ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರಧಾನಮಂತ್ರಿಗಳ ಇಂಟರ್ನಶಿಪ್ ಸ್ಕೀಮ್ ಅತ್ಯುತ್ತಮ ಕಂಪನಿಗಳ ಯೋಜನೆಯಡಿ ಉನ್ನತ ಮಟ್ಟದ ೫೦೦ ಕಂಪನಿಗಳಲ್ಲಿ ಒಂದು ಕೋಟಿ ಯುವಕರಿಗೆ ಇಂಟರ್ನಶಿಪ್ ಮೂಲಕ ಕೌಶಲ್ಯವನ್ನು ವೃದ್ದಿಸಿಕೊಳ್ಳುವ ತರಬೇತಿ ನೊಂದಣಿಗೆ ಅರ್ಹತೆ ಆಧಾರದ ಮೇಲೆ ಪೋರ್ಟಲ್‌ನಲ್ಲಿ ಅವಶ್ಯ ದಾಖಲೆಗಳೊಂದಿಗೆ ನೊಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಎಸ್.ಎಸ್.ಎಲ್.ಸಿ., ಐಟಿಐ, ಪಿಯುಸಿ, ಡಿಪ್ಲೋಮಾ, ಬಿಎ, ಬಿಎಸ್ಸಿ, ಬಿಕಾಂ, ಬಿಸಿಎ, ಬಿಬಿಎ, ಬಿಫಾರ್ಮ ಇತ್ಯಾದಿ ವಿದ್ಯಾರ್ಹತೆ ಹೊಂದಿರುವ ಆಸಕ್ತ ಅರ್ಹರು ದಿನಾಂಕ : ೩೧-೦೩-೨೦೨೫ರೊಳಗಾಗಿhttps://pminternship.mca.gov.in/login/ ಪೋರ್ಟಲ್‌ನಲ್ಲಿ ನೊಂದಾಯಿಸಿಕೊಳ್ಳಬಹುದಾಗಿದ್ದು, ಇಂಟರ್ನಶಿಪ್‌ಗೆ ಆಯ್ಕೆಯಾದ ಅಭ್ಯರ್ಥಿಗಳು ಕಂಪನಿ ಆಯೋಜಿಸಿದ ಸ್ಥಳಗಳಲ್ಲಿ ಹೋಗಿ ತರಬೇತಿ ಪಡೆಯಬೇಕು. ತರಬೇತಿ ಅವಧಿಯಲ್ಲಿ ಮಾಸಿಕ ೫ ಸಾವಿರ ರೂ. ಹಾಗೂ ತರಬೇತಿ ನಂತರ ಅರ್ಹತೆ ಆಧಾರದ ಮೇಲೆ ೬ ಸಾವಿರ ರೂ. ಅಭ್ಯರ್ಥಿಯ ಬ್ಯಾಂಕ್ ಖಾತೆಗೆ ಹಾಗೂ ಪ್ರಮಾಣ ಪತ್ರ ನೀಡಲಾಗುವುದು.
ಜಿಲ್ಲೆಯ ಆಸಕ್ತ ನಿರುದ್ಯೋಗ ಯುವಕ-ಯುವತಿಯರು ಇಂಟರ್ನಶಿಪ್ ಯೋಜನೆಯಡಿ ನೊಂದಾಯಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
