ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಜಿಪಂ ಸದಸ್ಯ ಕಲ್ಲು ದೇಸಾಯಿಯವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಕಾಂಗ್ರೆಸ್ ವರಿಷ್ಠರು ಪರಿಗಣೆಗೆ ತೆಗೆದುಕೊಳ್ಳಬೇಕು ಎಂದು ಪಪಂ ಅಧ್ಯಕ್ಷ ಸಿ.ಎಸ್. ಗಿಡ್ಡಪ್ಪಗೋಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ. ಪಕಾಲಿ, ಹಿರಿಯ ಮುಖಂಡರಾದ ಎಸ್.ಬಿ. ಪತಂಗಿ, ಬಿ.ಯು. ಗಿಡ್ಡಪ್ಪಗೋಳ, ತೌಸೀಪ ಗಿರಗಾವಿ, ದಶರಥ ಈಟಿ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಂಡು ಮಾತನಾಡಿದ ಅವರು ಸುಮಾರು 25 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ಅವಿರತವಾಗಿ ಶ್ರಮಿಸಿರುವ ಮಾಜಿ ಜಿಪಂ ಸದಸ್ಯರಾದ ಕಲ್ಲು ದೇಸಾಯಿ ಅವರಿಗೆ ಕಾಂಗ್ರೆಸ್ ವರಿಷ್ಠರು ವಿಧಾನ ಪರಿಷತ್ ಸ್ಥಾನವನ್ನು ನೀಡುವ ಮೂಲಕ ಅವರ ಶ್ರಮಕ್ಕೆ ಪ್ರತಿಫಲ ನೀಡಬೇಕು, ಕಲ್ಲು ದೇಸಾಯಿಯವರು ಕಾಂಗ್ರೆಸ್ ಯುವ ನಾಯಕರಾಗಿ ಜಿಪಂ ಸದಸ್ಯರಾಗಿ ರಾಜಕೀಯದಲ್ಲಿ ಅನುಭವ ಉಳ್ಳವರಾಗಿದ್ದು ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವ ಸಾಮರ್ಥ್ಯ ಉಳ್ಳವರಾಗಿದ್ದಾರೆ ಹಾಗಾಗಿ ಕಾಂಗ್ರೆಸ್ ವರಿಷ್ಠರು ಕಲ್ಲು ದೇಸಾಯಿಯವರ ಪಕ್ಷ ನಿಷ್ಠೆ ಹಾಗೂ ನಾಯಕತ್ವ ಗುರುತಿಸಿ ವಿಧಾನ ಪರಿಷತ್ ಸ್ಥಾನವನ್ನು ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಪಂ ಸದಸ್ಯರಾದ ಮಹಾಂತೇಶ್ ಗಿಡ್ಡಪ್ಪಗೋಳ, ಶ್ರೀಶೈಲ್ ಗೌಡರ, ತೌಸೀಪ ಗಿರಗಾವಿ, ನಿಂಗಪ್ಪ ಗಣಿ, ಶಿವಪ್ಪ ವಾಲಿಕಾರ, ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ನದಾಫ್, ಬನಪ್ಪ ಬಾಲಗೊಂಡ, ಅನ್ವರ್ ಕಂಕರಪೀರ್, ತಿಪ್ಪಣ್ಣ ಕುದರಿ ಹಾಗೂ ಇನ್ನಿತರರು ಇದ್ದರು.

