನ್ನಡ ಉಳಿಸುವಲ್ಲಿ ಪುನೀತ ರಾಜಕುಮಾರ ನಮ್ಮ ಇಂದಿನ ಯುವಕರಿಗೆ ಮಾಧರಿಯಾಗಿದ್ದರು. ಎ೦ದು ಹೇಳಿದರು.
ಜ್ಯೂನಿಯರ್ ಪುನಿತ್ ದೇವರಾಜ ಅವರು ಪುನೀತರು ಹಾಡಿದ ಹಾಡುಗಳ ರಸಮಂಜರಿ ಕಾರ್ಯಕ್ರಮವನ್ನು ಅವರ ಹುಟ್ಟುಹಬ್ಬದ ನಿಮಿತ್ಯ ಹಾಡಿ ರಂಜಿಸಿದರು
ಸಿದ್ರಾಮ ಮಸಳಿ ಡಿ. ಜೋಶಿಫ ಶಾಲುಂ, ಪ್ರಕಾಶ ಗೀತಾ, ದೇವರಾಜ, ಜೊತಿಬಾ, ದಂದರಗಿ ಅಶೋಕ ಬೆಳ್ಳುಬ್ಬಿ ಮುಂತಾದವರು ಇದ್ದರು. ಕೊನೆಯಲ್ಲಿ ನ್ಯೂ ಪ್ರೆಂಡ್ಸ್ ಮೇಲೋಡಿ ಆರ್ಕೆಸ್ಟ್ರಾದ ಸಂಗೀತಗಾರರಾದ ಶಿವಾನಿ, ರೂಪಾ ಸಂಗೀತಾ ಕನ್ನಡ ಚಿತ್ರಗೀತೆ ಹಾಡುವುದರ ಮುಖಾಂತರ ಡಾ. ಪುನೀತ್ ರಾಜಕುಮಾರ ಅವರ ಹುಟ್ಟಹಬ್ಬಕ್ಕೆ ಮೇರಗು ತಂದರು.

