ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ರಸ್ತೆ ಅಪಘಾತಗಳನ್ನು ತಡೆಗಟ್ಟುವ, ಪ್ರಯಾಣಿಕರ ಸುರಕ್ಷತೆಯ ದೃಷ್ಟಿ ಹಾಗೂ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ 218 ರ ಕೃಷ್ಣಾ ನದಿಗೆ ನಿರ್ಮಿಸಿದ ಕೊರ್ತಿ ಕೊಲ್ಹಾರ ಸೇತುವೆ ಮೇಲೆ ಹೈಮ್ಯಾಕ್ಸ್ ದೀಪಗಳು ಹಾಗೂ ಸಿಸಿ ಟಿವಿ ಅಳವಡಿಕೆಯ ಕುರಿತು ಪೊಲೀಸ್ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೇತೃತ್ವದಲ್ಲಿ ಜಂಟಿ ಸಮೀಕ್ಷೆ ನಡೆಸಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿವೇಕ ಮಠ ಮಾದ್ಯಮದೊಂದಿಗೆ ಮಾತನಾಡಿ, ಕೊರ್ತಿ ಕೊಲ್ಹಾರ ಸೇತುವೆಯು ಸುಮಾರು ಮೂರು ಕಿಮೀ ವ್ಯಾಪ್ತಿ ಉದ್ದವಾಗಿದ್ದು ಪ್ರಯಾಣಿಕರ ಹಿತದೃಷ್ಟಿಯಿಂದ ಸೇತುವೆಯ ಎರಡು ಬದಿ 50 ಮೀಟರಗೆ ಒಂದರಂತೆ ಒಟ್ಟು ಸುಮಾರು 120 ಹೈಮ್ಯಾಕ್ಸ್ ಬಲ್ಬುಗಳನ್ನು ಅಳವಡಿಸುವ ಚಿಂತನೆ ನಡೆಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿ ಶಂಕರ್ ಮಾರಿಹಾಳ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಭಿಯಂತರ ವಿಜಯ ಪಾಟೀಲ್, ಸಿಪಿಐ ಅಶೋಕ್ ಚವ್ಹಾಣ, ಪಿಎಸ್ಐ ಎಮ್.ಬಿ ಬಿರಾದಾರ ಸಹಿತ ಇನ್ನಿತರರು ಇದ್ದರು.

