ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ದಿ.ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾದ ಶರಣಪ್ಪ ಎಸ್.ವಾರದ, ನಿವೃತ್ತಿ ಹೊಂದಿದ ಪ್ರಧಾನ ವ್ಯವಸ್ಥಾಪಕ ಮುರುಗೇಶ ಬಮ್ಮಣ್ಣಿ, ಪ್ರಧಾನ ವ್ಯವಸ್ಥಾಪಕರಾಗಿ ಪದೋನ್ನತಿ ಹೊಂದಿದ ಬಸವರಾಜ ದೇವೂರ, ವ್ಯವಸ್ಥಾಪಕರಾಗಿ ಬಡ್ತಿ ಪಡೆದ ಬಸವರಾಜ ಗೋಗಿ ಅವರನ್ನು ಮಾಜಿ ವಿಪ ಸದಸ್ಯ ಅರುಣ ಶಹಪೂರ ಅಭಿನಂದಿಸಿ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಭೀಮಾಶಂಕರ ತಾರಾಪೂರ, ದಾನೇಶ ಬಮ್ಮಣ್ಣಿ, ಮಲ್ಲಿಕಾರ್ಜುನ ಅಲ್ಲಾಪೂರ, ಶಿವಾನಂದ ರೋಡಗಿ, ಬ್ಯಾಂಕಿನ ಉಪಾಧ್ಯಕ್ಷ ಪ್ರಕಾಶ್ ಕೋರಿ, ಸುರೇಶಬಾಬು ಜೋಗೂರ, ರವಿ ನಾಗೂರ, ನೀಲಕಂಠ ಗುಣಾರಿ ಸೇರಿದಂತೆ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

