Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಂಗ್ರಹ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಡಾ. ಶಶಿಕಾಂತ ಪಟ್ಟಣ ಅವರ ನೇತೃತ್ವದಲ್ಲಿ ನಮ್ಮ ವೇದಿಕೆ ಯಿಂದ ಮೂರನೆಯ ವರ್ಷದ ಶರಣ ಮಾಸದ ಉಪನ್ಯಾಸಗಳು ಜುಲೈ 24 ರಿಂದ ಆಗಸ್ಟ್ 26 ರವರೆಗೆ ಒಂದು ತಿಂಗಳ ಕಾಲ ಸತತವಾಗಿ ನಡೆಯುತ್ತಿವೆ.ಗುರುವಾರ ಶರಣ ಮಾಸದ ಮೊದಲ ದಿನ ಪರಮಪೂಜ್ಯಶಿವರುದ್ರಸ್ವಾಮಿಗಳು – ಬೇಲಿಮಠ -ಬೆಂಗಳೂರು ಇವರು “ಶರಣರ ದೃಷ್ಟಿಯಲ್ಲಿ ಶಿವಯೋಗ” ಈ ವಿಷಯದ ಕುರಿತು ನಮ್ಮ ಜೊತೆಗೆ ಹಂಚಿಕೊಂಡರು.ಶಿವ ಎಂದರೆ ಅಂತರಂಗದ ಸಾಧನೆ, ಸಂದೇಹವಿಲ್ಲದ ಸ್ಪಷ್ಟವಾದ ಮಾರ್ಗ, ಎಲ್ಲರಿಗೂ ಮಂಗಳವನ್ನು ಮಾಡುವುದು, ತನ್ನೊಳಗಿನ ನೆಲೆಯನ್ನು ಕಂಡುಹಿಡಿದುಕೊಳ್ಳುವುದು, ತನ್ನ ನಿಜ ಸ್ಥಿತಿ ಅರಿಯಬೇಕಾದದ್ದು ಎನ್ನುವುದನ್ನು ಸ್ಪಷ್ಟ ಪಡಿಸಿದರು.ನಂತರದಲ್ಲಿ ಬಸವನಿಜಯೋಗವನ್ನು ತಿಳಿಯಪಡಿಸುತ್ತ, ಹಲವಾರು ಶರಣರ ವಚನಗಳ ಉಲ್ಲೇಖದೊಂದಿಗೆ, ನಡೆ-ನುಡಿ ಸಹಜ ರೀತಿಯಲ್ಲಿ ಹೇಗೆ ಅನುಭಾವಿಕ ನೆಲೆಯಲ್ಲಿ ಇರಬೇಕು, ಆಯತ, ಸ್ವಾಯತ ಸನ್ನಿಹಿತದ ವಿವರಣೆಯೊಂದಿಗೆ ಅಂತರ್ಮುಖಿಯಾಗಿ ಹೇಗೆ ಸಾಧನೆ ಮಾಡಬೇಕು, ನಾನು ನೀನು ಎಂಬ ಭೇದವಳಿದು…
ಲೇಖನ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೆಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಶ್ರೀಮತಿ ಗೌರಮ್ಮ ನಾಶಿ ಅವರು ನಮ್ಮ ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ ಸಂಸ್ಥೆಯ ಆಜೀವ ಸದಸ್ಯರು, ದತ್ತಿ ದಾಸೋಹಿಗಳು ಮತ್ತು ನಮ್ಮೆಲ್ಲರ ಮಾತೃಸ್ವರೂಪಿ ಸ್ಥಾನದಲ್ಲಿರುವವರು. ಒಬ್ಬ ನಿಷ್ಠುರ, ದಿಟ್ಟ, ನೇರನುಡಿಯ, ಸರಳ ವ್ಯಕ್ತಿತ್ವದ, ಅರಿವಿನ ಆಳವನ್ನು ತಿಳಿದಿರುವ, ಆಚರಣೆಯೇ ಮುಖ್ಯ ಎನ್ನುವ ನಿಲುವನ್ನು ತಳೆದಿರುವ ಶರಣೆ ಎನ್ನುವುದರಲ್ಲಿ ಎರಡು ಮಾತಿಲ್ಲ.ಗೌರಮ್ಮ ಅವರ ಹುಟ್ಟಿದ ಊರು ಬಾಗಲಕೋಟ ಜಿಲ್ಲೆಯ ಗುಳೇದಗುಡ್ಡ. ಇವರು ಎಂ.