ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ದಿ.23 ರವಿವಾರ ಮತ್ತು ದಿ.24 ಸೋಮವಾರ ಎರಡು ದಿನಗಳವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ದಿ. 23 ರವಿವಾರದಂದು ಬೆ.10.30ಗಂ. ನಗರದ ಬರಟಗಿ ರಸ್ತೆ, ಸರಸ್ವತಿ ಶಾಲೆ ಹತ್ತಿರ ನಿರ್ಮಿಸುತ್ತಿರುವ ರಾಜವಾಡಿ ಡೆವಲೆಪರ್ಸ್ ವತಿಯಿಂದ ಅಯೋಧ್ಯಾನಗರದ ಭೂಮಿ ಪೂಜೆ ಸಲ್ಲಿಸಲಿದ್ದಾರೆ.
ಬೆ.11 ಗಂ. ತಿಕೋಟಾ ವಾಡೆ ಆವರಣದಲ್ಲಿ ಜರುಗಲಿರುವ ತಿಕೋಟಾ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಸಂ. 6 ಗಂ. ಕಣಮುಚನಾಳ ಗ್ರಾಮದ ಭರಮದೇವರ ಜಾತ್ರಾ ಮಹೋತ್ಸವದಲ್ಲಿ ಭಾವಹಿಸಲಿದ್ದಾರೆ.
ದಿ. 24 ಸೋಮವಾರ ಬೆ.10 ಗಂ. ಮದಗುಣಕಿ ಗ್ರಾಮದಲ್ಲಿ ರೂ.4 ಕೋಟಿ ಸಿ.ಎಸ್.ಆರ್ ಅನುದಾನದಲ್ಲಿ ಶೇಗುಣಶಿ-ಮದಗುಣಕಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮತ್ತು ಮದಗುಣಕಿ ಸರಕಾರಿ ಪ್ರಾಥಮಿಕ ಶಾಲಾ ಕಟ್ಟಡದ 5 ಕೊಠಡಿಗಳನ್ನು ರೂ.60 ಲಕ್ಷ ಸಿ.ಎಸ್.ಆರ್ ಅನುದಾನದಲ್ಲಿ ನವೀಕರಣದ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲಿದ್ದಾರೆ.
ನಂತರ ಬೆ.11 ಗಂ. ಬೆಳ್ಳುಬ್ಬಿ ಗ್ರಾಮದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆ ಅನಾವರಣಗೊಳಿಸಲಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.