Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವತಿಯಿಂದ ಪ್ರಯಾಣಿಕರ ಅಹವಾಲು ಕುಂದುಕೊರತೆಗಳನ್ನು ಆಲಿಸಲು ಮಾ.೩ರಂದು ಮಧ್ಯಾಹ್ನ ೩-೩೦ರಿಂದ ೪-೩೦ರವರೆಗೆ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಸಾರ್ವಜನಿಕರು ದೂರವಾಣಿ ಸಂಖ್ಯೆ: ೬೩೬೬೪೨೩೮೮೭ಗೆ ಕರೆ ಮಾಡಿ ತಮ್ಮ ಕುಂದು-ಕೊರತೆಗಳನ್ನು ಪರಿಹರಿಸಿಕೊಳ್ಳಬಹುದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಫೋನ್‌ಇನ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸದುಪಯೋಗ ಪಡೆದುಕೊಳ್ಳುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಭದ್ರತಾ ಯೋಜನೆಯಡಿ ಸ್ಥಳದಲ್ಲೇ ಪಿಂಚಣಿ ಮಂಜೂರು ಆದೇಶ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರದ ಗುನ್ನಾಪುರ ಬಸವ ನಗರದ ನಿವಾಸಿಯಾದ ಮಾಣಿಕ ಕಲ್ಲಪ್ಪ ಐಹೊಳೆ ಎಂಬುವರಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಸ್ಥಳದಲ್ಲಿಯೇ ಪಿಂಚಣಿ ಮಂಜೂರಿಸಿ ಆದೇಶ ಪ್ರತಿ ವಿತರಿಸುವ ಮೂಲಕ ಜನಸ್ನೇಹಿ ಆಡಳಿತಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಾದರಿಯಾಗಿದ್ದಾರೆ.ವಿಜಯಪುರದ ಗುನ್ನಾಪುರ ಬಸವ ನಗರದ ನಿವಾಸಿಯಾದ ಮಾಣಿಕ ಕಲ್ಲಪ್ಪ ಐಹೊಳೆ ಎಂಬುವರು ಸಾಮಾಜಿಕ ಭದ್ರತಾ ಯೋಜನೆಯಡಿ ಸಂಧ್ಯಾ ಸುರಕ್ಷಾ ಪಿಂಚಣಿ ಮಂಜೂರಾತಿಗೆ ಫೆ.೨೮ರಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ, ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸ್ಥಳದಲ್ಲಿಯೇ ವಿಜಯಪುರ ತಹಶೀಲ್ದಾರ ಇವರ ಮೂಲಕ ೧೨೦೦ ರೂ.ಗಳ ಮಾಶಾಸನವನ್ನು ಮಂಜೂರು ಮಾಡಿಸಿ ಆದೇಶ ಪ್ರತಿಯನ್ನು ಫಲಾನುಭವಿಗೆ ವಿತರಿಸಿದರು.ಸರ್ಕಾರದ ಪಿಂಚಣಿ ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯಕ್ಕಾಗಿ ಜಿಲ್ಲೆಯ ಯಾವುದೇ ಫಲಾನುಭವಿಗಳು ಕಚೇರಿಗಳಿಗೆ ಅಲೆದಾಡುವಂತಾಗಬಾರದು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಿ ಅರ್ಹ ಫಲಾನುಭವಿಗಳಿಗೆ ಅವಶ್ಯಕತೆಯಿರುವವರಿಗೆ ಸರ್ಕಾರದ ಸೌಲಭ್ಯಗಳು ದೊರಕಿಸಲು ಕ್ರಮ ವಹಿಸುವಂತೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ರಾಜನಾಳ ಗ್ರಾಮದ ರಿಸನಂ.