Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಮಾನವೀಯ ಸಂಬಂಧಗಳ ಅವಶ್ಯಕತೆ
ವಿಶೇಷ ಲೇಖನ

ಮಾನವೀಯ ಸಂಬಂಧಗಳ ಅವಶ್ಯಕತೆ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ

ಉದಯರಶ್ಮಿ ದಿನಪತ್ರಿಕೆ

ಮೂಲತಃ ಮನುಷ್ಯ ಸಮಾಜ ಜೀವಿ. ಸಾಮಾಜಿಕ ಸಂಬಂಧಗಳು ಆತನ ಬದುಕಿನ ಅವಶ್ಯಕತೆ. ನಮ್ಮ ಮನೆಯ ಶುಭಾಶುಭ ಕಾರ್ಯಕ್ರಮಗಳಲ್ಲಿ ನಮ್ಮವರ ಪಾಲ್ಗೊಳ್ಳುವಿಕೆ ಅತ್ಯವಶ್ಯಕ. ಸುಖದ, ಸಂತೋಷದ ಕ್ಷಣಗಳಲ್ಲಿ ನಮ್ಮ ಖುಷಿಯನ್ನು ಹಂಚಿಕೊಳ್ಳಲು, ಸಂತಸವನ್ನು ಇಮ್ಮಡಿಗೊಳಿಸಲು ನಮಗೆ ಸಾಮಾಜಿಕ, ಕೌಟುಂಬಿಕ ಸಂಬಂಧಗಳು ಬೇಕು. ಅಂತೆಯೇ ದುಃಖದ, ನೋವಿನ ಘಳಿಗೆಗಳಲ್ಲಿ ನಮ್ಮ ನೋವನ್ನು ಶಮನಗೊಳಿಸುವ ಪರಿಹಾರವನ್ನು ಸೂಚಿಸುವ ನಾವು ಇರ್ತೀವಿ ಬಿಡು, ತಲೆ ಕೆಡಿಸಿಕೊಳ್ಳಬೇಡ ಎಂದು ಧೈರ್ಯ ಹೇಳುವ ಸಾಮಾಜಿಕ ಸಂಬಂಧಗಳು ನಮ್ಮ ಜೀವನಕ್ಕೆ ಮರುಭೂಮಿಯಲ್ಲಿರುವ ಓಯಸಿಸ್ ನಂತೆ ಅತ್ಯವಶ್ಯಕ.
ವಿವಾಹವೇ ಇರಲಿ ಮಸಣವೇ ಇರಲಿ ನಮ್ಮವರ ಹಾಜರಿಯ ಅಗತ್ಯ ನಮಗಿದೆ. ನಮ್ಮ ಹೆಣವನ್ನು ನಾವೇ ಹೊರುವುದಿಲ್ಲ, ಅದನ್ನು ಹೊರಲಾದರೂ ನಮಗೆ ನಮ್ಮ ಸಂಬಂಧಿಗಳು, ಸ್ನೇಹಿತರು, ಬಂಧು ಬಾಂಧವರು ಬೇಕೇ ಬೇಕು.


ನಮ್ಮ ಜೀವನದ ಅತ್ಯಂತ ನಿರಾಶಾದಾಯಕ ಸಮಯದಲ್ಲಿ ನಮಗೆ ಬೇರೊಬ್ಬರ ಸಲಹೆಯ ಅವಶ್ಯಕತೆ ಇರುವುದಿಲ್ಲ. ಯಾರ ಸಲಹೆಗಳೂ ನಮ್ಮ ಮನಸ್ಸಿಗೆ ಸಮಾಧಾನವನ್ನು ಕೊಡುವುದಿಲ್ಲ,ಅಂತಹ ಸಂದಿಗ್ಧದ ಸಮಯದಲ್ಲಿ ನಮಗೆ ಬೇಕಾಗಿರುವುದು ಮಾನವೀಯ ಸಂಬಂಧಗಳಾದ ಸಹಾನುಭೂತಿ, ಸಹನೆ, ಪ್ರೀತಿ, ನಂಬಿಕೆ ಮತ್ತು ವಿಶ್ವಾಸಗಳು. ನಿನ್ನ ಯಾವುದೇ ಕಷ್ಟದಲ್ಲೂ ನಾನು ನಿನ್ನ ಜೊತೆಗಿದ್ದೇನೆ ಎಂಬ ಸಾಂತ್ವನ ನಾನು ಒಬ್ಬಂಟಿಯಲ್ಲ ಎಂಬ ಭಾವವನ್ನು ನೀಡುತ್ತದೆ. ಈ ರೀತಿಯ ಅಗಾಧ ಭರವಸೆಯು ಬದುಕುವ ಹೊಸ ಹುಮ್ಮಸ್ಸನ್ನು ನೀಡುತ್ತದೆ.
ನೋವು ಎನ್ನುವುದು ಸಂಪೂರ್ಣ ವೈಯುಕ್ತಿಕವಾದ ಮಾನಸಿಕ ಸ್ಥಿತಿಯಾಗಿದ್ದು ಅದನ್ನು ನಾವು ಮಾತ್ರ ಎದುರಿಸಬೇಕು.. ಆದರೆ ಆ ನೋವಿನ ಸಂದರ್ಭದಲ್ಲಿಯೂ ಯಾರಾದರೂ ನಮ್ಮ ಜೊತೆಗಿದ್ದಾರೆ ಎಂಬ ಸಹಾನುಭೂತಿ ನಮ್ಮನ್ನು ಕುಸಿಯದಂತೆ ತಡೆಯುತ್ತದೆ. ಅದೆಷ್ಟೇ ನಾನು ನನ್ನನ್ನು ಕಳೆದುಕೊಂಡಿದ್ದೇನೆ ಎಂದು ಮನಸ್ಸು ಖಿನ್ನವಾದರೂ ಇಂತಹ ಸಮಯದಲ್ಲಿ ನನ್ನವರು ನನ್ನ ಜೊತೆಗಿದ್ದಾರೆ ಎಂಬ ಭಾವವೇ ಆಸರೆಯನ್ನು ಕಲ್ಪಿಸುತ್ತದೆ.
ಇಂತಹ ಘಳಿಗೆಗಳಲ್ಲಿ ಮೌನ ಅತ್ಯುತ್ತಮ ಸಂವಾಹಕವಾಗಿದ್ದು ಮೌನ ಜೊತೆಯಾಗಿರುವಿಕೆಯು ಧೈರ್ಯ ನೀಡುತ್ತದೆ. ಈ ಮೌನ ಕೊಡುವಷ್ಟು ಪರಿಶುದ್ಧವಾದ ಆಪ್ತತೆಯನ್ನು ಮಾತುಗಳು ಕಟ್ಟಿಕೊಡಲು ಸಾಧ್ಯವಿಲ್ಲ. ಪ್ರೀತಿಯ ಪರಿಪೂರ್ಣ ಭಾವ ನಮ್ಮನ್ನು ನಾವು ಯಾರು ಎಂದು ಗುರುತಿಸಿಕೊಳ್ಳಲು ಸಹಾಯವೆಸಗುತ್ತದೆ.
ಆದ್ದರಿಂದಲೇ ನಮ್ಮ ಪ್ರಾಚೀನರು