ಎ. ಕನ್ನಡದಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದ್ದಾರೆ. ಗೌರಮ್ಮ ಅವರು ರಾಧಾಕೇಸರಿ ವಿದ್ಯಾಸಂಸ್ಥೆಯ ಅಲೋಕ್ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಮೂರು ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ನಂತರದಲ್ಲಿ ಪ್ರತಿಷ್ಠಿತ ಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಕಚೇರಿ ಅಧೀಕ್ಷಕರಾಗಿ ಸೇವೆಯನ್ನು ಮಾಡಿದ್ದಾರೆ. 1968-69 ರಲ್ಲಿ ಶಿವಾನುಭವ ಪಾಠಶಾಲೆಯನ್ನು ಪೂರೈಸಿದ್ದಾರೆ.ಗೌರಮ್ಮ ಅವರ ತಂದೆ ತಾಯಿ ಹೆಚ್ಚು ಶಿಕ್ಷಿತರಲ್ಲದಿದ್ದರೂ ಸುಸಂಸ್ಕೃತರು. ತಂದೆಯ ಮೂಲಸ್ಥರು ಬಿದರಕೋಟೆ ಗೌಡರು. ನಿಜಾಮರ ಆಳ್ವಿಕೆಯ ಪರಿಣಾಮವಾಗಿ…
ಮಹದಾಯಿ ಯೋಜನೆ ಕುರಿತು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಗರಂ | ಬಿಜೆಪಿ ಸಂಸದರ ವಿರುದ್ಧ ವಾಗ್ದಾಳಿ ಬೆಂಗಳೂರು: ಮಹದಾಯಿಗೆ ಕೇಂದ್ರ ಸರ್ಕಾರ ಅನುಮತಿ ಕೊಡುವುದಿಲ್ಲ ಎಂಬ ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.ಗೋವಾ ಸಿಎಂ ಹೇಳಿಕೆಯನ್ನ ನಾನು ಖಂಡಿಸುತ್ತೇನೆ. ಗೋವಾ ಸಿಎಂ ಮಾನಸಿಕ ಸ್ಥಿಮತ ಕಳೆದುಕೊಂಡಿದ್ದಾರೆ. ಗೋವಾ ಸಿಎಂಗೆ ಫೆಡರಲ್ ವ್ಯವಸ್ಥೆ ಬಗ್ಗೆ ಗೊತ್ತಿಲ್ಲ.ಈಗಾಗಲೇ ಮಹದಾಯಿ ಯೋಜನೆ ಬಗ್ಗೆ ಅವಾರ್ಡ್ ತೀರ್ಮಾ ಆಗಿದೆ. ಟೆಂಡರ್ ಕೂಡ ಕರೆಯಲಾಗಿದೆ. ಕೆಲಸ ಶುರು ಮಾಡಬೇಕು. ಇದರ ಮಧ್ಯೆ ಅರಣ್ಯ ಇಲಾಖೆ ಏನೋ ನೊಟೀಸ್ ಕೊಟ್ಟಿದೆ. ನಾವು ಅದಕ್ಕೆ ಎಲ್ಲಾ ಉತ್ತರ ಕೊಡುತ್ತೇವೆ. ಮಹದಾಯಿ ವಿಷಯದಲ್ಲಿ ನಮ್ಮ ಕೆಲಸ ನಾವು ಪ್ರಾರಂಭ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.ಸಂಸದ ಸ್ಥಾನಕ್ಕಾಗಿ ರಾಜ್ಯವನ್ನು ಮಾರಿಕೊಳ್ಳೋದಕ್ಕೆ ಆಗಲ್ಲ, ಸಂಸದರ ವಿರುದ್ಧ ಡಿಸಿಎಂ ಗರಂಇದೇ ವೇಳೆ ಮಹದಾಯಿ ವಿಷಯವಾಗಿಯೂ ಅಸಮಾಧಾನ ವ್ಯಕ್ತಪಡಿಸಿರುವ ಡಿಕೆ ಶಿವಕುಮಾರ್,…
