Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮಹಾರಾಷ್ಟ್ರದಿಂದ 1.43 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ | ಜನರು ನದಿಗೆ ಇಳಿಯದಂತೆ ಮನವಿ ಉದಯರಶ್ಮಿ ದಿನಪತ್ರಿಕೆ ಆಲಮೇಲ: ಮಹಾರಾಷ್ಟ್ರದ ಭೀಮಾ ನದಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಜನಿ ಹಾಗೂ ವೀರ್ ಜಲಾಶಯಗಳಿಂದ ಒಟ್ಟು 1.43 ಲಕ್ಷ ಕ್ಯೂಸೆಕ್ ನೀರನ್ನು ಭೀಮಾ ನದಿಗೆ ಬಿಡುಗಡೆ ಮಾಡಲಾಗಿದೆ. ಇದರಿಂದ ಮುಂದಿನ 24 ಗಂಟೆಗಳಲ್ಲಿ ಆಲಮೇಲ ತಾಲೂಕಿನ ದೇವಣಗಾಂವ- ಸೊನ್ನ ಗ್ರಾಮಗಳ ಸಮೀಪದ ನಿರ್ಮಿಸಲಾಗಿರುವ ಸೊನ್ನ ಬ್ಯಾರೇಜ್ ತಲುಪುವ ಸಾಧ್ಯತೆ ಇದೆ.ಇದರಿಂದ ಭೀಮಾ ನದಿಯಲ್ಲಿ ನೀರಿನ ಹರಿವು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದ್ದು, ನದಿ ತೀರದ ಗ್ರಾಮಗಳು ಹಾಗೂ ಪುಣ್ಯಕ್ಷೇತ್ರಗಳಲ್ಲಿ ಎಚ್ಚರಿಕೆ ವಹಿಸುವಂತೆ ಅಫಜಲಪುರ ಕೆಎನ್‌ಎನ್‌ಎಲ್ ಕಾರ್ಯಪಾಲಕ ಎಂಜಿನಿಯರ್ ಸಂತೋಷಕುಮಾರ ಸಜ್ಜನ್ ತಿಳಿಸಿದ್ದಾರೆ.ಉಜನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ಹಾಗೂ ವೀರ್ ಜಲಾಶಯದಿಂದ 63 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಮೇಲ್ಭಾಗದಲ್ಲಿ ಮಳೆ ಮುಂದುವರಿದಿರುವುದರಿಂದ ನೀರಿನ ಬಿಡುಗಡೆಯ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಅವರು ಹೇಳಿದರು.ಪ್ರಸ್ತುತ ಭೀಮಾ ಏತ…
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಓರ್ವ ನಿಜವಾದ ಪತ್ರಕರ್ತ ಎಂದರೆ ನಿರಂತರವಾಗಿ ವಿದ್ಯಾರ್ಥಿಗಳಂತೆ ನಿತ್ಯ ನಡೆಯುವ ವಿಷಯಗಳನ್ನು ಸಂಗ್ರಹಿಸಿ ಸುದ್ದಿ ಪ್ರಸಾರ ಮಾಡುತ್ತಾರೆ ಎಂದು ಜಿಲ್ಲಾ ಕಾರ್ಯಕಾರಿ ಸದಸ್ಯ ಶಂಕರ ಜಲ್ಲಿ ಹೇಳಿದರು.