Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮಾಶಾಸನ ಪಲಾನುಭವಿಗೆ ಉಚಿತ ಮನೆ | ಅಶೋಕ ಅಲ್ಲಾಪುರ ಅಭಿಮತ ಉದಯರಶ್ಮಿ ದಿನಪತ್ರಿಕೆ ಮೋರಟಗಿ: ಅಂಗವಿಕಲರ, ವೃದ್ಧರ, ಅನಾಥರ, ನಿರ್ಗತಿಕರ ಪಾಲಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆ ನೆರಳಾಗಿ ನಿಂತಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಅಶೋಕ ಅಲ್ಲಾಪೂರ ಹೇಳಿದರು.ಮೋರಟಗಿ ವಲಯದ ಯರಗಲ್ (ಬಿಕೆ) ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯಡಿಯಲ್ಲಿ ನಿರ್ಮಿಸಿದ ವಾತ್ಸಲ್ಯ ಮನೆಯನ್ನು ಮಾಶಾಸನ ಫಲಾನುಭವಿ ಗುರುಬಾಯಿ ಪರಗೊಂಡ ರವರಿಗೆ ನೂತನ ಮನೆ ಹಸ್ತಾಂತರಿಸಿ ಅವರು ಮಾತನಾಡಿದರು.ಬಂಗಾರ ಆಭರಣಳು ಅಡವಿಟ್ಟರು ಹಣ ಸಿಗದ ಈ ಸಂದರ್ಭದಲ್ಲಿ ಕೇವಲ ಒಂದು ಆಧಾರ ಕಾರ್ಡ ಪ್ರತಿ ಮೂಲಕ ಗ್ರಾಮೀಣ ಬಾಗದ ರೈತರಿಗೆ ಹಾಗೂ ವಿವಿಧ ರೀತಿಯ ಉದ್ಯೋಗ ಮಾಡುವ ಮಹಿಳೆಯರಿಗೆ ಆರ್ಥಿಕವಾಗಿ ಮುಂದೆ ಬರಲು ಸಹಕಾರಿಯಾಗುವ ದೃಷ್ಟಿಯಿಂದ ಕಡಿಮೆ ಬಡ್ಡಿಯಲ್ಲಿ ಹಣ ಸಹಾಯ ಮಾಡುವುದರ ಜೊತೆಗೆ ತಮ್ಮ ಸಂಸ್ಥೆಯಿಂದ ಹತ್ತು ಹಲವಾರು ಉಚಿತ ಯೋಜನೆಗಳನ್ನು ತಂದು ಸಾರ್ವಜನಿಕರ ಆಶಾಕಿರಣವಾಗಿ ಹೊರಹುಮ್ಮತ್ತಿದೆ ತಾವೆಲ್ಲರೂ ಸಮಯಕ್ಕೆ ಸರಿಯಾಗಿ ಸಂಸ್ಥೆಯ ಹಣ ಭರಣಾ ಮಾಡುವ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಕೂಡಗಿಯ ಸಂಗನಬಸವೇಶ್ವರ ಕಲಾ ಮತ್ತು ವಾಣಿಜ್ಯ ಕಾಲೇಜ್ ಇವರ ಸಹಯೋಗದೊಂದಿಗೆ ಮಾ.೨೦ ರಂದು ಸಂಗನಬಸವೇಶ್ವರ ಕಲಾ ಮತ್ತು ವಾಣಿಜ್ಯ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕೋಲ್ಹಾರ ತಾಲೂಕಿನ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಸಂತೋಷ ಗಣಾಚಾರಿ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಪದವಿಧರರಿಗೆ ರೂ.