ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಗ್ರಾಮದ ರಾಣಿ ಚೆನ್ನಮ್ಮ ವಿಶ್ವವಿಧ್ಯಾಲಯದ ಆದೀನದಲ್ಲಿ ನಡಯುತ್ತಿರುವ ಆದರ್ಶ ಪ್ರಥಮ ದರ್ಜೆ ಪದವಿ ಕಾಲೇಜಿನ ಪ್ರಾಚಾರ್ಯ ಶಿವಾನಂದ ಸಜ್ಜನ ಅವರನ್ನು ರಾ.ಚ.ವಿ ದ ವಿಧ್ಯಾವಿಷಯಕ್ ಪರಿಷತ್ತಿನ ಪ್ರಾಧಿಕಾರಕ್ಕೆ ಸದಸ್ಯರನ್ನಾಗಿ ಕುಲಸಚಿವರು ನೇಮಕಮಾಡಿದ್ದಾರೆ. ಇವರ ಆಯ್ಕೆ ಅವಧಿ ೨೦-೦೩-೨೦೨೫ ರಿಂದ ೧೯-೦೩-೨೦೨೭ ರ ವರೆಗೆ ೨ ವರ್ಷದ ಅವಧಿಗೆ ಇವರನ್ನು ನೇಮಕ ಮಾಡಲಾಗಿದೆ ಎಂದು ಆದೇಶ ಪ್ರತಿಯಲ್ಲಿ ತಿಳಿಸಿದೆ.