ಗುರುವಾರ ಆಲಮಟ್ಟಿಯಲ್ಲಿರುವ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ದೇಶ, ರಾಜ್ಯ ಮತ್ತು ಸಮಾಜ ಪರಿವರ್ತನೆಯಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಪತ್ರಕರ್ತರು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು. “ಪತ್ರಕರ್ತರೆಂದರೆ ಕಾರ್ಯನಿರತರಾಗಬೇಕು, ಕಾರ್ಯಮರೆತವರಾಗಬಾರದು” ಎಂದು ಅವರು ಹೇಳಿದರು.ಹಿರಿಯ ಪತ್ರಕರ್ತ ಜಿ.ಸಿ. ಮುತ್ತಲದಿನ್ನಿ ಅವರು ೨೦೨೬-೨೭ನೇ ಸಾಲಿನ ಕಾನಿಪ ಸಂಘದ ಗುರುತಿನ ಚೀಟಿ ವಿತರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾನಿಪ ಸಂಘದ ನಿಡಗುಂದಿ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಹೆರಕಲ್ಲ ವಹಿಸಿದ್ದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಹಿಬೂಬ ವಾಲಿಕಾರ, ಪ್ರಧಾನ ಕಾರ್ಯದರ್ಶಿ ಮಹ್ಮದ್ ಅಲಿ ಮಕಾನದಾರ, ಕಾರ್ಯದರ್ಶಿ ಶೇಖರ ಬಳ್ಳಾರಿ, ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ತೊರಗಲ್ಲಮಠ, ಮಹೇಶ ಅಢಾಳಿ, ಬಿ.ಎಂ. ಮಠಪತಿ, ಕೆ.ಎಂ. ಬಿರಾದಾರ (ಗುಡ್ನಾಳ), ಜಿ.ಎಂ. ಹಿರೇಮಠ, ಮಂಜುನಾಥ ಹಿರೇಮಠ,…
ತದ್ದೇವಾಡಿ ಹಳ್ಳಿಯ ಜಾನಪದ ಸಿರಿ ಸಮ್ಮೇಳನ | ಎತ್ತಿನ ಬಂಡಿಯಲ್ಲಿ ಸರ್ವಾಧ್ಯಕ್ಷರ ಮೆರವಣಿಗೆ ಉದಯರಶ್ಮಿ ದಿನಪತ್ರಿಕೆ ಚಡಚಣ: ಜಾನಪದ ಕಲೆಗಳು ನಮ್ಮ ದೇಶದ ಸಂಸ್ಕೃತಿಯ ಪ್ರತಿಬಿಂಬವಾಗಿವೆ. ನಮ್ಮ ಸಂಸ್ಕೃತಿ ಹಾಗೂ ದೇಶಿಯ ಸೊಗಡಾಗಿರುವ ಇವು ನಮ್ಮ ನಾಗರಿಕತೆಯ ಸಂಕೇತವಾಗಿವೆ. ಈ ಕಲೆಗಳನ್ನು ಉಳಿಸಿ ಬೆಳಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಜಿಲ್ಲಾ ಬಂಜಾರಾ ಪ್ರೌಢ ಶಾಲೆಯ ಅಧ್ಯಕ್ಷರಾದ ಡಿ.ಎಲ್.ಚವ್ಹಾಣ್‌ರವರು ಹೇಳಿದರು.ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಚಡಚಣ ತಾಲೂಕು ಘಟಕ ಹಾಗೂ ಶ್ರೀ ಗುರು ಚಂದ್ರಶೇಖರ ಮಹಾಸಂಸ್ಥಾನ ಹಿರೇಮಠ ತದ್ದೇವಾಡಿ ಇವರುಗಳ ಸಂಯುಕ್ತಾಶ್ರಯದಲ್ಲಿ ಗುರು ಪೂರ್ಣಿಮೆಯ ನಿಮಿತ್ತ ಹಮ್ಮಿಕೊಂಡಿದ್ದ ‘ಹಳ್ಳಿಯ ಜಾನಪದ ಸಿರಿ-೪’ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವಹಿಸಿ ಮಾತನಾಡಿದ ಅವರು. ಜನಪದ ಹಾಡು, ಜನಪದ ನೃತ್ಯ, ಬೀಸುಕಲ್ಲಿನ ಪದ, ಜೋಗುಳ ಪದ ಇಂತಹ ಅನೇಕ ಹಾಡುಕುಣಿತಗಳು ಕೃಷಿ ಬದುಕು ಹಾಗೂ ಹಳ್ಳಿ ಬದುಕಿನಲ್ಲಿ ಮೂಡಿ ಬಂದ ಅತ್ಯಧ್ಭುತ ಕಲೆಗಳಾಗಿವೆ. ಇವುಗಳಲ್ಲಿ ದೇಸೀಯ ಸೊಗಡಿನ ಜೊತೆಗೆ ಸಮಾಜದ ಅಂತಕರಣ ಅದರಲ್ಲಿ ಅಡಗಿದೆ ಎಂದು ಹೇಳಿದರು.ಕಾರ್ಯಕ್ರಮದ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕಿನ ಬಣಜಿಗ ಸಮುದಾಯದ ಕ್ಷೇಮಾಭಿವೃದ್ಧಿ ಸಂಘದಿಂದ ದಿ:೧ ರಂದು (ಇಂದು) ೨ಎ ಮೀಸಲಾತಿಗಾಗಿ ಆಗ್ರಹಿಸಿ ಸಭೆ ಕೈಗೊಂಡು, ಮನವಿ ಸಲ್ಲಿಸಲಾಗುತ್ತಿದೆ.ಶನಿವಾರ ಬೆಳಿಗ್ಗೆ ೧೦ ಗಂಟೆಗೆ ಪಟ್ಟಣದ ಸಿಂದಗಿ ರಸ್ತೆಯಲ್ಲಿನ ಮಡಿವಾಳ ಮಾಚಿದೇವರ ದೇವಸ್ಥಾನದಲ್ಲಿ ಸಮುದಾಯದ ಸಭೆ ಜರುಗಲಿದೆ. ನಂತರ ಮೌನ ಮೆರವಣಿಗೆಯೊಂದಿಗೆ ಮೊಹರೆ ಹಣಮಂತ್ರಾಯ ವೃತ್ತ, ಬಸ್‌ನಿಲ್ದಾಣ ಮಾರ್ಗ, ಅಂಬೇಡ್ಕರ್ ವೃತ್ತ, ಇಂಡಿ ರಸ್ತೆಯ ಮೂಲಕ ತಹಶೀಲ್ದಾರ ಕಾರ್ಯಾಲಯ ತಲುಪಿ ಮನವಿ ಸಲ್ಲಿಸಲಾಗುತ್ತಿದೆ.ಈ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ಬಣಜಿಗ ಸಮುದಾಯದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಕೈಗೊಂಡ ಮೀಸಲಾತಿ ಹೋರಾಟಕ್ಕೆ ಹೆಚ್ಚಿನ ಬಲ ತುಂಬಲು ಸಂಘದ ಪ್ರಕಟಣೆ ತಿಳಿಸಿದೆ.
ಆಲಮೇಲ ತಾಲೂಕು ಕಾನಿಪ ಸಂಘದಿಂದ ಪತ್ರಿಕಾ ದಿನಾಚರಣೆ | ಸಂಘದ ಅಧ್ಯಕ್ಷ ಅವಧೂತ ಬಂಡಗಾರ ಅಭಿಮತ ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪತ್ರಿಕೋದ್ಯಮವು ಸಮಾಜದ ಕಣ್ಣು ಮತ್ತು ಕಿವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಆಲಮೇಲ ತಾಲ್ಲೂಕು ಕಾನಿಪ ಸಂಘದ ಅಧ್ಯಕ್ಷ ಅವಧೂತ ಬಂಡಗಾರ ಹೇಳಿದರು.ಗುರುವಾರ ಸಂಜೆ ಆಲಮೇಲ ಪಟ್ಟಣದ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯ (ಓಂ ಶಾಂತಿ) ಕೇಂದ್ರದಲ್ಲಿ ಆಲಮೇಲ ತಾಲ್ಲೂಕು ಕಾನಿಪ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಹಿರಿಯ ಪತ್ರಕರ್ತ ಡಾ. ರಮೇಶ ಕತ್ತಿ ಮಾತನಾಡಿ, ಪತ್ರಿಕಾ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಪತ್ರಿಕೆಗಳು ಕೇವಲ ಸುದ್ದಿಯನ್ನು ನೀಡುವ ಮಾಧ್ಯಮವಲ್ಲ; ಸಮಾಜದ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಮತ್ತು ಆಡಳಿತದ ಗಮನಕ್ಕೆ ತರುವ ಸೇತುವೆಯಾಗಿವೆ. ಸತ್ಯ, ನಿಷ್ಪಕ್ಷಪಾತತೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ ಕಾರ್ಯನಿರ್ವಹಿಸುವ ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ತನ್ನ ಗೌರವವನ್ನು ಉಳಿಸಿಕೊಂಡಿದೆ ಎಂದು ಹೇಳಿದರು.ಬ್ರ.ಕು.ರೇಣುಕಾ ಅಕ್ಕನವರು ಮಾತನಾಡಿಇಂದಿನ ಡಿಜಿಟಲ್ ಯುಗದಲ್ಲಿ ಸುಳ್ಳು ಸುದ್ದಿಗಳ…
ದೇವರಹಿಪ್ಪರಗಿ ಸಮೃದ್ಧಿ ಸಹಕಾರ ಸಂಘದ ೫ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅಧ್ಯಕ್ಷೆ ಸಂಗೀತಾ ನಾಯಿಕ್ ಅಭಿಮತ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸಂಘದ ಸರ್ವೋತೋಮುಖ ಅಭಿವೃದ್ಧಿಯಲ್ಲಿ ಸದಸ್ಯರು, ಠೇವುದಾರರು, ನಿರ್ದೇಶಕ ಮಂಡಳಿ ಸೇರಿದಂತೆ ಗ್ರಾಹಕರ ಪಾತ್ರ ಬಹುಮುಖ್ಯವಾಗಿದೆ ಎಂದು ಸಮೃದ್ಧಿ ಸಹಕಾರ ಸಂಘದ ಅಧ್ಯಕ್ಷೆ ಸಂಗೀತಾ ನಾಯಿಕ್ ಹೇಳಿದರು.ಪಟ್ಟಣದ ಕಲ್ಮೇಶ್ವರ ಮಂಗಲ ಭವನದಲ್ಲಿ ಶುಕ್ರವಾರ ಜರುಗಿದ ಸಮೃದ್ಧಿ ಸಹಕಾರ ಸಂಘದ ೫ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಂಘದ ಪ್ರಗತಿಗೆ ಕಳೆದ ೪ ವರ್ಷಗಳಿಂದ ನೀಡುತ್ತಿರುವ ಸದಸ್ಯರ ಸಹಕಾರ ಶ್ಲಾಘನೀಯ ಎಂದರು.ಸಂಘದ ಉಪಾಧ್ಯಕ್ಷ ರಿಯಾಜ್ ಯಲಗಾರ ಮಾತನಾಡಿ, ಒಟ್ಟು ೯೯೮ ಸದಸ್ಯ ಬಲದ ಸಂಘವು ೧೦.೨೪ ಲಕ್ಷ ಶೇರು ಬಂಡವಾಳದೊಂದಿಗೆ ಕಾರ್ಯಾರಂಭ ಮಾಡಿ ಈಗ ೧.೨೪ ಕೋಟಿ ಶೇರು ಬಂಡವಾಳದೊಂದಿಗೆ ಸುಮಾರು ೧೧.೦೩ ಕೋಟಿ ದುಡಿಯುವ ಬಂಡವಾಳ ಹೊಂದಿದೆ. ೨೦೨೫-೨೬ನೇ ಸಾಲಿನಲ್ಲಿ ೫೧.೪೭ ಕೋಟಿ ವ್ಯವಹಾರ ನಡೆಸಿ ೪೬.೬೬ ಲಕ್ಷ ರೂ.ಗಳ ನಿವ್ವಳ ಆದಾಯ ಗಳಿಸಿದೆ. ಮುಂಬರುವ ವರ್ಷಗಳಲ್ಲಿ ಠೇವುಗಳನ್ನು ರೂ.…
