Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಜೈ ಶ್ರೀ ರಾಮ್, ಯಡಿಯೂರಪ್ಪ, ವಿಜಯೇಂದ್ರ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಇವರುಗಳಿಗೆ ಧಿಕ್ಕಾರ, ಹಿಂದು ಹುಲಿ ಬಸನಗೌಡ ಪಾಟೀಲ ಯತ್ನಾಳರಿಗೆ ಜಯವಾಗಲಿ ಈ ಆಕ್ರೋಷದ ಘೋಷಣೆಗಳು ಕೇಳಿ ಬಂದಿದ್ದು ಪಟ್ಟಣದಲ್ಲಿ.ಬಿಜೆಪಿಯಿಂದ ಯತ್ನಾಳರನ್ನು ಉಚ್ಛಾಟಿಸಿದ ಹಿನ್ನೆಲೆ ಸೋಮುವಾರ ನಡೆದ ಪ್ರತಿಭಟನೆಯಲ್ಲಿ ಪಂಚಮಸಾಲಿ ಸಮಾಜದ ಮುಖಂಡರು, ಯತ್ನಾಳರ ಅಭಿಮಾನಿಗಳು, ಹಿಂದೂಪರ ಸಂಘಟನೆಗಳು ಉರಿ ಬಿಸಿಲನ್ನೂ ಲೆಕ್ಕಸದೇ ತಲೆಯ ಮೇಲೆ ಕೇಸರಿ ಟೋಪಿ, ಕೊರಳಲ್ಲಿ ಕೇಸರಿ ಶಾಲು ಧರಿಸಿ, ಇಲ್ಲಿನ ಬನಶಂಕರಿ ದೇವಸ್ಥಾನದಿಂದ ಮುಖ್ಯ ಬಜಾರ, ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಕಿತ್ತೂರು ರಾಣಿ ಚನ್ನಮ್ಮ ವೃತ್ತದವರೆಗೆ ತಮ್ಮ ನಾಯಕನಿಗೆ ನ್ಯಾಯ ದೊರಕಬೇಕೆಂದು ಪ್ರತಿಭಟಿಸಿದರು.ಈ ವೇಳೆ ಬಸವೇಶ್ವರ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಯತ್ನಾಳರ ಅಭಿಮಾನಿ ರಾಘವ ಅಣ್ಣಿಗೇರಿ ಮಾತನಾಡಿ, ಇವತ್ತಿನ ಹೋರಾಟ ಯಾರೊಬ್ಬರ ವಿರುದ್ಧ ಅಲ್ಲ. ಬಿಜೆಪಿಯ ವಿಚಾರ ಧಾರೆಯನ್ನು ವಿರೋಧ ಮಾಡಲಿಕ್ಕೆ ಅಲ್ಲ. ರಾಷ್ಟ್ರೀಯ ನಾಯಕರಿಗೆ ಟೀಕೆ ಟಿಪ್ಪಣಿಗಳನ್ನು ಮಾಡಲಿಕ್ಕಲ್ಲ. ಯಾರದೋ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಸೋಮವಾರ ಬಸವನಬಾಗೇವಾಡಿ ಉಪವಿಭಾಗದಲ್ಲಿ ಬರುವ ಬಸವನಬಾಗೇವಾಡಿ, ನಿಡಗುಂದಿ, ಕೊಲ್ಹಾರ, ಕೂಡಗಿ, ತಾಳಿಕೋಟಿ, ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರೌಡಿ ಶೀಟರ್ಗಳ ಪೆರೇಡ್ನಲ್ಲಿ ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಸರಿಯಾದ ಕ್ಲಾಸ್ ತೆಗೆದುಕೊಂಡು ಖಡಕ್ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಮಾಜಕ್ಕೆ ತೊಂದರೆ ಉಂಟುಮಾಡದೇ ಸರಿಯಾದ ಜೀವನವನ್ನು ರೌಡಿಶೀಟರ್ಗಳು ಮಾಡಬೇಕು. ಒಂದು ವೇಳೆ ಅವರು ಏನಾದರೂ ಕೃತ್ಯಗಳನ್ನು ಮಾಡಿದರೆ ಅಂತಹವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಬಾರದು. ಸಮಾಜದಲ್ಲಿ ಸಾಮರಸ್ಯದೊಂದಿಗೆ ಜೀವನ ಮಾಡಬೇಕು. ಕೆಲ ರೌಡಿಶೀಟರ್ಗಳಿಗೆ ಹಬ್ಬಗಳಲ್ಲಿ ಭಾಗವಹಿಸದಂತೆ ಕಟ್ಟುನಿಟ್ಟಾಗಿ ಹೇಳಿದರು. ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಘಟನೆಗೆ ಕಾರಣವಾದರೆ ಅಂತಹವರ ಮೇಲೆ ಕಾನೂನು ಕ್ರಮ ತೆಗೆದುಕೊಂಡು ಗಡಿಪಾರು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಪರೇಡ್ನಲ್ಲಿ ಕೊಲೆ, ದರೋಡೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಒಟ್ಟು ೫೮ ಜನ ರೌಡಿಶೀಟರ್ಗಳು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಬಸವನಬಾಗೇವಾಡಿಯ ಪಿಐ ಗುರುಶಾಂತ ದಾಶ್ಯಾಳ, ಮುದ್ದೇಬಿಹಾಳ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪುರಸಭೆಯ ಸರ್ವ ಸದಸ್ಯರ ಸಲಹೆ ಪಡೆದುಕೊಂಡು ಅವರ ಸಹಕಾರದೊಂದಿಗೆ ಪಟ್ಟಣದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಪುರಸಭೆ ನೂತನ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಹೇಳಿದರು.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸೋಮವಾರ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣದ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಇರುವ ಆರು ತಿಂಗಳ ಅಲ್ಪಾವಧಿಯಲ್ಲಿ ನನ್ನ ಕಾಲಮಿತಿಯಲ್ಲಿ ಪಟ್ಟಣದ ಸರ್ವಾಂಗೀಣ ಅಭಿವೃದ್ದಿಗೆ ಬದ್ದ. ಸಚಿವ ಶಿವಾನಂದ ಪಾಟೀಲರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಪುರಸಭೆ ಸದಸ್ಯರು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬರದಂತೆ ಕಾರ್ಯ ನಿರ್ವಹಿಸುವುದಾಗಿ ಹೇಳಿದರು.ಉಪಾಧ್ಯಕ್ಷ ಅಶೋಕ ಹಾರಿವಾಳ ಮಾತನಾಡಿ, ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಆರು ತಿಂಗಳು ಮಾತ್ರ ಉಳಿದಿರುವುದರಿಂದ ಈ ಅವಧಿಯಲ್ಲಿ ಆಗಬೇಕಾದ ಕಾರ್ಯಗಳ ಬಗ್ಗೆ ವಾರ್ಡ್ ಗಳ ಸದಸ್ಯರೊಂದಿಗೆ ಚರ್ಚಿಸಿ ಅನುದಾನದ ಲಭ್ಯತೆಗೆ ಅನುಗುಣವಾಗಿ ಅಧ್ಯಕ್ಷರ ಅನುಮೋದನೆಯೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಅಭಿವೃದ್ಧಿ ಕಾರ್ಯಕ್ಕೆ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೇವಜೀರ ಕ್ಷೇಮಾಭಿವೃದ್ದಿ ಸಂಘವು ತಾಲೂಕಿನ ಸಂಕನಾಳ ಗ್ರಾಮದಲ್ಲಿ ಏ.9 ರಂದು ಬೆಳಗ್ಗೆ 10 ಗಂಟೆಗೆ ರಾಜ್ಯ ಮಟ್ಟದ 539 ನೇ ರಾಜಾ ಹಂಡೆ ಹನುಮಪ್ಪನಾಯಕನ ಜಯಂತ್ಯೋತ್ಸವ ಹಾಗೂ ಮೂರ್ತಿ ಪ್ರತಿಷ್ಠಾಪನೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಲಿಂಗಾಯತ ಹಂಡೇವಜೀರ ಸಂಘದ ರಾಜ್ಯಾಧ್ಯಕ್ಷ ಡಾ.ಎಸ್.ಎಸ್.ಪಾಟೀಲ ಹೇಳಿದರು.ಪಟ್ಟಣದ ಸಿದ್ದರಾಮೇಶ್ವರ ಪತ್ತಿನ ಸಂಘದ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2021 ರಿಂದ ಹಂಡೇವಜೀರ ಸಮಾಜ ಬಾಂಧವರ ಕುಲತಿಲಕ ರಾಜಾ ಹಂಡೆ ಹನುಮಪ್ಪನಾಯಕನ ಜಯಂತ್ಯೋತ್ಸವವನ್ನು ನಮ್ಮ ಸಂಘವು ಆಚರಿಸುತ್ತಾ ಬರುತ್ತಿದೆ. ಇದುವರೆಗೂ ಹನುಮಪ್ಪನಾಯಕ ಜನ್ಮಸ್ಥಳ ಮುತ್ತಗಿಯಲ್ಲಿ ಎರಡು ಸಲ, ವಡವಡಗಿಯಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ವರ್ಷ ಹನುಮಪ್ಪ ನಾಯಕನ ಮೊಮ್ಮಗ ವಸಂತರಾಯನ ಪತ್ನಿ ಕಲ್ಯಾಣಮ್ಮ ಜನಿಸಿದ ಸಂಕನಾಳ ಗ್ರಾಮದಲ್ಲಿ ಆಯೋಜನೆ ಮಾಡಲಾಗಿದೆ. ಹಂಡೇ ಅರಸರು 300 ವರ್ಷಗಳ ಕಾಲ ಆಡಳಿತ ನಡೆಸಿದ್ದರು ಎಂದು ಇತಿಹಾಸ ತಿಳಿಸುತ್ತದೆ ಎಂದರು.ಜಯಂತ್ಯೋತ್ಸವ ಕಾರ್ಯಕ್ರಮದ ಸಾನಿಧ್ಯವನ್ನು ಮುತ್ತಗಿಯ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕರವೇ ಕಾರ್ಯಕರ್ತರು ವಿವಿಧ ಸಂಘಟನೆಗಳು ಮತ್ತು ಪ್ರಗತಿಪರ ರೈತರು ಕರವೇ ತಾಲೂಕಾ ಅಧ್ಯಕ್ಷ ಬಾಳು ಮುಳಜಿ ಇವರ ನೇತೃತ್ವದಲ್ಲಿ ತೊಗರಿ ಬೆಳೆಗೆ ವಿಮೆ ನೀಡಬೇಕು ಮತ್ತು ಬೇಸಿಗೆಯಲ್ಲಿ ರೈತ ಕೃಷಿಗೆ ನೀರಿನ ತೊಂದರೆ ಯಾಗುತ್ತಿದ್ದು ಮಹಾರಾಷ್ಟç ಸರಕಾರದ ಮನವೊಲಿಸಿ ಕೃಷಿ ನೀರು ಬಿಡಬೇಕು ಎಂದು ಆಗ್ರಹಿಸಿ ಹಗಲು ರಾತ್ರಿ ಧರಣಿ ನಡೆಸಿದರು.ಕರವೇ ತಾಲೂಕಾ ಅಧ್ಯಕ್ಷ ಬಾಳು ಮುಳಜಿ ಮಾತನಾಡಿ ಇಂಡಿ ತಾಲೂಕಿನಲ್ಲಿ ಒಂದು ಲಕ್ಷ ೫ ಸಾವಿರ ಹೇಕ್ಟರ ಪ್ರದೇಶದಲ್ಲಿ ತೊಗರಿ ಬೆಳೆ ಬೆಳೆಯಲಾಗಿದೆ. ಹವಾಮಾನ ವೈಫಲ್ಯ, ಮಂಜು ಕವಿದ ವಾತಾವರಣ ಮತ್ತು ಕೃಷಿ ಇಲಾಖೆಯಿಂದ ಕಳಪೆ ಬೀಜ ಮಾರಾಟ ಇವೆಲ್ಲವೂ ಗಳಿಂದ ತೊಗರಿ ಇಳುವರಿ ಕಡಿಮೆ ಬಂದಿದೆ.