Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಸಿರು ಕ್ರಾಂತಿಯ ಹರಿಕಾರ ದೇಶದ ಮಾಜಿ ಉಪ ಪ್ರಧಾನ ಮಂತ್ರಿಗಳಾದ ಡಾ.ಬಾಬು ಜಗಜೀವನರಾಂ ಅವರ ೧೧೮ನೇ ಜನ್ಮ ದಿನಾಚರಣೆ ಅಂಗವಾಗಿ ಶನಿವಾರ ನಗರದ ಸೈಟಲೈ ಬಸ್ ನಿಲ್ದಾಣ ಮುಂಭಾಗದಲ್ಲಿರುವ ಅವರ ಪ್ರತಿಮೆಗೆ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಖಾತೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.ಈ ಸಂದರ್ಭಧಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೇರಿದಂತೆ ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
ಕನಮಡಿ ಗ್ರಾಮದಲ್ಲಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಚಾಲನೆ | ಯಾತ್ರಿ ನಿವಾಸ ಕಟ್ಟಡ ಉದ್ಘಾಟನೆ | ವಿದ್ಯುತ್ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಈ ಭಾಗದಲ್ಲಿ ನೀರಾವರಿಯಿಂದಾಗಿ ಅತೀ ಹೆಚ್ಚು ವಿದ್ಯುತ್ ಬಳಕೆಯಾಗುತ್ತಿರುವುದನ್ನು ಮನಗಂಡು, ನೀರಾವರಿಯಷ್ಟೇ ವಿದ್ಯುತ್‌ಗೆ ಪ್ರಾಮುಖ್ಯತೆ ನೀಡಿ ಜಲಕ್ರಾಂತಿಯೊಂದಿಗೆ ಇಂಧನ ಕ್ರಾಂತಿಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.ಶನಿವಾರ ಕನಮಡಿ ಗ್ರಾಮದಲ್ಲಿ ಹಮ್ಮಿಕೊಂಡ ೨೭ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮಳೆ ಮಲ್ಲೇಶ್ವರ ಕೆಳಗಿನಮಠ ಯಾತ್ರಿ ನಿವಾಸ ಕಟ್ಟಡ ಉದ್ಘಾಟನೆ ಹಾಗೂ ೧೧೦ ಕೆವಿ ವಿದ್ಯುತ್ ವಿತರಣಾ ಕೇಂದ್ರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ನೀರು ಎಷ್ಟು ಮುಖ್ಯವೋ ಅಷ್ಟೇ ವಿದ್ಯುತ್‌ಗೂ ಅಷ್ಟೇ ಪ್ರಾಮುಖ್ಯತೆ ನೀಡಲಾಗಿದೆ. ಸ್ವಾತಂತ್ರö್ಯ ನಂತರದಿಂದ ೨೦೧೪ರವರೆಗೆ ಜಿಲ್ಲೆಯಲ್ಲಿ ೨೨೦/೧೧೦ ಕೆ.ವಿಯ ಕೇವಲ ೨೭ ವಿದ್ಯುತ್ ವಿತರಣಾ ಕೇಂದ್ರಗಳು ಕಾರ್ಯನಿರ್ವಹಣೆಯಾಗಿ ೨೧೨೦…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಪತ್ತಿನ ಸಂಘ ನಿಯಮಿತ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಶಿಕ್ಷಕ ಐ. ಆರ್. ಹೊಸಮನಿ ಹಾಗೂ ಉಪಾಧ್ಯಕ್ಷರಾಗಿ ಐ. ಎಸ್. ಮುಳ್ಳಾಮಠ ಆಯ್ಕೆ ಯಾಗಿದ್ದಾರೆ.ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶಾಳ ಹಾಗೂ ಖಜಾಂಚಿ ಜುಬೇರ ಕೇರೂರ ಇವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಐ ಆರ್ ಹೊಸಮನಿ ಹಾಗೂ ಎಸ್ ಎಸ್ ಬೇನೂರ ನಾಮಪತ್ರ ಸಲ್ಲಿಸಿದ್ದರು. ಒಟ್ಟು ೦೯ ಮತಗಳಲ್ಲಿ ೦೮ ಮತಗಳನ್ನು ಪಡೆಯುವ ಮೂಲಕ ಐ ಆರ್ ಹೊಸಮನಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರೆ ನಾಮಪತ್ರ ಸಲ್ಲಿಸಿರುವುದರಿಂದ ಐ ಎಸ್ ಮುಳ್ಳಾಮಠ ಅವಿರೋಧ ಆಯ್ಕೆಯಾದರು. ನಂತರ ಸರ್ಕಾರಿ ನೌಕರರ ಭವನದಲ್ಲಿ ನೌಕರರ ಸಂಘ ಹಾಗೂ ಶಿಕ್ಷಕರ ಸಂಘದ ಪರವಾಗಿ ಸನ್ಮಾನ ಮಾಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ, ಸಹಕಾರಿ ಸಂಘಗಳು ಬೆಳೆಯಬೇಕಾದರೆ ಸಹಕಾರ ಮುಖ್ಯವಾಗಿದ್ದು,…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸ್ವಾತಂತ್ರ್ಯ ಹೋರಾಟಗಾರ, ಶೋಷಿತರ ಧ್ವನಿ, ರೈತರ ಉಸಿರಾಗಿದ್ದ ಡಾ.ಬಾಬು ಜಗಜೀವನರಾಮ್ ಅವರ ಜೀವನ ಮತ್ತು ಸಾಧನೆ ಸರ್ವರಿಗೂ ಮಾದರಿಯಾಗಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಪಿ.ಬಿರಾದಾರ ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಶನಿವಾರ ಜರುಗಿದ ಡಾ.ಬಾಬು ಜಗಜೀವನರಾಮ್ ಅವರ ೧೧೮ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಬಾಬೂಜೀ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ ಪ್ರಕಾಶ ಸಿಂದಗಿ ಬಾಬೂಜೀ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಉಪತಹಶೀಲ್ದಾರ ಸುರೇಶ ಮ್ಯಾಗೇರಿ, ಸಿಬ್ಬಂದಿ ಸಂತೋಷ ತಳವಾರ, ಚನ್ನಬಸು ಹೊಸಮನಿ, ರೈತಸಂಘದ ಸಂಪತ್ ಜಮಾದಾರ, ರಾಹುಲ ದೊಡಮನಿ, ಸಂತೋಷ ಬೇವಿನಗಿಡದ, ಕಿರಣ ವಗ್ಗರ, ನಾಗೇಶ ವಗ್ಗರ, ಭೀಮಾಶಂಕರ ವಗ್ಗರ, ಪರಶು ಸನದಿ, ಪ್ರಭು ಸಂಗಣ್ಣವರ, ಸುರೇಶ ಮಣೂರ, ಮರಣಿಗಪ್ಪ ಪಡಗಾನೂರ, ಸದಾಶಿವ ಬೇವಿನಗಿಡದ, ಪ್ರಭು ದೊಡಮನಿ, ನಿಜಲಿಂಗಪ್ಪ ಮ್ಯಾಕೇರಿ ಇದ್ದರು.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕಿನ ಪಡಗಾನೂರ ಗ್ರಾಮದ ಸೋಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ದಿ: ೬ರಂದು(ಇಂದು) ರಕ್ತದಾನ, ನೇತ್ರ ಉಚಿತ ತಪಾಸಣೆ ಹಾಗೂ ಎಲಬು ಕೀಲುಗಳ ಉಚಿತ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ.ಗ್ರಾಮದಲ್ಲಿ ಬೆಳಿಗ್ಗೆ ೯ ಗಂಟೆಯಿಂದ ಮಧಾನ್ಹ ೨ ಗಂಟೆಯವರೆಗೆ ಜರುಗುವ ಈ ಶಿಬಿರಗಳಲ್ಲಿ ಅನುಗ್ರಹ ವ್ಹಿಜನ ಫೌಂಡೇಶನ್ ಟ್ರಸ್ಟ್ ವಿಜಯಪುರದ ನೇತ್ರ ತಜ್ಞರಾದ ಡಾ.ಪ್ರಭುಗೌಡ ಲಿಂಗದಳ್ಳಿ (ಚಬನೂರ) ಇವರಿಂದ ನೇತ್ರ ಉಚಿತ ತಪಾಸಣೆ. ವಿಜಯಪುರ ಶ್ರೇಯಾ ಅಸ್ಪತ್ರೆಯ ಎಲುಬು ಕೀಲುಗಳ ತಜ್ಞರಾದ ಡಾ.ಭೀಮನಗೌಡ ಪಾಟೀಲರಿಂದ ಎಲುಬು ಕೀಲುಗಳ ಉಚಿತ ತಪಾಸಣೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಂದಗಿ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ ಜರುಗಲಿದೆ.ಜಾತ್ರೆಗೆ ಆಗಮಿಸಿದ ಭಕ್ತರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇವುಗಳ ಸದುಪಯೋಗ ಪಡೆದುಕೊಳ್ಳುವಂತೆ ಜಾತ್ರಾ ಕಮೀಟಿ ಪ್ರಕಟಣೆ ಮೂಲಕ ಕೋರಿದೆ.
ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಡಾ.ಬಾಬು ಜನಜೀವನರಾಮ್ ಜಯಂತಿ ಆಚರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಿಂದುಳಿದ ಮತ್ತು ತುಳಿತಕ್ಕೊಳಗಾದ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿದ ಗಮನಾರ್ಹ ಭಾರತೀಯ ಕಾರ್ಯಕರ್ತ ಮತ್ತು ರಾಜಕಾರಣಿ ಡಾ ಬಾಬು ಜಗಜೀವನರಾಮ್ ಅವರು ನಮಗೆ ಎಂದೆಂದೂ ಆದರ್ಶಪ್ರಾಯರು. ಅವರ ವಿಚಾರಧಾರೆಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳುವಂತಾಗಬೇಕೆಂದು ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ದೆ ಅಭಿಪ್ರಾಯ ವ್ಯಕ್ತಪಡಿಸಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಡಾ ಬಾಬು ಜಗಜೀವನರಾಮ್ ಜಯಂತಿಯಲ್ಲಿ ಮಾತನಾಡಿದರು.ಈ ಸಂದರ್ಭದಲ್ಲಿ ಪಿಯುಸಿ ಪ್ರಾಚಾರ್ಯ ಪ್ರೊ.ಸಿ.ಬಿ.ಪಾಟೀಲ, ಐಕ್ಯೂಎಸಿ ನಿರ್ದೇಶಕರು ಡಾ.ಪಿ.ಎಸ್.ಪಾಟೀಲ, ನ್ಯಾಕ್ ಸಂಯೋಜಕರು ಡಾ.ಕೆ.ಮಹೇಶ್ ಕುಮಾರ, ಪ್ರೊ.ಎಸ್ ಡಿ ಪಾಟೀಲ, ಪ್ರೊ.ಮಾಲತಿ ಚನಗೊಂಡ, ಮತ್ತು ಡಾ.ಗಿರೀಶ್ ಹನಮರೆಡ್ಡಿ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಈ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಔಷಧೀಯ ವಿಜ್ಞಾನ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಡಿ. ಫಾರ್ಮ್ ವಿದ್ಯಾರ್ಥಿಗಳು ಎವಿಎಸ್ ಆಯುರ್ವೇದ ಮಹಾವಿದ್ಯಾಲಯದ ಶ್ರೀವನಕ್ಕೆ ಭೇಟಿ ನೀಡಿ ಕ್ಷೇತ್ರ ಅಧ್ಯಯನ ನಡೆಸಿದರು.ಶುಕ್ರವಾರ ಎವಿಎಸ್ ಆಯುರ್ವೇದ ಕಾಲೇಜಿಗೆ ತೆರಳಿದ ವಿದ್ಯಾರ್ಥಿಗಳು, ಭಾರತೀಯ ಔಷಧ ಪರಿಷತ್ತಿನ ಡಿಪ್ಲೊಮಾ ಕೋರ್ಸಿನ ಶೈಕ್ಷಣಿಕ ಚಟುವಟಿಕೆ ಭಾಗವಾಗಿ ಈ ಭೇಟಿ ನೀಡಿದರು. ಈ ಮೂಲಕ ಸೈಸರ್ಗಿಕ ಜಗತ್ತಿನ ಅನುಭವ ಪಡೆದುಕೊಂಡರು.ನಾನಾ ಔಷಧೀಯ ಸಸ್ಯಗಳನ್ನು ವೀಕ್ಷಿಸಿದ ತರಗತಿಯ ಕೊಠಡಿಗಳಲ್ಲಿ ತಾವು ಪುಸ್ತಕಗಳಲ್ಲಿ ಓದಿದ ವಿಷಯ ಮತ್ತು ಇಲ್ಲಿ ನಿಸರ್ಗದಲ್ಲಿರುವ ಔಷಧಿಯ ಸಸ್ಯಗಳ ಕುರಿತು ಮನನ ಮಾಡಿಕೊಂಡರು.