ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಬ್ರಾಹ್ಮಣ ಆರ್ಗನೈಜೇಷನ್ ಆಫ್ ಇಂಡಿಯಾ ಸಂಘಟನೆಯ ರಾಜ್ಯ ಉಪಾಧ್ಯಕ್ಷನಾಗಿ ಗುಂಡು ಕುಲಕರ್ಣಿ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯಧ್ಯಕ್ಷರಾದ ರವೀಂದ್ರ ಕುಲಕರ್ಣಿ ಹೇಳಿದರು.
ಈ ವೇಳೆ ಪತ್ರಿಕಾ ಹೇಳಿಕೆ ನೀಡಿದ ಅವರು, ಸಮಾಜದ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಸಮಾಜ ಸೇವಕ ಹಾಗೂ ಪತ್ರಕರ್ತ ಗುಂಡು ಕುಲಕರ್ಣಿ ಅವರನ್ನು ನಮ್ಮ ಸಂಘಟನೆಯ ರಾಜ್ಯ ಯುವ ಘಟಕದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಹಾಗೂ ಮುಂದಿನ ದಿನಮಾನಗಳಲ್ಲಿ ಸಮುದಾಯದ ಏಳಿಗೆಗಾಗಿ ಹಾಗೂ ಸಮುದಾಯದ ಕೆಲಸ ಕಾರ್ಯಗಳಿಗಾಗಿ ನಿಮ್ಮ ಸೇವೆ ಇರಲಿ. ಸಂಘಟನೆಯನ್ನು ರಾಜ್ಯಾದ್ಯಾಂತ ಬಲಪಡಿಸಿ ಎಂದು ಹೇಳಿ ಆದೇಶ ಹೊರಡಿಸಿದ್ದಾರೆ.