ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ಶೈಕ್ಷಣಿಕ ವರ್ಷ ಜನವರಿ-೨೦೨೫ರಲ್ಲಿ ಜರುಗಿದ ಬಿ.ಎ,ಬಿ.ಕಾಂ ಹಾಗೂ ಬಿಬಿಎ ಪದವಿ ಕೋರ್ಸಿನ ಪ್ರಥಮ,ತೃತೀಯ, ಹಾಗೂ ಐದನೇ ಸೆಮಿಸ್ಟರ್ ನ ರೆಗ್ಯೂಲರ್ ಹಾಗೂ ಪುನರಾವರ್ತಿತ ಪರೀಕ್ಷೆಗಳ ಫಲಿತಾಂಶವನ್ನು ದಿನಾಂಕ : ೨೫-೦೩-೨೦೨೫ ರಂದು ಪ್ರಕಟಿಸಲಾಗಿದೆ.
ಫಲಿತಾಂಶವನ್ನುuucms.karnataka.gov.in ವೆಬ್ ಸೈಟ್ ನಲ್ಲಿ ನೋಡಬಹುದು ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಹೆಚ್. ಎಂ. ಚಂದ್ರಶೇಖರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
