Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಎಕ್ಸ್ಪರ್ಟ ಟ್ಯಾಲೆಂಟ್ ಅವಾರ್ಡ ಪರೀಕ್ಷೆಯನ್ನು ನಡೆಸುತ್ತಿದ್ದೇವೆ. ಪರೀಕ್ಷೆಯಲ್ಲಿ ಭಾಗವಹಿಸಿ ೧ ರಿಂದ ೫ ನೇ ರ‍್ಯಾಂಕ ಪಡೆಯುವ ವಿದ್ಯಾರ್ಥಿಗಳಿಗೆ ಆಕರ್ಷಕ ನಗದು ಬಹುಮಾನ ಮತ್ತು ಪ್ರತಿಭಾನ್ವಿತ ೨೦ ವಿದ್ಯಾರ್ಥಿಗಳಿಗೆ ೨ ವರ್ಷಗಳ ಕಾಲ ಉಚಿತ ಶಿಕ್ಷಣ ನೀಡಿ ಪ್ರೋತ್ಸಾಹಿಸುತ್ತಿದ್ದೇವೆ ಎಂದು ತಾಲೂಕಿನ ನಾಗರಬೆಟ್ಟ ಗ್ರಾಮದ ಹೆಸರಾಂತ ಎಕ್ಸ್ಫರ್ಟ ಪಿಯು ಸೈನ್ಸ್ ಕಾಲೇಜಿನ ಅಧ್ಯಕ್ಷ ಬಿ.ಜಿ.ಮಠ ಹೇಳಿದರು.ಈ ಕುರಿತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಎಸ್‌ಎಸ್‌ಎಲ್‌ಸಿ, ಸಿಬಿಎಸ್‌ಇ, ಐಸಿಎಸ್‌ಇ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆಯಬಹುದು. ಎ.೬ ರಂದು ಈ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯಲ್ಲಿ ರ‍್ಯಾಂಕ್ ಬಂದವರಿಗೆ ಪ್ರಥಮ ಬಹುಮಾನವಾಗಿ ೨ಲಕ್ಷ ೨೫ ಸಾವಿರ ರೂಗಳ ಶಿಷ್ಯ ವೇತನ ಜೊತೆಗೆ ೨೫ಸಾವಿರ ರೂಪಾಯಿ ನಗದು, ದ್ವಿತೀಯ ಬಹುಮಾನವಾಗಿ ೨ಲಕ್ಷ ೨೫ ಸಾವಿರ ರೂಗಳ ಶಿಷ್ಯ ವೇತನ ಜೊತೆಗೆ ೨೦ಸಾವಿರ ರೂಪಾಯಿ ನಗದು, ತೃತೀಯ ಬಹುಮಾನವಾಗಿ ೨ಲಕ್ಷ…

Read More

ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ನಮ್ಮಲ್ಲಿ ಬಹುತೇಕ ಜನರು ಗುರಿ ಮುಟ್ಟದೇ ವಿಫಲರಾಗಲು ಕಾರಣ ಸಂವಹನ ಕಲೆ ಗೊತ್ತಿಲ್ಲದೇ ಇರುವುದು. ಅದರಲ್ಲೂ ಅಪರಿಚಿತರೊಂದಿಗೆ ಮಾತನಾಡಲು ಭಯಗೊಳ್ಳುವುದು ಸಾಮಾನ್ಯ. ಮಾತಿನ ಕಲೆ ತಲೆ ಎತ್ತಿ ನಡೆಯುವುದನ್ನು ದೈರ್ಯವನ್ನು ತುಂಬುತ್ತದೆ. ಕರಗತ ಮಾಡಿಕೊಂಡರೆ ಅಪರಿಚಿತರೊಂದಿಗೆ ಮಾತು ಹೇಗೆ ಆರಂಭಿಸಬೇಕೆಂಬುದು ಸಲೀಸಾಗಿ ಬಿಡುತ್ತದೆ. ನಾಲ್ಕಾರು ಜನರ ಗುಂಪಿನಲ್ಲಿರುವಾಗ ಏನು ಮಾತನಾಡುವುದೆಂದು ತಿಳಿಯದೆ ಆ ಕಡೆ ಈ ಕಡೆ ನೋಡುತ್ತ ನಿಂತು ಬಿಡುತ್ತೇವೆ. ಅವರಲ್ಲಿ ನಾವೂ ಒಬ್ಬರೆಂಬ ಭಾವನೆ ಬರದೇ ಅವರ ಇರುವಿಕೆಯನ್ನು ಸಂತಸದಿಂದ ಕಳೆಯದೆ ಪೇಚಾಡುತ್ತೇವೆ. ಉಸಿರುಗಟ್ಟಿದ ವಾತಾವರಣದಲ್ಲಿ ನಿಂತಂತೆನಿಸಿ ಅಲ್ಲಿಂದ ಹೊರ ನಡೆದರೆ ಸಾಕೆಂದು ಅನಿಸುವುದೂ ಉಂಟು. ಅಂಥ ಸಮಯದಲ್ಲಿ ನೀವೂ ಅವರಲ್ಲೊಬ್ಬರು ಅಂತೆನಿಸಲು ಹೇಗೆ ಮಾತನಾಡಬೇಕೆಂದು ಯೋಚಿಸುತ್ತೀರಿ. ಆದರೆ ಮಾತನಾಡಿ ಏನಾದರೂ ತಪ್ಪಾದರೆಂದು ಬಾಯಿ ಮುಚ್ಚಿಕೊಂಡಿರುತ್ತೀರಿ. ನಡೆಯುತ್ತಿರುವ ಸಂಭಾಷಣೆಯಲ್ಲಿ ನೀವೂ ಭಾಗ ತೆಗೆದುಕೊಳ್ಳಬೇಕೆಂದರೆ ಏನು ಮಾಡಬೇಕೆಂಬುದಕ್ಕೆ ಇಲ್ಲಿವೆ ಕೆಲವು ಸಲಹೆಗಳು.