ಮೂಲ ಸೌಕರ್ಯಗಳಿಲ್ಲದೇ ಗಬ್ಬೆದ್ದು ನಾರುತ್ತಿರುವ ರೋಣಿಹಾಳ | ರೈತ ಸಂಘದಿಂದ ಜಿಲ್ಲಾಧಿಕಾರಿ ಗೆ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೋಲಾರ ತಾಲೂಕಿನ ರೋಣಿಹಾಳ ಗ್ರಾಮದಲ್ಲಿರುವ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯೂ ನೂರು ವಸಂತಗಳನ್ನು ಪೂರೈಸಿ ಅನೇಕ ಸಾಧಕರಿಗೆ ಪ್ರೇರಣೆ ಆಗಿ ಸಾವಿರಾರು ಜನರ ಬದುಕು ಕಟ್ಟಿಕೊಟ್ಟ ಈ ಶಾಲೆ ಇಂದು ಸ್ವಂತ ಸೂರಿಲ್ಲದೇ ಅಂತಂತ್ರ ಸ್ಥಿತಿಯಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡಬೇಕಾಗಿರುವ ಕೆಟ್ಟ ಪರಿಸ್ಥಿತಿ ಈ ಶಾಲೆಗೆ ಬಂದಿದೆ ಇದನ್ನು ಕೂಡಲೇ ಅಭಿವೃದ್ಧಿ ಪಡಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ವತಿಯಿಂದ ಜಿಲ್ಲಾಧಿಕಾರಿಗಳಾದ ಡಾ.ಆನಂದ ಕೆ ಅವರಿಗೆ ಮನವಿ ಸಲ್ಲಿಸಲಾಯಿತು.ರೋಣಿಹಾಳದ ಪ್ರಾಥಮಿಕ ಶಾಲೆಯಲ್ಲಿ ಒಂದುಕಾಲದಲ್ಲಿ ೫೦೦ ಕ್ಕೂ ಅಧಿಕ ಮಕ್ಕಳು ಕಲಿಯುತ್ತಿದ್ದರು, ಸಧ್ಯ ಮೂಲಭೂತ ಸೌಕರ್ಯಗಳಿಲ್ಲದೇ ೧೪೦ ಮಕ್ಕಳು ತಮ್ಮ ಜೀವಭಯದಲ್ಲಿ ಇಲ್ಲಿ ವಿಧ್ಯಭ್ಯಾಸ ಮಾಡುತ್ತಿದ್ದಾರೆ. ಮೇಲ್ಚಾವಣಿ ಸಂಪೂರ್ಣ ಬಿದ್ದು ಮಳೆ ಬಂದರೆ ಸಾಕು ಶಾಲೆಗೆ ರಜೆ ಘೋಷಣೇ ಮಾಡಬೇಕಾದ ಅನಿವಾರ್ಯತೆ ಇದೆ, ಶುಧ್ಧಕುಡಿಯುವ ನೀರು, ಶೌಚಾಲಯ, ಪ್ರಯೋಗಾಲಯ, ಕಂಪ್ಯೂಟರ್…
ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಗ್ರಾಮದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಲ್ಲಾ ವಾರ್ಡಿನಲ್ಲಿ ಮತ್ತು ಪ್ರಮುಖ ಸ್ಥಳಗಳಲ್ಲಿ ಹಾಗೂ ಮನೆ ಮನೆಗಳಿಗೆ ಕಲಕೇರಿ ಪಿಎಸ್‌ಐ ಹಾಗೂ ಪೋಲಿಸ್ ಸಿಬ್ಬಂದಿ ಸಮೇತ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಲಾಯಿತು.ಸರ್ಕಾರದ ನಿರ್ದೇಶನದಂತೆ ಸಾರ್ವಜನಿಕರ ಸುರಕ್ಷತೆಗಾಗಿ ವಿನೂತನ ಉಪಕ್ರಮ ಮನೆ ಮನೆಗೆ ಪೊಲೀಸ್ ಎಂಬ ಕಾರ್ಯಕ್ರಮದಡಿ ವಿಜಯಪುರ ಜಿಲ್ಲಾ ಪೊಲೀಸ್ ಇಂಡಿ ಉಪ-ವಿಭಾಗ ಕಲಕೇರಿಯ ಪೋಲಿಸ್ ಠಾಣೆಯ ಆರಕ್ಷಕ ಉಪನಿರೀಕ್ಷರಾದ ಸುರೇಶ್ ಮಂಟೂರ ಹಾಗೂ ಕ್ರೈಂ ಪಿ.ಎಸ್.ಐ ಎಸ್ ಎಸ್ ತಳವಾರ ಮತ್ತು ಮಹಿಳಾ ಪೆದೆ ರೇವತಿ ಪಾಟೀಲ ಹಾಗೂ ಠಾಣೆಯ ಪೋಲಿಸ್ ಸಿಬ್ಬಂದಿಯವರು ಮನೆ ಮನೆಗೆ ತೆರಳಿ ಗ್ರಾಮಸ್ಥರ ಸಮಸ್ಯೆಗಳನ್ನು ಕೇಳುವ ಮೂಲಕ ಮನೆ ಮನೆಗೆ ಪೋಲಿಸ್ ಎಂಬ ಸಾರ್ವಜನಿಕರ ಸುರಕ್ಷತೆಗೆ ವಿನೂತನ ಕಾರ್ಯಕ್ರಮ ಹಮ್ಮಿಕೊಂಡರು.ಈ ವೇಳೆ ಗ್ರಾಮದಲ್ಲಿ ಆಗಮಿಸಿದ ಪೋಲಿಸ್ ಸಿಬ್ಬಂದಿಗಳನ್ನು ಸಾರ್ವಜನಿಕರು ಸ್ವಾಗತಿಸಿ ತಮ್ಮ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು ಮತ್ತು ಶಾಲಾ ವಿದ್ಯಾರ್ಥಿಗಳು ಮತ್ತು ಯುವಕರು ಕಾರ್ಯಕ್ರಮದಲ್ಲಿ ಭಾಗಿಯಾದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಈಗಾಗಲೇ ಪಹಣಿ ಪತ್ರಿಕೆಗಳಿಗೆ ಆಧಾರ ಜೋಡಣೆ ಕಾರ್ಯ ಪ್ರಗತಿಯಲ್ಲಿದ್ದು, ಈ ಅವಧಿಯಲ್ಲಿ ಪೌತಿ ಎಂದು ಗುರುತಿಸಲಾದ ಜಮೀನುಗಳ ಪಹಣಿಗಳನ್ನು ಇ-ಪೌತಿ ತಂತ್ರಾಂಶದ ಮೂಲಕ ವಾರಸುದಾರರಿಗೆ ಖಾತೆ ಬದಲಾವಣೆ ಮಾಡಲು ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಗಳಲ್ಲಿ ಜುಲೈ ೨೮ರಿಂದ ಆಗಸ್ಟ್ ೬ ರವರೆಗೆ ವಿಶೇಷ ಇ-ಪೌತಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆನಂದ ಕೆ.ಅವರು ತಿಳಿಸಿದ್ದಾರೆ.ವಿಶೇಷ ಇ-ಪೌತಿ ಆಂದೋಲನದ ಸಂದರ್ಭದಲ್ಲಿ ಪೌತಿ ಅಂತಾ ಗುರುತಿಸಲಾದ ಪಹಣಿ ಪತ್ರಿಕೆಗಳ ಇ-ಪೌತಿ ಕಾರ್ಯಕ್ಕೆ ಅವಶ್ಯಕ ದಾಖಲೆಗಳೊಂದಿಗೆ ಸಾರ್ವಜನಿಕರು ಸಂಬಂಧಿಸಿದ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಉಚಿತವಾಗಿ ಖಾತೆ ಬದಲಾವಣೆ ಮಾಡಿಸಿಕೊಳ್ಳಬಹುದಾಗಿದ್ದು, ಇ-ಪೌತಿ ಆಂದೋಲನದ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕರೆ ನೀಡಿದ್ದಾರೆ.ಸಹಾಯವಾಣಿ : ಇ-ಪೌತಿ ಆಂದೋಲನಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳ ಮಾಹಿತಿಗಾಗಿ ಸಹಾಯವಾಣಿಗಳನ್ನು ಸ್ಥಾಪಿಸಲಾಗಿದ್ದು, ಜಿಲ್ಲಾಧಿಕಾರಿಗಳ ಕಾರ್ಯಾಲಯ ವಿಜಯಪುರ ದೂ: ೦೮೩೫೨-೨೨೧೨೬೧, ೨೨೨೧೦೨, ೨೨೨೧೦೧ ಟೋಲ್ ಫ್ರೀ ಸಂಖ್ಯೆ ೧೦೭೭, ಉಪವಿಭಾಗಾಧಿಕಾರಿಗಳು ವಿಜಯಪುರ…
