ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಗುಬ್ಬೇವಾಡ ಗ್ರಾಮದ ಬಿ ಎಂ ಪಾಟೀಲ ಪ್ರೌಢ ಶಾಲೆ ಹಾಗೂ ಆಕ್ಸಫರ್ಡ್ ಇಂಟರನ್ಯಾಷನಲ್ ಸ್ಕೂಲ್ ಶಾಲಾ ಎಸ್ಸೆಸ್ಸೆಲ್ಸಿ 2025-26 ರ ಫಲಿತಾಂಶದಲ್ಲಿ ನೂರಕ್ಕೆ ನೂರು ಸಾಧನೆ ಮಾಡಿದೆ.
ಶಾಲೆಯ ವಿದ್ಯಾರ್ಥಿಗಳಾದ ಕುಮಾರಿ ಅರ್ಚನಾ ಮಲಕಪ್ಪ ಜಾಲವಾದಿ ಬೋರಗಿ 89% ಶಾಲೆಗೆ ಪ್ರಥಮ ಸ್ಥಾನ, ಕುಮಾರ ಸಂತೋಷ ಸಾವಳಸಂಗ ಬೋರಗಿ 88%, ದ್ವಿತೀಯ ಸ್ಥಾನ, ಕುಮಾರ ಸಂಗಮೇಶ ಕುಂಬಾರ ಬೋರಗಿ ತೃತೀಯ 80% ಹಾಗೂ ಕುಮಾರಿ ಕಾವೇರಿ ಚಾವರ 79% ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಬಾಪುಗೌಡ ಎಂ ಪಾಟೀಲ್ ಹಾಗೂ ಮುಖ್ಯ ಗುರುಗಳು, ಶಿಕ್ಷಕರು, ಸಿಬ್ಬಂದಿ ಮತ್ತು ಪಾಲಕರು ಅಭಿನಂದನೆಗಳು ತಿಳಿಸಿದ್ದಾರೆ.

