Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಗತ್ತಿನಲ್ಲಿ ಮೇರು ವ್ಯಕ್ತಿತ್ವ ಹೊಂದಿದ ಡಾ.ಅಂಬೇಡ್ಕರ್ ಅವರು ಜನಹಿತಕ್ಕಾಗಿ ಶಾಂತಿದೂತನಾಗಿಬದುಕು ಸಾಗಿಸುತ್ತಾ, ಸರ್ವರಲ್ಲಿ ಸಮಾನತಾ ಭಾವ ಬಿತ್ತಿದ್ದಾರೆ. ಸಂವಿಧಾನ ಪೀಠಿಕೆಯ ಮೂಲಾಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಾಗಠಾಣ ಮತಕ್ಷೇತ್ರದ ಶಾಸಕ ವಿಠಲ ಕಟಕದೊಂಡ ಹೇಳಿದರು.ರವಿವಾರದಂದು ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾಪನೆ ಹಾಗೂ 134 ನೇ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಡಾ.ಅಂಬೇಡ್ಕರ್ ಅವರು ಎತ್ತಿಹಿಡಿದ ವಿಶ್ವ ಕುಟುಂಬದ ತತ್ವವನ್ನು ಅನುಪಾಲಿಸಿಕೊಂಡು, ಇಂದಿನ ಯುವಪೀಳಿಗೆ ಓದಿನಿಂದ ತಮ್ಮ ಬದುಕನ್ನು ಬಂಗಾರವಾಗಿಸಿಕೊಳ್ಳಬೇಕು. ಡಾ.ಅಂಬೇಡ್ಕರ್ ಅವರು ನಮ್ಮ ದೇಶದ ಆಸ್ತಿ ಎಂದು ಹೇಳಿದರು.ಮೂರ್ತಿ ಅನಾವರಣಗೊಳಿಸಿ ಮಾತನಾಡಿದ ನಾಗಠಾಣ ಮತಕ್ಷೇತ್ರದ ಮಾಜಿ ಶಾಸಕ ರಾಜು ಆಲಗೂರ, ಡಾ ಬಿ ಆರ್ ಅಂಬೇಡ್ಕರ್ ಅವರು ಇಡೀ ಮಾನವಕುಲದ ವಿಕಾಸದತ್ತ ಚಿತ್ತಹರಿಸಿ, ಸಂವಿಧಾನ ರಚಿಸಿ ದೇಶದ ಆಡಳಿತಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಇಂದಿನ ಮಕ್ಕಳು ಪುಸ್ತಕ ಓದುವ ಪ್ರವೃತ್ತಿ ರೂಢಿಸಿಕೊಳ್ಳಬೇಕು ಎಂದರು.ನೇತೃತ್ವ ವಹಿಸಿದ್ದ ನಾಗಠಾಣ ಗ್ರಾ ಪಂ…

