ಮಾಶಾಸನ ಪಲಾನುಭವಿಗೆ ಉಚಿತ ಮನೆ | ಅಶೋಕ ಅಲ್ಲಾಪುರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಮೋರಟಗಿ: ಅಂಗವಿಕಲರ, ವೃದ್ಧರ, ಅನಾಥರ, ನಿರ್ಗತಿಕರ ಪಾಲಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆ ನೆರಳಾಗಿ ನಿಂತಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಅಶೋಕ ಅಲ್ಲಾಪೂರ ಹೇಳಿದರು.
ಮೋರಟಗಿ ವಲಯದ ಯರಗಲ್ (ಬಿಕೆ) ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯಡಿಯಲ್ಲಿ ನಿರ್ಮಿಸಿದ ವಾತ್ಸಲ್ಯ ಮನೆಯನ್ನು ಮಾಶಾಸನ ಫಲಾನುಭವಿ ಗುರುಬಾಯಿ ಪರಗೊಂಡ ರವರಿಗೆ ನೂತನ ಮನೆ ಹಸ್ತಾಂತರಿಸಿ ಅವರು ಮಾತನಾಡಿದರು.
ಬಂಗಾರ ಆಭರಣಳು ಅಡವಿಟ್ಟರು ಹಣ ಸಿಗದ ಈ ಸಂದರ್ಭದಲ್ಲಿ ಕೇವಲ ಒಂದು ಆಧಾರ ಕಾರ್ಡ ಪ್ರತಿ ಮೂಲಕ ಗ್ರಾಮೀಣ ಬಾಗದ ರೈತರಿಗೆ ಹಾಗೂ ವಿವಿಧ ರೀತಿಯ ಉದ್ಯೋಗ ಮಾಡುವ ಮಹಿಳೆಯರಿಗೆ ಆರ್ಥಿಕವಾಗಿ ಮುಂದೆ ಬರಲು ಸಹಕಾರಿಯಾಗುವ ದೃಷ್ಟಿಯಿಂದ ಕಡಿಮೆ ಬಡ್ಡಿಯಲ್ಲಿ ಹಣ ಸಹಾಯ ಮಾಡುವುದರ ಜೊತೆಗೆ ತಮ್ಮ ಸಂಸ್ಥೆಯಿಂದ ಹತ್ತು ಹಲವಾರು ಉಚಿತ ಯೋಜನೆಗಳನ್ನು ತಂದು ಸಾರ್ವಜನಿಕರ ಆಶಾಕಿರಣವಾಗಿ ಹೊರಹುಮ್ಮತ್ತಿದೆ ತಾವೆಲ್ಲರೂ ಸಮಯಕ್ಕೆ ಸರಿಯಾಗಿ ಸಂಸ್ಥೆಯ ಹಣ ಭರಣಾ ಮಾಡುವ ಮೂಲಕ ಧರ್ಮಸ್ಥಳ ಸಂಸ್ಥೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ತಾಲೂಕ ಯೋಜನಾಧಿಕಾರಿ ಕ್ರಿಷ್ಣ ಮೂರ್ತಿ, ಬಲವಂತಪ್ಪ ಹೂಗಾರ, ಚಂದ್ರಾಮ ಕರಕಿ, ಚಂದ್ರಕಾಂತ ಹೆರೂರ,ರಾಮಣ್ಣ ಪರಗೊಂಡ, ಗುರುರಾಜ ಪರಗೊಂಡ, ಸಂತೋಷ ಕೋಣಶಿರಸಗಿ, ಶೇಖಯ್ಯ ಹಿರೇಮಠ, ಹಾಗೂ ವಲಯದ ಮೇಲ್ವಿಚಾರಕ ರವಿ ಕೆ, ಸಿದ್ದಯ್ಯ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಆಶಾ ಸೇವಾಪ್ರತಿನಿದಿ ಬಾಗಮ್ಮ ಚಂದ್ರಕಲಾ ಹಾಗೂ ಸಂಘದ ಸದಸ್ಯರು ಇದ್ದರು.