ಸಾಮಾನ್ಯವಾದುದನ್ನು ಹುಡುಕಿ ನಡೆಯುತ್ತಿರುವ ಸಂಭಾಷಣೆಯನ್ನು ಗಮನವಿಟ್ಟು ಕೇಳಬೇಕು. ಚಟುವಟಿಕೆಗಳನ್ನು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ “ಗುಮ್ಮಟನಗರಿ” ಪ್ರಾದೇಶಿಕ ದಿನಪತ್ರಿಕೆ ಸಂಪಾದಕ ಇರ್ಫಾನ್ ಶೇಖ ಇವರ ತಂದೆ ಮುನಿರಅಹಮ್ಮದ್ ಮನ್ಸೂರ್ ಅಲಿ ಶೇಖ (71) ನಿಧನರಾಗಿದ್ದಾರೆ. ಮೃತರು ಧರ್ಮ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂದು ಬಳಗ ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆ ಬುಧವಾರ ಸಂಜೆ ನಡೆಯಿತು.

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಮಹಾನ ಶ್ರೇಷ್ಠ ತಪಸ್ವಿಗಳಾದ ಕಡಕೋಳ ಮಡಿವಾಳೇಶ್ವರರು ರಚಿಸಿದ ತತ್ವಪದ “ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು” ಎಂಬ ಗೀತೆಯಲ್ಲಿ ಅಂದಿನ ಇಂದಿನ ಮುಂದಿನ ಕಾಲಕ್ಕೂ ನಾವುಗಳು ಬದುಕುವ ರೀತಿ ಅರ್ಥಪೂರ್ಣವಾಗಿರಬೇಕು ಎನ್ನುವ ಸಂದೇಶ ಅಡಗಿದೆ ಎಂದು ನಿವೃತ್ತ ಶಿಕ್ಷಕ ಬಸವರಾಜ ಹಂಗರಗಿ ಹೇಳಿದರು.ಪಟ್ಟಣದ ದಿಗಂಬರೇಶ್ವರ ಸಂಸ್ಥಾನ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಕಡಕೋಳ ಮಡಿವಾಳೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಮಾಜದಲ್ಲಿ ಏನನ್ನಾದರೂ ನಾವು ಹೇಳಬೇಕಾದರೆ ಆಲೋಚನೆ ಮಾಡಿ ಹೇಳಬೇಕು ಹಾಗೂ ಎಚ್ಚರದಿಂದ ಇರಬೇಕು ಎಂಬುದನ್ನು ಮಡಿವಾಳೇಶ್ವರರು ತಿಳಿಸಿದ್ದಾರೆ. ಸಮಾಜಕ್ಕೆ ಅವರು ಕೊಟ್ಟಿರುವ ಕೊಡುಗೆ ಅಪಾರವಾದದ್ದು. ಅಂತವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಉಸ್ಮಾನ್ ಪಟೇಲ ಮಾತನಾಡಿ, ಭಾರತ ದೇಶದಲ್ಲಿ ಅನೇಕ ಜಾತಿ ಧರ್ಮ ಜನಾಂಗದವರಿದ್ದರು ಕೂಡಾ ಭಾರತಿಯ ಸಂಸ್ಕೃತಿಗೆ ವಿಶ್ವವೇ ಮತ್ತು ನಾವುಗಳು ತಲೆ ಬಾಗಿ ನಡೆದಾಗ ಮಕ್ಕಳಲ್ಲಿ ನಮ್ಮ ಸಂಸ್ಕಾರ ಹಿಂದಿನ ಸಂಪ್ರದಾಯಗಳ ಆಚರಣೆ ಮಾಡಲು ಉಳಿಸಲು ಸಾಧ್ಯವಾಗುತ್ತದೆ. ಭಾವೈಕ್ಯತೆಯ ಶೃದ್ದಾ ಕೇಂಧ್ರ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದಲ್ಲಿ ಬುಧವಾರ ತಾಲೂಕು ಆಡಳಿತದಿಂದ ಶ್ರೀ ದೇವರ ದಾಸಿಮಯ್ಯ ಜಯಂತಿಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ತಹಶೀಲ್ದಾರ ಎಸ್.ಎಸ್. ನಾಯಕಲಮಠ, ಶಿರಸ್ತೇದಾರ್ ಕೃಷ್ಣಾ ಗೂಡುರ, ಹಿರಿಯರಾದ ಸಂಗಪ್ಪ ಚೌಡಪ್ಪಗೋಳ, ಈರಣ್ಣ ಔರಸಂಗ, ಸಂಗಪ್ಪ ಬಳೂರಗಿ, ಬಸಪ್ಪ ಮಂಕಣಿ, ಬಸವರಾಜ ಚೌಡಪ್ಪಗೋಳ, ಸಂಗಪ್ಪ ಚಿತ್ತಾಪೂರ, ಸಂಗಮೇಶ ಮೇಲಗಿರಿ, ರಾಜು ಚೌಡಪ್ಪಗೋಳ, ವಿಜಯಕುಮಾರ ನಿಲವಾಣಿ, ಎಂ.ಎಸ್. ಗುತ್ತರಗಿ, ಬಿ.ಎನ್. ಜಿಡ್ಡಿಮನಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ರಸ್ತೆ ಅಪಘಾತಗಳನ್ನು ತಡೆಗಟ್ಟುವ, ಪ್ರಯಾಣಿಕರ ಸುರಕ್ಷತೆಯ ದೃಷ್ಟಿ ಹಾಗೂ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ 218 ರ ಕೃಷ್ಣಾ ನದಿಗೆ ನಿರ್ಮಿಸಿದ ಕೊರ್ತಿ ಕೊಲ್ಹಾರ ಸೇತುವೆ ಮೇಲೆ ಹೈಮ್ಯಾಕ್ಸ್ ದೀಪಗಳು ಹಾಗೂ ಸಿಸಿ ಟಿವಿ ಅಳವಡಿಕೆಯ ಕುರಿತು ಪೊಲೀಸ್ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೇತೃತ್ವದಲ್ಲಿ ಜಂಟಿ ಸಮೀಕ್ಷೆ ನಡೆಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿವೇಕ ಮಠ ಮಾದ್ಯಮದೊಂದಿಗೆ ಮಾತನಾಡಿ, ಕೊರ್ತಿ ಕೊಲ್ಹಾರ ಸೇತುವೆಯು ಸುಮಾರು ಮೂರು ಕಿಮೀ ವ್ಯಾಪ್ತಿ ಉದ್ದವಾಗಿದ್ದು ಪ್ರಯಾಣಿಕರ ಹಿತದೃಷ್ಟಿಯಿಂದ ಸೇತುವೆಯ ಎರಡು ಬದಿ 50 ಮೀಟರಗೆ ಒಂದರಂತೆ ಒಟ್ಟು ಸುಮಾರು 120 ಹೈಮ್ಯಾಕ್ಸ್ ಬಲ್ಬುಗಳನ್ನು ಅಳವಡಿಸುವ ಚಿಂತನೆ ನಡೆಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿ ಶಂಕರ್ ಮಾರಿಹಾಳ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಭಿಯಂತರ ವಿಜಯ ಪಾಟೀಲ್, ಸಿಪಿಐ ಅಶೋಕ್ ಚವ್ಹಾಣ, ಪಿಎಸ್ಐ ಎಮ್.ಬಿ ಬಿರಾದಾರ ಸಹಿತ ಇನ್ನಿತರರು…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ನಿರಂತರವಾಗಿ ಬೆಲೆ ಏರಿಕೆ ಆಗುತ್ತಿದೆ. ದೇಶದಲ್ಲಿ ಅತ್ಯಂತ ದುಬಾರಿ ಜೀವನ ನಡೆಸುವ ದುಃಸ್ಥಿತಿ ನಾಡಿನ ಜನರಿಗೆ ಬಂದಿದೆ. ಉಸಿರಾಡುವ ಗಾಳಿಯೊಂದನ್ನು ಬಿಟ್ಟು ಉಳಿದೆಲ್ಲವುಗಳ ಬೆಲೆ ಏರಿಕೆ ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಕಿಡಿಕಾರಿದ್ದಾರೆ.