ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಜಿಲ್ಲೆಯಲ್ಲಿ ದಿ.5 ಶನಿವಾರ ಮತ್ತು ದಿ.6 ರವಿವಾರ ಎರಡು ದಿನಗಳವರೆಗೆ ಪ್ರವಾಸ ಕೈಗೊಳ್ಳಲಿದ್ದಾರೆ.
ದಿ.5 ಶನಿವಾರ ಬೆ. 9.30ಗಂ. ಡಾ. ಬಾಬು ಜಗಜೀವನರಾಂ ಅವರ 118 ನೇ ಜಯಂತಿ ನಿಮಿತ್ತ ಅಥಣಿ ರಸ್ತೆಯ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವರು. ಬೆ.10ಗಂ. ತಿಕೋಟಾ ತಾಲೂಕಿನ ಕನಮಡಿ ಗ್ರಾಮದಲ್ಲಿ ರೂ. 27ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಮಳೆಮಲ್ಲೇಶ್ವರ ಕೆಳಗಿನಮಠ ಯಾತ್ರಿ ನಿವಾಸ ಕಟ್ಟಡ ಹಾಗೂ 110 ಕೆ.ವ್ಹಿ. ವಿದ್ಯುತ್ ಸ್ಟೇಷನ್ ಉದ್ಘಾಟಿಸಲಿದ್ದಾರೆ. ಸಂ.4ಗಂ. ಬಬಲೇಶ್ವರ ತಾಲೂಕಿನ ನಿಡೋಣಿಯಲ್ಲಿ 110 ಕೆ.ವ್ಹಿ. ವಿದ್ಯುತ್ ಸ್ಟೇಷನ್ ಉದ್ಘಾಟಿಸಿ, ಸಂ.6ಗಂ. ಕಾಖಂಡಕಿ ಗ್ರಾಮದಲ್ಲಿ ರೂ. 5 ಕೋಟಿ ವೆಚ್ಚದ ಕಾಖಂಡಕಿ-ಕಾರಜೋಳ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ, 110ಕೆ.ವ್ಹಿ.ವಿದ್ಯುತ್ ಸ್ಟೇಷನ್ ಉದ್ಘಾಟಿಸಲಿದ್ದಾರೆ.
ನಂತರ ಕಾಖಂಡಕಿ –ಗುರುದೇವರ ಆಶ್ರಮದವರೆಗೆ ರೂ.90 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮತ್ತು ಕಾಖಂಡಕಿ ಗ್ರಾಮದಲ್ಲಿ ರೂ. 50 ಲಕ್ಷ ವೆಚ್ಚದ ಸಿ.ಸಿ.ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲಿದ್ದಾರೆ.
ದಿ.6 ರವಿವಾರ ಮ.12ಗಂ. ಆಲಮೇಲ ತಾಲೂಕಿನ ಕಡಣಿ ಗ್ರಾಮದ ಸುಕ್ಷೇತ್ರ ಶ್ರೀ ಭೋಗಲಿಂಗೇಶ್ವರ ಜಾತ್ರಾ ಮಹೋತ್ಸವ ಮತ್ತು ದಿ. ಎಂ.ಸಿ.ಮನಗೂಳಿ ಅವರ ಸ್ಮರಣಾರ್ಥ ಏರ್ಪಡಿಸಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