೮೩ರ ೧೦ ಎಕರೆ ೦೨ ಗುಂಟೆ ಜಮೀನಿನ ಪೈಕಿ ೫ ಎಕರೆ ಜಮೀನನ್ನು ಹೊಸದಾಗಿ ೧೧೦ ಕೆವಿ ವಿದ್ಯುತ್ ಉಪ ಕೇಂದ್ರ ಸ್ಥಾಪನೆ ಹಾಗೂ ವಸತಿ ಗೃಹ ನಿರ್ಮಾಣಕ್ಕಾಗಿ ಜಮೀನು ಮಂಜೂರಿಸಲು ಉದ್ಧೇಶಿಸಿದೆ.ಈ ಕುರಿತು ಆಕ್ಷೇಪಣೆಗಳಿದ್ದಲ್ಲಿ, ಈ ಅಧಿಸೂಚನೆ ಹೊರಡಿಸಿದ ಮೂವತ್ತು ದಿನಗಳೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಅವರು ಮಾರ್ಚ್ ೦೪ ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.ಮಾರ್ಚ್ ೦೪ರ ಬೆಳಿಗ್ಗೆ ೯ ಗಂಟೆಗೆ ಕಲಬುರಗಿಯಿಂದ ಹೊರಟು, ಬೆಳಿಗ್ಗೆ ೧೧ಕ್ಕೆ ಸಿಂದಗಿಗೆ ಆಗಮಿಸಿ,ಸಿಂದಗಿ ಸಿಐಆರ್‌ಡಿ ಸಂಸ್ಥೆ ಹಮ್ಮಿಕೊಂಡಿರುವ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ-೨೦೨೫ರ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ ೧೨.೩೦ಕ್ಕೆ ಸಿಂದಗಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ, ವಿದ್ಯಾರ್ಥಿನಿಯರೊಂದಿಗೆ ಹಾಗೂ ಮಹಿಳಾ ಬೋಧಕರೊಂದಿಗೆ ಸಂವಾದ ನಡೆಸುವರು. ಮಧ್ಯಾಹ್ನ ೧;೩೦ಕ್ಕೆ ಸಿಂದಗಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡುವ ಅವರು, ಮಧ್ಯಾಹ್ನ ೩ಕ್ಕೆ ಸಿಂದಗಿಯಿಂದ ಶಹಪೂರ ತಾಲೂಕಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಹಾಗೂ ಪಿಂಚಣಿದಾರರ ಅಹವಾಲು ಆಲಿಕೆ ಹಾಗೂ ಅರ್ಹರಿಗೆ ಪಿಂಚಣಿ ಮಂಜೂರು ಮಾಡಲು ಮಾರ್ಚ್ ೦೧ರಂದು ಜಿಲ್ಲೆಯ ೧೩ ಗ್ರಾಮಗಳಲ್ಲಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.ಮಾರ್ಚ್ ೦೧ರಂದು ಬೆಳಿಗ್ಗೆ ೧೧ ಗಂಟೆಗೆ ಬಸವನ ಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿ.ಬಿ ಗ್ರಾಮದ ಶ್ರೀ ಹನುಮಾನ ದೇವಸ್ಥಾನದಲ್ಲಿ ವಿಜಯಪುರ ಉಪ ವಿಭಾಗಾಧಿಕಾರಿಗಳು, ಇಂಡಿ ತಾಲೂಕಿನ ಬರಗುಡಿ ಗ್ರಾಮದ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಇಂಡಿ ಉಪ ವಿಭಾಗಾಧಿಕಾರಿಗಳು ಪಿಂಚಣಿ ಅದಾಲತ್ ನಡೆಸಲಿದ್ದಾರೆ.ವಿಜಯಪುರದ ಗಾಂಧಿ ನಗರದ ಸ್ಟಾರ್ ಚೌಕ ಹತ್ತಿರದ ಶ್ರೀ ಹನುಮಾನ ಮಂದಿರದಲ್ಲಿ ವಿಜಯಪುರ ಗ್ರೇಡ್-೨ ತಹಶೀಲ್ದಾರ, ಕಳ್ಳಕವಟಗಿ ಗ್ರಾಮದ ಶ್ರೀ ಮಾಳಿಂಗರಾಯ ದೇವಸ್ಥಾನದಲ್ಲಿ ತಿಕೋಟಾ ಗ್ರೇಡ್-೨ ತಹಶೀಲ್ದಾರ, ಹಂಚಿನಾಳ ಪಿ.