ಅದಲ್ಲದೆ ಇಂಡಿಯ ಶಾಸಕರು ಜಿಲ್ಲಾಧಿಕಾರಿ ಸಿಇಒ ಮತ್ತು ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕರೆಯಿಸಿ ಸರ್ವೇ ಮಾಡಿಸಿದ್ದಾರೆ. ವಿಧಾನ ಸಭೆಯಲ್ಲಿ ಹಲವಾರು ಬಾರಿ ಚರ್ಚೆ ಯಾಗಿದೆ. ಸರ್ವೇ ಮಾಡಿದ ಅಧಿಕಾರಿಗಳು ತೊಗರಿ ಬೆಳೆ ಹಾನಿಯಾಗಿರುವ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಳವಾರ ಸಮಾಜಕ್ಕೆ ‌ನ್ಯಾಯ ಒದಗಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು‌, ರಾಜಕೀಯ ಪಕ್ಷಗಳು ಹಾಗೂ ಸರಕಾರ ಎಡುವುತ್ತಿವೆ.‌ ಕಳೆದ 4 ವರ್ಷದ ಹಿಂದೆ ರಾಜ್ಯ ಮತ್ತು ಕೇಂದ್ರ ಸರಕಾರ ತಳವಾರ ಸಮಾಜವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಿದ್ದು, ಇಲ್ಲಿಯವರೆಗೆ ಯಾವ ಕ್ಷೇತ್ರದಲ್ಲೂ ಆ ಸಮಾಜಕ್ಕೆ ನ್ಯಾಯ ಸಿಕ್ಕಿಲ್ಲ.‌ ಅದಕ್ಕೆ ನೇರ ಕಾರಣ ಜನಪ್ರತಿನಿಧಿಗಳು ಎಂದು ದೇವರ ಹಿಪ್ಪರಗಿ ತಾಲೂಕು ತಳವಾರ ಸಮಾಜದ ಅಧ್ಯಕ್ಷ ರಾಜು ಮೇಟಗಾರ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಕಾಳಿಕಾದೇವಿ ಮಂಗಲ ಕಾರ್ಯಾಲಯದಲ್ಲಿ ತಳವಾರ ಸಮಾಜದ ಯುವಶಕ್ತಿ ಏರ್ಪಡಿಸಿದ ಗೌಪ್ಯ ಸಭೆಯಲ್ಲಿ ಮುಖ್ಯ ವಕ್ತಾರರಾಗಿ‌‌ ಮಾತನಾಡಿದರು.ಸಮಾಜ ಮುಖ್ಯವಾಹಿನಿಯಲ್ಲಿ‌ ಕಾಣಬೇಕಾದರೆ ಶಿಕ್ಷಣ, ಸಂಘಟನೆ, ಹೋರಾಟ ಮುಖ್ಯ. ಸಮುದಾಯದಲ್ಲಿರುವ ಆಂತರಿಕ ಸಂಘರ್ಷ, ದ್ವೇಷ, ಅಸೂಹೆ, ಸ್ವಾರ್ಥ, ಅಹಂ ವನ್ನು ಸಮಾಜದ ಹಿತದೃಷ್ಟಿಯಿಂದ ತ್ಯಾಗ ಮಾಡಿ ಒಕ್ಕೊರಲಿನ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಹೇಳಿದರು.ಇದೆ ಸಂದರ್ಭದಲ್ಲಿ ಸಮಾಜದ ಮುಖಂಡ ಹಾಗೂ ತಾ.ಪಂ‌ ಮಾಜಿ ಸದಸ್ಯ ಸಿದ್ದರಾಮ ತಳವಾರ ಮಾತಾನಾಡಿದ ಅವರು, ತಳವಾರ ಸಮಾಜಕ್ಕೆ ತನ್ನದೆಯಾದ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ದಿ.ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾದ ಶರಣಪ್ಪ ಎಸ್.ವಾರದ, ನಿವೃತ್ತಿ ಹೊಂದಿದ ಪ್ರಧಾನ ವ್ಯವಸ್ಥಾಪಕ ಮುರುಗೇಶ ಬಮ್ಮಣ್ಣಿ, ಪ್ರಧಾನ ವ್ಯವಸ್ಥಾಪಕರಾಗಿ ಪದೋನ್ನತಿ ಹೊಂದಿದ ಬಸವರಾಜ ದೇವೂರ, ವ್ಯವಸ್ಥಾಪಕರಾಗಿ ಬಡ್ತಿ ಪಡೆದ ಬಸವರಾಜ ಗೋಗಿ ಅವರನ್ನು ಮಾಜಿ ವಿಪ ಸದಸ್ಯ ಅರುಣ ಶಹಪೂರ ಅಭಿನಂದಿಸಿ ಸನ್ಮಾನಿಸಿ ಗೌರವಿಸಿದರು.