Read More

ಮಹಾನಗರ ಪಾಲಿಕೆ ನೌಕರರ ಹೋರಾಟ ಬೆಂಬಲಿಸಿ ಧರಣಿ ಸ್ಥಳಕ್ಕೆ ಶಾಸಕ ಯತ್ನಾಳ ಭೇಟಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾನಗರ ಪಾಲಿಕೆ ನೌಕರರು ಸೇರಿದಂತೆ ಸ್ಥಳೀಯ ಸಂಸ್ಥೆಗಳ ನೌಕರರ ನ್ಯಾಯಯುತ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸಲು ತಮ್ಮೊಂದಿಗೆ ಗಟ್ಟಿಯಾಗಿ ನಿಲ್ಲುವುದಾಗಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಯ ನೀಡಿದರು.ವಿಜಯಪುರ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ವಿಜಯಪುರ ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ಕಳೆದ 5 ದಿನಗಳಿಂದ ನಡೆಯುತ್ತಿರುವ ಧರಣೆ ಸ್ಥಳಕ್ಕೆ ಶನಿವಾರ ಭೇಟಿ ನೀಡಿ, ಬೆಂಬಲ ವ್ಯಕ್ತಪಡಿಸಿ ಅವರ ಮಾತನಾಡಿದರು.ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನೌಕರರು ಕೆಲಸ ಸ್ತಗೀತಗೊಳಿಸಿ ನಿರಂತರವಾಗಿ 5 ದಿನಗಳಿಂದ ಹೋರಾಟ ನಡೆಸುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿದ್ದರೂ ಮುಖ್ಯಮಂತ್ರಿಗಳಾಗಿ, ಉಪಮುಖ್ಯಮಂತ್ರಿ ಆಗಲಿ, ಸಂಬಂಧಿಸಿದ ಸಚಿವರಾಗಲಿ ಈ ಬಗ್ಗೆ ಕಿಂಚಿತ್ತೂ ಗಮನಹರಿಸಿಲ್ಲ. ಇದರಿಂದ ರಾಜ್ಯದಲ್ಲಿ ಸರ್ಕಾರ ಜೀವಂತವಾಗಿದೆಯೋ ಇಲ್ವೋ ತಿಳಿಯದಾಗಿದೆ ಎಂದು…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ವಿಗೆ ಕೇವಲ ಶ್ರೀಮಂತಿಕೆಯ ನೆಲೆಗಟ್ಟು ಮುಖ್ಯವಾದುದಲ್ಲ. ಸ್ಪರ್ಧಾ ಮನೋಬಾವ, ಇಚ್ಚಾಶಕ್ತಿ ಮತ್ತು ಸತತ ಪ್ರಯತ್ನಗಳೇ ಮುಖ್ಯ ಎಂದು ಸಹಾಯಕ ಕಮಾಂಡರ ಅನೀಲ ಚವ್ಹಾಣ ಹೇಳಿದರು.ತಾಲ್ಲೂಕಿನ ಭೈರವಾಡಗಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಜರುಗಿದ ೨೦೨೫-೨೬ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.ಬಡತನ ಮತು ಗ್ರಾಮೀಣ ಹಿನ್ನೆಲೆ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಎಂದಿಗೂ ಅಡ್ಡಿಯಾಗದು. ಅಧ್ಯಯನದ ಸೂಕ್ತರೀತಿ, ಬೌದ್ಧಿಕ ಸಾಮಗ್ರಿ ಮತ್ತು ಸರಿಯಾದ ಮಾರ್ಗದರ್ಶನದಿಂದ ಕೇಂದ್ರ ಹಾಗೂ ರಾಜ್ಯಗಳ ಲೋಕಸೇವಾ ಆಯೋಗ, ಉಳಿದ ನೇಮಕಾತಿ ಪ್ರಾಧಿಕಾರಗಳ ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಯಶಸ್ವ್ವಿಯಾಗಬಹುದು. ವಿದ್ಯಾರ್ಥಿಗಳು ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಯ ಕನಸು ಮತ್ತು ಸಿದ್ಧತೆಯನ್ನು ವಿದ್ಯಾರ್ಥಿ ದೆಸೆೆಯಲ್ಲಿಯೇ ಬೆಳೆಸಿಕೊಳ್ಳಬೆಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.ಪ್ರಾಚಾರ್ಯ ಪ್ರಭುಗೌಡ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಶೈಕ್ಷಣಿಕ ಪರೀಕ್ಷೆಗಳ ಜೊತೆಗೆ ಸ್ಪರ್ದಾತ್ಮಕ ಪರೀಕ್ಷೆಗಳ ಬಗ್ಗೆ ಹೆಚ್ಚು…