ಎಂ ಗ್ರಾಮದ ಶ್ರೀ ಹನುಮಾನ ದೇವಸ್ಥಾನದಲ್ಲಿ ಬಬಲೇಶ್ವರ ಗ್ರೇಡ್-೨ ತಹಶೀಲ್ದಾರ, ಬಳಬಟ್ಟಿ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ನಿಡಗುಂದಿ ಗ್ರೇಡ್-೨ ತಹಶೀಲ್ದಾರ ಅವರು…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಶಿವಲಿಂಗೇಶ್ವರ ವಿರಕ್ತಮಠದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಶಿವಾನುಭವ ಸವಿನೆನಪು, ಲಿಂ.ಶಾಂತಾಬಾಯಿ ಮೇಟಿ, ಲಿಂ. ವಿರುಪಾಕ್ಷಪ್ಪ ಆಲಗೂರ, ಲಿಂ.ಷಣ್ಮುಖಪ್ಪ ಶೀಲವಂತ ಸ್ಮರಣಾರ್ಥ ಮಾ. ೧ ರಂದು ಸಂಜೆ ೬ ಗಂಟೆಗೆ ದತ್ತಿ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಾನಿಧ್ಯವನ್ನು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ಮರ್ತುರ ವಹಿಸುವರು. ಮುದ್ದೇಬಿಹಾಳ ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ನಾಲತವಾಡ ಕಾರ್ಯಕ್ರಮ ಉದ್ಘಾಟಿಸುವರು. ಸಾಂಸ್ಕ್ರತಿಕ ನಾಯಕ ಬಸವಣ್ಣನವರು ಕುರಿತು ಯಾಳವಾರದ ಬಸಯ್ಯ ಹಿರೇಮಠ ಅನುಭಾವ ನೀಡುವರು. ಮುಖ್ಯ ಅತಿಥಿಗಳಾಗಿ ಚಂದ್ರಶೇಖರ ನಾಗರಾಳ, ಗಿರಿಜಾ ಪಾಟೀಲ ಆಗಮಿಸುವರು.ಇದೇ ಸಂದರ್ಭದಲ್ಲಿ ಡಾ.ಭೀಮಾಶಂಕರ ಹಡಪದ, ರೋಹಿಣಿ ಕಂಬಾಳೆ, ತೇಜಶ್ವಿನಿ ಖೇಡದ ಅವರನ್ನು ಸನ್ಮಾನಿಸಲಾಗುವುದು ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಆರ್.ಜಿ.ಅಳ್ಳಗಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ಪತ್ರಿವಮನ ಮಠದಲ್ಲಿ ಮಾ.೩ ರಂದು ಬೆಳಗ್ಗೆ ೧೦.೩೦ ಗಂಟೆಗೆ ಅವಳಿ ಜಲಾಶಯಗಳ ನೀರು ಮರು ಹಂಚಿಕೆ ಮಾಡಲು ಹೋರಾಟದ ರೂಪರೇಷೆ ತಯಾರಿಸುವ ಹಿನ್ನೆಲೆಯಲ್ಲಿ ರೈತ ಬಾಂಧವರ ಪೂರ್ವಭಾವಿ ಸಭೆ ಕರೆಯಲಾಗಿದೆ. ಈ ಪೂರ್ವಭಾವಿ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತ ಬಾಂಧವರು ಆಗಮಿಸಿ ಮುಂದಿನ ಹೋರಾಟದ ಕುರಿತು ತಮ್ಮ ಸಲಹೆ-ಸೂಚನೆ ನೀಡಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಇಂದು ವ್ಯಸನಮುಕ್ತ ಹಾಗೂ ಸ್ವಚ್ಛ ಪರಿಸರಯುಕ್ತ ಸಮಾಜ ನಿರ್ಮಾಣದ ಅಗತ್ಯವಿದೆ. ಸಮಾಜದಲ್ಲಿ ಕೆಲವರು ತಮ್ಮ ಬೇಡಿಕೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದೇ ಇರುವ ಸಂದರ್ಭದಲ್ಲಿ ಆ ನೋವಿನಿಂದ ಹೊರಬರುವುದಕ್ಕಾಗಿ ಕೆಲ ದುಶ್ಚಟಗಳ ದಾಸರಾಗಿ ಕೊನೆಗೆ ತಮ್ಮ ಬದುಕನ್ನೇ ಕಳೆದುಕೊಳ್ಳಬೇಕಾಗುತ್ತದೆ. ಇದನ್ನು ಅರಿತುಕೊಂಡು ವ್ಯಸನಮುಕ್ತ ಸಮಾಜ ನಿರ್ಮಾಣದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಸ್ಥಳೀಯ ಬಿಎಲ್‌ಡಿಇ ಸಂಸ್ಥೆಯ ಔಷಧ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಸಿ.ಸಿ.ಸಿಂಪಿ ಹೇಳಿದರು.ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಔಷಧ ಮಹಾವಿದ್ಯಾಲಯ, ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಹಮ್ಮಿಕೊಂಡಿರುವ ವ್ಯಸನಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗವಹಿಸಿ ಮಾತನಾಡಿದ ಅವರು,ಅಮೂಲ್ಯವಾದ ಶರೀರ ಸಂಪತ್ತನ್ನು ಕಾಯ್ದುಕೊಳ್ಳಬೇಕಾದರೆ ನಾವು ದುಶ್ಚಟಗಳಿಂದ ದೂರವಿರಬೇಕು. ದ್ವೇಷ, ಅಸೂಯೆ, ಕ್ರೋಧಗಳನ್ನು ನಿಯಂತ್ರಿಸಿ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಲು ಪ್ರತಿನಿತ್ಯವೂ ಯೋಗ, ಧ್ಯಾನದ ಅಗತ್ಯವಿದೆ. ಯುವಜನಾಂಗ ಇದನ್ನು ಅರಿತು ದುಶ್ಚಟಗಳಿಂದ ದೂರವಿದ್ದು ಸುಂದರ ಜೀವನ ತಮ್ಮದಾಗಿಸಿಕೊಳ್ಳಬೇಕೆಂದರು.ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರ ಭಾವನಾ, ಬ್ರಹ್ಮಕುಮಾರ ಕಾಶೀನಾಥ ಮಾತನಾಡಿ,…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ಜರುಗಿದ ಚುನಾವಣೆಯಲ್ಲಿ ಎರಡು ಸ್ಥಾನಗಳಿಗೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆ ಪ್ರಕ್ರಿಯೆ ಜರುಗಿತು.ಅಧ್ಯಕ್ಷರಾಗಿ ಹೆಚ್.ಜಿ.ಗುಂಡಳ್ಳಿ, ಉಪಾಧ್ಯಕ್ಷರಾಗಿ ಸಂಗಮೇಶ ಓಲೇಕಾರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಎಂ.ಹಂಗರಗಿ ಘೋಷಿಸಿದರು.ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪತ್ತಿನ ಸಂಘವು ಒಟ್ಟು ಹತ್ತು ನಿರ್ದೇಶಕ ಮಂಡಳಿ ಹೊಂದಿದೆ. ಇಂದು ಜರುಗಿದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಹತ್ತು ನಿರ್ದೇಶಕರು ಭಾಗವಹಿಸಿದ್ದರು. ಹಿಂದುಳಿದ ಅ ವರ್ಗ,ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕ್ಷೇತ್ರದ ಮೂರು ಸ್ಥಾನಗಳು ಖಾಲಿಯಿವೆ.