ಆಲಮೇಲ-ರುಕುಂಪೂರ ರಸ್ತೆ ತೆರವು & ವಿವಿಧ ಸಮುದಾಯಗಳ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಯುತ್ತಿರುವ ಧರಣಿ ಉದಯರಶ್ಮಿ ದಿನಪತ್ರಿಕೆ ಆಲಮೇಲ: ಧರಣಿ ಸತ್ಯಾಗ್ರಹ ೨ನೇ ದಿನಕ್ಕೆಆಲಮೇಲ ರುಕುಂಪೂರ ರಸ್ತೆ ತೆರವು ಹಾಗೂ ವಿವಿಧ ಸಮುದಾಯಗಳ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬುಧವಾರದಿಂದ ಆರಂಭಗೊಂಡ ಅನಿರ್ದಿಷ್ಟಾವಧಿ ಸತ್ಯಾಗ್ರಹ ಗುರುವಾರ ೨ನೇ ದಿನಕ್ಕೆ ಕಾಲಿಟ್ಟಿತು.ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ಸತ್ಯಾಗ್ರಹ ಟೆಂಟ್ ನಲ್ಲಿ ಹೋರಾಟಗಾರರು ಧರಣಿ ಕುಳಿತರು.ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯತಿ ಸದಸ್ಯ ಸಂಜೀವಕುಮಾರ ಯಂಟಮಾನ ಮಾತನಾಡಿ, ‘ಆಲಮೇಲ ಪಟ್ಟಣದ ಪ್ರಮುಖ ರಸ್ತೆ ಇದಾಗಿದ್ದು, ಪಟ್ಟಣದಿಂದ ಪಕ್ಕದ ಹಳ್ಳಿಗಳಾದ ಗುಂದಗಿ, ಅಲಹಳ್ಳಿ, ಕಡಣಿ, ಮೊದಲಾದ ರಸ್ತೆಯು ವಿಶಾಲ ಅಳತೆಯನ್ನು ಹೊಂದಿವೆ, ಈ ರಸ್ತೆ ಮಾತ್ರ ಆರಂಭದಲ್ಲಿ ಕಡಮಿಯಾಗಿ ಮುಂದೆ ಅಗಲವಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು ಈ ರಸ್ತೆಯನ್ನು ಅಕ್ರಮಣ ಮಾಡುವಲ್ಲಿ ಕೆಲವರು ಯಶಸ್ವಿಯಾಗಿರಬಹುದು, ಆದರೆ ಈ ರಸ್ತೆ ಸಮಪರ್ಕವಾಗಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಆಡಳಿತವರ್ಗ ನೋಡಿಕೊಳ್ಳಬೇಕು ಎಂದರು.ತಳವಾರ ಸಮುದಾಯದ ಮುಖಂಡ ಪ್ರಭು ವಾಲಿಕಾರ ಮಾತನಾಡಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಆಲಮೇಲ ವಲಯದ ಗುರುಸ್ಪಂದನಾ ಕಾರ್ಯಕ್ರಮವನ್ನು ಜು 26 ಶನಿವಾರರಂದು ಆಲಮೇಲ ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ( ಬಿಇಒ) ಎಂ ಬಿ ಯಡ್ರಾಮಿ ಚಾಲನೆ ನೀಡುವರು ವಲಯದ ಶಿಕ್ಷಕರ ಸೇವೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ನಿಟ್ಟಿನಲ್ಲಿ ಗುರುಸ್ಪಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದುಕ.ರಾ.ಪ್ರಾ.ಶಾ.ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಆನಂದ ಭೂಸನೂರ ಹೇಳಿದರು.