Read More

ರೂ.೫೦ ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಅಶೋಕ ಮನಗೂಳಿ ಭರವಸೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಈ ಪ್ರದೇಶ ಬಹಳ ದಿನಗಳಿಂದ ಕುಂಠಿತಗೊಳ್ಳುತ್ತಾ ಬಂದಿತ್ತು. ಈ ಕಾಲೋನಿಯನ್ನು ವಿಶೇಷವಾಗಿ ಅಭಿವೃದ್ಧಿ ಪಡಿಸುವ ದಿಸೆಯಲ್ಲಿ ಇಲ್ಲಿನ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿರುವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ಪಟ್ಟಣದ ವಾರ್ಡ ನಂ.೦೭ರಲ್ಲಿ ೨೦೨೪-೨೫ನೆಯ ಸಾಲಿನ ಕಾಲೋನಿ ಅಭಿವೃದ್ಧಿ ಯೋಜನೆ/ಪ್ರಗತಿ ಕಾಲೋನಿ ಯೋಜನೆಯಡಿಯಲ್ಲಿ ಆಶ್ರಯ ಕಾಲೋನಿಯಲ್ಲಿ ರೂ.೫೦ಲಕ್ಷ ವೆಚ್ಚದ ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರೂ.೫೦ಲಕ್ಷ ವೆಚ್ಚದ ಚರಂಡಿ ಕಾಮಗಾರಿ ಪೂರ್ಣಗೊಳಿಸಿದ ಬಳಿಕ ರೂ.೧ ಕೋಟಿ ವೆಚ್ಚದ ಸಿಸಿ ರಸ್ತೆ ಮಾಡಿಸುವ ದಿಸೆಯಲ್ಲಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದೇನೆ. ಒಟ್ಟಿನಲ್ಲಿ ಈ ಪ್ರದೇಶವನ್ನು ಸಾರ್ವಜನಿಕರ ಮತ್ತು ನಿವಾಸಿಗಳ ಉತ್ತಮ ಆರೋಗ್ಯ ಹಾಗೂ ನೈರ್ಮಲ್ಯದ ಅನುಗುಣವಾಗಿ ಸೌಲಭ್ಯಗಳನ್ನು ಒದಗಿಸುತ್ತೇನೆ. ನನ್ನ ಮೂರು ವರ್ಷದ ಕಾಲಾವಧಿಯಲ್ಲಿ ಈ ಪ್ರದೇಶವನ್ನು ಅತ್ಯಂತ ಶ್ರೇಷ್ಠವಾದ ಕಾಲೋನಿಯನ್ನಾಗಿ ಮಾಡುತ್ತೇನೆ ಎಂದು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಜೂ.೧೪ ರಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಅಂದು ಮಧ್ಯಾಹ್ನ ೧೨-೦೫ಕ್ಕೆ ಸೋಲಾಪುರ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಹೊರಟು ಮಧ್ಯಾಹ್ನ ೧೨-೫೦ಕ್ಕೆ ವಿಜಯಪುರ ಜಿಲ್ಲೆಯ ಇಂಡಿಗೆ ಆಗಮಿಸಿ, ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಬೃಹತ್ ವಾಣಿಜ್ಯ ಸಂಕೀರ್ಣ ಉದ್ಘಾಟನೆ ಹಾಗೂ ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆ ೫೦೦ ಕೋಟಿ ಗಡಿಯನ್ನು ದಾಟಿರುವ ಹಿನ್ನಲೆಯಲ್ಲಿ ಕೆ.ಕೆ.ಆರ್.ಟಿ.ಸಿ. ಬಸ್‌ಗೆ ಪೂಜೆ ಸಲ್ಲಿಸಲಿದ್ದಾರೆ.ಮಧ್ಯಾಹ್ನ ೧-೧೫ಕ್ಕೆ ಇಂಡಿ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರುವ ಇಂಡಿ ವಿಧಾನಸಭಾ ಮತಕ್ಷೇತ್ರದ ವಿವಿಧ ಇಲಾಖೆಗಳ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಹಾಗೂ ಲಿಂಬೆ ಅಭಿವೃದ್ದಿ ಮಂಡಳಿಯ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಸಂಜೆ ೪-೩೦ಕ್ಕೆ ಇಂಡಿಯಿಂದ ಹೊರಟು ಸೋಲಾಪುರ ಮಾರ್ಗವಾಗಿ ಬೆಂಗಳೂರಿಗೆ ಮರು ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಡಿಸಿಎಂ ಡಿ.ಕೆ.ಶಿವಕುಮಾರ ಜಿಲ್ಲಾ ಪ್ರವಾಸ ವಿವರವಿಜಯಪುರ: ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ…