ಚುನಾವಣೆಯ ನಂತರ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷರನ್ನು, ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಅರವಿಂದ ಡೋಣೂರ, ಸಿದ್ದಪ್ಪ ಹೊಕ್ರಾಣಿ,ರಾಯನಗೌಡ ಗೌಡರ, ಸೋಮಣ್ಣ ಹೆಗಡ್ಯಾಳ, ಸಂಗಪ್ಪ ವಾಡೇದ,ಜಗದೇವಿ ಗುಂಡಳ್ಳಿ,ಬೇಬಿರಾಜೇಶ್ವರಿ ಗೌಡರ,ಸಿದ್ರಾಮಪ್ಪ ಹೊರ್ತಿ, ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಶೇಬಗೊಂಡ, ಮುಖಂಡರಾದ ಎಲ್.ಬಿ.ಕಂದಗಲ್ಲ, ಪರಶುರಾಮ ಪೂಜಾರಿ, ಶಂಕ್ರಪ್ಪ ಪೂಜಾರಿ, ಬಾಲಚಂದ್ರ ಮಾಳಗೊಂಡ, ಮುತ್ತು ಗುಂಡಳ್ಳಿ, ಪರಸಪ್ಪ ಕಳ್ಳಿಗುಡ್ಡ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಹುಣಶ್ಯಾಳ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಗೆ ಚಾಲನೆ ನೀಡಲಾಯಿತು.ತಾಲ್ಲೂಕಿನ ಹುಣಶ್ಯಾಳ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಜರುಗಿದ ಕಾರ್ಯಕ್ರಮದಲ್ಲಿ ಶಿಕ್ಷಕ ಸಾಹಿತಿ ಸುಮಿತ್ ಮೇತ್ರಿ ಮಾತನಾಡಿ, ಸಿ.ವಿ.ರಾಮನ್ ರವರು ಬೆಳಕಿನ ಪರಿಣಾಮ ಸಿದ್ಧಾಂತವನ್ನು ಮಂಡಿಸಿದಕ್ಕಾಗಿ ೧೯೩೦ರಲ್ಲಿ ನೊಬೆಲ್ ಪಾರಿತೋಷಕವನ್ನು ಏಷ್ಯಾ ಖಂಡದಲ್ಲಿ ಮೊಟ್ಟಮೊದಲ ಬಾರಿಗೆ ಪಡೆದುಕೊಂಡರು ಎಂದು ಹೇಳಿದರು.ಶಾಲೆಯ ಇಂಗ್ಲೀಷ ಶಿಕ್ಷಕ ಸಂತೋಷ ಅವಳೆ ಸಿ.ವಿ ರಾಮನ್‌ರವರ ಜೀವನ ಚರಿತ್ರೆ, ವಿದ್ಯಾಭ್ಯಾಸ, ಹಾಗೂ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕುರಿತು ಹೇಳಿದರು.ಮುಖ್ಯಶಿಕ್ಷಕ ಮಡಿವಾಳಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ದೇಶ ವಿಜ್ಞಾನ ತಂತ್ರಜ್ಞಾನ ಯುಗದಲ್ಲಿ ಬಹಳಷ್ಟು ಮುಂದುವರೆದ ರಾಷ್ಟçವಾಗಿದೆ ಜೊತೆಗೆ ಸರ್ ಸಿ ವಿ ರಾಮನ್‌ರ ಜೀವನ, ಅವರ ಆದರ್ಶಗಳು ವಿದ್ಯಾರ್ಥಿಗಳು ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.ವಿಜ್ಞಾನ ಶಿಕ್ಷಕ ಸದ್ದಾಂ ಗಣಿ ಬೆಳಕಿನ ಚದುರುವಿಕೆ ಬಗ್ಗೆ ಸರಳ ಪ್ರಯೋಗ ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿ ಕೊಟ್ಟರು. ರಾಷ್ಟ್ರೀಯ ವಿಜ್ಞಾನ ದಿನಾಚರಣೆ…