ಈ ವೇಳೆ ಭೀಮಾಶಂಕರ ತಾರಾಪೂರ, ದಾನೇಶ ಬಮ್ಮಣ್ಣಿ, ಮಲ್ಲಿಕಾರ್ಜುನ ಅಲ್ಲಾಪೂರ, ಶಿವಾನಂದ ರೋಡಗಿ, ಬ್ಯಾಂಕಿನ ಉಪಾಧ್ಯಕ್ಷ ಪ್ರಕಾಶ್ ಕೋರಿ, ಸುರೇಶಬಾಬು ಜೋಗೂರ, ರವಿ ನಾಗೂರ, ನೀಲಕಂಠ ಗುಣಾರಿ ಸೇರಿದಂತೆ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಜಿಪಂ ಸದಸ್ಯ ಕಲ್ಲು ದೇಸಾಯಿಯವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಕಾಂಗ್ರೆಸ್ ವರಿಷ್ಠರು ಪರಿಗಣೆಗೆ ತೆಗೆದುಕೊಳ್ಳಬೇಕು ಎಂದು ಪಪಂ ಅಧ್ಯಕ್ಷ ಸಿ.ಎಸ್. ಗಿಡ್ಡಪ್ಪಗೋಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ. ಪಕಾಲಿ, ಹಿರಿಯ ಮುಖಂಡರಾದ ಎಸ್.ಬಿ. ಪತಂಗಿ, ಬಿ.ಯು. ಗಿಡ್ಡಪ್ಪಗೋಳ, ತೌಸೀಪ ಗಿರಗಾವಿ, ದಶರಥ ಈಟಿ ಒತ್ತಾಯಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಂಡು ಮಾತನಾಡಿದ ಅವರು ಸುಮಾರು 25 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ಅವಿರತವಾಗಿ ಶ್ರಮಿಸಿರುವ ಮಾಜಿ ಜಿಪಂ ಸದಸ್ಯರಾದ ಕಲ್ಲು ದೇಸಾಯಿ ಅವರಿಗೆ ಕಾಂಗ್ರೆಸ್ ವರಿಷ್ಠರು ವಿಧಾನ ಪರಿಷತ್ ಸ್ಥಾನವನ್ನು ನೀಡುವ ಮೂಲಕ ಅವರ ಶ್ರಮಕ್ಕೆ ಪ್ರತಿಫಲ ನೀಡಬೇಕು, ಕಲ್ಲು ದೇಸಾಯಿಯವರು ಕಾಂಗ್ರೆಸ್ ಯುವ ನಾಯಕರಾಗಿ ಜಿಪಂ ಸದಸ್ಯರಾಗಿ ರಾಜಕೀಯದಲ್ಲಿ ಅನುಭವ ಉಳ್ಳವರಾಗಿದ್ದು ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವ ಸಾಮರ್ಥ್ಯ ಉಳ್ಳವರಾಗಿದ್ದಾರೆ ಹಾಗಾಗಿ ಕಾಂಗ್ರೆಸ್ ವರಿಷ್ಠರು ಕಲ್ಲು ದೇಸಾಯಿಯವರ ಪಕ್ಷ ನಿಷ್ಠೆ ಹಾಗೂ ನಾಯಕತ್ವ ಗುರುತಿಸಿ ವಿಧಾನ ಪರಿಷತ್ ಸ್ಥಾನವನ್ನು ನೀಡಬೇಕು…

Read More

ವಿಜಯೇಂದ್ರ ತಮ್ಮ ಕುರ್ಚಿ ಉಳಿಸಿಕೊಳ್ಳಲು ಈ ಜನಾಕ್ರೋಶ ಯಾತ್ರೆ | ಕೇಂದ್ರ ಸರ್ಕಾರದ ಜೊತೆ ಶಾಮೀಲು | ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಬೆಂಗಳೂರು: ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ವಿಫಲಗೊಳಿಸುವ ಏಕೈಕ ಉದ್ದೇಶದಿಂದ ಕೇಂದ್ರ ಸರ್ಕಾರದ ಜೊತೆ ಶಾಮೀಲಾಗಿ ರಾಜ್ಯಕ್ಕೆ ನ್ಯಾಯಬದ್ಧವಾಗಿ ಸಿಗಬೇಕಾದ ತೆರಿಗೆ ಪಾಲು ಮತ್ತು ಅನುದಾನಕ್ಕೆ ಕತ್ತರಿ ಹಾಕಿಸಿದ್ದಾರೆಂದು ರಾಜ್ಯದ ಬಿಜೆಪಿ ನಾಯಕರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ವಾಗ್ದಾಳಿ ನಡೆಸಿದ್ದಾರೆ.ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ಜನಾಕ್ರೋಶ ಯಾತ್ರೆ ಕೈಗೊಂಡಿರುವ ರಾಜ್ಯ ಬಿಜೆಪಿ ನಾಯಕರಿಗೆ ನಾನು ಶುಭ ಕೋರುತ್ತೇನೆ. ಒಂದು ಸಮರ್ಥ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದ ವೈಫಲ್ಯ ಮತ್ತು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಲಾಗದ ಮನೆ ಮುರುಕುತನದ ಬಗ್ಗೆ ಆಕ್ರೋಶಗೊಂಡಿರುವ ರಾಜ್ಯದ ಜನರ ಮನಸ್ಸು ಅರಿಯಲು ಈ ಯಾತ್ರೆ ನೆರವಾಗಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆಂದು ವ್ಯಂಗ್ಯವಾಡಿದ್ದಾರೆ.ಇಷ್ಟೊಂದು ಅಸಮರ್ಥ, ನಿರ್ಲಜ್ಜ ಮತ್ತು ಜನವಿರೋಧಿ ವಿರೋಧ…

Read More

ಸಮಾಜ ಕಾರ್ಯ ಶಿಬಿರ ಉದ್ಘಾಟಿಸಿದ ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಇಂತಹ ಶಿಬಿರಗಳು ಅತ್ಯಗತ್ಯವಾಗಿವೆ ಎಂದು ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗ ಹಾಗೂ ಬಾಬಾನಗರ ಗ್ರಾಮ ಪಂಚಾಯತ ಇವರ ಸಹಯೋಗದಲ್ಲಿ ತಿಕೋಟಾ ತಾಲೂಕಿನ ಬಾಬಾನಗರ ಗ್ರಾಮದಲ್ಲಿ ಹಮ್ಮಿಕೊಂಡಿರುವ ಸಮಾಜ ಕಾರ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮೀಣ ಪ್ರದೇಶದಲ್ಲಿ ವಿವಿಧ ಸಮುದಾಯಗಳ ಪ್ರಗತಿಗೆ ಸಾಕಷ್ಟು ಪ್ರಾಯೋಗಿಕ ಕಾರ್ಯಗಳು, ಜಾಗೃತಿ ಜಾಥಾಗಳು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕಾಗಿವೆ. ಸರ್ಕಾರದಿಂದ ರೂಪಗೊಳ್ಳುವ ಯೋಜನೆಗಳು ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಮುಖ್ಯ. ಇಂತಹ ಶಿಬಿರಗಳು ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನಶೈಲಿ, ಸಂಸ್ಕೃತಿ ಮತ್ತು ಪರಂಪರೆಯ ಪರಿಚಯವನ್ನು ನೀಡುತ್ತವೆ ಎಂದರು.ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯ ಶಿಕ್ಷಕ ಬಸವರಾಜ ನಾವಿ ಮಾತನಾಡಿ, ಶಿಬಿರದ ಪ್ರಾಮುಖ್ಯತೆಯನ್ನು ಗ್ರಾಮಸ್ಥರಿಗೆ ತಿಳಿಸಿದರು.ಕಾರ್ಯಕ್ರಮದಲ್ಲಿ…

Read More