Read More

ನಿಕಟಪೂರ್ವ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಆತ್ಮೀಯ ಬೀಳ್ಗೊಡುಗೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಶುಕ್ರವಾರ ನಿಕಟಪೂರ್ವ ಜಿಲ್ಲಾಧಿಕಾರಿಗಳಿಗೆ ಬೀಳ್ಕೊಡುಗೆ ಹಾಗೂ ನೂತನ ಜಿಲ್ಲಾಧಿಕಾರಿಗಳಿಗೆ ಸ್ವಾಗತ ಕಾರ್ಯಕ್ರಮ ಜರುಗಿತು.ಜಿಲ್ಲಾಡಳಿತದಿಂದ ವತಿಯಿಂದ ಬೀಳ್ಕೊಡುಗೆ ಹಾಗೂ ಸ್ವಾಗತ ಸಮಾರಂಭ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡಿರುವ ನಿಕಟಪೂರ್ವ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರನ್ನು ಕುಟುಂಬ ಸದಸ್ಯರೊಂದಿಗೆ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು.ಈ ಸಂದರ್ಭದಲ್ಲಿ ವಿವಿಧ ಅಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಹಲವರು ಮಾತನಾಡಿ, ತಮ್ಮ ಸೇವಾವಧಿಯಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಎಲ್ಲರೊಂದಿಗೆ ಪ್ರೀತಿ-ವಿಶ್ವಾಸದೊಂದಿಗೆ ಬೆರೆತು ಜನರ ಮನಸ್ಸನ್ನು ಗೆದ್ದಂತಹ ಜಿಲ್ಲಾಧಿಕಾರಿಗಳ ಕಾರ್ಯವೈಖರಿ ಇತರರಿರೂ ಮಾದರಿಯಾಗಿದೆ ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.ಈ ಸಂದರ್ಭದಲ್ಲಿ ವಿಜಯಪುರದಿಂದ ವರ್ಗಾವಣೆಗೊಂಡಿರುವ ನಿಕಟಪೂರ್ವ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಾತನಾಡಿ, ನನ್ನ ಎರಡು ವರ್ಷಗಳವರೆಗೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಅನುಭವ ನನ್ನ ಮನಸ್ಸಿನಲ್ಲಿಯೇ ಅಚ್ಚಳಿಯದೇ ಉಳಿಯುವಂತೆ ಮಾಡಿದೆ. ಜಿಲ್ಲೆಯ ನೆನಪುಗಳು ಜೀವನದುದ್ದಕ್ಕೂ ನನ್ನ ಜೊತೆಗಿರಲಿವೆ. ಇಲ್ಲಿನ ಜನರು ವಿಶಾಲ…

Read More

ವಿಮಾನ ಅಪಘಾತದ ಹಲವು ಪ್ರಮುಖ ವಿಷಯಗಳನ್ನು ಬಹಿರಂಗಪಡಿಸಿದ ತನಿಖಾ ಬ್ಯೂರೋ ವರದಿ ನವದೆಹಲಿ: ಜೂನ್ 12ರಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ವರದಿಯು ಹಲವು ಪ್ರಮುಖ ವಿಷಯಗಳನ್ನು ಬಹಿರಂಗಪಡಿಸಿದೆ.ಹಾರಾಟದ ಕೆಲವು ಸೆಕೆಂಡುಗಳ ನಂತರ ವಿಮಾನದ ಎರಡೂ ಎಂಜಿನ್‌ಗಳ ಇಂಧನ ಪೂರೈಕೆಯನ್ನು ಕಡಿತಗೊಳಿಸಲಾಗಿದೆ ಎಂಬ ಅನುಮಾನವನ್ನು ಈ ವರದಿಯು ಹುಟ್ಟುಹಾಕಿದೆ. ಒಬ್ಬ ಪೈಲಟ್ ಇನ್ನೊಬ್ಬನನ್ನು ಇಂಧನ ಸ್ವಿಚ್ ಆಫ್ ಮಾಡಿದ್ದೀರಾ ಎಂದು ಕೇಳಿದರು. ಇನ್ನೊಬ್ಬ ಪೈಲಟ್ ‘ನಾನು ಮಾಡಲಿಲ್ಲ’ ಎಂದು ಉತ್ತರಿಸಿದರು. ಪೈಲಟ್‌ನ ಸಂಭಾಷಣೆಯು ವಿಷಯವನ್ನು ಮತ್ತಷ್ಟು ಜಟಿಲಗೊಳಿಸಿದೆ. ಪೈಲಟ್ ಗಾಳಿಯಲ್ಲಿ ಇಂಧನ ಸ್ವಿಚ್ ಅನ್ನು ಏಕೆ ಆಫ್ ಮಾಡುತ್ತಾನೆ ಎಂಬ ಪ್ರಶ್ನೆ ಉದ್ಭವಿಸುತ್ತದೆ? ಪೈಲಟ್ ಇದನ್ನು ಮಾಡದಿದ್ದರೆ, ಇಂಧನ ಸ್ವಿಚ್ ಹೇಗೆ ಆಫ್ ಆಯಿತು? ಎಂಬ ಪ್ರಶ್ನೆ ಉದ್ಭವಿಸಿದೆ.ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗುವ ಏರ್ ಇಂಡಿಯಾ ವಿಮಾನ ಎI171 ನಲ್ಲಿ 242 ಪ್ರಯಾಣಿಕರಲ್ಲಿ, ಒಬ್ಬರು ಮಾತ್ರ ಬದುಕುಳಿದರು. ಪೈಲಟ್‌ನ ಸಂಭಾಷಣೆಯಿಂದ ಯಾವುದೇ…