ಭೂಸೇನಾ ನಿವೃತ್ತ ಹವಾಲ್ದಾರ್ ಕಲ್ಮೇಶ ಆಸಂಗಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮನಸ್ಸು ಮಾಡಿ ಪ್ರಯತ್ನ ಪಟ್ಟರೆ ಯಾರು ಬೇಕಾದರೂ ಸಹ ಎಂಥದೇ ಕೆಲಸವನ್ನು ಪಡೆದುಕೊಳ್ಳಬಹುದು. ಆದರೆ ಭಾರತಾಂಬೆಗಾಗಿ ಹಗಲಿರುಳು ಶ್ರಮಿಸಿ ಅವಕಾಶ ಸಿಕ್ಕಾಗ ಪ್ರಾಣಾರ್ಪಣೆ ಮಾಡುವ ಅವಕಾಶ ಕೇವಲ ಪುಣ್ಯವಂತರಿಗೆ ಮಾತ್ರ ದೊರೆಯುತ್ತದೆ ಎಂದು ಭೂಸೇನಾ ನಿವೃತ್ತ ಹವಲ್ದಾರ್ ಹಾಗೂ ದ್ರೋಣಾ ಸೋಲ್ರ‍್ಸ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಕಲ್ಮೇಶ ಆಸಂಗಿ ಹೇಳಿದರು.ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯ ದಿವಸ ಹಾಗೂ ಗುರುಪೌರ್ಣಿಮೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು; ಭಾರತ ದೇಶದಲ್ಲಿ ದುಡಿಯುವ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿ ಭಾರತಾಂಬೆಯ ಸೇವೆ ಮಾಡುತ್ತಾರೆ. ಆದರೆ ಪ್ರಾಣವನ್ನು ಅರ್ಪಿಸಿ ಋಣವನ್ನು ತೀರಿಸುವ ಅವಕಾಶ ಕೇವಲ ಸೈನಿಕನಿಗೆ ಮಾತ್ರ ದೊರೆಯುತ್ತದೆ. ಹಾಗೆಯೇ ಸೈನ್ಯಕ್ಕೆ ಸೇರುವ ಅವಕಾಶವು ಸಹ ಕೇವಲ ಪುಣ್ಯವಂತರಿಗೆ ಮಾತ್ರ ಅವಕಾಶ ಲಭಿಸುತ್ತದೆ. ಅಂಥ ಪುಣ್ಯವಂತರಲ್ಲಿ ನಾನು ಕೂಡ ಒಬ್ಬನಾಗಿದ್ದು ನನಗೆ ಹೆಮ್ಮೆ ಎನಿಸುತ್ತದೆ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಬಣಜಿಗ ಸಮುದಾಯವನ್ನು ಉದ್ಯೋಗ ಮೀಸಲಾತಿ ಉದ್ದೇಶಕ್ಕಾಗಿ ಪ್ರವರ್ಗ 2ಎ ಅಡಿಯಲ್ಲಿಯೇ ಪರಿಗಣಿಸಿ, ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಬಣಜಿಗ ಸಮುದಾಯದ ಮುಖಂಡರಿಂದ ತಹಶ್ದೀಲ್ದಾರ ಸಂತೋಷ ಮ್ಯಾಗರಿಯವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆಮನವಿಯಲ್ಲಿ, ಮೈಸೂರು ಜಿಲ್ಲೆಯ ಕೊಳ್ಳೆಗಾಲದ ಶಿಕ್ಷಕಿ ಸುಮಿತ್ರಾ ಸಲ್ಲಿಸಿದ್ದ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು 2025ರ ಏಪ್ರಿಲ್ 9ರಂದು ನೀಡಿದ ತೀರ್ಪಿನಲ್ಲಿ, ಬಣಜಿಗ ಸಮುದಾಯವನ್ನು ಉದ್ಯೋಗಕ್ಕಾಗಿ ಪ್ರವರ್ಗ ಡಿ ಹಾಗೂ ಶಿಕ್ಷಣಕ್ಕಾಗಿ ಪ್ರವರ್ಗ ಬಿ ಅಡಿಯಲ್ಲಿ ವರ್ಗೀಕರಿಸಿರುವುದು ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ಸಂವಿಧಾನದ ಪರಿಚ್ಛೇದ 16(4)ರ ಅನ್ವಯ ಉದ್ಯೋಗ ಮೀಸಲಾತಿಗೂ ಪ್ರವರ್ಗ ಬಿ (ಪ್ರಸ್ತುತ 2ಎ) ಅಡಿಯಲ್ಲಿಯೇ ಪರಿಗಣಿಸುವಂತೆ ಮರು ವರ್ಗೀಕರಣಕ್ಕೆ ಆದೇಶ ನೀಡಿದೆ ಎಂದು ಉಲ್ಲೇಖಿಸಲಾಗಿದೆ.ಬಣಜಿಗ ಸಮುದಾಯ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಕಾರಣ ಸರ್ಕಾರಿ ಉದ್ಯೋಗಗಳಲ್ಲಿ ಸಮರ್ಪಕ ಅವಕಾಶಗಳಿಂದ ವಂಚಿತವಾಗುತ್ತಿದೆ. ಹೀಗಾಗಿ ಉಚ್ಚ ನ್ಯಾಯಾಲಯದ ಆದೇಶವನ್ನು ತ್ವರಿತವಾಗಿ ಜಾರಿಗೆ ತಂದು, ಬಣಜಿಗ ಸಮುದಾಯಕ್ಕೆ…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಜ್ಞಾನದ ಮೂಲವಾಗಿರುವ ವೇದಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ ಮಹರ್ಷಿ ವೇದವ್ಯಾಸರ ಜನ್ಮದಿನವನ್ನು ಗುರು ಪೂರ್ಣಿಮೆ ಎಂದು ಹಿರಿಯ ಸಾಹಿತಿ, ಲಿಂಗನಗೌಡ ಮಾಲಿ ಪಾಟೀಲ್ ಹೇಳಿದರು.ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶ್ರೀ ಗುರು ಕಾಂತೇಶ್ವರ ಜನಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಜಗವ ಬೆಳಗಲು ಸೂರ್ಯ ಚಂದ್ರರು ಹೇಗೆ ಮುಖ್ಯವೋ ಹಾಗೆಯೇ ಪ್ರತಿಯೊಬ್ಬರ ಜೀವನ ಬೆಳಗಲು ಸದ್ಗುರುವಿನ ಸಾಮಿಪ್ಯ ಅಷ್ಟೇ ಮುಖ್ಯ ಎಂದವರು, ಶ್ರೀಮಠದಲ್ಲಿ ಆರಂಭವಾದ ಶಿವಾನುಭವ ಗೋಷ್ಠಿ ಯಶಸ್ವಿಯಾಗಿ ಹನ್ನೊಂದು ವರ್ಷಗಳನ್ನು ಪೂರೈಸಿ ಹನ್ನೆರಡನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಅತೀವ ಸಂತಸ ತಿಂದಿದೆ ಎಂದರು.ಉಪನ್ಯಾಸ ನೀಡಿದ ಮಲ್ಲಯ್ಯ ಸ್ವಾಮಿ ವಡಿಗೇರಿ ದುರಹಂಕಾರ, ದುರ್ಬುದ್ಧಿ ದುರ್ಬಲ ಮನಸ್ಸಿನ ವ್ಯಕ್ತಿಗಳಿಗೆ ಗುರು ಯಾವತ್ತೂ ದೊರೆಯುವುದಿಲ್ಲ, ಕಾಯ, ವಾಚ, ಮನಸಾರೆ ಭಜಿಸಿದಾಗ ಗುರು ಕೃಪೆ ಸುಲಭ ಸಾಧ್ಯ ಎಂದರು.ಕಾರ್ಯಕ್ರಮದ ಸಾನಿಧ್ಯ ವಹಿಸಿದ ಚನ್ನಬಸವ ಶಿವಾಚಾರ್ಯರು ಆಶೀರ್ವಚನ ನೀಡಿದರು.ಇದೇ ವೇಳೆ ಸಾಸನೂರಿನ…
