ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ತಾಯಿ ಮತ್ತು ಮಗುವಿನ ಆಸ್ಪತ್ರೆಯಲ್ಲಿ ಸೋಮವಾರ ಪುನೀತ ರಾಜಕುಮಾರವರ (ಅಪ್ಪು) ೫೦ನೇ ಜನ್ಮ ದಿನಾಚರಣೆಯ ಪ್ರಯುಕ್ತ ರಾಣಿ ಚೆನ್ನಮ್ಮ ಗಜಾನನ ಯುವಕ ಸಂಘದ ಬೆಂಕಿ ಬಾಯ್ಸ್ ವತಿಯಿಂದ ಗರ್ಭಿಣಿಯರಿಗೆ ಹಾಗೂ ಬಾನಂತಿಯರಿಗೆ ಹಣ್ಣು ಹಂಪಲು ವಿತರಿಸಲಾಯಿತು. ಬೆಂಕಿ ಬಾಯ್ಸ್ ಯುವಕರು ಹಣ್ಣು ಹಂಪಲು ವಿತರಿಸಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.
ಈ ವೇಳೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ವೈದ್ಯಾಧಿಕಾರಿ ಅರುಣಕುಮಾರ ಗಾಣಿಗೇರ, ರಾಣಿ ಚೆನ್ನಮ್ಮ ಗಜಾನನ ಯುವಕ ಸಂಘದ ಬೆಂಕಿ ಬಾಯ್ಸನ ಯುವಕರಾದ ರಾಜು ಮಂಕಣಿ, ಚಂದ್ರು ಇಂಡಿಕರ, ಸಿದ್ದು ಮೇತ್ರಿ, ಸಂದೀಪ ನೀಲವಾಣಿ, ವಿಶಾಲ ಕೊಟ್ಟಗಿ, ಅಕ್ಷಯ ಸಕ್ರಿ, ಲಿಂಗರಾಜ ಕುಳಗೇರಿ, ಸಂಗು ಮನ್ನಿಕೇರಿ, ಉಮೇಶ ಗಣಿ ಹಾಗೂ ಸೂಶ್ರುಕಿ ಎಸ್.ಬಿ. ಕರಾಂಡೆ, ರಾಜೇಶ ಅಪ್ಪಣ್ಣವರ ಸೇರಿದಂತೆ ಇತರರು ಇದ್ದರು.