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಕಳೆದ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ವಿಜಯಪುರ ಜಿಲ್ಲೆಯೂ ಕುಸಿತ ಕಂಡಿದ್ದು ಈ ವರ್ಷ ಆರಂಭದಿಂದಲೇ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ಅಧಿಕಾರಿ ವರ್ಗ, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಕಾರ್ಯಪ್ರವೃತರಾಗಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಸಹನಿರ್ದೇಶಕಿ ಮತ್ತು ಶಿಕ್ಷಕರ ಸರಕಾರಿ ಶಿಕ್ಷಣ ಮಹಾವಿದ್ಯಾಲಯ ಜಮಖಂಡಿಯ ಪ್ರಾಚಾರ್ಯ ಮಂಗಲಾ ನಾಯಕ ಹೇಳಿದರು.ತಾಲ್ಲೂಕಿನ ಇಟ್ಟಂಗಿಹಾಳದ ವೇದ ಅಕಾಡೆಮಿ ಶಿಕ್ಷಣ ಸಂಸ್ಥೆಯಲ್ಲಿ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಯೋಗದಲ್ಲಿ ಶನಿವಾರ ನಡೆದ ಎಸ್ಎಸ್ಎಲ್ಸಿ ಮಕ್ಕಳ ಫಲಿತಾಂಶ ಸುಧಾರಣೆಗೆ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮುಖ್ಯೋಪಾಧ್ಯಾಯ ಸಭೆಯಲ್ಲಿ ಅವರು ಮಾತನಾಡಿದರು.ನಕಲು ಮುಕ್ತ ಪರೀಕ್ಷೆ ನಡೆಯುವದರೊಂದಿಗೆ ಜಿಲ್ಲೆಯೂಟಾಪ್ ಹತ್ತರಲ್ಲಿ ಫಲಿತಾಂಶ ಬರಬೇಕು. ಕಠಿಣ ವಿಷಯಗಳ ಕುರಿತು ವಿಶೇಷ ತರಗತಿಗಳನ್ನು ಶೈಕ್ಷಣಿಕ ವರ್ಷ ಆರಂಭದಿಂದಲೇ ಆರಂಭಿಸಬೇಕು. ಅಂದಿನ ಪಾಠದ ಕಠಿಣತೆ ಕುರಿತು ಅಂದೇ ವಿಶೇಷ ತರಗತಿ ನಡೆಸುವದರ ಮೂಲಕ ಹೇಳುವದು. ಶಾಲೆಯ ಚುಕ್ಕಾಣಿ ಹಿಡಿದಿರುವ ಮತ್ತು ಅನುಷ್ಠಾನ ಅಧಿಕಾರಿಗಳಾದ ಮುಖ್ಯೋಪಾಧ್ಯಾಯರು ಚಾಚು…