೩೦೦೦ ಮತ್ತು ಡಿಪ್ಲೋಮಾದಾರರಿಗೆ ರೂ.೧೫೦೦ ಯುವನಿಧಿ ಯೋಜನೆಯಡಿ ನೀಡಲಾಗುತ್ತಿದೆ. ಅರ್ಹ ವಿದ್ಯಾರ್ಥಿಗಳು ಯುವನಿಧಿ ಯೋಜನೆಯಡಿ ನೋಂದಾಯಿಸಿಕೊಂಡು ಯೋಜನೆಯ ಸದುಪಯೋಗ ಪಡೆಯುವಂತೆ ಅವರು ತಿಳಿಸಿದರು.ಕಾಲೇಜಿನ ಪ್ರಾಂಶುಪಾಲರಾದ ಬಸವರಾಜ ಕೊಲ್ಹಾರ, ಇಂಧುದರ ಹೊಸಮಠ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ಉದ್ಯೋಗಾಧಿಕಾರಿಗಳಾದ ಸೋಮಶೇಖರ ಆಲಮೇಲ, ಕೊಲ್ಹಾರ ತಾಲೂಕಿನ ಪಂಚ ಗ್ಯಾರಂಟಿ ಸದಸ್ಯರುಗಳು ಹಾಗೂ ಕಾಲೇಜಿನ ಅಧ್ಯಾಪಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರ್ಕಾರದ ಆದೇಶದಂತೆ ೨೦೨೫ನೇ ಸಾಲಿನ ಏಪ್ರಿಲ್ ಮತ್ತು ಮೇ ಮಾಹೆಯಲ್ಲಿ ಬೆಳಿಗ್ಗೆ ೦೮ ಗಂಟೆಯಿಂದ ಮಧ್ಯಾಹ್ನ ೦೧:೩೦ಗಂಟೆವರೆಗೆ ಕಚೇರಿ ಕೆಲಸದ ಅವಧಿ ಬದಲಾವಣೆ ಮಾಡಿ ಆದೇಶಿಸಲಾಗಿದೆ. ಸದರಿ ಆದೇಶದಂತೆ ಉಪ ನಿರ್ದೇಶಕರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಬದಲಾದ ಸಮಯದಲ್ಲಿ ಕಚೇರಿಯು ಕಾರ್ಯನಿರ್ವಹಿಸಲಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಇಂಡಿ: ವ್ಯಕ್ತಿಯು ಗುಣಗಳಿಂದ ಸಂಪನ್ನನಾಗುತ್ತಾನೆ, ಸದಾ ಕ್ರೀಯಾಶೀಲತೆಯನ್ನು ಮೈಗೂಡಿಸಿಕೊಳ್ಳುವ ಆದರ್ಶತನ ಇಂದು ಎಲ್ಲರಲ್ಲಿ ಬರಬೇಕಿದೆ ಎಂದು ಐಕ್ಯೂಎಸಿ ಸಂಚಾಲಕ ಪ್ರೊ.ರವಿಕುಮಾರ ಅರಳಿ ಹೇಳಿದರು.ಅವರು ಇಂಡಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಕಾಲೇಜಿನ ಪ್ರಾಚಾರ್ಯ ರಮೇಶ ಆರ್.ಎಚ್ ಹಾಗೂ ಗ್ರಂಥಪಾಲಕ ತಿಪ್ಪಣ್ಣ ವಗ್ದಾಳ ಅವರು ಸಹ ಪ್ರಾಧ್ಯಾಪಕರಾಗಿ ಪದೋನ್ನತಿ ಹೊಂದಿದ ಪ್ರಯುಕ್ತ ಅಭಿನಂದಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮಾತಾನಡಿದ ಪ್ರಾಚಾರ್ಯ ಪ್ರೊ.ರಮೇಶ ಆರ್.