ಈ ಕುರಿತಾ ಪತ್ರಿಕಾ ಹೇಳಿಕೆ ನೀಡಿದ ಅವರು, ಅಧಿಕಾರ ನೀಡಿದ ಮತದಾರರಿಗೆ ಈ ಸರಕಾರ ಶಾಪಗ್ರಸ್ಥವಾಗಿದೆ. ವಿದ್ಯುತ್ ದರ, ಹಲ್ಲಿನ ದರ, ಮುದ್ರಾಂಕ ಶುಲ್ಕ, ಆಫಿಡೆವಿಟ್, ಮಾರ್ಟ್ಗೇಜ್, ವೃತ್ತಿಪರ ತರಿಗೆ, ಬಸ್ ದರ, ನೀರಿನ ಸುಂಕ ಪೆಟ್ರೋಲ್ ಸೇರಿದಂತೆ ಎಲ್ಲವೂ ಏರಿಕೆಯಾಗಿದೆ. ಅಧಿಕಾರ ನೀಡಿದ ಮತದಾರರಿಗೆ ಶಾಪ ನೀಡುವ ಸರಕಾರ ಇದಾಗಿದೆ. ರಾಜ್ಯ ಸರಕಾರ ಈ ದರ ಹೆಚ್ಚಳ ಹಿಂಪಡೆಯಬೇಕು ಎಂದು ಆಗ್ರಹಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಬ್ರಾಹ್ಮಣ ಆರ್ಗನೈಜೇಷನ್ ಆಫ್ ಇಂಡಿಯಾ ಸಂಘಟನೆಯ ರಾಜ್ಯ ಉಪಾಧ್ಯಕ್ಷನಾಗಿ ಗುಂಡು ಕುಲಕರ್ಣಿ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯಧ್ಯಕ್ಷರಾದ ರವೀಂದ್ರ ಕುಲಕರ್ಣಿ ಹೇಳಿದರು.ಈ ವೇಳೆ ಪತ್ರಿಕಾ ಹೇಳಿಕೆ ನೀಡಿದ ಅವರು, ಸಮಾಜದ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಸಮಾಜ ಸೇವಕ ಹಾಗೂ ಪತ್ರಕರ್ತ ಗುಂಡು ಕುಲಕರ್ಣಿ ಅವರನ್ನು ನಮ್ಮ ಸಂಘಟನೆಯ ರಾಜ್ಯ ಯುವ ಘಟಕದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಹಾಗೂ ಮುಂದಿನ ದಿನಮಾನಗಳಲ್ಲಿ ಸಮುದಾಯದ ಏಳಿಗೆಗಾಗಿ ಹಾಗೂ ಸಮುದಾಯದ ಕೆಲಸ ಕಾರ್ಯಗಳಿಗಾಗಿ ನಿಮ್ಮ ಸೇವೆ ಇರಲಿ. ಸಂಘಟನೆಯನ್ನು ರಾಜ್ಯಾದ್ಯಾಂತ ಬಲಪಡಿಸಿ ಎಂದು ಹೇಳಿ ಆದೇಶ ಹೊರಡಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕರ್ನಾಟಕದ ಗಾಣಿಗ ಸಮುದಾಯಕ್ಕೆ ಇಲ್ಲಿವರೆಗೂ ಕಾಂಗ್ರೆಸ್ ಪಕ್ಷ ಸಚಿವ ಸಂಪುಟದ ಸಚಿವ ಸ್ಥಾನವನ್ನು ನೀಡಿಲ್ಲ. ಹಾಗಾಗಿ ಮುಂದಿನ ಸಚಿವ ಸಂಪುಟದಲ್ಲಿ ಶಾಸಕ ಲಕ್ಷ್ಮಣ ಸವದಿ ಅವರನ್ನು ಮಂತ್ರಿ ಮಾಡಬೇಕು ಎಂದು ತಾಲೂಕು ಗಾಣಿಗ ಸಮಾಜದ ಅಧ್ಯಕ್ಷ ಮಲ್ಲಣ್ಣ ಮನಗೂಳಿ ಆಗ್ರಹಿಸಿದರು.ಸಿಂದಗಿ ಪಟ್ಟಣದಲ್ಲಿ ಗಾಣಿಗ ಸಮಾಜದ ವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಲ್ಲು ಲೋಣಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕವಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡುವಂತೆ ರಾಜ್ಯ ಸರಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.