ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಡಾ.ಬಾಬು ಜನಜೀವನರಾಮ್ ಜಯಂತಿ ಆಚರಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹಿಂದುಳಿದ ಮತ್ತು ತುಳಿತಕ್ಕೊಳಗಾದ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿದ ಗಮನಾರ್ಹ ಭಾರತೀಯ ಕಾರ್ಯಕರ್ತ ಮತ್ತು ರಾಜಕಾರಣಿ ಡಾ ಬಾಬು ಜಗಜೀವನರಾಮ್ ಅವರು ನಮಗೆ ಎಂದೆಂದೂ ಆದರ್ಶಪ್ರಾಯರು. ಅವರ ವಿಚಾರಧಾರೆಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳುವಂತಾಗಬೇಕೆಂದು ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ದೆ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಡಾ ಬಾಬು ಜಗಜೀವನರಾಮ್ ಜಯಂತಿಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಪಿಯುಸಿ ಪ್ರಾಚಾರ್ಯ ಪ್ರೊ.ಸಿ.ಬಿ.ಪಾಟೀಲ, ಐಕ್ಯೂಎಸಿ ನಿರ್ದೇಶಕರು ಡಾ.ಪಿ.ಎಸ್.ಪಾಟೀಲ, ನ್ಯಾಕ್ ಸಂಯೋಜಕರು ಡಾ.ಕೆ.ಮಹೇಶ್ ಕುಮಾರ, ಪ್ರೊ.ಎಸ್ ಡಿ ಪಾಟೀಲ, ಪ್ರೊ.ಮಾಲತಿ ಚನಗೊಂಡ, ಮತ್ತು ಡಾ.ಗಿರೀಶ್ ಹನಮರೆಡ್ಡಿ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

