ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕಿನ ಪಡಗಾನೂರ ಗ್ರಾಮದ ಸೋಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ದಿ: ೬ರಂದು(ಇಂದು) ರಕ್ತದಾನ, ನೇತ್ರ ಉಚಿತ ತಪಾಸಣೆ ಹಾಗೂ ಎಲಬು ಕೀಲುಗಳ ಉಚಿತ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ.
ಗ್ರಾಮದಲ್ಲಿ ಬೆಳಿಗ್ಗೆ ೯ ಗಂಟೆಯಿಂದ ಮಧಾನ್ಹ ೨ ಗಂಟೆಯವರೆಗೆ ಜರುಗುವ ಈ ಶಿಬಿರಗಳಲ್ಲಿ ಅನುಗ್ರಹ ವ್ಹಿಜನ ಫೌಂಡೇಶನ್ ಟ್ರಸ್ಟ್ ವಿಜಯಪುರದ ನೇತ್ರ ತಜ್ಞರಾದ ಡಾ.ಪ್ರಭುಗೌಡ ಲಿಂಗದಳ್ಳಿ (ಚಬನೂರ) ಇವರಿಂದ ನೇತ್ರ ಉಚಿತ ತಪಾಸಣೆ. ವಿಜಯಪುರ ಶ್ರೇಯಾ ಅಸ್ಪತ್ರೆಯ ಎಲುಬು ಕೀಲುಗಳ ತಜ್ಞರಾದ ಡಾ.ಭೀಮನಗೌಡ ಪಾಟೀಲರಿಂದ ಎಲುಬು ಕೀಲುಗಳ ಉಚಿತ ತಪಾಸಣೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಂದಗಿ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ ಜರುಗಲಿದೆ.
ಜಾತ್ರೆಗೆ ಆಗಮಿಸಿದ ಭಕ್ತರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇವುಗಳ ಸದುಪಯೋಗ ಪಡೆದುಕೊಳ್ಳುವಂತೆ ಜಾತ್ರಾ ಕಮೀಟಿ ಪ್ರಕಟಣೆ ಮೂಲಕ ಕೋರಿದೆ.