ಎವಿಎಸ್ ಆಯುರ್ವೇದ ಕಾಲೇಜಿನ ಶ್ರೀವನದ ಅಧಿಕಾರಿ ಡಾ. ಗುರುದೇವಿ ಪಾಟೀಲ ಅವರು ವಿದ್ಯಾರ್ಥಿಗಳಿಗೆ ನಾನಾ ಬಗೆಯ ಔಷಧೀಯ ಸಸ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಔಷಧೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಿ. ಮಲ್ಲಿಕಾರ್ಜುನ ಶೆಟ್ಟಿ, ನೈಸರ್ಗಿಕ ಔಷಧ ವಿಜ್ಞಾನ ವಿಭಾಗದ ಡಾ. ಬಸವರಾಜ ಹುನಸಗಿ, ಸಹಾಯಕ ಪ್ರಾಧ್ಯಾಪಕ…
ರಚನೆ- ಡಾ. ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ನವಿಲಿನಂತೆ ರೆಕ್ಕೆ ಬಿಚ್ಚಿನೆಲದ ಮೇಲೆ ಕುಣಿಯುವಾಸೆಗುಬ್ಬಿಯಂತೆ ಗೂಡು ಬಿಟ್ಟುಆಗಸದಿ ಹಾರೋವಾಸೆ ರಾಗದಲ್ಲಿ ಹಾಡೋ ಇಚ್ಛೆಕಳ ಕಂಠದ ಕೋಗಿಲೆತಂಪು ಕೊಳದಲಿ ಮಿಂದುಹ೦ಸೆಯಾಗಿ ನಲಿಯುವಾಸೆ ಮಂಗನಂತೆ ಕೊಂಬೆ ಕೊಂಬೆಜಿಗಿಯುವಾಸೆಇಣಚಿಯಂತೆ ಅತ್ತ ಇತ್ತಇಣುಕುವಾಸೆ ಚಿಟ್ಟೆಯಂತೆ ಕನಸು ಹೊತ್ತುಹೂವು ಮರವ ಮುಟ್ಟುವಾಸೆಮೀನಿನಂತೆ ಕಡಲಾಳದಿನೀರಿನಲ್ಲಿ ಈಜುವಾಸೆ ಆನೆಯಂತೆ ಅಡವಿಯಲ್ಲಿರಾಜನಾಗಿ ಮೆರೆಯುವಾಸೆಕುದುರೆಯಾಗಿ ದಶ ದಿಕ್ಕಿಗೆಗಾಳಿಯಂತೆ ಓಡುವಾಸೆ ಇಂದ್ರಲೋಕ ಚಂದ್ರಲೋಕಗಗನದಲ್ಲಿ ಸುತ್ತುವಾಸೆಮನುಷ್ಯನಾಗಿ ಭೂಮಿ ಮೇಲೆಮನುಜನಾಗಿ ಬದುಕುವಾಸೆ
ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗುಡುಗು ಮತ್ತು ಸಿಡಿಲು ಬಡಿತದಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ನೀಡಲಾದ ಸಲಹೆ-ಸೂಚನೆಗಳನ್ನು ಜಿಲ್ಲೆಯಾದ್ಯಂತ ಪಾಲಿಸುವ ಮೂಲಕ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದ್ದಾರೆ.ಗುಡುಗು ಮತ್ತು ಸಿಡಿಲಿನ ಅಪಾಯ ತಗ್ಗಿಸಲು ಸಾಮಾನ್ಯವಾಗಿ ಸಿಡಿಲಿಗೆ ತುತ್ತಾಗುವ ಸ್ಥಳಗಳನ್ನು ಗುರುತಿಸಿ, ಸಾರ್ವಜನಿಕ ಆಸ್ತಿ, ಮೂಲಸೌಕರ್ಯಗಳ ರಕ್ಷಣೆಗೆ ಕ್ರಮ ವಹಿಸಬೇಕು. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹಾಗೂ ಇಂಡಿಯನ್ ಮೆಟ್ರಾಲಾಜಿಕಲ್ ಇಲಾಖೆಯ ಸಿಡಿಲಿನ ಮುನ್ಸೂಚನೆಗಳನ್ನು ಸ್ಥಳೀಯ ಮಟ್ಟಕ್ಕೆ ತಲುಪಿಸಲು ಸಾಮಾಜಿಕ ಮತ್ತು ಇತರ ಸಮೂಹ ಮಾಧ್ಯಮಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ತಿಳುವಳಿಕೆ ಮೂಡಿಸುವುದು ಹಾಗೂ ಈ ಕುರಿತು ರೈತ ಸಂಪರ್ಕ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಪಶು ವೈದ್ಯಕೀಯ ಚಿಕಿತ್ಸಾ ಕೇಂದ್ರಗಳು ಹಾಗೂ ಗ್ರಾಮ ಪಂಚಾಯತಿಗಳ ಮೂಲಕ ಮಾಹಿತಿ ನೀಡುವುದು ಮತ್ತು ಜಾಗೃತಿ ಮೂಡಿಸುವುದು.ಸ್ಥಳೀಯ ಜನರನ್ನು ಎಚ್ಚರಿಸಲು ಹಾಗೂ ಗುಡುಗು ಮತ್ತು ಸಿಡಿಲಿನ…
ಲೇಖನ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತುಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಹೆಲೆನ್ ಕೆಲ್ಲರ್ ಅಮೆರಿಕದ ಪ್ರಖ್ಯಾತ ಬರಹಗಾರ್ತಿ, ರಾಜಕೀಯ ಕಾರ್ಯಕರ್ತೆ, ಉಪನ್ಯಾಸಕಿ, ಸಾಮಾಜಿಕ ಕಾರ್ಯಕರ್ತೆ, ಅಂಗವಿಕಲರು ಮತ್ತು ಶೋಷಿತ ಜನರ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ ಮಾನವತಾವಾದಿ. ಇನ್ನೂ ಕೇವಲ 19 ತಿಂಗಳ ಹಸುಳೆಯಾಗಿದ್ದಾಗಲೇ ಅವರಿಗೆ ಕುರುಡುತನ ಮತ್ತು ಕಿವುಡುತನ ಎರಡೂ ಪ್ರಾಪ್ತವಾಯಿತು. ಹೀಗೆ ಯಾವುದೇ ಬದುಕಿನ ಅಡೆತಡೆಗಳಿದ್ದರೂ ಮನುಷ್ಯನಿಗೆ ಸಾಧ್ಯವಿಲ್ಲದ್ದು ಯಾವುದೂ ಇಲ್ಲ ಎಂದು ತಮ್ಮ ಬದುಕಿನಿಂದ ನಿರೂಪಿಸಿದ ಮಹಾನ್ ಚೇತನ ಹೆಲೆನ್ ಕೆಲ್ಲರ್.ಬದುಕೆoಬುದಕ್ಕೆ ಅರ್ಥ ಇಷ್ಟೇ, ಒಂದೋ ಅದು ಧೈರ್ಯದಿಂದ ಎದುರಿಸಬೇಕಾದ ಸವಾಲು, ಇನ್ನೊಂದೋ ಅದು ಏನೂ ಅಲ್ಲ. ನಮಗೆ ಯಾವುದು ಬೇಕು ಅದನ್ನು ಆರಿಸಿಕೊಳ್ಳಬಹುದು. ಆಕೆಯ ಈ ಉದ್ಘೋಷ ಬಹಳಷ್ಟನ್ನು ಹೇಳುತ್ತದೆ. ಹೆಲನ್ ಕೆಲ್ಲರ್ ಕಿವುಡು ಮತ್ತು ಅಂಧ ವ್ಯಕ್ತಿಯಾಗಿ ಕಲಾ ಪದವಿ ಪಡೆದ ಪ್ರಪ್ರಥಮರು. ಆನ್ ಸುಲ್ಲಿವನ್ ಮ್ಯಾಸಿ ಎಂಬಾಕೆ ಯಾವುದೇ ಉಪಯೋಗಕ್ಕೆ ಬಾರದೆ ಹೋಗಬಹುದಾಗಿದ್ದ ಈ ಅಂಧ ಮತ್ತು ಕಿವುಡು ಜೀವಿಯನ್ನು ವಿಶ್ವದ ಅದ್ಭುತ ಪ್ರತಿಭೆಯನ್ನಾಗಿಸುವಲ್ಲಿ…
