ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ಶ್ರೀ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವವು ಮೇ 4ರಿಂದ ಭಕ್ತಿಭಾವ ಹಾಗೂ ವಿಜೃಂಭಣೆಯಿಂದ ನಡೆಯಲಿದೆ.
ಮೇ 4 ಸೋಮವಾರ ಮುಂಜಾನೆ 10 ಗಂಟೆಗೆ ಕೃಷಿ ಮೇಳ ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಅರವಟಿಗಿ ಬಸವೇಶ್ವರ ದೇವಸ್ಥಾನದಿಂದ ಹಂದರ ತಪ್ಪಲು ಮೆರವಣಿಗೆ ಮೂಲಕ ಆಗಮಿಸಿ ದೇವಸ್ಥಾನಕ್ಕೆ ಹಂದರ ತಪ್ಪಲು ಹಾಕುವ ಕಾರ್ಯಕ್ರಮ ಹಾಗೂ ಕಳಸಾರೋಹಣ ನೆರವೇರಿಸಲಾಗುವುದು.
ಮೇ 5 ಮಂಗಳವಾರ ಮುಂಜಾನೆ 5 ಗಂಟೆಗೆ ಹೋಮ–ಹವನ ಕಾರ್ಯಕ್ರಮದಲ್ಲಿ ದಂಪತಿಗಳು ಭಾಗವಹಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಶ್ರೀ ದೇವಿ ಗಂಗಾ ಸ್ಥಳಕ್ಕೆ ತೆರಳಿ ಗಂಗಾ ಸ್ನಾನ ನಡೆಸಿ, ಪಟ್ಟಣದ ಪ್ರಮುಖ ರಸ್ತೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿ ಭವ್ಯ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಲಾಗುವುದು. ಮಧ್ಯಾಹ್ನ 3 ಗಂಟೆಗೆ ದೇವಿ ಆಗಮನ, ಸಂಜೆ 6 ಗಂಟೆಗೆ ಉತ್ತಮ ಶಿಕ್ಷಕರು, ಪ್ರತಿಭಾ ವಿದ್ಯಾರ್ಥಿಗಳಿಗೆ ಹಾಗೂ ವಿಶೇಷ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಧರ್ಮಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮೇ 6 ಬುಧವಾರ ಮುಂಜಾನೆ 9 ಗಂಟೆಗೆ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಹಾಗೂ ಮಹಿಳೆಯರ ಪಾತ್ರ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಕೃಷಿ ತಜ್ಞರು ಹಾಗೂ ಸಾಧಕ ರೈತರಿಂದ ಕೃಷಿ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮೇ. 7 ಗುರುವಾರ ಸಂಜೆ 4 ಗಂಟೆಗೆ ಹಂದರ ತಪ್ಪಲು ಇಳಿಯುವ ಮೂಲಕ ಜಾತ್ರಾ ಮಹೋತ್ಸವ ಮುಕ್ತಾಯಗೊಳ್ಳಲಿದೆ ಎಂದು ಶ್ರೀ ದ್ಯಾಮವ್ವ ದೇವಿ ಸೇವಾ ಸಮಿತಿಯವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ದ್ಯಾಮವ್ವ ದೇವಿ ಸೇವಾ ಸಮಿತಿ ಅಧ್ಯಕ್ಷ ಎಂ.ಎಸ್. ಬೆಳ್ಳುಬ್ಬಿ, ಕಾರ್ಯದರ್ಶಿ ಈರಯ್ಯ ಮಠಪತಿ, ಬಸಪ್ಪ ಬಾಟಿ, ಸಂಗಪ್ಪ ಪತಂಗಿ, ನಾಮದೇವ ಪವಾರ, ಚೆನ್ನಯ್ಯ ಗಣಕುಮಾರ, ಮಲ್ಲಪ್ಪ ಗಣಿ, ಸಂಗಪ್ಪ ತುಂಬರಮಟ್ಟಿ, ರಾಜು ತುಂಬರಮಟ್ಟಿ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅರ್ಜಿ ಆಹ್ವಾನ
ಕೊಲ್ಹಾರ ತಾಲೂಕು ವ್ಯಾಪ್ತಿಯ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಮೇ 1ರೊಳಗೆ ಶಾಲಾ ದೃಢೀಕರಣ ಅಂಕಪಟ್ಟಿ, ಪೋಟೊ ಹಾಗೂ ಆಧಾರ್ ಕಾರ್ಡ್ ಪ್ರತಿಗಳನ್ನು ಅಗಸಿ ಸಮೀಪದ ಕೊಲ್ಹಾರ ವಿವಿಧೋದ್ದೇಶ ಸಹಕಾರಿ ಬ್ಯಾಂಕ್‌ಗೆ ಸಲ್ಲಿಸಬೇಕು.