ಆಲಮೇಲ ಪಟ್ಟಣದ ಸರಕಾರಿ ಮಾದರಿ ಎಂ ಪಿ ಎಸ್ ಶಾಲೆಯಲ್ಲಿಶಿಕ್ಷಕರ ಗುರು ಸ್ಪಂದನಾ ಕಾರ್ಯಕ್ರಮದ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿ ವಲಯದ ಶಿಕ್ಷಕರುಪ್ರಯೋಜನ ಪಡೆದುಕೊಳ್ಳಿ’ ಎಂದು ಹೇಳಿದರು.ದೇವರಹಿಪ್ಪರಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎ ಎಚ್ ವಾಲಿಕಾರ ಮಾತನಾಡಿ, ಶಿಕ್ಷಕರ 10, 15, 20, 25 ವರ್ಷದ ಟೈಮ್ ಬಾಂಡಗಳನ್ನು ಹಾಕುವದು ಮತ್ತು ಸ್ಥಳದಲ್ಲಿಯೇ ಆದೇಶಗಳನ್ನು ವಿತರಿಸುವದು ಮತ್ತು ಶಿಕ್ಷಕರ ಗಳಿಕೆ ರಜೆಗಳನ್ನು ಸೇವಾ ಪುಸ್ತಕದಲ್ಲಿ ನಮೂದಿಸುವದು. ಶಿಕ್ಷಕರ ಶೈಕ್ಷಣಿಕ ಅರ್ಹತೆಯನ್ನು ಸೇವಾ ಪುಸ್ತಕದಲ್ಲಿ ನಮೂದಿಸಲಾಗುವದು. ಒಟ್ಟಾರೆಯಾಗಿ ಈ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬೆಂಗಳೂರಿನ ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಲ್ಲಿ ವಾಹನ ಚಾಲಕ ಹುದ್ದೆಗಳ ನೇಮಕಾತಿಗಾಗಿ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ದಿನಾಂಕ : ೦೬-೦೮-೨೦೨೫ ಕೊನೆಯ ದಿನವಾಗಿದ್ದು, ಆಸಕ್ತ ಮಾಜಿ ಸೈನಿಕರು ವೆಬ್‌ಸೈಟ್ ಅಥವಾ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ವಿಜಯಪುರ ದೂ:೦೮೩೫೨-೨೫೦೯೧೩ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಬೆಳಗಾವಿ ಮುಖ್ಯ ಆವರಣದ ಸ್ನಾತಕೋತ್ತರ ಅಧ್ಯಯನ ವಿಭಾಗಗಳು, ಸ್ನಾತಕೋತ್ತರ ಕೇಂದ್ರ ವಿಜಯಪುರ ಮತ್ತು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ ಬೆಳಗಾವಿ ಹಾಗೂ ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿನ ಸಂಯೋಜಿತ ಮಹಾವಿದ್ಯಾಲಯಗಳಲ್ಲಿ ೨೦೨೫-೨೬ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಕೋರ್ಸಗಳ ವ್ಯಾಸಂಗಕ್ಕಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ದಿನಾಂಕ : ೦೨-೦೮-೨೦೨೫ರವರೆಗೆ ವಿಸ್ತರಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
