ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಿದ್ದನ್ನು ಧಿಕ್ಕರಿಸಿ ಬಿಜೆಪಿ ವಿಜಯಪುರ ಜಿಲ್ಲಾ ಕಾರ್ಯದರ್ಶಿ ಸಿದ್ದು ಹೆಬ್ಬಾಳ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜೀನಾಮೆ ಪತ್ರವನ್ನು ಪತ್ರಿಕೆಗೆ ನೀಡಿ ಮಾತನಾಡಿದ ಅವರು ಯತ್ನಾಳರು ರಾಜ್ಯ ಬಿಜೆಪಿಯಲ್ಲಿ ಗಟ್ಟಿ ಧ್ವನಿಯಾಗಿದ್ದರು. ನೇರನುಡಿಯ ಮೂಲಕ ರಾಜ್ಯದ ಜನತೆಯ ಮನಗೆದ್ದಿದ್ದರು. ಕಳಂಕ ರಹಿತವಾಗಿದ್ದ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದು ನನಗೆ ನೋವು ತಂದಿದೆ. ಕಾರಣ ಅವರನ್ನು ಬೆಂಬಲಿಸಿ ನಾನು ನನ್ನ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ ಎಂದರು.
