ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಮಹಾನ ಶ್ರೇಷ್ಠ ತಪಸ್ವಿಗಳಾದ ಕಡಕೋಳ ಮಡಿವಾಳೇಶ್ವರರು ರಚಿಸಿದ ತತ್ವಪದ “ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು” ಎಂಬ ಗೀತೆಯಲ್ಲಿ ಅಂದಿನ ಇಂದಿನ ಮುಂದಿನ ಕಾಲಕ್ಕೂ ನಾವುಗಳು ಬದುಕುವ ರೀತಿ ಅರ್ಥಪೂರ್ಣವಾಗಿರಬೇಕು ಎನ್ನುವ ಸಂದೇಶ ಅಡಗಿದೆ ಎಂದು ನಿವೃತ್ತ ಶಿಕ್ಷಕ ಬಸವರಾಜ ಹಂಗರಗಿ ಹೇಳಿದರು.
ಪಟ್ಟಣದ ದಿಗಂಬರೇಶ್ವರ ಸಂಸ್ಥಾನ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಕಡಕೋಳ ಮಡಿವಾಳೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಮಾಜದಲ್ಲಿ ಏನನ್ನಾದರೂ ನಾವು ಹೇಳಬೇಕಾದರೆ ಆಲೋಚನೆ ಮಾಡಿ ಹೇಳಬೇಕು ಹಾಗೂ ಎಚ್ಚರದಿಂದ ಇರಬೇಕು ಎಂಬುದನ್ನು ಮಡಿವಾಳೇಶ್ವರರು ತಿಳಿಸಿದ್ದಾರೆ. ಸಮಾಜಕ್ಕೆ ಅವರು ಕೊಟ್ಟಿರುವ ಕೊಡುಗೆ ಅಪಾರವಾದದ್ದು. ಅಂತವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಉಸ್ಮಾನ್ ಪಟೇಲ ಮಾತನಾಡಿ, ಭಾರತ ದೇಶದಲ್ಲಿ ಅನೇಕ ಜಾತಿ ಧರ್ಮ ಜನಾಂಗದವರಿದ್ದರು ಕೂಡಾ ಭಾರತಿಯ ಸಂಸ್ಕೃತಿಗೆ ವಿಶ್ವವೇ ಮತ್ತು ನಾವುಗಳು ತಲೆ ಬಾಗಿ ನಡೆದಾಗ ಮಕ್ಕಳಲ್ಲಿ ನಮ್ಮ ಸಂಸ್ಕಾರ ಹಿಂದಿನ ಸಂಪ್ರದಾಯಗಳ ಆಚರಣೆ ಮಾಡಲು ಉಳಿಸಲು ಸಾಧ್ಯವಾಗುತ್ತದೆ. ಭಾವೈಕ್ಯತೆಯ ಶೃದ್ದಾ ಕೇಂಧ್ರ ಸರ್ವ ಧರ್ಮಿಯರು ಪಾಲ್ಗೊಳ್ಳುವ ದಿಗಂಬರೇಶ್ವರ ಜಾತ್ರಾ ಮಹೋತ್ಸವ ನಾಡಿನಲ್ಲಿ ತನ್ನದೆ ಆದ ವೈಭವವನ್ನು ಹೊಂದಿದ ಮಠವಾಗಿದೆ ಎಂದರು.
ಸಾನಿಧ್ಯವನ್ನು ಕಲ್ಲಿನಾಥ ದೇವರು ವಹಿಸಿದ್ದರು, ಅಥರ್ಗಾದ ಮುರುಘೇಂದ್ರ ಮಹಾಸ್ವಾಮಿಗಳು ಕಡಕೋಳ ಮಡಿವಾಳಪ್ಪನವರ ಪುರಾಣ ಹೇಳುವ ಪ್ರವಚಣಕಾರರು, ಜೇರಟಗಿ ಶಿವಯ್ಯ ಸ್ವಾಮಿ, ಮೋರಟಗಿ ರಮೇಶ ವಿಭೂತಿ ಸಂಗೀತ ಬಳಗದವರು, ಪಪಂ ಅಧ್ಯಕ್ಷ ಚನಮಲ್ಲಪ್ಪ ಗಿಡ್ಡಪ್ಪಗೋಳ ಉದ್ಘಾಟಿಸಿದರು, ಬಿ.ಯು. ಗಿಡ್ಡಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು, ಕೆ.ಯು. ಗಿಡ್ಡಪ್ಪಗೋಳ, ಈರಪ್ಪ ಜಿಡ್ಡಿಬಾಗಿಲು, ಕಲ್ಲಪ್ಪ ಬಾಟಿ, ಇತರರಿದ್ದರು.
ಪ್ರಾಸ್ತಾವಿಕವಾಗಿ ಶ್ರೀಮಂತ ಚಂ ಗಣಿ ಮಾತನಾಡಿದರು.
ಮಂಜುನಾಥ ಮಟ್ಯಾಳ ಸ್ವಾಗತಿಸಿ ನಿರೂಪಿಸಿದರು.