ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ನೀರಿನ ಸುಸ್ಥಿರ ನಿರ್ವಹಣೆಯ ಬಗ್ಗೆ, ಜಾಗತಿಕ ನೀರಿನ ಬಿಕ್ಕಟ್ಟಿನ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜೀವಜಲ ಸಂರಕ್ಷಿಸಲು ವಿದ್ಯಾರ್ಥಿಗಳು ಮುಂದಾಗಬೇಕಿದೆ ಎಂದು ಪ್ರಾಂಶುಪಾಲ ಡಾ ನಾಗಪ್ಪ ಚಾವಲ್ಕರ್ ಹೇಳಿದರು.
ಪಟ್ಟಣದ ಶ್ರೀಮತಿ ಗಂಗೂಬಾಯಿ ಶಾಂತಗೌಡ ಪೋಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೆಂಭಾವಿ, ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವಜಲ ದಿನದಂದು ವಿಶ್ವದ ಬೃಹತ್ ಪ್ರತಿಜ್ಞಾವಿಧಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಜಗದ ಜೀವಿಗಳು ಜೀವಿಸಲು ಜೀವಜಲ ಜೀವನಾಧಾರವಾಗಿದೆ, ಜೀವಜಲವನ್ನು ಹಿತಮಿತವಾಗಿ ಬಳಕೆ ಮಾಡೋಣಾ ಎಂದವರು, ನೀರನ್ನು ಮಹತ್ವ, ನೀರಿನ ಮೌಲ್ಯೀಕರಣ, ನೀರಿನ ಬಗ್ಗೆ ಜಾಗೃತಿ ಮೂಡಿಸುವ ಈ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ, ನೀರಿನ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಸರ್ಕಾರದ ಅಭಿಯಾನ ಕಾರ್ಯಕ್ರಮಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ ಸಿದ್ದಲಿಂಗ ರಾಠೋಡ್ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಡಾ ಯಂಕನಗೌಡ ಎಸ್ ಪಾಟೀಲ, ಉಪನ್ಯಾಸಕರಾದ ಡಾ ಶರಣಪ್ಪ ಸಾಹುಕಾರ, ಡಾ ಸುರೇಶ ಪಾಟೀಲ ಶಶಿಕುಮಾರ ಎತ್ತಿನಮನಿ, ಸುಮಾ ಎಚ್ಚ್, ಜ್ಯೋತಿ ಎಸ್, ಮಂಜುನಾಥ ಚೆಟ್ಟಿ, ಬಸವರಾಜ ಹೋಳಿಕಟ್ಟಿ, ಬಸವರಾಜ ಪಾಟೀಲ, ಸಂದೀಪ್ ಸಂಶಿಕರ್, ಪವನಕುಮಾರ ಕುಲ್ಕರ್ಣಿ, ಆನಂದ ರೇವಡಿ, ಬೋಧಕೇತರ ಸಿಬ್ಬಂದಿ ಸಂಗಮೇಶ ಪಟ್ಟಣಕರ್, ಮಾಸುಮ ಅಲಿ ನಾಶಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