ಎಚ್ ” ಪದವಿ, ಗೌರವಗಳು ಬರುತ್ತಿರುತ್ತವೆ, ಕರ್ತವ್ಯದಲ್ಲಿ ಎಲ್ಲರನ್ನೂ ಸಮಾನರಾಗಿ ಕಂಡು ಕೆಲಸ ಮಾಡುವ ಪ್ರಾಮಾಣಿಕತೆ ಇರಬೇಕು ಎಂದರು. ಎಲ್ಲರಿಗೂ ಒಳಿತನ್ನು ಬಯಸುವುದು ಮುಖ್ಯಕಾರ್ಯವಾಗಿದೆ ಎಂದರು.ಅಕ್ಕಮಹಾದೇವಿ ವಿವಿ ಸಿಂಡಿಕೇಟ್ ಸದಸ್ಯ ಪ್ರೊ. ಎಸ್.ಜೆ.ಮಾಡ್ಯಾಳ, ಬೆರಗು ಪ್ರಕಾಶನದ ರಮೇಶ ಕತ್ತಿ ಮೊದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಪ್ರೊ. ಸಂಗಮೇಶ ಹಿರೇಮಠ ಸ್ವಾಗತಿಸಿದರು. ಎನ್. ಎಸ್.ಎಸ್. ಸಂಯೋಜಕ ಪರಸಪ್ಪ ದೇವರ ವಂದಿಸಿದರು. ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು , ವಿದ್ಯಾರ್ಥಿಗಳು ಹಾಜರಿದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಪೊಲೀಸ್ ಅಧೀಕ್ಷಕರ ವರದಿಯನ್ವಯ ತಿಕೋಟಾ ತಾಲೂಕಿನ ಲೋಗಾಂವದ ರಾಜುಗೌಡ ಸಿದ್ದಲಿಂಗಪ್ಪ ಬಿರಾದಾರ ಹಾಗೂ ಪಿಂಟು ಹೀರು ಲಮಾಣಿ ಇವರಿಗೆ ಆತ್ಮರಕ್ಷಣೆ ಸಲುವಾಗಿ ನೀಡಿರುವ ಆಯುಧ ಪರವಾನಿಗೆಯನ್ನು ದುರುಪಯೋಗ ಪಡಿಸಿಕೊಂಡಿರುವ ಕಾರಣದಿಂದಾಗಿ ಭಾರತೀಯ ಆಯುಧ ಕಾಯ್ದೆ ೧೯೫೯ರ ಕಲಂ ೧೭(೩)(ಬಿ ) ಮತ್ತು ೧೭(೩)(ಡಿ ) ಅನ್ವಯ ಇವರು ಹೊಂದಿರುವ ಆಯುಧ ಪರವಾನಿಗೆಯನ್ನು ಅಮಾನತ್ತುಗೊಳಿಸಿ ವಿಚಾರಣೆಗೆ ಕಾಯ್ದಿರಿಸಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶಿಸಿದ್ದಾರೆ.ಸದರಿ ಪರವಾನಿಗೆದಾರು ತಾವು ಹೊಂದಿರುವ ಆಯುಧವನ್ನು ಕೂಡಲೇ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಜಮೆ ಮಾಡುವಂತೆಯೂ ಆದೇಶದಲ್ಲಿ ಅವರು ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಮಾಜಿ ಕೇಂದ್ರ ಸಚಿವರು ವಿಜಯಪುರ ನಗರದ ಜನಪ್ರಿಯ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ರವರನ್ನು ಉಚ್ಛಾಟನೆ ಮಾಡಿದ್ದು ತುಂಬಾ ನೋವಿನ ಸಂಗತಿ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಪ್ರಭು ತಳಗೇರಿ ಕಳವಳ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಪಕ್ಷಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಧೀಮಂತ ನಾಯಕರು, ಹಿಂದುತ್ವವನ್ನು ಮೈಗೂಡಿಸಿಕೊಂಡು ರಾಜ್ಯದಲ್ಲಿ ತಮ್ಮದೇ ಆದ ಅಭಿಮಾನಿಗಳ ಬಳಗ ಹೊಂದಿದ್ದ ನಿಷ್ಠಾವಂತ ನಾಯಕರನ್ನು ಬಿಜೆಪಿ ಪಕ್ಷವು ಉಚ್ಛಾಟನೆ ಮಾಡಿದ್ದು ಅತ್ಯಂತ ದುರದೃಷ್ಟಕರ. ಯತ್ನಾಳರವರು ಇಲ್ಲದೇ ಬಿಜೆಪಿ ಪಕ್ಷವು ನೆಲಕೆಚ್ಚುವುದು ಖಚಿತ. ಯುತ್ನಾಳರು ಬಿಜೆಪಿ ಪಕ್ಷದ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದು ಯಾರು ಜೊತೆ ರಾಜಿಯಾಗಿದೆ ಗಂಡೆದೆಯ ಮಾತುಗಾರಿಕೆಯ ನೇರ ನಡೆಯ ನಾಯಕರು. ಇವರನ್ನು ಉಚ್ಛಾಟನೆ ಮಾಡಿದ್ದು ವಿಪರ್ಯಾಸ. ತಕ್ಷಣ ಉಚ್ಛಾಟನೆಯನ್ನು ಹಿಂಪಡೆಯಬೇಕು ಎಂದು ಪ್ರಧಾನಿಯವರಿಗೆ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಜಿಲ್ಲೆಯಲ್ಲಿ ದಿ.5 ಶನಿವಾರ ಮತ್ತು ದಿ.6 ರವಿವಾರ ಎರಡು ದಿನಗಳವರೆಗೆ ಪ್ರವಾಸ ಕೈಗೊಳ್ಳಲಿದ್ದಾರೆ.ದಿ.5 ಶನಿವಾರ ಬೆ. 9.30ಗಂ. ಡಾ. ಬಾಬು ಜಗಜೀವನರಾಂ ಅವರ 118 ನೇ ಜಯಂತಿ ನಿಮಿತ್ತ ಅಥಣಿ ರಸ್ತೆಯ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವರು. ಬೆ.10ಗಂ. ತಿಕೋಟಾ ತಾಲೂಕಿನ ಕನಮಡಿ ಗ್ರಾಮದಲ್ಲಿ ರೂ. 27ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಮಳೆಮಲ್ಲೇಶ್ವರ ಕೆಳಗಿನಮಠ ಯಾತ್ರಿ ನಿವಾಸ ಕಟ್ಟಡ ಹಾಗೂ 110 ಕೆ.ವ್ಹಿ. ವಿದ್ಯುತ್ ಸ್ಟೇಷನ್ ಉದ್ಘಾಟಿಸಲಿದ್ದಾರೆ. ಸಂ.4ಗಂ. ಬಬಲೇಶ್ವರ ತಾಲೂಕಿನ ನಿಡೋಣಿಯಲ್ಲಿ 110 ಕೆ.ವ್ಹಿ. ವಿದ್ಯುತ್ ಸ್ಟೇಷನ್ ಉದ್ಘಾಟಿಸಿ, ಸಂ.6ಗಂ. ಕಾಖಂಡಕಿ ಗ್ರಾಮದಲ್ಲಿ ರೂ. 5 ಕೋಟಿ ವೆಚ್ಚದ ಕಾಖಂಡಕಿ-ಕಾರಜೋಳ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ, 110ಕೆ.ವ್ಹಿ.ವಿದ್ಯುತ್ ಸ್ಟೇಷನ್ ಉದ್ಘಾಟಿಸಲಿದ್ದಾರೆ.ನಂತರ ಕಾಖಂಡಕಿ –ಗುರುದೇವರ ಆಶ್ರಮದವರೆಗೆ ರೂ.90 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮತ್ತು ಕಾಖಂಡಕಿ ಗ್ರಾಮದಲ್ಲಿ ರೂ. 50…
ರಚನೆ- ದೀಪಾ ಪೂಜಾರಿಕುಶಾಲನಗರ ಉದಯರಶ್ಮಿ ದಿನಪತ್ರಿಕೆ ಬಾಲಗಿರಿಗೆ ಬನಗಿರಿಗೆಮರುಳು ಹೋದಹಕ್ಕಿಯಂತೆ,ಬೇಲಿಯಾಚೆ ನೋಡುವಕನಸುಗಳಂತೆ,ಕೈಯಲ್ಲಿ ಹಣ್ಣಿದ್ದರೂಬಳಲುವ ಹಸಿವಿನಂತೆ,ಬದುಕಿ ಬಿಡು ಇದ್ದಂತೆ! ಮುಗಿಯದ ಹಾದಿಯಬೆಟ್ಟದ ಮೇಲೆ,ಸಂಜೆಯ ಬೀಸಣಿಯಲ್ಲಿಚಿಂತೆ ಬಿಟ್ಟು,ಜಲಧಾರೆಯಲಿ ನೀರಿನಹಾಡಂತೆ,ಬದುಕಿ ಬಿಡು ನೀನುಬದುಕು ಇದ್ದಂತೆ! ಕತ್ತಲಿಗೇ ಬೆಳಕಿನಕನಸು ,ಮೌನಕ್ಕೂ ನಗುವಿನಮನಸು,ಗಾಳಿಯೊಂದಿಗೆ ಹಾರುವಗಾಳಿಪಟದಂತೆ,ಬದುಕಿ ಬಿಡು ನೀನುಬದುಕು ಇದ್ದಂತೆ! ನಾಳೆ ಹೇಗಿರಬಹುದುಯಾರು ಬಲ್ಲರು?ನಿನ್ನ ಹೃದಯವಅರಿಯುವವರಾರು?ಹೂ ಅರಳುವ ಸಂತಸಸಂಭ್ರಮದಲ್ಲಿ,ಬದುಕಿ ಬಿಡು ನೀನುಬದುಕು ಇದ್ದಂತೆ!
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಮೂಲತಃ ಮನುಷ್ಯ ಸಮಾಜ ಜೀವಿ. ಸಾಮಾಜಿಕ ಸಂಬಂಧಗಳು ಆತನ ಬದುಕಿನ ಅವಶ್ಯಕತೆ. ನಮ್ಮ ಮನೆಯ ಶುಭಾಶುಭ ಕಾರ್ಯಕ್ರಮಗಳಲ್ಲಿ ನಮ್ಮವರ ಪಾಲ್ಗೊಳ್ಳುವಿಕೆ ಅತ್ಯವಶ್ಯಕ. ಸುಖದ, ಸಂತೋಷದ ಕ್ಷಣಗಳಲ್ಲಿ ನಮ್ಮ ಖುಷಿಯನ್ನು ಹಂಚಿಕೊಳ್ಳಲು, ಸಂತಸವನ್ನು ಇಮ್ಮಡಿಗೊಳಿಸಲು ನಮಗೆ ಸಾಮಾಜಿಕ, ಕೌಟುಂಬಿಕ ಸಂಬಂಧಗಳು ಬೇಕು. ಅಂತೆಯೇ ದುಃಖದ, ನೋವಿನ ಘಳಿಗೆಗಳಲ್ಲಿ ನಮ್ಮ ನೋವನ್ನು ಶಮನಗೊಳಿಸುವ ಪರಿಹಾರವನ್ನು ಸೂಚಿಸುವ ನಾವು ಇರ್ತೀವಿ ಬಿಡು, ತಲೆ ಕೆಡಿಸಿಕೊಳ್ಳಬೇಡ ಎಂದು ಧೈರ್ಯ ಹೇಳುವ ಸಾಮಾಜಿಕ ಸಂಬಂಧಗಳು ನಮ್ಮ ಜೀವನಕ್ಕೆ ಮರುಭೂಮಿಯಲ್ಲಿರುವ ಓಯಸಿಸ್ ನಂತೆ ಅತ್ಯವಶ್ಯಕ.