ಮಲ್ಲು ಲೋಣಿ ಅವರು ಪಕ್ಷ ಮತ್ತು ಸಮುದಾಯದ ಏಳಿಗೆಗಾಗಿ ದುಡದಿದ್ದಾರೆ. ಅನೇಕ ಹೋರಾಟಗಳನ್ನು ಮಾಡಿದ್ದಾರೆ. ವಿಧಾನ ಪರಿಷತ್‌ನಲ್ಲಿ ಸಮರ್ಥವಾಗಿ ಪ್ರತಿನಿಧಿಸಬಲ್ಲರು. ಈ ಕಾರಣಕ್ಕೆ ಲೋಣಿ ಅವರನ್ನು ನಮ್ಮೆಲ್ಲರ ಪ್ರತಿನಿಧಿಯಾಗಿ ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡಬೇಕು ಎಂದು ರಾಜ್ಯ ಸರಕಾರಕ್ಕೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಿದ್ದೇವೆ ಎಂದರು.ಈ ವೇಳೆ ಸಂಗು ಹಿಪ್ಪರಗಿ, ಬಿ.ಹೆಚ್.ಬಿರಾದಾರ, ನಿಂಗಣ್ಣ ಮರಡಿ, ಸುರೇಶ ಚೌಧರಿ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ನಿಡಗುಂದಿ, ಮುದ್ದೇಬಿಹಾಳ, ತಾಳಿಕೋಟೆ ಹಾಗೂ ಬಸವನಬಾಗೇವಾಡಿ ತಾಲೂಕಿಗೆ ಬುಧವಾರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಭೇಟಿ ನೀಡಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.ನಿಡಗುಂದಿಯ ಪಟ್ಟಣ ಪಂಚಾಯತಿ ಹಾಗೂ ಹೆಬ್ಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಳ ಪರೀವೀಕ್ಷಣೆ ನಡೆಸಿ, ನಿಡಗುಂದಿ ಪಟ್ಟಣದಲ್ಲಿ ಮೇಘಾ ಮಾರುಕಟ್ಟೆ ನಿರ್ಮಾಣಕ್ಕಾಗಿ ಸ್ಥಳ ಪರಿಶೀಲನೆ ನಡೆಸಿದರು. ನಂತರ ನಿಡಗುಂದಿಯಲ್ಲಿನ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ, ಕ್ಯಾಂಟೀನ್ ಕಾಮಗಾರಿ ಹಾಗೂ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದ ಅವರು, ಶೀಘ್ರದಲ್ಲಿ ಕ್ಯಾಂಟೀನ್ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.ನಿಡಗುಂದಿಯ ಒಳಚರಂಡಿ ನೀರು ಶುದ್ಧೀಕರಣ ಘಟಕದ ಮಂಜೂರಾತಿಗಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕೂಡಲೇ ಸ್ಥಳ ವೀಕ್ಷಣೆ ಮಾಡಿ, ನಿರಾಕ್ಷೇಪಣಾ ಪತ್ರ ಒದಗಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಮುದ್ದೇಬಿಹಾಳದಲ್ಲಿರುವ ಇಂದಿರಾ ಕ್ಯಾಂಟೀನ್ ಕಟ್ಟಡಕ್ಕೆ ಭೇಟಿ ನೀಡಿದ ಅವರು, ಕಟ್ಟಡದ ಸುತ್ತಮುತ್ತಲೂ ಕಂಪೌAಡ್ ವಾಲ್, ಪ್ಲೋರಿಂಗ್ ಕಾರ್ಯಕ್ಕೆ ಸೂಚನೆ…

Read More