ಓಂ ಸಂಘಚ್ಛದ್ವಂ ಸಂವಧದ್ವಂ
ಸಮ್ಮೋಮನಾಂಸಿ ಜಾನತಾಂ
ದೇವಾ ಭಾಗಮ್ ಯಥಾ ಪೂರ್ವೆ
ಸಂಜಾನಾನಾ ಉಪಾಸತೆ

ಎಂದು ಪ್ರಾರ್ಥನೆಗೈಯುತ್ತಿದ್ದರು. ಈ ಪ್ರಾರ್ಥನೆಯ ತಾತ್ಪರ್ಯ ಹೀಗಿದೆ
ನಾವೆಲ್ಲರೂ ಸಂಘಟಿತರಾಗಿ ಒಂದು ಉನ್ನತ ಧ್ಯೇಯದೆಡೆಗೆ ಸಾಗೋಣ. ಸಂಘಟನೆಯ ನಿಯಮಗಳನ್ನು ಪಾಲಿಸೋಣ. ವಿಶಾಲ ಹೃದಯ ಮತ್ತು ಮನಸ್ಸನ್ನು ಹೊಂದಿದವರಾಗಿ ಸಾಮರಸ್ಯದಿಂದ ಜೊತೆಯಾಗಿ ಕಾರ್ಯ ನಿರ್ವಹಿಸೋಣ.. ಎಂಬ ಅರ್ಥವನ್ನು ಹೊಂದಿರುವ ಈ ಪ್ರಾರ್ಥನಾ ಮಂತ್ರವನ್ನು ನಾವು ಯಾವುದೇ ಭಾರತೀಯ ಯೋಗ ಮತ್ತು ಆಧ್ಯಾತ್ಮದ ಕಾರ್ಯಕ್ರಮದ ಅಂತ್ಯದಲ್ಲಿ ಸಾಮೂಹಿಕವಾಗಿ ಉಚ್ಚರಿಸಲು ಕಾರಣವಾಗಿರುವುದು ಇದರಲ್ಲಿರುವ ಉನ್ನತ ಧ್ಯೇಯ. ಸಾಂಘಿಕ ಬದುಕಿನ ಮಹತ್ವವನ್ನು ಸಾರುವ ಈ ಮಂತ್ರೋಚ್ಚಾರಣೆ ನಮ್ಮ
ಮೈ ಮನಗಳಲ್ಲಿ ಭ್ರಾತೃತ್ವದ ಭಾವವನ್ನು ತುಂಬಿ ನಮ್ಮನ್ನು ಸಂಘ ಜೀವಿಯನ್ನಾಗಿಸುತ್ತದೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026
    In ದಿನಪತ್ರಿಕೆ
  • ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ
    In (ರಾಜ್ಯ ) ಜಿಲ್ಲೆ
  • ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!
    In (ರಾಜ್ಯ ) ಜಿಲ್ಲೆ
  • ನಮ್ಮ ನಿಸ್ವಾರ್ಥ ಸತ್ಕಾರ್ಯಗಳು ನಮ್ಮನ್ನು ಕಾಪಾಡುತ್ತವೆ :ಡಾ.ಗೀತಾ
    In (ರಾಜ್ಯ ) ಜಿಲ್ಲೆ
  • ಏ.೨೪ಕ್ಕೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಪ್ರತಿಷ್ಠಿತ ಶಾಲೆ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಏ.೨೨ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಏ.೨೨ರಿಂದ ಸಿಇಟಿ ಪ್ರರೀಕ್ಷೆ: ಸುಸೂತ್ರ ನಡೆಸಲು ಎಡಿಸಿ ಸೂಚನೆ
    In (ರಾಜ್ಯ ) ಜಿಲ್ಲೆ
  • ಹ್ಯಾಂಡ್ ಪೋಸ್ಟ್ ಟು ಕೋಟೆ ಜೋಡಿ ರಸ್ತೆ- ಹೈಟೆಕ್ ಪಾರ‍್ಕ್ ನಿರ‍್ಮಾಣ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.