Read More

ರಚನೆ- ಬಾಲಸುಬ್ರಮಣ್ಯ ವಿ ಎಸ್ ರಾವ್ ಉದಯರಶ್ಮಿ ದಿನಪತ್ರಿಕೆ ಶಿಲೆಯಲ್ಲದ ಗೋಡೆಯಲಿ ನಿನ್ನ ರೂಪಶಿಲ್ಪಿಯಿಲ್ಲದೆ ಬರೆದಾಯ್ತು ನಿನ್ನ ಬಿಂಬಪಿಸುಗುಟ್ಟಿತು ಗಾಳಿಯದು ನಿನ್ನ ಹೆಸರಮಂಜಿನ ಹನಿಯಲಿ ಸೇರಿಸಿ ಬಿಸಿ ಉಸಿರ ಕಣಕಣದಲಿ ಬೆರೆತಿದೆ ನನ್ನ ನಿನ್ನ ಪ್ರೀತಿರಿಂಗಣಿಸೆ ದುಂಬಿಗಳು ಮಕರಂದ ಹೀರಿಸುಮ ಸೌರಭ ಹರಡಿದೆ ನಮ್ಮ ಹೆಸರಿಸಿಶುಖ ಪಿಕಗಳು ಹಾಡಿವೆ ನಮ್ಮಿಬ್ಬರ ಹರಸಿ ಪ್ರೇಮದ ಕಾವ್ಯಕೆ ಪಲ್ಲವಿಯು ನೀನಾದೆಹಾಡುವ ರಾಗಕೆ ಇಂಪಾದ ದನಿಯಾದೆಸ್ವರಲೋಕದ ರಂಗದಿ ಶ್ರುತಿಯಾಗಿ ಮೆರೆದೆಕುಂಚದಲಿ ಬಣ್ಣಗಳ ಓಕುಳಿಯ ಮೂಡಿಸಿದೆ

Read More

ಲೇಖನ- ಸಂದೀಪ ಕುಲಕರ್ಣಿ’ನಮ್ಮ ಕಥಾ ಅರಮನೆ’ಬರಹಗಾರರು ಉದಯರಶ್ಮಿ ದಿನಪತ್ರಿಕೆ ದ್ವಂದ್ವ ಮನಸ್ಥಿತಿ – ಮಾನವನ ಒಳಗಿನ ಆಂತರಿಕ ಗೊಂದಲ.ಮನುಷ್ಯನ ಜೀವನ ಎಂದರೆ ನಿರಂತರ ಆಯ್ಕೆಗಳ ಸರಣಿ. ಪ್ರತಿದಿನವೂ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೆಲವೊಂದು ಸಣ್ಣದಾಗಿ ಕಾಣಿಸುತ್ತವೆ. ಆದರೆ ಅವುಗಳ ಪರಿಣಾಮಗಳು ದೀರ್ಘಕಾಲಿಕವಾಗಿರುತ್ತವೆ. ಈ ನಿರ್ಧಾರಗಳ ಮೊದಲು ಮನುಷ್ಯನು ಒಂದು ಸ್ಥಿತಿಗೆ ತಲುಪುತ್ತಾನೆ. ಅಂದರೆ ಎರಡು ಅಥವಾ ಹೆಚ್ಚು ಆಯ್ಕೆಗಳ ನಡುವೆ ಗೊಂದಲದೊಳಗಾಗಿ ತೀವ್ರ ಆಂತರಿಕ ಒತ್ತಡ ಅನುಭವಿಸುವ ಮನಃಸ್ಥಿತಿ. ಇದನ್ನೇ ದ್ವಂದ್ವ ಮನಸ್ಥಿತಿ ಎಂದು ಕರೆಯಲಾಗುತ್ತದೆ. 1. ದ್ವಂದ್ವ ಮನಸ್ಥಿತಿಯ ಅರ್ಥ”ದ್ವಂದ್ವ” ಎಂಬುದು ಎರಡು ಪರಸ್ಪರ ವಿರೋಧಿ ಅಂಶಗಳ ನಡುವಿನ ಸಂಘರ್ಷ. “ಮನಸ್ಥಿತಿ” ಎಂದರೆ ಮನಸ್ಸಿನ ಆಂತರಿಕ ಸ್ಥಿತಿಗತಿ. ಈ ಎರಡು ಪದಗಳನ್ನು ಒಂದಾಗಿ ನೋಡುವಾಗ, “ದ್ವಂದ್ವ ಮನಸ್ಥಿತಿ” ಎಂಬುದು ವ್ಯಕ್ತಿಯ ಒಳಗೆ ನಡೆಯುವ ನಿರ್ಧಾರಾತ್ಮಕ ಗೊಂದಲ, ಭಾವನೆ ಮತ್ತು ಯುಕ್ತಿಯ ನಡುವೆ ನಡೆಯುವ ಸೆಳೆತ ಎಂದು ಅರ್ಥವಿದೆ.2. ಈ ಸ್ಥಿತಿಯ ಲಕ್ಷಣಗಳುa. ಏನನ್ನು ಆಯ್ಕೆ ಮಾಡಬೇಕು ಎಂಬ ಗೊಂದಲb. ಆತ್ಮವಿಶ್ವಾಸದ…

Read More