ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಿನ ಹುಲ್ಲೂರು ಗ್ರಾಮದ ಎಸ್‌ಎನ್‌ಡಿ ನ್ಯಾಶನಲ್ ಪಬ್ಲಿಕ್ ಶಾಲೆಯ ವತಿಯಿಂದ ಕೊಡಮಾಡುವ ಚನ್ನಬಸವ ಶ್ರೀ ರಾಜ್ಯಮಟ್ಟದ ಪ್ರಶಸ್ತಿಗೆ ತಾಲೂಕಿನ ಸಂಯುಕ್ತ ಕರ್ನಾಟಕ ಹಾಗೂ ಉದಯರಶ್ಮಿ ಪತ್ರಿಕೆಗಳ ವರದಿಗಾರ ಚೇತನ ಶಿವಶಿಂಪಿ ಭಾಜನರಾಗಿದ್ದಾರೆ. ಮಾ೨೨ ರಂದು ಶಾಲೆಯಲ್ಲಿ ನಡೆಯಲಿರುವ ಅಭಿನವ ಕುಮಾರ ಚನ್ನಬಸವ ಮಹಾಸ್ವಾಮಿಗಳಿಗೆ ನುಡಿನಮನ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.