ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಮಾಜಿ ಕೇಂದ್ರ ಸಚಿವರು ವಿಜಯಪುರ ನಗರದ ಜನಪ್ರಿಯ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ರವರನ್ನು ಉಚ್ಛಾಟನೆ ಮಾಡಿದ್ದು ತುಂಬಾ ನೋವಿನ ಸಂಗತಿ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಪ್ರಭು ತಳಗೇರಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಪಕ್ಷಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಧೀಮಂತ ನಾಯಕರು, ಹಿಂದುತ್ವವನ್ನು ಮೈಗೂಡಿಸಿಕೊಂಡು ರಾಜ್ಯದಲ್ಲಿ ತಮ್ಮದೇ ಆದ ಅಭಿಮಾನಿಗಳ ಬಳಗ ಹೊಂದಿದ್ದ ನಿಷ್ಠಾವಂತ ನಾಯಕರನ್ನು ಬಿಜೆಪಿ ಪಕ್ಷವು ಉಚ್ಛಾಟನೆ ಮಾಡಿದ್ದು ಅತ್ಯಂತ ದುರದೃಷ್ಟಕರ. ಯತ್ನಾಳರವರು ಇಲ್ಲದೇ ಬಿಜೆಪಿ ಪಕ್ಷವು ನೆಲಕೆಚ್ಚುವುದು ಖಚಿತ. ಯುತ್ನಾಳರು ಬಿಜೆಪಿ ಪಕ್ಷದ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದು ಯಾರು ಜೊತೆ ರಾಜಿಯಾಗಿದೆ ಗಂಡೆದೆಯ ಮಾತುಗಾರಿಕೆಯ ನೇರ ನಡೆಯ ನಾಯಕರು. ಇವರನ್ನು ಉಚ್ಛಾಟನೆ ಮಾಡಿದ್ದು ವಿಪರ್ಯಾಸ. ತಕ್ಷಣ ಉಚ್ಛಾಟನೆಯನ್ನು ಹಿಂಪಡೆಯಬೇಕು ಎಂದು ಪ್ರಧಾನಿಯವರಿಗೆ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.