ವಿವಾಹವೇ ಇರಲಿ ಮಸಣವೇ ಇರಲಿ ನಮ್ಮವರ ಹಾಜರಿಯ ಅಗತ್ಯ ನಮಗಿದೆ. ನಮ್ಮ ಹೆಣವನ್ನು ನಾವೇ ಹೊರುವುದಿಲ್ಲ, ಅದನ್ನು ಹೊರಲಾದರೂ ನಮಗೆ ನಮ್ಮ ಸಂಬಂಧಿಗಳು, ಸ್ನೇಹಿತರು, ಬಂಧು ಬಾಂಧವರು ಬೇಕೇ ಬೇಕು. ನಮ್ಮ ಜೀವನದ ಅತ್ಯಂತ ನಿರಾಶಾದಾಯಕ ಸಮಯದಲ್ಲಿ ನಮಗೆ ಬೇರೊಬ್ಬರ ಸಲಹೆಯ ಅವಶ್ಯಕತೆ ಇರುವುದಿಲ್ಲ. ಯಾರ ಸಲಹೆಗಳೂ ನಮ್ಮ ಮನಸ್ಸಿಗೆ ಸಮಾಧಾನವನ್ನು ಕೊಡುವುದಿಲ್ಲ,ಅಂತಹ ಸಂದಿಗ್ಧದ…
ಬೂದಿಹಾಳ ಏತ ನೀರಾವರಿ ಯೋಜನೆ | ಕ್ರಿಯಾಶೀಲ ವೇದಿಕೆ ವತಿಯಿಂದ ಡಿಸಿಎಂ ಡಿ.ಕೆ.ಶಿವಕುಮಾರ ಗೆ ಮನವಿ ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಪೀರಾಪೂರ – ಬೂದಿಹಾಳ ಏತ ನೀರಾವರಿ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ತಾಳಿಕೋಟಿ ತಾಲೂಕಿನ ಪೀರಾಪೂರ ಬೂದಿಹಾಳ ಏತ ನೀರಾವರಿ ಯೋಜನೆ ಕ್ರಿಯಾಶೀಲ ವೇದಿಕೆ ವತಿಯಿಂದ ನೀರಾವರಿ ಸಚಿವ ಡಿ.ಕೆ.ಶಿವಕುಮಾರ ಅವರಿಗೆ ಬೆಂಗಳೂರಿನಲ್ಲಿ ಬುಧವಾರ ಮನವಿ ಅರ್ಪಿಸಿದರು.ಈ ಯೋಜನೆಗಾಗಿ ಸರಕಾರ ಈಗಾಗಲೇ ಸುಮಾರು ರೂ. ೮೦೦ ಕೋಟಿಯಷ್ಟು ದುಡ್ಡು ವ್ಯಯ ಮಾಡಿದೆಯಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇನ್ನೂ ಕೇವಲ ಹೊಲಗಾಲುವೆಯ ೧೦ ಪ್ರತಿಶತ ಕೆಲಸ ಮಾತ್ರ ಬಾಕಿ ಇದ್ದು, ಈ ಕಾಮಗಾರಿಯನ್ನು ಇದೇ ಬೇಸಿಗೆಯಲ್ಲಿ ತ್ವರಿತಗತಿಯಲ್ಲಿ ಮಾಡಿಕೊಡಬೇಕು ಮತ್ತು ಇನ್ನೂ ಕೇವಲ ರೂ.೧೭೦ ರಿಂದ ರೂ.೨೦೦ ಕೋಟಿಯಷ್ಟು ಹಣಕಾಸು ಮಂಜೂರು ಮಾಡಿಕೊಟ್ಟರೆ ಈ ಭಾಗದ ೫೦೬೦೭ ಎಕರೆ ಕೃಷಿ ಭೂಮಿ ನೀರಾವರಿಗೆ ಒಳಪಡುತ್ತದೆ ಎಂದು ಮನವಿ ಮಾಡಲಾಯಿತು.ಈಗಾಗಲೇ ಈ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಶೋಚನೀಯವಾಗಿದ್ದು. ಹಳ್ಳಿಗಳ ಜನರು ಬೆಂಗಳೂರು, ಬಾಂಬೆ, ಗೋವಾ,…
